Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಪೂರ್ವಕಾಲ ವೃತ್ತಾಂತ 35:11 - ಕನ್ನಡ ಸಮಕಾಲಿಕ ಅನುವಾದ

11 ಲೇವಿಯರು ಪಸ್ಕದ ಕುರಿಮರಿಯನ್ನು ವಧಿಸಿದ ತರುವಾಯ, ಯಾಜಕರು ಅವರ ಕೈಯಿಂದ ರಕ್ತವನ್ನು ತೆಗೆದುಕೊಂಡು ಚಿಮುಕಿಸಿದರು. ಆದರೆ ಲೇವಿಯರು ಚರ್ಮವನ್ನು ಸುಲಿದರು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಲೇವಿಯರು ಪಸ್ಕದ ಪಶುಗಳನ್ನು ವಧಿಸಿದರು. ಯಾಜಕರು ಇವರ ಕೈಯಿಂದ ರಕ್ತವನ್ನು ತೆಗೆದುಕೊಂಡು ಪ್ರೋಕ್ಷಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 ಲೇವಿಯರು ಪಾಸ್ಕದ ಪಶುಗಳನ್ನು ವಧಿಸಿದರು. ಯಾಜಕರು ಇವರ ಕೈಯಿಂದ ರಕ್ತವನ್ನು ತೆಗೆದುಕೊಂಡು ಪ್ರೋಕ್ಷಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಲೇವಿಯರು ಪಸ್ಕದ ಪಶುಗಳನ್ನು ವಧಿಸಿದರು. ಯಾಜಕರು ಇವರ ಕೈಯಿಂದ ರಕ್ತವನ್ನು ತೆಗೆದುಕೊಂಡು ಪ್ರೋಕ್ಷಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ಪಸ್ಕದ ಪಶುಗಳನ್ನು ವಧಿಸಿದ ಬಳಿಕ ಲೇವಿಯರು ಅದರ ಚರ್ಮ ಸುಲಿದು ಅದರ ರಕ್ತವನ್ನು ಯಾಜಕರಿಗೆ ಕೊಟ್ಟರು. ಆ ರಕ್ತವನ್ನು ಯಾಜಕರು ವೇದಿಕೆಯ ಮೇಲೆ ಚಿಮಿಕಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಪೂರ್ವಕಾಲ ವೃತ್ತಾಂತ 35:11
11 ತಿಳಿವುಗಳ ಹೋಲಿಕೆ  

ಆದರೆ ಯಾಜಕರು ಸ್ವಲ್ಪ ಜನರಾಗಿದ್ದು, ದಹನಬಲಿಗಳನ್ನೆಲ್ಲಾ ಸುಲಿಯಲಾರದೆ ಇದ್ದುದರಿಂದ, ಕೆಲಸವು ತೀರುವವರೆಗೂ, ಮಿಕ್ಕ ಯಾಜಕರು ತಮ್ಮನ್ನು ಪರಿಶುದ್ಧಮಾಡಿಕೊಳ್ಳುವವರೆಗೂ ಲೇವಿಯರಾದ ಅವರ ಸಹೋದರರು ಅವರಿಗೆ ಸಹಾಯ ಮಾಡುತ್ತಿದ್ದರು. ಏಕೆಂದರೆ ಯಾಜಕರಿಗಿಂತ ತಮ್ಮನ್ನು ಪರಿಶುದ್ಧ ಮಾಡಿಕೊಳ್ಳುವುದರಲ್ಲಿ ಲೇವಿಯರು ಯಥಾರ್ಥ ಹೃದಯವುಳ್ಳವರಾಗಿದ್ದರು.


ಇದಲ್ಲದೆ ಅವರು ದೇವರ ಮನುಷ್ಯನಾದ ಮೋಶೆಯ ನಿಯಮದ ಹಾಗೆ ತಮ್ಮ ಪದ್ಧತಿಯ ಪ್ರಕಾರ ತಮ್ಮ ತಮ್ಮ ಸ್ಥಳದಲ್ಲಿ ನಿಂತು, ಯಾಜಕರು, ಲೇವಿಯರ ಕೈಯಿಂದ ರಕ್ತವನ್ನು ತೆಗೆದುಕೊಂಡು ಚಿಮುಕಿಸಿದರು.


ಆದ್ದರಿಂದ ನೀನು ನಿನ್ನ ಪುತ್ರರ ಸಹಿತವಾಗಿ ನಿಮ್ಮ ಯಾಜಕತ್ವವನ್ನು ಕಾಪಾಡಬೇಕು. ಬಲಿಪೀಠದ ಸಮಸ್ತ ಕಾರ್ಯಗಳಿಗೋಸ್ಕರ ತೆರೆಯ ಒಳಗೆ ನೀವು ಸೇವೆಮಾಡಬೇಕು. ನಿಮ್ಮ ಯಾಜಕತ್ವ ಸೇವೆಯನ್ನು ನಿಮಗೆ ದಾನವಾಗಿ ಕೊಟ್ಟಿದ್ದೇನೆ. ಪರಕೀಯನು ಸಮೀಪಕ್ಕೆ ಬಂದರೆ ಮರಣಶಿಕ್ಷೆಯಾಗಬೇಕು,” ಎಂದರು.


ಅವರು ನಿನಗೂ ದೇವದರ್ಶನದ ಗುಡಾರದ ಕಾರ್ಯಗಳಿಗೂ ಜವಾಬ್ದಾರರಾಗಿರುವರು. ಆದರೆ ಪರಿಶುದ್ಧಸ್ಥಳದ ಸಲಕರಣೆಗಳ ಹತ್ತಿರವಾಗಲಿ, ಬಲಿಪೀಠದ ಹತ್ತಿರವಾಗಲಿ ಅವರು ಬರಬಾರದು, ಬಂದರೆ ಅವರು ಮಾತ್ರವಲ್ಲ ನೀವೂ ಸಹ ಸಾಯುವಿರಿ.


ಯೋಷೀಯನು ಯೆರೂಸಲೇಮಿನಲ್ಲಿ ಯೆಹೋವ ದೇವರಿಗೆ ಪಸ್ಕವನ್ನು ಆಚರಿಸಿದನು. ಮೊದಲನೆಯ ತಿಂಗಳ ಹದಿನಾಲ್ಕನೆಯ ದಿವಸದಲ್ಲಿ ಪಸ್ಕದ ಕುರಿಮರಿಯನ್ನು ವಧಿಸಿದರು.


ಪಸ್ಕದ ಕುರಿಮರಿಯನ್ನು ವಧಿಸಿ ನಿಮ್ಮನ್ನು ಪ್ರತಿಷ್ಠೆ ಮಾಡಿಕೊಂಡು, ಯೆಹೋವ ದೇವರು ಮೋಶೆಯ ಮುಖಾಂತರವಾಗಿ ಹೇಳಿದ ವಾಕ್ಯದ ಪ್ರಕಾರ ನಿಮ್ಮ ಸಹೋದರರು ಮಾಡುವ ಹಾಗೆ ಅವರನ್ನು ಸಿದ್ಧಮಾಡಿರಿ,” ಎಂದನು.


ಮೋಶೆಯ ಗ್ರಂಥದಲ್ಲಿ ಬರೆದಿರುವಂತೆ, ಜನರ ವಂಶಗಳ ಮನೆಗಳ ಪ್ರಕಾರ, ಯೆಹೋವ ದೇವರಿಗೆ ಅರ್ಪಿಸಲು ಅವರು ಕೊಡುವ ಹಾಗೆ ದಹನಬಲಿಗಳನ್ನು ತೆಗೆದು ಇಟ್ಟರು. ಹಾಗೆಯೇ ಎತ್ತುಗಳನ್ನು ತೆಗೆದಿಟ್ಟರು.


ಯಾಜಕರೂ ಲೇವಿಯರೂ ಕೂಡ ಶುದ್ಧ ಮಾಡಿಕೊಂಡಿದ್ದರು. ಅವರೆಲ್ಲರು ಶುದ್ಧರಾದ ನಂತರ, ಲೇವಿಯರು ಸೆರೆಯಿಂದ ಬಂದವರೆಲ್ಲರಿಗೋಸ್ಕರವೂ, ಯಾಜಕರಾದ ತಮ್ಮ ಸಹೋದರರಿಗೋಸ್ಕರವೂ, ತಮಗೋಸ್ಕರವೂ ಪಸ್ಕದ ಕುರಿಮರಿಯನ್ನು ವಧಿಸಿದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು