2 ಪೂರ್ವಕಾಲ ವೃತ್ತಾಂತ 34:21 - ಕನ್ನಡ ಸಮಕಾಲಿಕ ಅನುವಾದ21 “ನೀವು ಹೋಗಿ ಸಿಕ್ಕಿದ ಈ ಗ್ರಂಥದ ವಾಕ್ಯಗಳ ಕುರಿತು ನನಗೋಸ್ಕರವೂ, ಇಸ್ರಾಯೇಲ್ ಮತ್ತು ಯೆಹೂದದಲ್ಲಿ ಉಳಿದವರಿಗೋಸ್ಕರವೂ ಯೆಹೋವ ದೇವರ ಬಳಿಯಲ್ಲಿ ವಿಚಾರಿಸಿರಿ. ಏಕೆಂದರೆ ನಮ್ಮನ್ನು ಕುರಿತು ಬರೆದಿರುವ ಎಲ್ಲವನ್ನೂ ಕೈಗೊಂಡು ನಡೆಯಲು ನಮ್ಮ ಪಿತೃಗಳು ಈ ಗ್ರಂಥದ ಮಾತುಗಳನ್ನು ಕೇಳದೆ ಹೋದುದರಿಂದ, ನಮ್ಮ ಮೇಲೆ ಸುರಿದ ಯೆಹೋವ ದೇವರ ಕೋಪವು ದೊಡ್ಡದಾಗಿದೆ,” ಎಂದು ಹೇಳಿದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201921 “ನಮ್ಮ ಪೂರ್ವಿಕರು ಈ ಗ್ರಂಥದಲ್ಲಿ ಬರೆದಿರುವ ಯೆಹೋವನ ಆಜ್ಞೆಗಳನ್ನೆಲ್ಲಾ ಕೈಕೊಳ್ಳದೆ ಹೋದುದರಿಂದಲೇ ಯೆಹೋವನು ತನ್ನ ಮಹಾರೌದ್ರವನ್ನು ನಮ್ಮ ಮೇಲೆ ಸುರಿದಿದ್ದಾನೆ; ಆದುದರಿಂದ ನೀವು ನನಗೋಸ್ಕರವೂ ಹಾಗೂ ಇಸ್ರಾಯೇಲ್ಯರಲ್ಲಿ, ಯೆಹೂದ್ಯರಲ್ಲಿ ಉಳಿದಿರುವವರಿಗೋಸ್ಕರವೂ ಯೆಹೋವನ ಬಳಿಗೆ ಹೋಗಿ ನಮಗೆ ಸಿಕ್ಕಿರುವ ಈ ಗ್ರಂಥದ ವಾಕ್ಯಗಳ ಅರ್ಥವನ್ನು ವಿವರವಾಗಿ ತಿಳಿದು ಬರಲು” ಆಜ್ಞಾಪಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)21 “ನಮ್ಮ ಪೂರ್ವಜರು ಈ ಗ್ರಂಥದಲ್ಲಿ ಬರೆದಿರುವ ಸರ್ವೇಶ್ವರನ ಆಜ್ಞೆಗಳನ್ನೆಲ್ಲಾ ಕೈಗೊಳ್ಳದೆ ಹೋದುದರಿಂದಲೇ ಸರ್ವೇಶ್ವರ ತಮ್ಮ ಮಹಾರೌದ್ರವನ್ನು ನಮ್ಮ ಮೇಲೆ ಸುರಿದಿದ್ದಾರೆ. ಆದುದರಿಂದ ನೀವು ನನ್ನ ಪರವಾಗಿ, ಹಾಗು ಇಸ್ರಯೇಲರಲ್ಲಿ ಮತ್ತು ಯೆಹೂದ್ಯರಲ್ಲಿ ಉಳಿದಿರುವವರ ಪರವಾಗಿ ಸರ್ವೇಶ್ವರನ ಬಳಿಗೆ ಹೋಗಿ ನಮಗೆ ಸಿಕ್ಕಿರುವ ಈ ಗ್ರಂಥದ ವಾಕ್ಯಗಳ ಬಗ್ಗೆ ವಿಚಾರಿಸಿರಿ,” ಎಂದು ಆಜ್ಞಾಪಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)21 ನಮ್ಮ ಪೂರ್ವಿಕರು ಈ ಗ್ರಂಥದಲ್ಲಿ ಬರೆದಿರುವ ಯೆಹೋವನ ಆಜ್ಞೆಗಳನ್ನೆಲ್ಲಾ ಕೈಕೊಳ್ಳದೆ ಹೋದದರಿಂದ ಯೆಹೋವನು ತನ್ನ ಮಹಾರೌದ್ರವನ್ನು ನಮ್ಮ ಮೇಲೆ ಸುರಿದಿದ್ದಾನೆ; ಆದದರಿಂದ ನೀವು ನನಗೋಸ್ಕರವೂ ಇಸ್ರಾಯೇಲ್ಯರಲ್ಲಿ ಮತ್ತು ಯೆಹೂದ್ಯರಲ್ಲಿ ಉಳಿದಿರುವವರಿಗೋಸ್ಕರವೂ ಯೆಹೋವನ ಬಳಿಗೆ ಹೋಗಿ ನಮಗೆ ಸಿಕ್ಕಿರುವ ಈ ಗ್ರಂಥದ ವಾಕ್ಯಗಳ ವಿಷಯವಾಗಿ ವಿಚಾರಿಸಿರಿ ಎಂದು ಆಜ್ಞಾಪಿಸಿದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್21 “ಹೋಗಿ ನನ್ನ ವಿಷಯವಾಗಿಯೂ ಇಸ್ರೇಲ್ ಮತ್ತು ಯೆಹೂದದಲ್ಲಿರುವ ಜನರಿಗೋಸ್ಕರವಾಗಿಯೂ ಯೆಹೋವನಲ್ಲಿ ವಿಚಾರಿಸಿರಿ. ಯೆಹೋವನು ನಮ್ಮ ಮೇಲೆ ಕೋಪಗೊಂಡಿದ್ದಾನೆ. ಯಾಕೆಂದರೆ ನಮ್ಮ ಪೂರ್ವಿಕರು ಆತನ ಧರ್ಮಶಾಸ್ತ್ರದ ಪ್ರಕಾರ ನಡೆದುಕೊಂಡಿಲ್ಲ. ಈ ಪುಸ್ತಕದಲ್ಲಿ ಮಾಡಬೇಕೆಂದು ಹೇಳಿದ್ದನ್ನು ಅವರು ಮಾಡದೆ ಹೋಗಿದ್ದಾರೆ” ಎಂದು ಹೇಳಿದನು. ಅಧ್ಯಾಯವನ್ನು ನೋಡಿ |