2 ಪೂರ್ವಕಾಲ ವೃತ್ತಾಂತ 31:5 - ಕನ್ನಡ ಸಮಕಾಲಿಕ ಅನುವಾದ5 ಈ ಆಜ್ಞೆ ಹೊರಗೆ ಬಂದಾಗಲೇ ಇಸ್ರಾಯೇಲರು ಧಾನ್ಯ, ದ್ರಾಕ್ಷಾರಸ, ಎಣ್ಣೆ, ಜೇನು, ಹೊಲಗಳ ಹುಟ್ಟುವಳಿ, ಇವುಗಳ ಮೊದಲನೆಯ ಪಾಲನ್ನು ಬಹಳವಾಗಿ ಒಳಗೆ ತಂದರು. ಹಾಗೆಯೇ ಸಮಸ್ತ ವಸ್ತುಗಳಲ್ಲಿ ದಶಮಾಂಶದ ಪಾಲನ್ನು ಬಹಳವಾಗಿ ತಂದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20195 ಈ ರಾಜಾಜ್ಞೆಯು ಪ್ರಕಟವಾದ ಕೂಡಲೆ ಇಸ್ರಾಯೇಲರು ಧಾನ್ಯ, ದ್ರಾಕ್ಷಾರಸ, ಎಣ್ಣೆ, ಜೇನು ಮುಂತಾದ ಎಲ್ಲಾ ಹುಟ್ಟುವಳಿಗಳಲ್ಲಿಯೂ ಪ್ರಥಮಫಲವನ್ನು ರಾಶಿರಾಶಿಯಾಗಿ ತಂದುಕೊಟ್ಟರು ಮತ್ತು ತಮ್ಮ ಎಲ್ಲಾ ಆದಾಯದ ದಶಮಾಂಶವನ್ನೂ ಉದಾರವಾಗಿ ಸಲ್ಲಿಸಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)5 ಈ ರಾಜಾಜ್ಞೆಯು ಪ್ರಕಟವಾದ ಕೂಡಲೆ ಇಸ್ರಯೇಲರು ಧಾನ್ಯ, ದ್ರಾಕ್ಷಾರಸ, ಎಣ್ಣೆ, ಜೇನು ಮುಂತಾದವೆಲ್ಲಾ ಹುಟ್ಟುವಳಿಯಿಂದ ಪ್ರಥಮಫಲವನ್ನು ರಾಶಿರಾಶಿಯಾಗಿ ತಂದುಕೊಟ್ಟರು; ಮತ್ತು ತಮ್ಮ ಎಲ್ಲಾ ಆದಾಯದ ದಶಮಾಂಶವನ್ನೂ ಉದಾರವಾಗಿ ಸಲ್ಲಿಸಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)5 ಈ ರಾಜಾಜ್ಞೆಯು ಪ್ರಕಟವಾದ ಕೂಡಲೆ ಇಸ್ರಾಯೇಲ್ಯರು ಧಾನ್ಯ ದ್ರಾಕ್ಷಾರಸ ಎಣ್ಣೆ ಜೇನು ಮುಂತಾದ ಎಲ್ಲಾ ಹುಟ್ಟುವಳಿಯಲ್ಲಿಯೂ ಪ್ರಥಮಫಲವನ್ನು ರಾಶಿರಾಶಿಯಾಗಿ ತಂದುಕೊಟ್ಟರು; ಮತ್ತು ತಮ್ಮ ಎಲ್ಲಾ ಆದಾಯದ ದಶಮಾಂಶವನ್ನೂ ಉದಾರವಾಗಿ ಸಲ್ಲಿಸಿದರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್5 ದೇಶದ ಜನರೆಲ್ಲಾ ಅರಸನ ಈ ಆಜ್ಞೆಯನ್ನು ಕೇಳಿ ಧಾನ್ಯ, ದ್ರಾಕ್ಷಾರಸ, ಎಣ್ಣೆ, ಜೇನುತುಪ್ಪ ಮುಂತಾದ ಎಲ್ಲವುಗಳಲ್ಲಿ ಮತ್ತು ಪ್ರಥಮ ಫಲಗಳಲ್ಲಿ ಹತ್ತನೆಯ ಒಂದು ಪಾಲನ್ನು ಲೇವಿಯರಿಗೆ ಕೊಟ್ಟರು. ಅಧ್ಯಾಯವನ್ನು ನೋಡಿ |
ಅದೇ ಕಾಲದಲ್ಲಿ ಯಾಜಕರಿಗೋಸ್ಕರವೂ, ಲೇವಿಯರಿಗೋಸ್ಕರವೂ ಮೋಶೆಯ ನಿಯಮದಲ್ಲಿ ನೇಮಕವಾದ ಪ್ರಕಾರ, ಪಟ್ಟಣಗಳ ಹೊಲಗಳಿಂದ ಬರಬೇಕಾದ ಪಾಲುಗಳನ್ನು ಕೂಡಿಸುವ ಹಾಗೆ, ಬೊಕ್ಕಸಗಳನ್ನೂ, ಕಾಣಿಕೆಗಳನ್ನೂ, ಪ್ರಥಮ ಫಲಗಳನ್ನೂ, ಹತ್ತನೆಯ ಪಾಲುಗಳನ್ನೂ ಇರಿಸುವ ಉಗ್ರಾಣಗಳ ಮೇಲೆ ಪಾರುಪತ್ಯಗಾರರನ್ನು ನೇಮಿಸಿದರು. ಏಕೆಂದರೆ ಸೇವೆಮಾಡುತ್ತಿದ್ದ ಯಾಜಕರನ್ನೂ, ಲೇವಿಯರನ್ನೂ ಕುರಿತು ಯೆಹೂದದವರು ಬಹು ಸಂತೋಷಪಟ್ಟರು.