Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಸಮುಯೇಲ 11:3 - ಕನ್ನಡ ಸಮಕಾಲಿಕ ಅನುವಾದ

3 ಆ ಸ್ತ್ರೀಯು ಬಹು ಸೌಂದರ್ಯವುಳ್ಳ ರೂಪವತಿಯಾಗಿದ್ದಳು. ಆಗ ದಾವೀದನು ಆ ಸ್ತ್ರೀ ಯಾರೆಂದು ಕೇಳುವುದಕ್ಕೆ ಕಳುಹಿಸಿದಾಗ ಒಬ್ಬನು, “ಅವಳು ಎಲೀಯಾಮನ ಮಗಳೂ, ಹಿತ್ತಿಯನಾದ ಊರೀಯನ ಹೆಂಡತಿಯೂ ಬತ್ಷೆಬೆಳು,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಕೂಡಲೆ ದಾವೀದನು ಒಬ್ಬನನ್ನು ಕರೆದು, “ಆ ಸ್ತ್ರೀ ಯಾರು?” ಎಂದು ವಿಚಾರಿಸಲು ಅವನು, “ಆಕೆಯು ಎಲೀಯಾಮನ ಮಗಳೂ, ಹಿತ್ತಿಯನಾದ ಊರೀಯನ ಹೆಂಡತಿಯೂ ಆಗಿರುವ ಬತ್ಷೆಬೆ ಅಲ್ಲವೇ?” ಎಂದು ಉತ್ತರ ಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ಕೂಡಲೆ ದಾವೀದನು ಒಬ್ಬನನ್ನು ಕರೆದು ಆ ಸ್ತ್ರೀ ಯಾರೆಂದು ಕೇಳಿದನು. ಅವನು, “ಆಕೆ ಎಲೀಯಾಮನ ಮಗಳೂ ಹಿತ್ತಿಯನಾದ ಊರೀಯನ ಹೆಂಡತಿಯೂ ಆದ ಬತ್ಷೆಬೆ,” ಎಂದು ಉತ್ತರಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ಕೂಡಲೆ ದಾವೀದನು ಒಬ್ಬನನ್ನು ಕರೆದು ಆ ಸ್ತ್ರೀ ಯಾರೆಂದು ಕೇಳಲು ಅವನು - ಆಕೆಯು ಎಲೀಯಾಮನ ಮಗಳೂ ಹಿತ್ತಿಯನಾದ ಊರೀಯನ ಹೆಂಡತಿಯೂ ಆಗಿರುವ ಬತ್ಷೆಬೆಯಲ್ಲವೋ ಎಂದು ಉತ್ತರ ಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ದಾವೀದನು ತನ್ನ ಸೇವಕರನ್ನು ಕರೆದು ಅವಳು ಯಾರೆಂದು ಕೇಳಿದನು. ಒಬ್ಬ ಸೇವಕನು, “ಅವಳು ಎಲೀಯಾಮನ ಮಗಳಾದ ಬತ್ಷೆಬೆಳು. ಹಿತ್ತಿಯನಾದ ಊರೀಯನ ಹೆಂಡತಿ” ಎಂದು ಉತ್ತರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಸಮುಯೇಲ 11:3
10 ತಿಳಿವುಗಳ ಹೋಲಿಕೆ  

ಹಿತ್ತಿಯನಾದ ಊರೀಯನು. ಹೀಗೆ ಇವರು ಸೇರಿ ಒಟ್ಟು ಮೂವತ್ತೇಳು ಮಂದಿ ರಣಧೀರರಿದ್ದರು.


ಯೆರೂಸಲೇಮಿನಲ್ಲಿ ಅವನಿಗೆ ಹುಟ್ಟಿದ ಮಕ್ಕಳ ಹೆಸರುಗಳು: ದಾವೀದನ ಹೆಂಡತಿ ಬತ್ಷೆಬೆಳು ಅಮ್ಮಿಯೇಲನ ಮಗಳು. ಆಕೆಗೆ ಶಮ್ಮೂವ ಎಂಬ ಶಿಮ್ಮ, ಶೋಬಾಬ್, ನಾತಾನ್, ಸೊಲೊಮೋನ್ ಎಂಬ ನಾಲ್ಕು ಜನ ಗಂಡು ಮಕ್ಕಳು ಜನಿಸಿದರು.


ಅವರು ಕುದುರೆಗಳಂತೆ, ಬಲಶಾಲಿ ಮತ್ತು ಕಾಮವನ್ನು ಹೊಂದಿದವರಾಗಿದ್ದಾರೆ. ತಮ್ಮ ತಮ್ಮ ನೆರೆಯವರ ಹೆಂಡತಿಯರನ್ನು ಕಂಡು ಹೇಕರಿಸುತ್ತಾರೆ.


ಹಿತ್ತಿಯನಾದ ಊರೀಯನು; ಅಹ್ಲಾಯಿಯ ಮಗನಾದ ಜಾಬಾದನು;


ಬಡವನಿಗೆ ತಾನು ಕೊಂಡುಕೊಂಡ ಒಂದು ಚಿಕ್ಕ ಹೆಣ್ಣು ಕುರಿಮರಿಯ ಹೊರತು ಬೇರೇನೂ ಇರಲಿಲ್ಲ. ಅದು ಅವನ ಸಂಗಡ, ಅವನ ಮಕ್ಕಳ ಸಂಗಡ ಬೆಳೆದು, ಅವನ ಸ್ವಂತ ಆಹಾರ ತಿಂದು, ಅವನ ಪಾತ್ರೆಯಲ್ಲಿ ಕುಡಿದು, ಅವನ ಮಗ್ಗುಲಲ್ಲಿ ಮಲಗಿಕೊಂಡು, ಅವನಿಗೆ ಮಗಳ ಹಾಗಿತ್ತು.


ಮಾಕಾ ಊರಿನ ಅಹಸ್ಬೈ ಎಂಬುವನ ಮಗನಾದ ಎಲೀಫೆಲೆಟನು; ಗಿಲೋವಿನ ಅಹೀತೋಫೆಲ್ ಎಂಬವನ ಮಗ ಎಲೀಯಾಮ್;


ಏಕೆಂದರೆ ದಾವೀದನು ಹಿತ್ತಿಯನಾದ ಊರೀಯನ ವಿಷಯವೊಂದನ್ನು ಬಿಟ್ಟು, ತನ್ನ ಜೀವಿತದ ಸಮಸ್ತ ದಿವಸಗಳಲ್ಲಿ ಯೆಹೋವ ದೇವರು ತನಗೆ ಆಜ್ಞಾಪಿಸಿದ ಎಲ್ಲಾದಕ್ಕೆ ತೊಲಗದೆ, ಅವರ ದೃಷ್ಟಿಗೆ ಮೆಚ್ಚಿಕೆಯಾದದ್ದನ್ನು ಮಾಡಿದನು.


ನಿನ್ನ ಹೃದಯ ಅವಳ ಸೌಂದರ್ಯವನ್ನು ಮೋಹಿಸದಿರಲಿ. ಅವಳ ಕಣ್ಣುರೆಪ್ಪೆಗಳಿಂದ ಅವಳು ನಿನ್ನನ್ನು ವಶಮಾಡಿಕೊಳ್ಳದೆ ಇರಲಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು