Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಸಮುಯೇಲ 13:23 - ಕನ್ನಡ ಸಮಕಾಲಿಕ ಅನುವಾದ

23 ಎರಡು ವರ್ಷ ಪೂರ್ಣ ಮುಗಿದ ತರುವಾಯ, ಅಬ್ಷಾಲೋಮನಿಗೆ ಎಫ್ರಾಯೀಮಿನ ಬಳಿಯಲ್ಲಿರುವ ಬಾಳ್ ಹಾಚೋರಿನಲ್ಲಿ ಕುರಿಗಳ ಉಣ್ಣೆ ಕತ್ತರಿಸುವಾಗ, ಅಬ್ಷಾಲೋಮನು ಅರಸನ ಮಕ್ಕಳನ್ನೆಲ್ಲಾ ಔತಣಕ್ಕೆ ಕರೆದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

23 ಎರಡು ವರ್ಷಗಳಾದ ನಂತರ ಅಬ್ಷಾಲೋಮನು ಒಂದು ದಿನ ಎಫ್ರಾಯೀಮಿನ ಬಳಿಯಲ್ಲಿರುವ ಬಾಳ್ ಹಾಚೋರಿನಲ್ಲಿ ಕುರಿಗಳ ಉಣ್ಣೆಯನ್ನು ಕತ್ತರಿಸುವಾಗ ಎಲ್ಲಾ ರಾಜಪುತ್ರರನ್ನು ಔತಣಕ್ಕೆ ಕರೆದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

23 ಎರಡು ವರ್ಷಗಳಾದ ನಂತರ ಅಬ್ಷಾಲೋಮನು ಒಂದು ದಿನ ಎಫ್ರಯಿಮನ ಬಳಿಯಲ್ಲಿರುವ ಬಾಳ್ ಹಾಚೋರಿನಲ್ಲಿ ಕುರಿಗಳ ಉಣ್ಣೆಯನ್ನು ಕತ್ತರಿಸುವ ವ್ಯವಸ್ಥೆಮಾಡಿದನು. ಎಲ್ಲಾ ರಾಜಪುತ್ರರನ್ನು ಔತಣಕ್ಕೆ ಆಮಂತ್ರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

23 ಎರಡು ವರುಷಗಳಾದನಂತರ ಅಬ್ಷಾಲೋಮನು ಒಂದು ದಿನ ಎಫ್ರಾಯೀವಿುನ ಬಳಿಯಲ್ಲಿರುವ ಬಾಳ್ ಹಾಚೋರಿನಲ್ಲಿ ಕುರಿಗಳ ಉಣ್ಣೆಯನ್ನು ಕತ್ತರಿಸುವಾಗ ಎಲ್ಲಾ ರಾಜಪುತ್ರರನ್ನು ಔತಣಕ್ಕೆ ಕರೆದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

23 ಎರಡು ವರ್ಷಗಳ ನಂತರ, ಅಬ್ಷಾಲೋಮನ ಕುರಿಗಳ ತುಪ್ಪಟವನ್ನು ಕತ್ತರಿಸುವುದಕ್ಕಾಗಿ ಕೆಲವು ಜನರು ಬಾಳ್‌ಹಾಚೋರಿಗೆ ಬಂದರು. ಇದನ್ನು ಬಂದು ನೋಡುವಂತೆ ರಾಜನ ಮಕ್ಕಳಿಗೆಲ್ಲ ಅಬ್ಷಾಲೋಮನು ಆಹ್ವಾನವನ್ನು ನೀಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಸಮುಯೇಲ 13:23
13 ತಿಳಿವುಗಳ ಹೋಲಿಕೆ  

ನಾಬಾಲನು ತನ್ನ ಕುರಿಗಳ ಉಣ್ಣೆ ಕತ್ತರಿಸುವ ವರ್ತಮಾನವನ್ನು ದಾವೀದನು ಮರುಭೂಮಿಯಲ್ಲಿ ಕೇಳಿದನು.


ತಗ್ಗಿನ ದೇಶದಲ್ಲಿಯೂ, ಬಯಲು ದೇಶದಲ್ಲಿಯೂ ಅವನಿಗೆ ಬಹು ಪಶುಗಳಿದ್ದವು. ಆ ಅಡವಿಯಲ್ಲಿ ಬುರುಜುಗಳನ್ನು ಕಟ್ಟಿಸಿ ಅನೇಕ ಬಾವಿಗಳನ್ನು ತೋಡಿಸಿದನು. ಹಾಗೆಯೇ ಪರ್ವತಗಳಲ್ಲಿಯೂ, ಕರ್ಮೆಲಿನಲ್ಲಿಯೂ ಅವನಿಗೆ ಒಕ್ಕಲಿಗರೂ, ದ್ರಾಕ್ಷಿ ವ್ಯವಸಾಯದವರೂ ಇದ್ದರು. ಏಕೆಂದರೆ ಅವನು ವ್ಯವಸಾಯದಲ್ಲಿ ಇಷ್ಟವುಳ್ಳವನಾಗಿದ್ದನು.


ಮೋವಾಬಿನ ಅರಸನಾದ ಮೇಷನು ಕುರಿ ಮಂದೆಯುಳ್ಳವನಾಗಿದ್ದು ಇಸ್ರಾಯೇಲಿನ ಅರಸನಿಗೆ ಒಂದು ಲಕ್ಷ ಕುರಿಮರಿಗಳನ್ನೂ, ಒಂದು ಲಕ್ಷ ಟಗರುಗಳ ಉಣ್ಣೆಯನ್ನೂ ಕಪ್ಪವಾಗಿ ಕೊಡುತ್ತಿದ್ದನು.


ಏಕೆಂದರೆ ಈ ಹೊತ್ತು ಅವನು ಇಳಿದು ಹೋಗಿ, ಎತ್ತುಗಳನ್ನೂ, ಕೊಬ್ಬಿದ ಪಶುಗಳನ್ನೂ, ಕುರಿಗಳನ್ನೂ ಕೊಲ್ಲಿಸಿ, ಅರಸನ ಮಕ್ಕಳೆಲ್ಲರನ್ನೂ, ಸೈನ್ಯಾಧಿಪತಿಗಳನ್ನೂ, ಯಾಜಕನಾದ ಅಬಿಯಾತರನನ್ನೂ ಕರೆದಿದ್ದಾನೆ. ಅವರು ಅವನ ಮುಂದೆ ತಿಂದು, ಕುಡಿದು, ‘ಅರಸನಾದ ಅದೋನೀಯನು ಚಿರಂಜೀವಿಯಾಗಿರಲಿ,’ ಎಂದು ಹೇಳುತ್ತಿದ್ದಾರೆ.


ಇದಲ್ಲದೆ ಅವನು ಎತ್ತುಗಳನ್ನೂ, ಕೊಬ್ಬಿದ ಪಶುಗಳನ್ನೂ, ಕುರಿಗಳನ್ನೂ ಬಲಿಯಾಗಿ ಅರ್ಪಿಸಿದ್ದಾನೆ, ಅರಸನ ಮಕ್ಕಳೆಲ್ಲರನ್ನೂ, ಯಾಜಕನಾದ ಅಬಿಯಾತರನನ್ನೂ, ಸೇನಾಧಿಪತಿ ಯೋವಾಬನನ್ನೂ ಔತಣಕ್ಕೆ ಕರೆದಿದ್ದಾನೆ. ಆದರೆ ನಿನ್ನ ಸೇವಕನಾದ ಸೊಲೊಮೋನನನ್ನು ಅವನು ಕರೆಯಲಿಲ್ಲ.


ಅದೋನೀಯನು ಏನ್ ರೋಗೆಲಿನ ಬಳಿಯಲ್ಲಿರುವ ಚೋಹೆಲೆತ್ ಎಂಬ ಕಲ್ಲಿನ ಹತ್ತಿರ ಕುರಿಗಳನ್ನೂ, ಎತ್ತುಗಳನ್ನೂ, ಕೊಬ್ಬಿದ ಪಶುಗಳನ್ನೂ ಕೊಲ್ಲಿಸಿ, ಅರಸನ ಮಕ್ಕಳಾದ ತನ್ನ ಸಮಸ್ತ ಸಹೋದರರನ್ನೂ, ಅರಸನ ಸೇವಕರಾದ ಸಮಸ್ತ ಯೆಹೂದದ ಜನರನ್ನೂ ಔತಣಕ್ಕೆ ಕರೆದನು.


ಅಬೀಗೈಲಳು ನಾಬಾಲನ ಬಳಿಗೆ ಬಂದಾಗ, ಅರಸನ ಔತಣಕ್ಕೆ ಸಮಾನವಾದ ಔತಣ ಅವನ ಮನೆಯಲ್ಲಿತ್ತು. ಅವನು ಬಹಳವಾಗಿ ಕುಡಿದದ್ದರಿಂದ ಅವನ ಹೃದಯವು ಅವನಲ್ಲಿ ಉಲ್ಲಾಸಗೊಂಡಿತ್ತು. ಆದಕಾರಣ ಅವಳು ಉದಯವಾಗುವವರೆಗೆ ಅವನಿಗೆ ಕಡಿಮೆಯಾದದ್ದನ್ನಾಗಲಿ, ಹೆಚ್ಚಾದದ್ದನ್ನಾಗಲಿ ತಿಳಿಸಲಿಲ್ಲ.


“ ‘ಈಗ ನಿನಗೆ ಕುರಿಗಳ ಉಣ್ಣೆ ಕತ್ತರಿಸುವವರು ಉಂಟೆಂದು ಕೇಳಿದ್ದೇನೆ. ಆದರೆ ನಮ್ಮ ಸಂಗಡವಿದ್ದ ನಿನ್ನ ಕುರಿಕಾಯುವವರು ಕರ್ಮೆಲಿನಲ್ಲಿದ್ದ ದಿವಸಗಳೆಲ್ಲಾ ನಾವು ಅವರಿಗೆ ತೊಂದರೆಪಡಿಸಲಿಲ್ಲ. ಅವರು ಒಂದಾದರೂ ಕಳೆದುಕೊಳ್ಳಲಿಲ್ಲ.


ಆದರೆ ಕರ್ಮೆಲಿನಲ್ಲಿ ಸೊತ್ತುಗಳಿರುವ ಮಾವೋನಿನ ಒಬ್ಬ ಮನುಷ್ಯನಿದ್ದನು. ಅವನು ಬಹು ಸಿರಿವಂತನಾಗಿದ್ದನು. ಅವನಿಗೆ ಮೂರು ಸಾವಿರ ಕುರಿಗಳೂ ಸಾವಿರ ಮೇಕೆಗಳೂ ಇದ್ದವು.


ಇದಲ್ಲದೆ ಅಬ್ಷಾಲೋಮನು ಅರಸನ ಬಳಿಗೆ ಹೋಗಿ, “ಇಗೋ, ಈಗ ನಿನ್ನ ಸೇವಕನ ಬಳಿಗೆ ಉಣ್ಣೆ ಕತ್ತರಿಸುವವರು ಇದ್ದಾರೆ; ಅರಸನೂ, ತನ್ನ ಸೇವಕರೂ ನಿನ್ನ ಸೇವಕನ ಬಳಿಗೆ ಬರಬಹುದೋ?” ಎಂದನು.


ಲಾಬಾನನು ತನ್ನ ಕುರಿಗಳ ಉಣ್ಣೆ ಕತ್ತರಿಸುವುದಕ್ಕೆ ಹೋಗಿದ್ದನು. ಆಗ ರಾಹೇಲಳು ತನ್ನ ತಂದೆಯ ವಿಗ್ರಹಗಳನ್ನು ಕದ್ದುಕೊಂಡಳು.


ಹಾಚೋರ್, ರಾಮಾ, ಗಿತ್ತಯಿಮ್,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು