Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಪೂರ್ವಕಾಲ ವೃತ್ತಾಂತ 6:29 - ಕನ್ನಡ ಸಮಕಾಲಿಕ ಅನುವಾದ

29 ನಿಮ್ಮ ಜನರಾದ ಸಮಸ್ತ ಇಸ್ರಾಯೇಲಿನ ಯಾವ ಒಬ್ಬ ಮನುಷ್ಯನಾದರೂ ತಾನು ಅನುಭವಿಸುತ್ತಿರುವ ಉಪದ್ರವ ದುಃಖಗಳ ನಿಮಿತ್ತವಾಗಿ ಈ ಮಂದಿರದ ಕಡೆಗೆ ತನ್ನ ಕೈಗಳನ್ನು ಚಾಚಿ, ಯಾವ ಪ್ರಾರ್ಥನೆಯನ್ನಾದರೂ, ವಿಜ್ಞಾಪನೆಯನ್ನಾದರೂ ಮಾಡಿದರೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

29 ಎಲ್ಲಾ ಇಸ್ರಾಯೇಲ್ಯರಾಗಲಿ, ಅವರಲ್ಲೊಬ್ಬನಾಗಲಿ, ತಾವು ಅನುಭವಿಸುತ್ತಿರುವ ಉಪದ್ರವ ದುಃಖಗಳ ನಿಮಿತ್ತವಾಗಿ ಈ ಆಲಯದ ಕಡೆಗೆ ಕೈಯೆತ್ತಿ ನಿನಗೆ ಪ್ರಾರ್ಥನೆಯನ್ನೂ, ವಿಜ್ಞಾಪನೆಯನ್ನೂ ಮಾಡಿದರೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

29 ಎಲ್ಲಾ ಇಸ್ರಯೇಲರಾಗಲಿ, ಅವರಲ್ಲೊಬ್ಬನಾಗಲಿ, ತಾವು ಅನುಭವಿಸುತ್ತಿರುವ ಉಪದ್ರವ, ದುಃಖಗಳ ನಿಮಿತ್ತ ಈ ಆಲಯದ ಕಡೆಗೆ ಕೈಯೆತ್ತಿ ನಿಮಗೆ ಪ್ರಾರ್ಥನೆಯನ್ನೂ ವಿಜ್ಞಾಪನೆಯನ್ನೂ ಮಾಡಿದರೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

29 ಎಲ್ಲಾ ಇಸ್ರಾಯೇಲ್ಯರಾಗಲಿ ಅವರಲ್ಲೊಬ್ಬನಾಗಲಿ ತಾವು ಅನುಭವಿಸುತ್ತಿರುವ ಉಪದ್ರವ ದುಃಖಗಳ ನಿವಿುತ್ತವಾಗಿ ಈ ಆಲಯದ ಕಡೆಗೆ ಕೈಯೆತ್ತಿ ನಿನಗೆ ಪ್ರಾರ್ಥನೆಯನ್ನೂ ವಿಜ್ಞಾಪನೆಯನ್ನೂ ಮಾಡುವದಾದರೆ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

29 ತಮ್ಮ ಸಂಕಟಗಳ ಕುರಿತು ಈ ಆಲಯದ ಕಡೆಗೆ ಕೈಯೆತ್ತಿ ನಿನಗೆ ಮೊರೆಯಿಡುವದಾದರೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಪೂರ್ವಕಾಲ ವೃತ್ತಾಂತ 6:29
11 ತಿಳಿವುಗಳ ಹೋಲಿಕೆ  

ಹೃದಯಕ್ಕೆ ತನ್ನ ವ್ಯಥೆಯು ಗೊತ್ತು; ಪರನು ಅದರ ಸಂತೋಷದಲ್ಲಿ ಪಾಲಾಗುವುದಿಲ್ಲ.


ಆತನು ನನ್ನನ್ನು ಕರೆಯುವನು ನಾನು ಆತನಿಗೆ ಉತ್ತರಕೊಡುವೆನು. ಇಕ್ಕಟ್ಟಿನಲ್ಲಿ ನಾನು ಆತನ ಸಂಗಡ ಇದ್ದು, ಆತನನ್ನು ಘನಪಡಿಸುವೆನು.


ಇಕ್ಕಟ್ಟಿನ ದಿವಸದಲ್ಲಿ ನನ್ನನ್ನು ಕರೆಯಿರಿ, ನಾನು ನಿಮ್ಮನ್ನು ಬಿಡಿಸುವೆನು, ನೀವು ನನ್ನನ್ನು ಘನಪಡಿಸುವಿರಿ.”


ನೀವು ಪ್ರಾರ್ಥಿಸಲು ನಿಮ್ಮ ಕೈಗಳನ್ನು ಚಾಚುವಾಗ, ನನ್ನ ಕಣ್ಣುಗಳನ್ನು ನಿಮಗೆ ಮರೆಮಾಡುವೆನು; ಹೌದು, ನೀವು ಬಹು ಪ್ರಾರ್ಥನೆಗಳನ್ನು ಮಾಡಿದರೂ ನಾನು ಕೇಳೆನು. “ನಿಮ್ಮ ಕೈಗಳು ರಕ್ತದಿಂದ ತೊಯ್ದಿವೆ!


“ದೇಶದಲ್ಲಿ ಬರಗಾಲ, ಘೋರವ್ಯಾಧಿ, ಉರಿಗಾಳಿ, ಬೆಳೆಗಳ ಮೇಲೆ ಮಿಡತೆ, ಕಂಬಳಿಹುಳು ಇವುಗಳು ಇದ್ದರೆ, ಅಥವಾ ಅವರ ಶತ್ರುಗಳು ತಮ್ಮ ಸ್ವದೇಶದ ಪಟ್ಟಣಗಳಲ್ಲಿ ಅವರನ್ನು ಹಿಂಸಿಸಿದರೂ, ಯಾವ ಬಾಧೆ ಯಾವ ಬೇನೆ ಇದ್ದರೂ,


ನೀವು ವಾಸಮಾಡುವ ಪರಲೋಕದಿಂದ ಕೇಳಿ ಮನ್ನಿಸಿ, ಮನುಷ್ಯನ ಹೃದಯವನ್ನು ತಿಳಿದಿರುವ ನೀವು ಪ್ರತಿ ಮನುಷ್ಯನಿಗೂ ಅವನವನ ಮಾರ್ಗದ ಪ್ರಕಾರ ಪ್ರತಿಫಲಕೊಡಿರಿ. ಏಕೆಂದರೆ ನೀವೊಬ್ಬರೇ ಸಮಸ್ತ ಜನರ ಹೃದಯಗಳನ್ನು ತಿಳಿದವರಾಗಿದ್ದೀರಿ.


‘ನಿಮ್ಮ ಹೆಸರು ಈ ಆಲಯದಲ್ಲಿರುವುದರಿಂದ ಖಡ್ಗವೂ ನ್ಯಾಯತೀರಿಸುವ ಶಿಕ್ಷೆಯೂ, ಘೋರವ್ಯಾಧಿಯೂ ಬರವೇನಾದರೂ ನಮ್ಮ ಮೇಲೆ ಬಂದರೆ, ನಾವು ಈ ಆಲಯದ ಮುಂದೆಯೂ, ನಿಮ್ಮ ಸಮ್ಮುಖದಲ್ಲಿಯೂ ನಿಂತು, ನಮ್ಮ ಇಕ್ಕಟ್ಟಿನಲ್ಲಿ ನಿಮ್ಮನ್ನು ಕೂಗುವಾಗ, ನೀವು ಕೇಳಿ ರಕ್ಷಿಸುವಿರಿ,’ ಎಂದು ಹೇಳಲಿಲ್ಲವೇ?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು