2 ಸಮುಯೇಲ 11:12 - ಕನ್ನಡ ಸಮಕಾಲಿಕ ಅನುವಾದ12 ಆಗ ದಾವೀದನು ಊರೀಯನಿಗೆ, “ಈ ಹೊತ್ತು ಇಲ್ಲಿರು. ನಾಳೆ ನಿನ್ನನ್ನು ಕಳುಹಿಸುತ್ತೇನೆ,” ಎಂದನು. ಹಾಗೆಯೇ ಊರೀಯನೂ ಆ ದಿನವೂ, ಮಾರನೆಯ ದಿವಸವೂ ಯೆರೂಸಲೇಮಿನಲ್ಲಿ ಇದ್ದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201912 ಆಗ ದಾವೀದನು ಅವನಿಗೆ, “ನೀನು ಈ ಹೊತ್ತು ಇಲ್ಲೇ ಇರು. ನಾಳೆ ನಿನ್ನನ್ನು ಕಳುಹಿಸುತ್ತೇನೆ” ಎಂದು ಆಜ್ಞಾಪಿಸಿದನು. ಊರೀಯನು ಆ ದಿನ ಯೆರೂಸಲೇಮಿನಲ್ಲೇ ಇದ್ದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)12 ಆಗ ದಾವೀದನು, “ಹಾಗಾದರೆ ನೀನು ಈ ಹೊತ್ತು ಇಲ್ಲೇ ಇರು; ನಾಳೆ ನಿನ್ನನ್ನು ಕಳುಹಿಸುತ್ತೇನೆ,” ಎಂದು ಆಜ್ಞಾಪಿಸಿದನು. ಅಂತೆಯೇ ಊರೀಯನು ಆ ದಿನ ಜೆರುಸಲೇಮಿನಲ್ಲೇ ಇದ್ದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)12 ಆಗ ದಾವೀದನು ಅವನಿಗೆ - ನೀನು ಈ ಹೊತ್ತು ಇಲ್ಲೇ ಇರು, ನಾಳೆ ನಿನ್ನನ್ನು ಕಳುಹಿಸುತ್ತೇನೆ ಎಂದು ಆಜ್ಞಾಪಿಸಿದನು. ಆದದರಿಂದ ಊರೀಯನು ಆ ದಿನ ಯೆರೂಸಲೇವಿುನಲ್ಲೇ ಇದ್ದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್12 ದಾವೀದನು ಊರೀಯನಿಗೆ, “ಈ ದಿನ ಇಲ್ಲಿಯೇ ಇರು. ನಾಳೆ ನಿನ್ನನ್ನು ಯುದ್ಧಕ್ಕೆ ಕಳುಹಿಸುತ್ತೇನೆ” ಎಂದು ಹೇಳಿದನು. ಊರೀಯನು ಅಂದು ಜೆರುಸಲೇಮಿನಲ್ಲಿಯೇ ಉಳಿದುಕೊಂಡನು. ಅಂದರೆ ಮಾರನೆಯ ದಿನದ ಬೆಳಗಿನವರೆಗೆ ಅಲ್ಲೇ ಇದ್ದನು. ಅಧ್ಯಾಯವನ್ನು ನೋಡಿ |