Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಪೂರ್ವಕಾಲ ವೃತ್ತಾಂತ 30:26 - ಕನ್ನಡ ಸಮಕಾಲಿಕ ಅನುವಾದ

26 ಹೀಗೆಯೇ ಯೆರೂಸಲೇಮಿನಲ್ಲಿ ಮಹಾ ಸಂತೋಷ ಉಂಟಾಗಿತ್ತು. ಇಸ್ರಾಯೇಲಿನ ಅರಸನಾದ ದಾವೀದನ ಮಗ ಸೊಲೊಮೋನನ ಕಾಲದಿಂದ ಯೆರೂಸಲೇಮಿನಲ್ಲಿ ಅಂಥಾ ಆಚರಣೆಯು ನಡೆದಿರಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

26 ದಾವೀದನ ಮಗನೂ ಇಸ್ರಾಯೇಲರ ಅರಸನೂ ಆದ ಸೊಲೊಮೋನನ ಕಾಲದಿಂದ ಯೆರೂಸಲೇಮಿನಲ್ಲಿ ಅಂಥ ಉತ್ಸವವು ನಡೆದಿರಲಿಲ್ಲವಾದುದರಿಂದ ಯೆರೂಸಲೇಮಿನಲ್ಲಿ ಮಹಾಸಂತೋಷವುಂಟಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

26 ದಾವೀದನ ಮಗನೂ ಇಸ್ರಯೇಲರ ಅರಸನೂ ಆದ ಸೊಲೊಮೋನನ ಕಾಲದಿಂದ ಜೆರುಸಲೇಮಿನಲ್ಲಿ ಅಂಥ ಉತ್ಸವ ನಡೆದಿರಲಿಲ್ಲ. ಆದುದರಿಂದ ಜೆರುಸಲೇಮಿನಲ್ಲಿ ಹೇಳತೀರದ ಆನಂದವಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

26 ದಾವೀದನ ಮಗನೂ ಇಸ್ರಾಯೇಲ್ಯರ ಅರಸನೂ ಆದ ಸೊಲೊಮೋನನ ಕಾಲದಿಂದ ಯೆರೂಸಲೇವಿುನಲ್ಲಿ ಅಂಥ ಉತ್ಸವವು ನಡೆದಿರಲಿಲ್ಲವಾದದರಿಂದ ಯೆರೂಸಲೇವಿುನಲ್ಲಿ ಬಹುಸಂತೋಷವುಂಟಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

26 ಜೆರುಸಲೇಮಿನಲ್ಲಿ ಸಂತಸವು ತುಂಬಿತ್ತು. ಸೊಲೊಮೋನ್ ಅರಸನ ಸಮಯದಿಂದ ಅಂದಿನ ತನಕ ಅಂಥಾ ಹಬ್ಬವು ಆಚರಿಸಲ್ಪಟ್ಟಿರಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಪೂರ್ವಕಾಲ ವೃತ್ತಾಂತ 30:26
5 ತಿಳಿವುಗಳ ಹೋಲಿಕೆ  

ಆಗ ಯಾಜಕರೂ ಲೇವಿಯರೂ ಎದ್ದು ಜನರನ್ನು ಆಶೀರ್ವದಿಸಿದರು. ದೇವರು ಅವರ ಪ್ರಾರ್ಥನೆಯನ್ನು ಕೇಳಿದರು. ಅವರ ಪ್ರಾರ್ಥನೆಯು ದೇವರ ಪರಿಶುದ್ಧ ನಿವಾಸ ಸ್ಥಾನವಾದ ಪರಲೋಕಕ್ಕೆ ತಲುಪಿತು.


ಇದಲ್ಲದೆ ಅರಸನಾದ ಹಿಜ್ಕೀಯನೂ, ಪ್ರಧಾನರೂ ದಾವೀದನ ಮಾತುಗಳಿಂದಲೂ, ಆಸಾಫನ ಕೀರ್ತನೆಗಳಿಂದಲೂ ಯೆಹೋವ ದೇವರನ್ನು ಸ್ತುತಿಸಬೇಕೆಂದು ಲೇವಿಯರಿಗೆ ಹೇಳಿದರು. ಆಗ ಅವರು ಸಂತೋಷವಾಗಿ ಸ್ತುತಿಸಿ ಮೊಣಕಾಲೂರಿಕೊಂಡು ಆರಾಧಿಸಿದರು.


ಪ್ರವಾದಿಯಾದ ಸಮುಯೇಲನ ದಿವಸಗಳು ಮೊದಲುಗೊಂಡು ಇಸ್ರಾಯೇಲಿನಲ್ಲಿ ಇಂಥಾ ಪಸ್ಕವನ್ನು ಆಚರಿಸಿರಲಿಲ್ಲ. ಇಸ್ರಾಯೇಲಿನ ಸಮಸ್ತ ಅರಸರಲ್ಲಿ ಯೋಷೀಯನೂ, ಯಾಜಕರೂ, ಲೇವಿಯರೂ, ಸಿದ್ಧವಾಗಿದ್ದ ಯೆಹೂದ ಹಾಗೂ ಇಸ್ರಾಯೇಲರೆಲ್ಲರೂ, ಯೆರೂಸಲೇಮಿನ ನಿವಾಸಿಗಳೂ ಆಚರಿಸಿದ ಪಸ್ಕದ ಹಾಗೆ ಯಾರೂ ಆಚರಿಸಲಿಲ್ಲ.


ಈ ಪ್ರಕಾರ ಸೆರೆಯಿಂದ ತಿರುಗಿ ಬಂದ ಸಭೆಯವರೆಲ್ಲರು ಪರ್ಣಶಾಲೆಗಳನ್ನು ಹಾಕಿ, ಅದರಲ್ಲಿ ವಾಸವಾಗಿದ್ದರು. ನೂನನ ಮಗ ಯೆಹೋಶುವನ ದಿನವು ಮೊದಲುಗೊಂಡು ಆ ದಿವಸದವರೆಗೂ ಇಸ್ರಾಯೇಲರು ಹಾಗೆ ಮಾಡಿರಲಿಲ್ಲ. ಅಲ್ಲಿ ಅವರಿಗೆ ಬಹಳ ಸಂತೋಷವಿತ್ತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು