Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಪೂರ್ವಕಾಲ ವೃತ್ತಾಂತ 31:12 - ಕನ್ನಡ ಸಮಕಾಲಿಕ ಅನುವಾದ

12 ಅವು ಸಿದ್ಧವಾದ ಮೇಲೆ ಜನರು ಕಾಣಿಕೆಗಳನ್ನು ತಮ್ಮ ಆದಾಯದ ದಶಮಾಂಶವನ್ನು ಹಾಗು ದೇವರಿಗೆ ಮುಡುಪಾಗಿ ಇಟ್ಟಿದ್ದನ್ನು ನಿರ್ವಂಚನೆಯಿಂದ ತಂದು, ಅವುಗಳಲ್ಲಿ ಹಾಕುತ್ತಿದ್ದರು. ಈ ಎಲ್ಲಾ ಉಗ್ರಾಣಗಳ ಮೇಲ್ವಿಚಾರಣೆಯಲ್ಲಿ ಲೇವಿಯನಾದ ಕೋನನ್ಯನು ಮುಖ್ಯಸ್ಥನಾಗಿದ್ದನು. ಅವನ ತಮ್ಮ ಶಿಮ್ಮಿಯು ದ್ವಿತೀಯ ಸ್ಥಾನದವನಾಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಅವು ಸಿದ್ಧವಾದ ಮೇಲೆ ಜನರು ಕಾಣಿಕೆಗಳನ್ನೂ, ತಮ್ಮ ಆದಾಯದ ದಶಮಾಂಶವನ್ನೂ ಹಾಗು ದೇವರ ನೈವೇದ್ಯಕ್ಕಾಗಿ ಮುಡುಪಾಗಿ ಇಟ್ಟಿದ್ದನ್ನು ನಂಬಿಕೆಯಿಂದ ತಂದು ಅವುಗಳಲ್ಲಿ ಹಾಕುತ್ತಿದ್ದರು. ಈ ಎಲ್ಲಾ ಉಗ್ರಾಣಗಳ ಮೇಲ್ವಿಚಾರಣೆಗೆ ಲೇವಿಯನಾದ ಕೋನನ್ಯನು ಮುಖ್ಯಸ್ಥನಾಗಿದ್ದನು. ಅವನ ತಮ್ಮನಾದ ಶಿಮ್ಮಿಯು ದ್ವಿತೀಯ ಸ್ಥಾನದವನಾಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ಅವು ಸಿದ್ಧವಾದ ಮೇಲೆ ಜನರು ಕಾಣಿಕೆಗಳನ್ನು, ತಮ್ಮ ಆದಾಯದ ದಶಮಾಂಶವನ್ನು ಹಾಗು ದೇವರಿಗೆ ಮುಡುಪಾಗಿ ಇಟ್ಟಿದ್ದನ್ನು ನಿರ್ವಂಚನೆಯಿಂದ ತಂದು ಅವುಗಳಲ್ಲಿ ಹಾಕುತ್ತಿದ್ದರು. ಈ ಎಲ್ಲಾ ಉಗ್ರಾಣಗಳ ಮೇಲ್ವಿಚಾರಣೆಯಲ್ಲಿ ಲೇವಿಯನಾದ ಕೋನನ್ಯನು ಮುಖ್ಯಸ್ಥನಾಗಿದ್ದನು; ಅವನ ತಮ್ಮ ಶಿಮ್ಮಿಯು ದ್ವಿತೀಯ ಸ್ಥಾನದವನಾಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಜನರು ಕಾಣಿಕೆಗಳನ್ನೂ ತಮ್ಮ ಆದಾಯದ ದಶಮಾಂಶವನ್ನೂ ದೇವರಿಗೋಸ್ಕರ ಪ್ರತ್ಯೇಕಿಸಿದ ಮುಡುಪನ್ನೂ ನಿರ್ವಂಚನೆಯಿಂದ ತಂದು ಅವುಗಳಲ್ಲಿ ಹಾಕುತ್ತಿದ್ದರು. ಈ ಎಲ್ಲಾ ಉಗ್ರಾಣಗಳ ಮೇಲ್ವಿಚಾರಣೆಯಲ್ಲಿ ಲೇವಿಯನಾದ ಕೋನನ್ಯನು ಮುಖ್ಯಸ್ಥನು; ಅವನ ತಮ್ಮನಾದ ಶಿಮ್ಮಿಯು ದ್ವಿತೀಯ ಸ್ಥಾನದವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ಆ ಬಳಿಕ ದೇವರಿಗೆ ಕೊಟ್ಟಿದ್ದ ದಶಮಾಂಶ ಮತ್ತು ಬೇರೆ ಕಾಣಿಕೆಗಳನ್ನು ಆ ಉಗ್ರಾಣದ ಕೋಣೆಗಳಲ್ಲಿ ಕೂಡಿಸಿಟ್ಟರು. ಲೇವಿಯನಾದ ಕೋನನ್ಯನು ಇದರ ಮೇಲ್ವಿಚಾರಕನಾಗಿ ನೇಮಿಸಲ್ಪಟ್ಟನು. ಇವನಿಗೆ ಸಹಾಯಕನಾಗಿ ಕೋನನ್ಯನ ಸೋದರನಾದ ಶಿಮ್ಮಿಯು ನೇಮಿಸಲ್ಪಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಪೂರ್ವಕಾಲ ವೃತ್ತಾಂತ 31:12
6 ತಿಳಿವುಗಳ ಹೋಲಿಕೆ  

ಇದಲ್ಲದೆ ಲೇವಿಯರಲ್ಲಿ ಪ್ರಧಾನರಾದ ಕೋನನ್ಯನೂ, ಅವನ ಸಹೋದರನಾದ ಶೆಮಾಯನೂ, ನೆತನೆಯೇಲನೂ, ಹಷಬ್ಯನೂ, ಯೆಹಿಯೇಲನೂ, ಯೋಜಾಬಾದನೂ ಪಸ್ಕದ ಬಲಿಗಳ ನಿಮಿತ್ತವಾಗಿ ಐದು ಸಾವಿರ ಪಸ್ಕದ ಬಲಿಗಳನ್ನೂ, ಐನೂರು ಎತ್ತುಗಳನ್ನೂ ಲೇವಿಯರಿಗೆ ಕೊಟ್ಟರು.


ಇದಲ್ಲದೆ ಅವರು ಕೆಲಸಮಾಡುವವರಿಗೆ ಹಣ ಕೊಡುವುದಕ್ಕೆ ಯಾರ ಕೈಯಲ್ಲಿ ಒಪ್ಪಿಸಿದ್ದರೋ, ಅವರಿಂದ ಹಣದ ಲೆಕ್ಕವನ್ನು ತೆಗೆದುಕೊಳ್ಳಲಿಲ್ಲ, ಏಕೆಂದರೆ ಅವರು ನಂಬಿಗಸ್ತರಾಗಿದ್ದರು.


ಅರಸನಾದ ಹಿಜ್ಕೀಯನು ನೇಮಿಸಿದ ಪ್ರಕಾರ, ಯೆಹೀಯೇಲ್, ಅಜಜ್ಯ, ನಹತ್, ಅಸಾಯೇಲ್, ಯೆರೀಮೋತ್, ಯೋಜಾಬಾದ್, ಎಲೀಯೇಲ್, ಇಸ್ಮಕ್ಯ, ಮಹತ್, ಬೆನಾಯ, ಇವರು ಕೋನನ್ಯನ ಸಹೋದರನಾದ ಶಿಮ್ಮಿಯ ಕೈಕೆಳಗೆ ಆಡಳಿತಗಾರರಾಗಿದ್ದರು. ಅಜರ್ಯನು ದೇವರ ಆಲಯದ ಅಧಿಪತಿಯಾಗಿದ್ದನು.


ಯಾಜಕರಲ್ಲಿ ಸಮಸ್ತ ಗಂಡಸರಿಗೂ, ಲೇವಿಯರಲ್ಲಿ ಲಿಖಿತರಾದ ಸಮಸ್ತರಿಗೂ ಪಾಲನ್ನು ಕೊಡುವುದಕ್ಕೆ ತಮ್ಮ ಪಟ್ಟಣಗಳ ವಲಯಗಳಲ್ಲಿರುವ ಯಾಜಕರಾದ ಆರೋನನ ವಂಶಾವಳಿಯ ದಾಖಲೆಯ ಪ್ರಕಾರ ಮನುಷ್ಯರು ಪ್ರತಿ ಪಟ್ಟಣದಲ್ಲಿ ಇದ್ದರು.


ಏಕೆಂದರೆ ಪರಿಶುದ್ಧ ಸ್ಥಾನದ ಸಲಕರಣೆಗಳೂ, ಸೇವೆ ಮಾಡುವ ಯಾಜಕರೂ, ದ್ವಾರಪಾಲಕರೂ, ಹಾಡುಗಾರರೂ ಇರುವ ಕೊಟ್ಟಡಿಗಳಿಗೆ ಇಸ್ರಾಯೇಲರೂ, ಲೇವಿಯರ ಮಕ್ಕಳೂ, ಕಾಣಿಕೆಯಾದ ಧಾನ್ಯವನ್ನೂ, ದ್ರಾಕ್ಷಾರಸವನ್ನೂ, ಎಣ್ಣೆಯನ್ನೂ ತರಬೇಕು. “ನಾವು ನಮ್ಮ ದೇವರ ಆಲಯವನ್ನು ಎಂದೂ ಅಲಕ್ಷ್ಯಮಾಡುವುದಿಲ್ಲ,” ಎಂದು ಬರೆದುಕೊಟ್ಟರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು