Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಸಮುಯೇಲ 13:28 - ಕನ್ನಡ ಸಮಕಾಲಿಕ ಅನುವಾದ

28 ಅಬ್ಷಾಲೋಮನು ತನ್ನ ಸೇವಕರಿಗೆ, “ನೀವು ನೋಡಿಕೊಳ್ಳಿರಿ. ಅಮ್ನೋನನ ಮನಸ್ಸು ದ್ರಾಕ್ಷಾರಸದಿಂದ ಅಮಲೇರಿದಾಗ ನಾನು ನಿಮಗೆ ಅವನನ್ನು ಹೊಡೆಯಿರಿ ಎಂದು ಹೇಳಿದಕೂಡಲೆ, ಅವನನ್ನು ಕೊಂದುಹಾಕಿರಿ, ಭಯಪಡಬೇಡಿರಿ. ನಾನು ನಿಮಗೆ ಆಜ್ಞಾಪಿಸಿದ್ದೇನಲ್ಲಾ, ಧೈರ್ಯವಾಗಿರಿ, ಶೂರರಾಗಿರಿ,” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

28 ಇದಕ್ಕೆ ಮೊದಲೇ ಅಬ್ಷಾಲೋಮನು ತನ್ನ ಆಳುಗಳಿಗೆ, “ಕೇಳಿರಿ, ಅಮ್ನೋನನು ದ್ರಾಕ್ಷಾರಸ ಕುಡಿದು ಮತ್ತನಾಗಿರುವಾಗ ನಾನು ಹೊಡೆಯಬೇಕೆಂದು ಹೇಳಿದ ಕೂಡಲೆ ಅವನನ್ನು ಹೊಡೆದು ಕೊಂದುಹಾಕಿರಿ. ಹೆದರಬೇಡಿರಿ, ನಿಮಗೆ ಆಜ್ಞಾಪಿಸಿದವನು ನಾನಲ್ಲವೇ? ಧೈರ್ಯದಿಂದಿರಿ ಮತ್ತು ಶೂರರಾಗಿರಿ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

28 ಇದಕ್ಕೆ ಮೊದಲೇ ಅಬ್ಷಾಲೋಮನು ತನ್ನ ಆಳುಗಳಿಗೆ, “ಕೇಳಿ, ಅಮ್ನೋನನು ದ್ರಾಕ್ಷಾರಸ ಕುಡಿದು ಮತ್ತನಾಗಿರುವಾಗ ನಾನು ಹೊಡೆಯಬೇಕೆಂದು ಹೇಳಿದಕೂಡಲೆ ಅವನನ್ನು ಹೊಡೆದು ಕೊಂದುಹಾಕಿ; ಹೆದರಬೇಡಿ, ನಿಮಗೆ ಆಜ್ಞಾಪಿಸಿದವನು ನಾನಲ್ಲವೆ? ಧೈರ್ಯದಿಂದಿರಿ, ಶೂರರಾಗಿರಿ,” ಎಂದು ಹೇಳಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

28 ಇದಕ್ಕೆ ಮೊದಲೇ ಅಬ್ಷಾಲೋಮನು ತನ್ನ ಆಳುಗಳಿಗೆ - ಕೇಳಿರಿ, ಅಮ್ನೋನನು ದ್ರಾಕ್ಷಾರಸ ಕುಡಿದು ಮತ್ತನಾಗಿರುವಾಗ ನಾನು ಹೊಡೆಯಬೇಕೆಂದು ಹೇಳಿದ ಕೂಡಲೆ ಅವನನ್ನು ಹೊಡೆದು ಕೊಂದುಹಾಕಿರಿ; ಹೆದರಬೇಡಿರಿ, ನಿಮಗೆ ಆಜ್ಞಾಪಿಸಿದವನು ನಾನಲ್ಲವೋ? ಧೈರ್ಯದಿಂದಿರಿ, ಶೂರರಾಗಿರಿ ಎಂದು ಹೇಳಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

28 ಆಗ ಅಬ್ಷಾಲೋಮನು ತನ್ನ ಸೇವಕರಿಗೆ ಈ ರೀತಿ ಆಜ್ಞೆ ಮಾಡಿದನು: “ಅಮ್ನೋನನನ್ನು ಗಮನಿಸುತ್ತಿರಿ. ಅವನು ಮತ್ತನಾಗಿ ಆನಂದಿಸುತ್ತಿರುವಾಗ ನಾನು ಆಜ್ಞೆಯನ್ನು ಕೊಡುತ್ತೇನೆ. ಆಗ ನೀವು ಅವನ ಮೇಲೆ ಆಕ್ರಮಣಮಾಡಿ ಕೊಲ್ಲಬೇಕು. ನಿಮಗೆ ಶಿಕ್ಷೆಯಾಗುತ್ತದೆ ಎಂಬ ಭಯವಿಲ್ಲದಿರಲಿ, ಯಾಕೆಂದರೆ ನೀವು ನನ್ನ ಆಜ್ಞೆಯನ್ನು ಪಾಲಿಸಿದಿರಷ್ಟೇ, ಆದ್ದರಿಂದ ಶಕ್ತರಾಗಿಯೂ ಧೈರ್ಯವಂತರಾಗಿಯೂ ಇರಿ” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಸಮುಯೇಲ 13:28
30 ತಿಳಿವುಗಳ ಹೋಲಿಕೆ  

ಆದ್ದರಿಂದ ಅವರಿಬ್ಬರು ಊಟ ಮಾಡಲು, ಕುಡಿಯಲು ಕುಳಿತುಕೊಂಡರು. ಅನಂತರದಲ್ಲಿ ಆ ಸ್ತ್ರೀಯ ತಂದೆಯು, “ಈ ರಾತ್ರಿ ಇಲ್ಲೇ ಇದ್ದುಕೊಂಡು ಸಂತೋಷಪಡು,” ಎಂದು ಹೇಳಿದನು.


ಅವರು ಸಂತೋಷಿಸುತ್ತಿರುವ ವೇಳೆಯಲ್ಲಿ ಆ ಪಟ್ಟಣದ ದುಷ್ಟ ಮನುಷ್ಯರಲ್ಲಿ ಕೆಲವರು ಆ ಮನೆಯನ್ನು ಸುತ್ತಿಕೊಂಡು, ಕದವನ್ನು ಬಡಿದು, ಆ ಮನೆಯ ಯಜಮಾನನಾದ ಮುದುಕನಿಗೆ, “ನಿನ್ನ ಮನೆಗೆ ಬಂದ ಆ ಮನುಷ್ಯನೊಡನೆ ನಮಗೆ ಸಂಗಮವಾಗಬೇಕು, ಹೊರಗೆ ಬಾ,” ಎಂದು ಹೇಳಿದರು.


ಅವನೂ, ಅವನ ಉಪಪತ್ನಿಯೂ ಅವನ ಸೇವಕನೂ ಹೋಗುವುದಕ್ಕೆ ಎದ್ದಾಗ, ಅವನ ಮಾವನು ಅವನಿಗೆ, “ಇಗೋ, ಹೊತ್ತು ಹೋಗಿ ಸಂಜೆ ಆಯಿತು. ಈ ರಾತ್ರಿ ನೀನು ದಯಮಾಡಿ ಇಲ್ಲೇ ಇರು; ಹೊತ್ತು ಮುಣುಗುತ್ತಾ ಬಂತು. ನೀನು ಈ ರಾತ್ರಿ ಇಲ್ಲಿದ್ದು, ನಿನ್ನ ಗುಡಾರಕ್ಕೆ ನಾಳೆ ಬೆಳಿಗ್ಗೆ ಎದ್ದು, ನಿಮ್ಮ ಮಾರ್ಗ ಹಿಡಿದು ಹೋಗಬಹುದು,” ಎಂದನು.


ಬೋವಜನು ತಿಂದು ಕುಡಿದು ಸಂತುಷ್ಟನಾಗಿದ್ದನು. ಅವನು ಕಾಳಿನ ರಾಶಿಯ ಕೊನೆಯಲ್ಲಿ ಬಂದು ಮಲಗಿಕೊಂಡನು. ಆಗ ರೂತಳು ಮೆಲ್ಲಗೆ ಬಂದು ಅವನ ಪಾದಗಳ ಮೇಲಿದ್ದ ಹೊದಿಕೆಯನ್ನು ತೆಗೆದು ಮಲಗಿಕೊಂಡಳು.


ಪೇತ್ರ ಮತ್ತು ಇತರ ಅಪೊಸ್ತಲರು ಉತ್ತರವಾಗಿ, “ನಾವು ಮನುಷ್ಯರಿಗೆ ವಿಧೇಯರಾಗಿರುವುದಕ್ಕಿಂತ ದೇವರಿಗೆ ವಿಧೇಯರಾಗಿರಬೇಕಲ್ಲ!


“ನಿಮ್ಮ ಮೇಲೆ ಆ ದಿನವು ಉರುಲಿನಂತೆ ಫಕ್ಕನೆ ಬಾರದಂತೆ ನೀವು ಅತಿಭೋಜನದಿಂದಲೂ ಅಮಲಿನಿಂದಲೂ ಈ ಜೀವನದ ಚಿಂತೆಗಳಿಂದಲೂ ನಿಮ್ಮ ಹೃದಯಗಳು ಭಾರವಾಗದಂತೆ, ನಿಮ್ಮ ವಿಷಯದಲ್ಲಿ ಜಾಗರೂಕರಾಗಿರಿ.


ಅವರು ಮುಳ್ಳುಗಳಲ್ಲಿ ಸಿಕ್ಕಿಕೊಳ್ಳುವರು, ತಮ್ಮ ದ್ರಾಕ್ಷಾರಸದಿಂದ ಮತ್ತರಾಗುವರು. ಪೂರ್ಣವಾಗಿ ಒಣಗಿದ ಕೂಳೆಯಂತೆ ಅವರು ಸುಟ್ಟು ಹೋಗುವರು.


ಅದೇ ರಾತ್ರಿಯಲ್ಲಿ ಕಸ್ದೀಯರ ಅರಸನಾದ ಬೇಲ್ಯಚ್ಚರನು ಹತನಾದನು.


ವಿನೋದಕ್ಕಾಗಿ ಔತಣ ಮಾಡುತ್ತಾರೆ, ಆನಂದಕ್ಕಾಗಿ ದ್ರಾಕ್ಷಾರಸ ಕುಡಿಯುತ್ತಾರೆ; ಎಲ್ಲವನ್ನೂ ಒದಗಿಸಿಕೊಡುವುದಕ್ಕಾಗಿ ಹಣವು.


ನೀನು ಹೋಗಿ ನಿನ್ನ ಆಹಾರವನ್ನು ಸಂತೋಷದಿಂದ ತಿಂದು ಹರ್ಷ ಹೃದಯದಿಂದ ನಿನ್ನ ದ್ರಾಕ್ಷಾರಸವನ್ನು ಕುಡಿ. ಏಕೆಂದರೆ ನಿನ್ನ ಕೆಲಸಗಳನ್ನು ದೇವರು ಈಗಾಗಲೇ ಮೆಚ್ಚಿಕೊಂಡಿದ್ದಾರೆ.


ದ್ರಾಕ್ಷಾರಸವು ಮನುಷ್ಯ ಹೃದಯವನ್ನು ಸಂತೋಷಪಡಿಸುತ್ತದೆ; ಎಣ್ಣೆಯು ಮಾನವನ ಮುಖವನ್ನು ಪ್ರಕಾಶಿಸುವಂತೆ ಮಾಡುತ್ತದೆ; ರೊಟ್ಟಿಯು ಮನುಷ್ಯನ ಪ್ರಾಣಕ್ಕೆ ಆಧಾರವಾಗುತ್ತದೆ.


ಏಳನೆಯ ದಿವಸದಲ್ಲಿ ಅರಸನಾದ ಅಹಷ್ವೇರೋಷನು ದ್ರಾಕ್ಷಾರಸದಿಂದ ಅಮಲೇರಿದಾಗ ಬಹುರೂಪವತಿಯಾದ ವಷ್ಟಿ ರಾಣಿಯ ಸೌಂದರ್ಯವನ್ನು ಜನರಿಗೂ ಪ್ರಧಾನರಿಗೂ ಪ್ರದರ್ಶಿಸುವುದಕ್ಕೆ ರಾಣಿಗೆ ರಾಜಕಿರೀಟವನ್ನು ಧರಿಸಿಕೊಂಡು ತನ್ನ ಮುಂದೆ ಕರೆದುಕೊಂಡು ಬರುವುದಕ್ಕೆ ಅರಸನಾದ ಅಹಷ್ವೇರೋಷನ ಸಮ್ಮುಖದಲ್ಲಿ ಸೇವೆ ಮಾಡುವ ಮೆಹೂಮಾನ್, ಬಿಜೆತಾ, ಹರ್ಬೋನಾ, ಬಿಗೆತಾ, ಅಬಗೆತಾ, ಜೇತರ್, ಕರಕಾಸ್ ಎಂಬ ಏಳುಮಂದಿ ಕಂಚುಕಿಗಳಿಗೆ ಹೇಳಿದನು.


ಅವರು ಮಧ್ಯಾಹ್ನದಲ್ಲಿ ಹೊರಟರು. ಆದರೆ ಬೆನ್ಹದದನೂ, ಅವರ ಸಹಾಯಕರಾದ ಮೂವತ್ತೆರಡು ಮಂದಿ ಅರಸರೂ ಕೂಡ ಡೇರೆಗಳಲ್ಲಿ ಅಮಲೇರುವ ಹಾಗೆ ಕುಡಿಯುತ್ತಾ ಇದ್ದರು.


ಆ ಪತ್ರದಲ್ಲಿ, “ಊರೀಯನನ್ನು ಘೋರ ಯುದ್ಧ ನಡೆಯುತ್ತಿರುವ ಕಡೆ ಮುಂದೆ ನಿಲ್ಲಿಸಿ, ಅವನು ಗಾಯಗೊಂಡು ಸಾಯುವಂತೆ, ಅವನನ್ನು ಬಿಟ್ಟು ನೀವು ಹಿಂದಕ್ಕೆ ಸರಿದುಕೊಳ್ಳಿರಿ,” ಎಂದು ಬರೆದಿದ್ದನು.


ದಾವೀದನು ಅವನನ್ನು ಕರೆದಾಗ, ಅವನು ಅವನ ಮುಂದೆ ಉಂಡು ಕುಡಿದನು. ಇದಲ್ಲದೆ ದಾವೀದನು ಅವನನ್ನು ಅಮಲೇರುವಂತೆ ಮಾಡಿಸಿದನು. ಅವನು ಸಾಯಂಕಾಲದಲ್ಲಿ ತನ್ನ ಮನೆಗೆ ಹೋಗದೆ, ತನ್ನ ಯಜಮಾನನ ಸೇವಕರ ಸಂಗಡ ಮಲಗುವುದಕ್ಕೆ ಹೊರಟುಹೋದನು.


ಅರಸನು ಅವಳಿಗೆ, “ಭಯಪಡಬೇಡ, ನೀನು ಕಂಡದ್ದೇನು?” ಎಂದನು. ಆಗ ಸ್ತ್ರೀಯು ಸೌಲನಿಗೆ, “ಒಂದು ಆತ್ಮವು ಭೂಮಿಯಿಂದ ಎದ್ದು ಬರುವುದನ್ನು ಕಂಡೆನು,” ಎಂದಳು.


ಆಗ ಸೌಲನು, “ಯೆಹೋವ ದೇವರ ಜೀವದಾಣೆ, ಈ ಕಾರ್ಯಕ್ಕೋಸ್ಕರ ನಿನಗೆ ದಂಡನೆ ಬರುವುದಿಲ್ಲ,” ಎಂದು ಅವಳಿಗೆ ಯೆಹೋವ ದೇವರ ಮೇಲೆ ಪ್ರಮಾಣ ಮಾಡಿದನು.


ನಾನು ನಿನಗೆ ಆಜ್ಞಾಪಿಸಿದ್ದೇನಲ್ಲಾ, ಬಲಿಷ್ಠನಾಗಿರು. ಧೈರ್ಯದಿಂದಿರು, ಭಯಪಡಬೇಡ, ನಿರುತ್ಸಾಹಗೊಳ್ಳಬೇಡ. ಏಕೆಂದರೆ ನೀನು ಹೋಗುವ ಕಡೆಯೆಲ್ಲಾ ನಿನ್ನ ದೇವರಾದ ಯೆಹೋವ ದೇವರು ನಿನ್ನ ಸಂಗಡ ಇದ್ದಾರೆ,” ಎಂದು ಹೇಳಿದರು.


ಅವನು ಅದರಿಂದ ಸ್ವಲ್ಪ ದ್ರಾಕ್ಷಾರಸವನ್ನು ಕುಡಿದು ಅಮಲೇರಿ, ತನ್ನ ಗುಡಾರದಲ್ಲಿ ಬೆತ್ತಲೆಯಾಗಿ ಮಲಗಿದ್ದನು.


ಈಗ ನೀನು ನನ್ನನ್ನು ತಿರಸ್ಕರಿಸಿ, ಹಿತ್ತಿಯನಾದ ಊರೀಯನ ಹೆಂಡತಿಯನ್ನು ನಿನಗೆ ಹೆಂಡತಿಯಾಗಿ ತೆಗೆದುಕೊಂಡದ್ದರಿಂದ, ಖಡ್ಗವು ಎಂದಿಗೂ ನಿನ್ನ ಮನೆಯನ್ನು ಬಿಟ್ಟು ತೊಲಗದು.


ಆದರೆ ಅಬ್ಷಾಲೋಮನು ಅವನನ್ನು ಬಲವಂತ ಮಾಡಿದ್ದರಿಂದ, ಅವನು ಅಮ್ನೋನನನ್ನೂ, ಅರಸನ ಸಮಸ್ತ ಮಕ್ಕಳನ್ನೂ ಅವನ ಸಂಗಡ ಕಳುಹಿಸಿದನು.


ಆಗ ಈಜಿಪ್ಟಿನ ಅರಸನು ಸೂಲಗಿತ್ತಿಯರನ್ನು ಕರೆಯಿಸಿ, “ಏಕೆ ಗಂಡು ಮಕ್ಕಳನ್ನು ಬದುಕಿಸಿದ್ದೀರಿ? ಇಂಥ ಕೆಲಸವನ್ನು ಏಕೆ ಮಾಡಿದಿರಿ?” ಎಂದನು.


ಸೌಲನು ತನ್ನ ಸೇವಕರಿಗೆ, “ನೀವು ದಾವೀದನ ಸಂಗಡ ಅಂತರಂಗವಾಗಿ ಮಾತನಾಡಿ, ಇಗೋ, ಅರಸನು ನಿನ್ನ ಮೇಲೆ ಪ್ರೀತಿಯುಳ್ಳವನಾಗಿದ್ದಾನೆ; ಈಗ ನೀನು ಅರಸನಿಗೆ ಅಳಿಯನಾಗೆಂದು, ಹೇಳಿರಿ,” ಎಂದು ಆಜ್ಞಾಪಿಸಿದನು.


ಆದರೆ ನಿನ್ನ ಸೇವಕಳಿಗೆ ಇಬ್ಬರು ಪುತ್ರರಿದ್ದರು. ಅವರಿಬ್ಬರೂ ಹೊಲದಲ್ಲಿ ಹೊಡೆದಾಡಿದರು. ಅವರನ್ನು ಬಿಡಿಸುವವರು ಯಾರೂ ಇಲ್ಲದ್ದರಿಂದ, ಒಬ್ಬನು ಮತ್ತೊಬ್ಬನನ್ನು ಹೊಡೆದು ಕೊಂದುಹಾಕಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು