2 ಪೂರ್ವಕಾಲ ವೃತ್ತಾಂತ 7:17 - ಕನ್ನಡ ಸಮಕಾಲಿಕ ಅನುವಾದ17 “ನೀನು ನಿನ್ನ ತಂದೆಯಾದ ದಾವೀದನಂತೆ, ನಾನು ನಿನಗೆ ಆಜ್ಞಾಪಿಸಿದ ನನ್ನ ಕಟ್ಟಳೆಗಳನ್ನೂ ನ್ಯಾಯಗಳನ್ನೂ ನಿಷ್ಠೆಯಿಂದ ಕೈಗೊಂಡು ನಡೆದರೆ, ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201917 ನೀನು ನಿನ್ನ ತಂದೆಯಾದ ದಾವೀದನಂತೆ ನನಗೆ ವಿಧೇಯನಾಗಿ ನಡೆದುಕೊಂಡು ನನ್ನ ಆಜ್ಞಾವಿಧಿನ್ಯಾಯಗಳನ್ನು ಕೈಕೊಳ್ಳುವುದಾದರೆ, ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)17 ನೀನು ನಿನ್ನ ತಂದೆಯಾದ ದಾವೀದನಂತೆ ನನ್ನ ಆಜ್ಞಾವಿಧಿಗಳನ್ನು ಕೈಗೊಂಡು ನನಗೆ ವಿಧೇಯನಾಗಿ ನಡೆದುಕೊಂಡರೆ ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)17 ನೀನು ನಿನ್ನ ತಂದೆಯಾದ ದಾವೀದನಂತೆ ನನಗೆ ವಿಧೇಯನಾಗಿ ನಡೆದುಕೊಂಡು ನನ್ನ ಆಜ್ಞಾವಿಧಿನ್ಯಾಯಗಳನ್ನು ಕೈಕೊಳ್ಳುವದಾದರೆ ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್17 ಸೊಲೊಮೋನನೇ, ನಿನ್ನ ತಂದೆಯಾದ ದಾವೀದನು ಹೇಗೆ ಜೀವಿಸಿದನೋ ಅದೇ ಪ್ರಕಾರ ನೀನು ನನ್ನೆದುರಿನಲ್ಲಿ ಜೀವಿಸಿ, ನನ್ನ ಅಪ್ಪಣೆಗಳನ್ನು ಕೈಕೊಂಡು, ನನ್ನ ವಿಧಿನಿಯಮಗಳಿಗೆ ವಿಧೇಯನಾಗುವದಾದರೆ, ಅಧ್ಯಾಯವನ್ನು ನೋಡಿ |
“ಇದಲ್ಲದೆ ನನ್ನ ಮಗ ಸೊಲೊಮೋನನೇ, ನೀನು ನಿನ್ನ ತಂದೆಯ ದೇವರನ್ನು ಅರಿತುಕೊಂಡು, ಪೂರ್ಣಹೃದಯದಿಂದಲೂ, ಪೂರ್ಣಮನಸ್ಸಿನಿಂದಲೂ ದೇವರನ್ನು ಸೇವಿಸು. ಏಕೆಂದರೆ, ಯೆಹೋವ ದೇವರು ಸಕಲ ಹೃದಯಗಳನ್ನು ಪರಿಶೋಧಿಸಿ, ಯೋಚನೆಗಳ ಕಲ್ಪನೆಯನ್ನೆಲ್ಲಾ ತಿಳಿದಿದ್ದಾರೆ. ನೀನು ದೇವರನ್ನು ಹುಡುಕಿದರೆ, ದೇವರು ನಿನಗೆ ಸಿಕ್ಕುವರು. ನೀನು ದೇವರನ್ನು ಬಿಟ್ಟುಬಿಟ್ಟರೆ, ದೇವರು ಸಹ ನಿನ್ನನ್ನು ಎಂದೆಂದಿಗೂ ತೊರೆದುಬಿಡುವರು.