Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಪೂರ್ವಕಾಲ ವೃತ್ತಾಂತ 29:34 - ಕನ್ನಡ ಸಮಕಾಲಿಕ ಅನುವಾದ

34 ಆದರೆ ಯಾಜಕರು ಸ್ವಲ್ಪ ಜನರಾಗಿದ್ದು, ದಹನಬಲಿಗಳನ್ನೆಲ್ಲಾ ಸುಲಿಯಲಾರದೆ ಇದ್ದುದರಿಂದ, ಕೆಲಸವು ತೀರುವವರೆಗೂ, ಮಿಕ್ಕ ಯಾಜಕರು ತಮ್ಮನ್ನು ಪರಿಶುದ್ಧಮಾಡಿಕೊಳ್ಳುವವರೆಗೂ ಲೇವಿಯರಾದ ಅವರ ಸಹೋದರರು ಅವರಿಗೆ ಸಹಾಯ ಮಾಡುತ್ತಿದ್ದರು. ಏಕೆಂದರೆ ಯಾಜಕರಿಗಿಂತ ತಮ್ಮನ್ನು ಪರಿಶುದ್ಧ ಮಾಡಿಕೊಳ್ಳುವುದರಲ್ಲಿ ಲೇವಿಯರು ಯಥಾರ್ಥ ಹೃದಯವುಳ್ಳವರಾಗಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

34 ಯಾಜಕರು ಕೆಲವು ಮಂದಿಯಾದುದ್ದರಿಂದ ಸರ್ವಾಂಗಹೋಮದ ಪ್ರಾಣಿಗಳ ಚರ್ಮವನ್ನು ಸುಲಿಯುವುದು ಅವರಿಂದ ಆಗದೆ ಹೋಯಿತು. ಆದುದರಿಂದ ಮಿಕ್ಕ ಯಾಜಕರೂ ತಮ್ಮನ್ನು ಶುದ್ಧಿಪಡಿಸಿಕೊಳ್ಳುವವರೆಗೂ ಆ ಕೆಲಸವು ಮುಗಿಯುವ ತನಕ, ಅವರ ಬಂಧುಗಳಾದ ಲೇವಿಯರು ಅವರಿಗೆ ಸಹಾಯಮಾಡುತ್ತಿದ್ದರು. ತಮ್ಮನ್ನು ಶುದ್ಧಿಪಡಿಸಿಕೊಳ್ಳುವುದರಲ್ಲಿ ಯಾಜಕರಿಗಿಂತ ಲೇವಿಯರೇ ಹೆಚ್ಚು ಶ್ರದ್ಧೆಯುಳ್ಳವರಾಗಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

34 ಈ ಎಲ್ಲಾ ಪ್ರಾಣಿಗಳನ್ನು ವಧಿಸುವ ಕೆಲಸಕ್ಕೆ ಯಾಜಕರು ಸಾಲದೆಹೋದುದರಿಂದ ಆ ಕಾರ್ಯ ಮುಗಿವ ತನಕ, ಅವರ ಬಂಧುಗಳಾದ ಲೇವಿಯರು ಅವರಿಗೆ ಸಹಾಯ ಮಾಡುತ್ತಿದ್ದರು; ಅಷ್ಟರಲ್ಲಿ ಮಿಕ್ಕ ಯಾಜಕರು ತಮ್ಮನ್ನೇ ಶುದ್ಧೀಪಡಿಸಿಕೊಳ್ಳುತ್ತಿದ್ದರು. ತಮ್ಮನ್ನು ಶುದ್ಧಪಡಿಸಿಕೊಳ್ಳುವುದರಲ್ಲಿ ಯಾಜಕರಿಗಿಂತ ಲೇವಿಯರೇ ಹೆಚ್ಚು ಶ್ರದ್ಧೆಯುಳ್ಳವರಾಗಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

34 ಚರ್ಮವನ್ನು ಸುಲಿಯುವದು [ಶುದ್ಧಿಪಡಿಸಿಕೊಂಡ] ಕೆಲವು ಮಂದಿ ಯಾಜಕರಿಂದ ಆಗದೆ ಹೋಯಿತು. ಆದದರಿಂದ ವಿುಕ್ಕ ಯಾಜಕರು ತಮ್ಮನ್ನು ಶುದ್ಧಿಪಡಿಸಿಕೊಳ್ಳುವವರೆಗೂ ಆ ಕೆಲಸ ತೀರುವ ತನಕ ಅವರ ಬಂಧುಗಳಾದ ಲೇವಿಯರು ಅವರಿಗೆ ಸಹಾಯಮಾಡುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

34 ಅಲ್ಲಿ ಪಶುಗಳನ್ನು ವಧಿಸಿ ಅದರ ಚರ್ಮಸುಲಿದು ಯಜ್ಞಕ್ಕಾಗಿ ಸಿದ್ಧಪಡಿಸಲು ಸಾಕಷ್ಟು ಯಾಜಕರು ಇರಲಿಲ್ಲ. ಆಗ ಅವರ ಬಂಧುಗಳಾದ ಲೇವಿಯರು ಬಂದು ಆ ಕೆಲಸ ಮುಗಿಯುವ ತನಕ ಅವರಿಗೆ ಸಹಾಯಮಾಡಿದರು. ಯೆಹೋವನ ಸೇವೆಗೆ ತಮ್ಮನ್ನು ಸಿದ್ಧಪಡಿಸಿಕೊಳ್ಳಲು ಲೇವಿಯರು ಯಾಜಕರಿಗಿಂತ ಹೆಚ್ಚು ಉತ್ಸುಕತೆಯಲ್ಲಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಪೂರ್ವಕಾಲ ವೃತ್ತಾಂತ 29:34
18 ತಿಳಿವುಗಳ ಹೋಲಿಕೆ  

ಲೇವಿಯರು ಪಸ್ಕದ ಕುರಿಮರಿಯನ್ನು ವಧಿಸಿದ ತರುವಾಯ, ಯಾಜಕರು ಅವರ ಕೈಯಿಂದ ರಕ್ತವನ್ನು ತೆಗೆದುಕೊಂಡು ಚಿಮುಕಿಸಿದರು. ಆದರೆ ಲೇವಿಯರು ಚರ್ಮವನ್ನು ಸುಲಿದರು,


ಯಾಜಕರು ತಮ್ಮನ್ನು ತಕ್ಕ ಹಾಗೆ ಪ್ರತಿಷ್ಠೆ ಮಾಡಿಕೊಂಡಿರಲಿಲ್ಲ. ಜನರು ಯೆರೂಸಲೇಮಿನಲ್ಲಿ ಇನ್ನೂ ಕೂಡಿರಲಿಲ್ಲವಾದುದರಿಂದ ಆ ಕಾಲದಲ್ಲಿ ಪಸ್ಕಹಬ್ಬವನ್ನು ಆಚರಿಸಲಾರದೆ ಇದ್ದರು.


ನ್ಯಾಯ ನಿಯಮವು ನೀತಿಯ ಮೇಲೆ ಅವಲಂಬಿಸಿರುವುದು; ಯಥಾರ್ಥ ಹೃದಯದವರೆಲ್ಲರೂ ಅದನ್ನು ಹಿಂಬಾಲಿಸುವರು.


ನನ್ನ ಕೈಗಳನ್ನು ನಿರ್ಮಲವಾಗಿ ತೊಳೆದುಕೊಂಡು, ಯೆಹೋವ ದೇವರೇ, ನಿಮ್ಮ ಬಲಿಪೀಠವನ್ನು ಸುತ್ತುತ್ತಾ,


ಮಹೋನ್ನತರಾದ ದೇವರು ನನ್ನ ಗುರಾಣಿಯಾಗಿದ್ದಾರೆ, ಅವರು ಯಥಾರ್ಥ ಹೃದಯವುಳ್ಳವರನ್ನು ರಕ್ಷಿಸುತ್ತಾರೆ.


“ಲೇವಿಯರೇ, ನನ್ನ ಮಾತನ್ನು ಕೇಳಿರಿ. ನೀವು ನಿಮ್ಮನ್ನು ಪ್ರತಿಷ್ಠೆ ಮಾಡಿಕೊಂಡು, ನಿಮ್ಮ ಪಿತೃಗಳ ದೇವರಾದ ಯೆಹೋವ ದೇವರ ಆಲಯವನ್ನು ಪ್ರತಿಷ್ಠೆಮಾಡಿ, ಅದರ ಮೈಲಿಗೆಯನ್ನು ಪರಿಶುದ್ಧ ಸ್ಥಾನದಿಂದ ತೆಗೆದುಹಾಕಿರಿ.


ನನ್ನ ದೇವರೇ, ನೀವು ಹೃದಯವನ್ನು ಪರಿಶೋಧಿಸಿ ಯಥಾರ್ಥತೆಯಲ್ಲಿ ಸಂತೋಷವಾಗಿದ್ದೀರಿ, ಎಂದು ನಾನು ಬಲ್ಲೆನು. ನಾನು ಯಥಾರ್ಥವಾದ ಹೃದಯದಿಂದ ಇವುಗಳನ್ನೆಲ್ಲಾ ಇಷ್ಟಪೂರ್ವಕವಾಗಿ ಅರ್ಪಿಸಿದ್ದೇನೆ. ಇದಲ್ಲದೆ ಇಲ್ಲಿರುವ ನಿಮ್ಮ ಜನರು ನಿಮಗೆ ಇಷ್ಟಪೂರ್ವಕವಾಗಿ ಅರ್ಪಿಸುವುದನ್ನು ಈಗ ಕಂಡು ಸಂತೋಷಿಸಿದೆನು.


ಅವರು ನಿನಗೂ ದೇವದರ್ಶನದ ಗುಡಾರದ ಕಾರ್ಯಗಳಿಗೂ ಜವಾಬ್ದಾರರಾಗಿರುವರು. ಆದರೆ ಪರಿಶುದ್ಧಸ್ಥಳದ ಸಲಕರಣೆಗಳ ಹತ್ತಿರವಾಗಲಿ, ಬಲಿಪೀಠದ ಹತ್ತಿರವಾಗಲಿ ಅವರು ಬರಬಾರದು, ಬಂದರೆ ಅವರು ಮಾತ್ರವಲ್ಲ ನೀವೂ ಸಹ ಸಾಯುವಿರಿ.


ಅವರು ದೇವದರ್ಶನದ ಗುಡಾರದಲ್ಲಿ ಇಸ್ರಾಯೇಲರ ಸೇವೆಯನ್ನು ಮಾಡುವುದಕ್ಕೂ ಇಸ್ರಾಯೇಲರಿಗೋಸ್ಕರ ಪ್ರಾಯಶ್ಚಿತ್ತ ಮಾಡುವುದಕ್ಕೂ ಪರಿಶುದ್ಧ ಸ್ಥಳಕ್ಕೆ ಇಸ್ರಾಯೇಲರು ಸಮೀಪಿಸುವಾಗ ಇಸ್ರಾಯೇಲರೊಳಗೆ ವ್ಯಾಧಿಯು ಇರದಂತೆ ನಾನು ಲೇವಿಯರನ್ನು ಇಸ್ರಾಯೇಲರೊಳಗಿಂದ ಆರೋನನಿಗೂ, ಅವನ ಪುತ್ರರಿಗೂ ದಾನವಾಗಿ ಕೊಟ್ಟಿದ್ದೇನೆ.”


“ಅದರ ತರುವಾಯ ಲೇವಿಯರು ಸೇವೆ ಮಾಡವುದಕ್ಕೆ ದೇವದರ್ಶನದ ಗುಡಾರದೊಳಗೆ ಪ್ರವೇಶಿಸುವರು. ಆಗ ನೀನು ಅವರನ್ನು ಶುದ್ಧೀಮಾಡಿ, ನೈವೇದ್ಯದಂತೆ ಸಮರ್ಪಿಸಬೇಕು.


ಪ್ರತಿಷ್ಠೆ ಮಾಡಲಾದವುಗಳು ಆರುನೂರು ಹೋರಿಗಳೂ ಮೂರು ಸಾವಿರ ಕುರಿಗಳೂ ಮೇಕೆಗಳೂ ಇದ್ದವು.


ಎರಡನೆಯ ತಿಂಗಳ ಹದಿನಾಲ್ಕನೆಯ ದಿವಸದಲ್ಲಿ ಪಸ್ಕದ ಕುರಿಮರಿಯನ್ನು ವಧಿಸಿದರು. ಯಾಜಕರೂ, ಲೇವಿಯರೂ ನಾಚಿಕೆಪಟ್ಟು ತಮ್ಮನ್ನು ಪ್ರತಿಷ್ಠೆ ಮಾಡಿಕೊಂಡು, ಯೆಹೋವ ದೇವರ ಆಲಯದೊಳಗೆ ದಹನಬಲಿಗಳನ್ನು ತಂದರು.


ಯೆಹೂದದ ಅರಸನಾದ ಹಿಜ್ಕೀಯನು ಸಭೆಗೆ 1,000 ಹೋರಿಗಳನ್ನೂ 7,000 ಕುರಿಗಳನ್ನೂ ಕೊಟ್ಟನು. ಇದಲ್ಲದೆ ಪ್ರಧಾನರು ಕೂಟಕ್ಕೆ 1,000 ಹೋರಿಗಳನ್ನೂ 10,000 ಕುರಿಗಳನ್ನೂ ಕೊಟ್ಟರು. ಯಾಜಕರಲ್ಲಿ ಅನೇಕರು ತಮ್ಮನ್ನು ಪ್ರತಿಷ್ಠೆ ಮಾಡಿಕೊಂಡರು.


ಯಾಜಕರೂ ಲೇವಿಯರೂ ಕೂಡ ಶುದ್ಧ ಮಾಡಿಕೊಂಡಿದ್ದರು. ಅವರೆಲ್ಲರು ಶುದ್ಧರಾದ ನಂತರ, ಲೇವಿಯರು ಸೆರೆಯಿಂದ ಬಂದವರೆಲ್ಲರಿಗೋಸ್ಕರವೂ, ಯಾಜಕರಾದ ತಮ್ಮ ಸಹೋದರರಿಗೋಸ್ಕರವೂ, ತಮಗೋಸ್ಕರವೂ ಪಸ್ಕದ ಕುರಿಮರಿಯನ್ನು ವಧಿಸಿದರು.


ಆದರೂ ಅವರು ನನ್ನ ಪರಿಶುದ್ಧ ಸ್ಥಳದಲ್ಲಿ ಸೇವಿಸುವವರಾಗಿರುವರು. ಆಲಯದ ಬಾಗಿಲುಗಳ ಮೇಲ್ವಿಚಾರವನ್ನು ಹೊಂದಿ ಆಲಯಕ್ಕೆ ಸೇವೆಮಾಡುವರು. ಅವರು ಜನರಿಗೋಸ್ಕರ ದಹನಬಲಿಯನ್ನೂ ಸಮಾಧಾನ ಬಲಿಯನ್ನೂ ಮಾಡಿ ಅವರಿಗೆ ಸೇವೆ ಮಾಡುವ ಹಾಗೆ ಅವರ ಮುಂದೆ ನಿಲ್ಲುವರು.


ಆದರೆ ಯಾಜಕರು ಅರಸನಾದ ಯೋವಾಷನ ಆಳ್ವಿಕೆಯ ಇಪ್ಪತ್ತಮೂರನೆಯ ವರ್ಷದವರೆಗೂ ದೇವಾಲಯವನ್ನು ದುರಸ್ತಿ ಮಾಡದೆ ಇದ್ದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು