2 ಪೂರ್ವಕಾಲ ವೃತ್ತಾಂತ 3:11 - ಕನ್ನಡ ಸಮಕಾಲಿಕ ಅನುವಾದ11 ಕೆರೂಬಿಗಳ ರೆಕ್ಕೆಗಳು 9 ಮೀಟರ್ ಉದ್ದವಾಗಿದ್ದವು. ಒಂದು ರೆಕ್ಕೆಯು ಎರಡೂವರೆ ಮೀಟರ್ ಉದ್ದವಾಗಿದ್ದು, ಆಲಯದ ಗೋಡೆಯವರೆಗೆ ಮುಟ್ಟಿತ್ತು; ಮತ್ತೊಂದು ರೆಕ್ಕೆ ಎರಡೂವರೆ ಮೀಟರ್ ಉದ್ದವಾಗಿದ್ದು, ಇನ್ನೊಂದು ಕೆರೂಬಿಯ ರೆಕ್ಕೆಯವರೆಗೂ ಮುಟ್ಟಿತ್ತು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201911 ಕೆರೂಬಿಗಳ ರೆಕ್ಕೆಗಳು ಒಟ್ಟು ಇಪ್ಪತ್ತು ಮೊಳ ಉದ್ದವಾಗಿದ್ದವು. ಮೊದಲನೆಯ ಕೆರೂಬಿಯ ಒಂದು ರೆಕ್ಕೆಯು ಐದು ಮೊಳ ಉದ್ದವಾಗಿದ್ದು ಕೋಣೆಯ ಗೋಡೆಯವರೆಗೆ ತಗಲುತ್ತಿತ್ತು; ಐದು ಮೊಳ ಉದ್ದವಾದ ಇನ್ನೊಂದು ರೆಕ್ಕೆಯು ಮತ್ತೊಂದು ಕೆರೂಬಿಯ ರೆಕ್ಕೆಯವರೆಗೆ ತಗಲುತ್ತಿತ್ತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)11 ಕೆರೂಬಿಗಳ ರೆಕ್ಕೆಗಳು ಒಟ್ಟಾಗಿ ಒಂಬತ್ತು ಮೀಟರ್ ಉದ್ದವಿದ್ದವು. (ಮೊದಲನೆಯ ಕೆರೂಬಿಯ) ಒಂದು ರೆಕ್ಕೆ 2:2 ಮೀಟರ್ ಉದ್ದವಾಗಿದ್ದು ಮನೆಯ ಗೋಡೆಗೆ ತಗಲುತ್ತಿತ್ತು. 2:2 ಮೀಟರ್ ಉದ್ದವಾದ ಇನ್ನೊಂದು ರೆಕ್ಕೆಯು ಎರಡನೆಯ ಕೆರೂಬಿಯ ರೆಕ್ಕೆಗೆ ತಗಲುತ್ತಿತ್ತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)11 ಕೆರೂಬಿಗಳ ರೆಕ್ಕೆಗಳು ಒಟ್ಟಾಗಿ ಇಪ್ಪತ್ತು ಮೊಳ ಉದ್ದವಿದ್ದವು. [ಮೊದಲನೆಯ ಕೆರೂಬಿಯ] ಒಂದು ರೆಕ್ಕೆಯು ಐದು ಮೊಳ ಉದ್ದವಾಗಿದ್ದು ಮನೆಯ ಗೋಡೆಗೆ ತಗುಲಿತು. ಐದು ಮೊಳ ಉದ್ದವಾದ ಇನ್ನೊಂದು ರೆಕ್ಕೆಯು ಎರಡನೆಯ ಕೆರೂಬಿಯ ರೆಕ್ಕೆಗೆ ತಗುಲಿತು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್11 ಕೆರೂಬಿಗಳ ಒಂದೊಂದು ರೆಕ್ಕೆಯು ಐದೈದು ಮೊಳ ಉದ್ದವಿದ್ದವು. ರೆಕ್ಕೆಗಳ ಒಟ್ಟು ಉದ್ದ ಇಪ್ಪತ್ತು ಮೊಳ. ಕೆರೂಬಿಯ ಒಂದು ರೆಕ್ಕೆಯು ಗೋಡೆಗೆ ತಾಗಿತ್ತು; ಅದರ ಇನ್ನೊಂದು ರೆಕ್ಕೆಯು ಮತ್ತೊಂದು ಕೆರೂಬಿಯ ರೆಕ್ಕೆಯನ್ನು ತಾಗಿತ್ತು. ಅಧ್ಯಾಯವನ್ನು ನೋಡಿ |