2 ಸಮುಯೇಲ 14:18 - ಕನ್ನಡ ಸಮಕಾಲಿಕ ಅನುವಾದ18 ಆಗ ಅರಸನು ಉತ್ತರವಾಗಿ ಆ ಸ್ತ್ರೀಗೆ, “ನಾನು ನಿನ್ನಿಂದ ಕೇಳುವುದನ್ನು ನನಗೆ ಮರೆಮಾಡಬೇಡ,” ಎಂದನು. ಅದಕ್ಕವಳು, “ಅರಸನಾದ ನನ್ನ ಒಡೆಯನು ಮಾತನಾಡಲಿ,” ಎಂದಳು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201918 ಆಗ ಅರಸನು ಆ ಸ್ತ್ರೀಗೆ, “ನಾನು ನಿನ್ನನ್ನು ಒಂದು ಮಾತು ಕೇಳಬೇಕೆಂದಿರುತ್ತೇನೆ. ನೀನು ಅದನ್ನು ಮರೆಮಾಚದೆ ತಿಳಿಸಬೇಕು” ಎಂದನು. ಆಗ ಆಕೆಯು, “ಅರಸನ ಅಪ್ಪಣೆಯಾಗಲಿ” ಎಂದು ಉತ್ತರಕೊಟ್ಟಳು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)18 ಆಗ ಅರಸನು ಆ ಸ್ತ್ರೀಗೆ, “ನಾನು ನಿನ್ನನ್ನು ಒಂದು ಮಾತು ಕೇಳಬೇಕೆಂದಿರುತ್ತೇನೆ; ನೀನು ಅದನ್ನು ಮರೆಮಾಡದೆ ತಿಳಿಸಬೇಕು,” ಎಂದು ಹೇಳಿದನು. ಆಕೆ, “ಅರಸರ ಅಪ್ಪಣೆಯಾಗಲಿ,” ಎಂದು ಉತ್ತರಕೊಟ್ಟಳು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)18 ಆಗ ಅರಸನು ಆ ಸ್ತ್ರೀಗೆ - ನಾನು ನಿನ್ನನ್ನು ಒಂದು ಮಾತು ಕೇಳಬೇಕೆಂದಿರುತ್ತೇನೆ; ನೀನು ಅದನ್ನು ಮರೆಮಾಡದೆ ತಿಳಿಸಬೇಕು ಎಂದು ಹೇಳಲು ಆಕೆಯು - ಅರಸನ ಅಪ್ಪಣೆಯಾಗಲಿ ಎಂದು ಉತ್ತರಕೊಟ್ಟಳು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್18 ರಾಜನಾದ ದಾವೀದನು ಆ ಸ್ತ್ರೀಗೆ, “ನಾನು ಕೇಳುವ ಪ್ರಶ್ನೆಗೆ ನೀನು ಉತ್ತರವನ್ನು ಹೇಳಲೇಬೇಕು” ಎಂದು ಉತ್ತರಿಸಿದನು. ಆ ಸ್ತ್ರೀಯು, “ರಾಜನಾದ ನನ್ನ ಒಡಯನೇ, ದಯವಿಟ್ಟು ನಿನ್ನ ಪ್ರಶ್ನೆಯನ್ನು ಕೇಳು” ಎಂದಳು. ಅಧ್ಯಾಯವನ್ನು ನೋಡಿ |
ಅದಕ್ಕೆ ಅರಸನು, “ಇದೆಲ್ಲಾದರಲ್ಲಿ ಯೋವಾಬನ ಕೈ ನಿನ್ನ ಸಂಗಡ ಉಂಟಲ್ಲವೋ?” ಎಂದು ಕೇಳಿದನು. ಆ ಸ್ತ್ರೀಯು ಉತ್ತರವಾಗಿ, “ನಿನ್ನ ಜೀವದಾಣೆ, ಅರಸನಾದ ನನ್ನ ಒಡೆಯನೇ, ನೀನು ಒಂದು ಮಾತು ಹೇಳಿದರೆ, ನಾವು ಅದನ್ನು ಬಿಟ್ಟು ಎಡಕ್ಕಾದರೂ, ಬಲಕ್ಕಾದರೂ ಜಾರಿಕೊಳ್ಳುವುದಕ್ಕೆ ಆಗುವುದಿಲ್ಲ; ಏಕೆಂದರೆ ನಿನ್ನ ಸೇವಕನಾದ ಯೋವಾಬನು ನನಗೆ ಆಜ್ಞಾಪಿಸಿ, ಈ ಎಲ್ಲಾ ಮಾತುಗಳನ್ನು ನಿನ್ನ ಸೇವಕಳಿಗೆ ಹೇಳಿಕೊಟ್ಟನು.