2 ಪೂರ್ವಕಾಲ ವೃತ್ತಾಂತ 29:11 - ಕನ್ನಡ ಸಮಕಾಲಿಕ ಅನುವಾದ11 ನನ್ನ ಮಕ್ಕಳೇ, ಉದಾಸೀನರಾಗಿರಬೇಡಿರಿ. ಏಕೆಂದರೆ ತಮ್ಮ ಸಮ್ಮುಖದಲ್ಲಿ ನಿಲ್ಲುವುದಕ್ಕೂ, ತಮ್ಮನ್ನು ಸೇವಿಸುವುದಕ್ಕೂ, ತಮಗೆ ಸೇವಕರಾಗಿರುವುದಕ್ಕೂ, ತಮಗೆ ಧೂಪವನ್ನು ಸುಡುವುದಕ್ಕೂ ಯೆಹೋವ ದೇವರು ನಿಮ್ಮನ್ನು ಆಯ್ದುಕೊಂಡಿದ್ದಾರೆ,” ಎಂದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201911 ಹೀಗಿರಲಾಗಿ ನನ್ನ ಮಕ್ಕಳೇ, ಉದಾಸೀನರಾಗಿರಬೇಡಿ; ಯೆಹೋವನು ತನ್ನನ್ನು ಆರಾಧಿಸುವುದಕ್ಕೂ ಧೂಪಹಾಕುವುದಕ್ಕೂ ನಿಮ್ಮನ್ನು ತನ್ನ ಸಾನ್ನಿಧ್ಯ ಸೇವಕರನ್ನಾಗಿ ಆರಿಸಿಕೊಂಡನಲ್ಲಾ” ಎಂದು ಹೇಳಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)11 ಹೀಗಿರಲಾಗಿ ನನ್ನ ಮಕ್ಕಳೇ, ಉದಾಸೀನರಾಗಿರಬೇಡಿ; ಸರ್ವೇಶ್ವರ ತಮ್ಮನ್ನು ಆರಾಧಿಸುವುದಕ್ಕೂ ತಮಗೆ ಧೂಪಾರತಿ ಎತ್ತುವುದಕ್ಕೂ ನಿಮ್ಮನ್ನು ತಮ್ಮ ಸಾನ್ನಿಧ್ಯಸೇವಕರನ್ನಾಗಿ ಆರಿಸಿಕೊಂಡರಲ್ಲವೇ?’ ಎಂದು ಹೇಳಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)11 ಹೀಗಿರಲಾಗಿ ನನ್ನ ಮಕ್ಕಳೇ, ಉದಾಸೀನರಾಗಿರಬೇಡಿರಿ; ಯೆಹೋವನು ತನ್ನನ್ನು ಆರಾಧಿಸುವದಕ್ಕೂ ಧೂಪಹಾಕುವದಕ್ಕೂ ನಿಮ್ಮನ್ನು ತನ್ನ ಸಾನ್ನಿಧ್ಯಸೇವಕರನ್ನಾಗಿ ಆರಿಸಿಕೊಂಡನಲ್ಲಾ ಎಂದು ಹೇಳಿದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್11 ಆದ್ದರಿಂದ ನನ್ನ ಪ್ರಿಯ ಮಕ್ಕಳೇ, ಉದಾಸೀನ ಮಾಡಬೇಡಿರಿ; ಸಮಯವನ್ನು ಹಾಳುಮಾಡಬೇಡಿ. ತನ್ನ ಸೇವೆಮಾಡುವದಕ್ಕಾಗಿ ಆತನು ನಿಮ್ಮನ್ನು ಆರಿಸಿರುತ್ತಾನೆ. ತನ್ನ ಆಲಯದಲ್ಲಿ ಸೇವೆಮಾಡುವುದಕ್ಕೂ ಧೂಪವನ್ನು ಆತನ ಮುಂದೆ ಸುಡುವದಕ್ಕೂ ನಿಮ್ಮನ್ನು ನೇಮಿಸಿರುತ್ತಾನೆ” ಎಂದು ಹೇಳಿದನು. ಅಧ್ಯಾಯವನ್ನು ನೋಡಿ |