2 ಪೂರ್ವಕಾಲ ವೃತ್ತಾಂತ 6:10 - ಕನ್ನಡ ಸಮಕಾಲಿಕ ಅನುವಾದ10 “ಈಗ ಯೆಹೋವ ದೇವರು ತಾವು ಹೇಳಿದ ವಾಗ್ದಾನವನ್ನು ನೆರವೇರಿಸಿದ್ದಾರೆ. ನಾನು ನನ್ನ ತಂದೆಯಾದ ದಾವೀದನಿಗೆ ಬದಲಾಗಿ, ಯೆಹೋವ ದೇವರು ಮಾತುಕೊಟ್ಟ ಪ್ರಕಾರ ಇಸ್ರಾಯೇಲಿನ ಸಿಂಹಾಸನದ ಮೇಲೆ ಕುಳಿತುಕೊಂಡು, ಇಸ್ರಾಯೇಲಿನ ದೇವರಾದ ಯೆಹೋವ ದೇವರ ಹೆಸರಿಗೋಸ್ಕರ ಈ ಆಲಯವನ್ನು ಕಟ್ಟಿಸಿದ್ದೇನೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201910 ಯೆಹೋವನು ತಾನು ಕೊಟ್ಟ ಮಾತನ್ನು ನೆರವೇರಿಸಿದ್ದಾನೆ. ಆತನು ವಾಗ್ದಾನ ಮಾಡಿದಂತೆ ನಾನು ನನ್ನ ತಂದೆಯಾದ ದಾವೀದನಿಗೆ ಬದಲಾಗಿ ಇಸ್ರಾಯೇಲಿನ ಸಿಂಹಾಸನದ ಮೇಲೆ ಅರಸನಾಗಿ ಕುಳಿತುಕೊಂಡು ಇಸ್ರಾಯೇಲಿನ ದೇವರಾದ ಯೆಹೋವನ ಹೆಸರಿಗೆ ಆಲಯವನ್ನು ಕಟ್ಟಿಸಿದ್ದೇನೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)10 ತಾವು ಕೊಟ್ಟ ಮಾತನ್ನು ಸರ್ವೇಶ್ವರ ನೆರವೇರಿಸಿದ್ದಾರೆ. ಅವರ ವಾಗ್ದಾನದಂತೆ ನಾನು ನನ್ನ ತಂದೆ ದಾವೀದನ ಸ್ಥಾನದಲ್ಲಿ ಕುಳಿತುಕೊಂಡಿದ್ದೇನೆ. ಇಸ್ರಯೇಲ್ ದೇವರಾದ ಸರ್ವೇಶ್ವರನ ಹೆಸರಿಗಾಗಿ ಈ ಆಲಯವನ್ನು ಕಟ್ಟಿಸಿದ್ದೇನೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)10 ಯೆಹೋವನು ತಾನು ಕೊಟ್ಟ ಮಾತನ್ನು ನೆರವೇರಿಸಿದನು. ಆತನ ವಾಗ್ದಾನದಂತೆ ನಾನು ನನ್ನ ತಂದೆಯಾದ ದಾವೀದನಿಗೆ ಬದಲಾಗಿ ಇಸ್ರಾಯೇಲ್ ಸಿಂಹಾಸನದ ಮೇಲೆ ಅರಸನಾಗಿ ಕೂತುಕೊಂಡು ಇಸ್ರಾಯೇಲ್ ದೇವರಾದ ಯೆಹೋವನ ಹೆಸರಿನದಾಗಿ ಈ ಆಲಯವನ್ನು ಕಟ್ಟಿಸಿದ್ದೇನೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್10 ಯೆಹೋವನು ತಾನು ಕೊಟ್ಟ ಮಾತನ್ನು ಈಗ ನೆರವೇರಿಸಿದನು. ನಾನು ನನ್ನ ತಂದೆಯ ಸ್ಥಾನದಲ್ಲಿ ಅರಸನಾಗಿದ್ದೇನೆ. ದಾವೀದನು ನನ್ನ ತಂದೆ. ಈಗ ನಾನು ಇಸ್ರೇಲರ ರಾಜನು. ಇದು ದೇವರ ವಾಗ್ದಾನಕ್ಕನುಸಾರವಾಗಿದೆ. ನಾನು ಇಸ್ರೇಲರ ದೇವರಾದ ಯೆಹೋವನ ನಾಮಕ್ಕಾಗಿ ದೇವಾಲಯವನ್ನು ಕಟ್ಟಿರುತ್ತೇನೆ. ಅಧ್ಯಾಯವನ್ನು ನೋಡಿ |