2 ಪೂರ್ವಕಾಲ ವೃತ್ತಾಂತ 28:13 - ಕನ್ನಡ ಸಮಕಾಲಿಕ ಅನುವಾದ13 ಅವರಿಗೆ, “ನೀವು ಸೆರೆಯವರನ್ನು ಇಲ್ಲಿಗೆ ತರಬೇಡಿರಿ. ಏಕೆಂದರೆ ನಾವು ಯೆಹೋವ ದೇವರಿಗೆ ವಿರೋಧವಾಗಿ ಅಪರಾಧ ಮಾಡಿದ್ದೇವೆ. ನೀವು ನಮ್ಮ ಪಾಪಗಳನ್ನೂ, ನಮ್ಮ ಅಪರಾಧಗಳನ್ನೂ ಹೆಚ್ಚಿಸಬೇಕೆಂದಿದ್ದೀರಿ. ನಿಶ್ಚಯವಾಗಿ ನಮ್ಮ ಅಪರಾಧವು ದೊಡ್ಡದಾಗಿದೆ. ಇಸ್ರಾಯೇಲಿನ ಮೇಲೆ ಯೆಹೋವ ದೇವರ ಉಗ್ರಕೋಪವು ಉಂಟಾಯಿತು,” ಎಂದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201913 ಅವರಿಗೆ, “ನೀವು ಸೆರೆಹಿಡಿದವರನ್ನು ಇಲ್ಲಿಗೆ ತರಬೇಡಿರಿ; ನೀವು ನಮ್ಮ ಪಾಪ ಅಪರಾಧಗಳ ಜೊತೆಯಲ್ಲಿ ಯೆಹೋವನಿಗೆ ವಿರುದ್ಧವಾದ ಮತ್ತೊಂದು ಅಪರಾಧವನ್ನು ಸೇರಿಸಬೇಕೆಂದಿರುವಿರಾ? ನಮ್ಮ ಅಪರಾಧವು ದೊಡ್ಡದು; ಇಸ್ರಾಯೇಲರ ಮೇಲಿರುವ ದೈವಕೋಪವು ಉಗ್ರವಾಗಿದೆ” ಎಂದು ಹೇಳಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)13 “ನೀವು ಸೆರೆಹಿಡಿದವರನ್ನು ಇಲ್ಲಿಗೆ ತರಬೇಡಿ; ನೀವು ನಮ್ಮ ಪಾಪಾಪರಾಧಗಳ ಜೊತೆಗೆ ಸರ್ವೇಶ್ವರನಿಗೆ ವಿರುದ್ಧ ಮತ್ತೊಂದು ಅಪರಾಧವನ್ನು ಸೇರಿಸಬೇಕೆಂದಿರುತ್ತೀರೋ? ನಮ್ಮ ಅಪರಾಧ ದೊಡ್ಡದು; ಇಸ್ರಯೇಲರ ಮೇಲಿರುವ ದೈವಕೋಪ ಉಗ್ರವಾಗಿದೆ!” ಎಂದು ಹೇಳಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)13 ನೀವು ಸೆರೆಹಿಡಿದವರನ್ನು ಇಲ್ಲಿಗೆ ತರಬೇಡಿರಿ; ನೀವು ನಮ್ಮ ಪಾಪಾಪರಾಧಗಳ ಜೊತೆಯಲ್ಲಿ ಯೆಹೋವನಿಗೆ ವಿರುದ್ಧವಾದ ಮತ್ತೊಂದು ಅಪರಾಧವನ್ನು ಸೇರಿಸಬೇಕೆಂದಿರುತ್ತೀರಾ? ನಮ್ಮ ಅಪರಾಧವು ದೊಡ್ಡದು; ಇಸ್ರಾಯೇಲ್ಯರ ಮೇಲಿರುವ ದೇವಕೋಪವು ಉಗ್ರವಾಗಿದೆ ಎಂದು ಹೇಳಿದರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್13 ಈ ನಾಯಕರುಗಳು ಇಸ್ರೇಲರ ಸೈನಿಕರಿಗೆ, “ಯೆಹೂದದೇಶದಿಂದ ಸೆರೆಯವರನ್ನು ಇಲ್ಲಿಗೆ ತರಬೇಡಿ. ನೀವು ಹಾಗೆ ಮಾಡಿದರೆ ಅದು ನಿಮ್ಮ ಪಾಪವನ್ನೂ ದೋಷವನ್ನೂ ಮತ್ತಷ್ಟು ಹೆಚ್ಚಿಸುತ್ತದೆ. ಯೆಹೋವನು ಇಸ್ರೇಲರ ಮೇಲೆ ತುಂಬಾ ಸಿಟ್ಟುಗೊಳ್ಳುವನು” ಎಂದು ಹೇಳಿದರು. ಅಧ್ಯಾಯವನ್ನು ನೋಡಿ |