Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಪೂರ್ವಕಾಲ ವೃತ್ತಾಂತ 7:5 - ಕನ್ನಡ ಸಮಕಾಲಿಕ ಅನುವಾದ

5 ಅರಸನಾದ ಸೊಲೊಮೋನನು 22,000 ಹೋರಿಗಳನ್ನೂ, 1,20,000 ಕುರಿಗಳನ್ನೂ ಬಲಿಯಾಗಿ ಅರ್ಪಿಸಿದನು. ಹೀಗೆಯೇ ಅರಸನೂ, ಸಮಸ್ತ ಜನರೂ ದೇವರ ಆಲಯವನ್ನು ಪ್ರತಿಷ್ಠೆ ಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಅರಸನಾದ ಸೊಲೊಮೋನನು ಯಜ್ಞಕ್ಕಾಗಿ ಇಪ್ಪತ್ತೆರಡು ಸಾವಿರ ಹೋರಿಗಳನ್ನು, ಲಕ್ಷದ ಇಪ್ಪತ್ತು ಸಾವಿರ ಕುರಿಗಳನ್ನು ಯೆಹೋವನಿಗೆ ಸರ್ವಾಂಗಹೋಮವಾಗಿ ಅರ್ಪಿಸಿದನು. ಈ ಪ್ರಕಾರ ಅರಸನು ಮತ್ತು ಎಲ್ಲಾ ಇಸ್ರಾಯೇಲರು ಯೆಹೋವನ ದೇವಾಲಯವನ್ನು ಪ್ರತಿಷ್ಠೆ ಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ಅರಸ ಸೊಲೊಮೋನನು ಬಲಿಯಾಗಿ ವಧಿಸಿದ ಹೋರಿಗಳು ಇಪ್ಪತ್ತೆರಡು ಸಾವಿರ, ಕುರಿಗಳು ಲಕ್ಷದ ಇಪ್ಪತ್ತು ಸಾವಿರ. ಈ ಪ್ರಕಾರ ಅರಸನೂ ಇಸ್ರಯೇಲರೆಲ್ಲರೂ ದೇವಾಲಯವನ್ನು ಪ್ರತಿಷ್ಠಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಅರಸನಾದ ಸೊಲೊಮೋನನು ಯಜ್ಞಕ್ಕಾಗಿ ವಧಿಸಿದ ಹೋರಿಗಳು ಇಪ್ಪತ್ತೆರಡು ಸಾವಿರ, ಕುರಿಗಳು ಲಕ್ಷದ ಇಪ್ಪತ್ತು ಸಾವಿರ. ಈ ಪ್ರಕಾರ ಅರಸನೂ ಎಲ್ಲಾ ಇಸ್ರಾಯೇಲ್ಯರೂ ದೇವಾಲಯವನ್ನು ಪ್ರತಿಷ್ಠಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ಸೊಲೊಮೋನ ಅರಸನು ಇಪ್ಪತ್ತೆರಡು ಸಾವಿರ ಹೋರಿಗಳನ್ನೂ ಒಂದು ಲಕ್ಷ ಇಪ್ಪತ್ತು ಸಾವಿರ ಕುರಿಗಳನ್ನೂ ಯಜ್ಞವಾಗಿ ಸಮರ್ಪಿಸಿದನು. ಅರಸನೂ ಎಲ್ಲಾ ಜನರೂ ದೇವಾಲಯವನ್ನು ಆರಾಧನೆಗಾಗಿ ಪ್ರತಿಷ್ಠಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಪೂರ್ವಕಾಲ ವೃತ್ತಾಂತ 7:5
16 ತಿಳಿವುಗಳ ಹೋಲಿಕೆ  

ಆಗ ಯೆರೂಸಲೇಮಿನಲ್ಲಿ ದೇವಾಲಯದ ಪ್ರತಿಷ್ಠೆಯ ಹಬ್ಬವಿತ್ತು. ಅದು ಚಳಿಗಾಲವಾಗಿತ್ತು.


ಯೆಹೋವ ದೇವರು ಸಾವಿರ ಟಗರುಗಳಿಗಾದರೂ ಎಣ್ಣೆಯ ಹತ್ತು ಸಾವಿರ ನದಿಗಳಿಗಾದರೂ ಮೆಚ್ಚುವರೋ? ನನ್ನ ದ್ರೋಹಕ್ಕಾಗಿ ನನ್ನ ಚೊಚ್ಚಲ ಮಗನನ್ನೂ ನನ್ನ ಆತ್ಮದ ಪಾಪಕ್ಕಾಗಿ ನನ್ನ ಗರ್ಭದ ಫಲವನ್ನೂ ಕೊಡಲೋ?


ಹಬ್ಬಗಳಲ್ಲಿಯೂ ಅಮಾವಾಸ್ಯೆಗಳಲ್ಲಿಯೂ ವಿಶ್ರಾಂತಿಯ ದಿನಗಳಲ್ಲಿಯೂ ಇಸ್ರಾಯೇಲಿನ ಮನೆತನದವರ ಎಲ್ಲಾ ಸಭೆಗಳಲ್ಲಿಯೂ ಹೋಮಗಳನ್ನು ಅರ್ಪಣೆಗಳನ್ನು ನೈವೇದ್ಯಗಳನ್ನು ಕೊಡುವುದು ಪ್ರಭುವಿನ ಕೆಲಸವಾಗಿರುವುದು. ಆತನು ಇಸ್ರಾಯೇಲ್ಯರಿಗೆ ಪ್ರಾಯಶ್ಚಿತ್ತ ಮಾಡಲು ಪಾಪ ಪರಿಹಾರಕ ಬಲಿಗಳನ್ನು, ಧಾನ್ಯದ ಅರ್ಪಣೆಗಳನ್ನು, ದಹನಬಲಿಗಳನ್ನು ಮತ್ತು ಸಮಾಧಾನದ ಬಲಿಗಳನ್ನು ಒದಗಿಸುವನು.


ಯೆಹೂದದ ಅರಸನಾದ ಹಿಜ್ಕೀಯನು ಸಭೆಗೆ 1,000 ಹೋರಿಗಳನ್ನೂ 7,000 ಕುರಿಗಳನ್ನೂ ಕೊಟ್ಟನು. ಇದಲ್ಲದೆ ಪ್ರಧಾನರು ಕೂಟಕ್ಕೆ 1,000 ಹೋರಿಗಳನ್ನೂ 10,000 ಕುರಿಗಳನ್ನೂ ಕೊಟ್ಟರು. ಯಾಜಕರಲ್ಲಿ ಅನೇಕರು ತಮ್ಮನ್ನು ಪ್ರತಿಷ್ಠೆ ಮಾಡಿಕೊಂಡರು.


ಅದೇ ಕಾಲದಲ್ಲಿ ತಾವು ತಂದ ಕೊಳ್ಳೆಯಿಂದ ಏಳು ನೂರು ಹೋರಿಗಳನ್ನೂ, ಏಳು ಸಾವಿರ ಕುರಿಗಳನ್ನೂ ಯೆಹೋವ ದೇವರಿಗೆ ಬಲಿ ಅರ್ಪಿಸಿದರು.


ಆಗ ಅರಸನಾದ ಸೊಲೊಮೋನನೂ ಅವನ ಬಳಿಯಲ್ಲಿ ಕೂಡಿದ ಇಸ್ರಾಯೇಲ್ ಜನರೆಲ್ಲರೂ ಮಂಜೂಷದ ಮುಂದೆ ನಿಂತು ಎಣಿಸಲಾಗದಷ್ಟು ಕುರಿಗಳನ್ನೂ, ಪಶುಗಳನ್ನೂ ಬಲಿಯಾಗಿ ಅರ್ಪಿಸಿದರು.


ನನ್ನ ದೇವರಾದ ಯೆಹೋವ ದೇವರಿಗೆ ಪ್ರತಿಷ್ಠೆ ಮಾಡುವುದಕ್ಕೂ, ದೇವಸನ್ನಿಧಿಗೆ ಪರಿಮಳ ಧೂಪವನ್ನು ಅರ್ಪಿಸುವ ನಿತ್ಯ ಸಮ್ಮುಖದ ರೊಟ್ಟಿಗೋಸ್ಕರವೂ, ಸಬ್ಬತ್ ದಿನಗಳಲ್ಲಿಯೂ, ಅಮಾವಾಸ್ಯೆಗಳಲ್ಲಿಯೂ, ಇಸ್ರಾಯೇಲರಿಗೆ ನಿರಂತರವಾಗಿರಲು ನೇಮಿಸಿದ ನಮ್ಮ ದೇವರಾದ ಯೆಹೋವ ದೇವರ ಹಬ್ಬಗಳಲ್ಲಿಯೂ, ಉದಯಕಾಲದ ಸಾಯಂಕಾಲದ ದಹನಬಲಿಗಳಿಗೋಸ್ಕರವೂ ನಮ್ಮ ದೇವರಾದ ಯೆಹೋವ ದೇವರ ನಾಮಕ್ಕೆ ಆಲಯವನ್ನು ಕಟ್ಟಿಸುತ್ತೇನೆ.


ಆಗ ಸೊಲೊಮೋನನು ಸಭೆಯ ಗುಡಾರದ ಬಳಿಯಲ್ಲಿ ಯೆಹೋವ ದೇವರ ಮುಂದೆ ಇರುವ ಕಂಚಿನ ಪೀಠದ ಬಳಿಗೆ ಹೋಗಿ, ಅದರ ಮೇಲೆ ಸಹಸ್ರ ದಹನಬಲಿಗಳನ್ನು ಅರ್ಪಿಸಿದನು.


ಮಾರನೆಯ ದಿವಸದಲ್ಲಿ ಅವರು ಯೆಹೋವ ದೇವರಿಗೆ ಬಲಿಗಳನ್ನು ವಧಿಸಿ, ಯೆಹೋವ ದೇವರಿಗೆ ದಹನಬಲಿಗಳನ್ನು ಅರ್ಪಿಸಿದರು. ಸಾವಿರ ಹೋರಿಗಳನ್ನೂ, ಸಾವಿರ ಟಗರುಗಳನ್ನೂ, ಸಾವಿರ ಕುರಿಮರಿಗಳನ್ನೂ, ಅವುಗಳ ಪಾನದ ಅರ್ಪಣೆಗಳನ್ನೂ, ಸಮಸ್ತ ಇಸ್ರಾಯೇಲರಿಗೋಸ್ಕರ ಬಹಳವಾಗಿ ಬಲಿಗಳನ್ನು ಅರ್ಪಿಸಿದರು.


ಬಲಿಪೀಠವನ್ನು ಅಭಿಷೇಕಿಸಿದ ದಿನದಂದು ಪ್ರತಿಷ್ಠೆಗಾಗಿ ಅದರ ಮುಂದೆ ಬಂದು, ಪ್ರಧಾನರು ತಮ್ಮ ಕಾಣಿಕೆಗಳನ್ನು ಅರ್ಪಿಸಿದರು.


ಆಗ ಅರಸನೂ, ಸಮಸ್ತ ಜನರೂ ಯೆಹೋವ ದೇವರ ಮುಂದೆ ಬಲಿಗಳನ್ನು ಅರ್ಪಿಸಿದರು.


ಯಾಜಕರು ತಮ್ಮ ತಮ್ಮ ಸೇವೆಯಲ್ಲಿ ನಿಂತರು. ಹಾಗೆಯೇ ಲೇವಿಯರು ಯೆಹೋವ ದೇವರ ಗೀತವಾದ್ಯಗಳನ್ನು ಹಿಡಿದುಕೊಂಡು ನಿಂತರು. ಅರಸನಾದ ದಾವೀದನು ಯೆಹೋವ ದೇವರನ್ನು ಕೊಂಡಾಡುವುದಕ್ಕೆ ಇವುಗಳನ್ನು ಮಾಡಿಸಿದ್ದನು. “ಯೆಹೋವ ದೇವರ ಪ್ರೀತಿಯು ಯುಗಯುಗಕ್ಕೂ ಇರುವುದು,” ಎಂಬುದಾಗಿ ಆ ವಾದ್ಯಗಳೊಡನೆ ಭಜಿಸುತ್ತಿದ್ದರು. ಯಾಜಕರು ಲೇವಿಯರ ಮುಂದೆ ನಿಂತು ತುತೂರಿಗಳನ್ನು ಊದುತ್ತಿದ್ದರು. ಸಮಸ್ತ ಇಸ್ರಾಯೇಲರೂ ನಿಂತಿದ್ದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು