Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಪೂರ್ವಕಾಲ ವೃತ್ತಾಂತ 28:11 - ಕನ್ನಡ ಸಮಕಾಲಿಕ ಅನುವಾದ

11 ಆದ್ದರಿಂದ ನೀವು ನನ್ನ ಮಾತು ಕೇಳಿ ನಿಮ್ಮ ನಿಮ್ಮ ಸಹೋದರರಲ್ಲಿ ನೀವು ಸೆರೆಯಾಗಿ ತೆಗೆದುಕೊಂಡ ಸೆರೆಯವರನ್ನು ಬಿಟ್ಟುಬಿಡಿರಿ. ಏಕೆಂದರೆ ಯೆಹೋವ ದೇವರ ಕೋಪಾಗ್ನಿಯು ನಿಮ್ಮ ಮೇಲೆ ಇರುವುದು,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಈಗ ನೀವು ನನ್ನ ಮಾತಿಗೆ ಕಿವಿಗೊಟ್ಟು ನಿಮ್ಮ ಸಹೋದರರಿಂದ ಸೆರೆಯಾಗಿ ತಂದವರನ್ನು ಹಿಂದಕ್ಕೆ ಕಳುಹಿಸಿರಿ; ಇಲ್ಲವಾದರೆ ಯೆಹೋವನ ಕೋಪಾಗ್ನಿಯೂ ನಿಮ್ಮ ಮೇಲೆ ಉರಿಯುತ್ತದೆಯಷ್ಟೇ” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 ಈಗ ನೀವು ನನ್ನ ಮಾತಿಗೆ ಕಿವಿಗೊಟ್ಟು ನಿಮ್ಮ ಸಹೋದರರಿಂದ ಸೆರೆಯಾಗಿ ತಂದವರನ್ನು ಹಿಂದಕ್ಕೆ ಕಳುಹಿಸಿರಿ; ಸರ್ವೇಶ್ವರನ ಕೋಪಾಗ್ನಿ ನಿಮ್ಮ ಮೇಲೆ ಉರಿಯುತ್ತಾ ಇದೆ!” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಈಗ ನೀವು ನನ್ನ ಮಾತಿಗೆ ಕಿವಿಗೊಟ್ಟು ನಿಮ್ಮ ಸಹೋದರರಿಂದ ಸೆರೆಯಾಗಿ ತಂದವರನ್ನು ಹಿಂದಕ್ಕೆ ಕಳುಹಿಸಿರಿ; ಯೆಹೋವನ ಕೋಪಾಗ್ನಿಯು ನಿಮ್ಮ ಮೇಲೆ ಉರಿಯುತ್ತಾ ಇದೆ ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ಈಗ ನೀವು ನನ್ನ ಮಾತನ್ನು ಕೇಳಿರಿ, ನೀವು ಸೆರೆಹಿಡಿದ ನಿಮ್ಮ ಸಹೋದರ ಸಹೋದರಿಯರನ್ನು ಹಿಂದಕ್ಕೆ ಕಳುಹಿಸಿರಿ. ಯಾಕೆಂದರೆ ಯೆಹೋವನು ನಿಮ್ಮ ಮೇಲೆ ಬಹಳವಾಗಿ ಕೋಪಗೊಂಡಿದ್ದಾನೆ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಪೂರ್ವಕಾಲ ವೃತ್ತಾಂತ 28:11
10 ತಿಳಿವುಗಳ ಹೋಲಿಕೆ  

ಕರುಣೆ ತೋರಿಸದೆ ಇರುವವರಿಗೆ ಕರುಣೆಯಿಲ್ಲದ ನ್ಯಾಯತೀರ್ಪಾಗುವುದು. ಕರುಣೆವುಳ್ಳವರೋ ನ್ಯಾಯತೀರ್ಪಿನ ಮೇಲೆಯೇ ವಿಜಯವನ್ನು ಸಾಧಿಸುವರು.


ನೀವು ಇತರರ ಬಗ್ಗೆ ಕೊಡುವ ತೀರ್ಪಿನ ಪ್ರಕಾರವೇ ನಿಮಗೂ ತೀರ್ಪಾಗುವುದು, ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆದುಕೊಡಲಾಗುವುದು.


ಕರುಣೆಯುಳ್ಳವರು ಧನ್ಯರು, ಅವರು ಕರುಣೆ ಪಡೆಯುವರು.


“ನಾನು ಆಯ್ದುಕೊಳ್ಳುವ ಉಪವಾಸವು ಅನ್ಯಾಯದ ಸರಪಣಿಯನ್ನು ಬಿಚ್ಚುವುದೂ, ಭಾರವಾದ ಹೊರೆಯನ್ನು ಬಿಚ್ಚುವುದೂ, ದಬ್ಬಾಳಿಕೆಯಾದವರನ್ನು ಬಿಡಿಸುವುದೂ, ನೊಗಗಳನ್ನೆಲ್ಲಾ ಮುರಿದುಹಾಕುವುದೂ, ಇವೇ ಅಲ್ಲವೋ?


ಆದಕಾರಣ ದಯಮಾಡಿ ಸಭೆಯ ಎಲ್ಲಾದರಲ್ಲಿ ನಮ್ಮ ಪ್ರಧಾನರು ನಿಲ್ಲಲಿ. ಈ ಕಾರ್ಯದ ನಿಮಿತ್ತ ನಮ್ಮ ದೇವರ ಕಠಿಣ ಕೋಪವು ನಮ್ಮನ್ನು ಬಿಟ್ಟು ಹೋಗುವವರೆಗೆ, ನಮ್ಮ ಪಟ್ಟಣಗಳಲ್ಲಿ ಯಹೂದ್ಯರಲ್ಲದ ಸ್ತ್ರೀಯರನ್ನು ತೆಗೆದುಕೊಂಡವರು, ನೇಮಿಸಿದ ಕಾಲದಲ್ಲಿ ಬಂದು, ಅವರ ಸಂಗಡ ಪ್ರತಿ ಪಟ್ಟಣದ ಹಿರಿಯರೂ, ಅದರ ನ್ಯಾಯಾಧಿಪತಿಗಳೂ ಇರಲಿ,” ಎಂದರು.


ಇಸ್ರಾಯೇಲರು ತಮ್ಮ ಸಹೋದರರಲ್ಲಿ ಎರಡು ಲಕ್ಷಮಂದಿ ಸ್ತ್ರೀಯರನ್ನೂ, ಪುತ್ರಪುತ್ರಿಯರನ್ನೂ ಸೆರೆಯಾಗಿ ತೆಗೆದುಕೊಂಡು ಹೋದರು. ಅವರಿಂದ ಬಹು ಕೊಳ್ಳೆಯನ್ನೂ ತೆಗೆದುಕೊಂಡು ಸಮಾರ್ಯಕ್ಕೆ ಬಂದರು.


ಆಗ ಎಫ್ರಾಯೀಮ್ಯರಲ್ಲಿ ಮುಖಂಡರಾಗಿದ್ದ ಯೆಹೋಹಾನಾನನ ಮಗ ಅಜರ್ಯನೂ, ಮೆಷಿಲ್ಲೇಮೋತನ ಮಗ ಬೆರೆಕ್ಯನೂ, ಶಲ್ಲೂಮನ ಮಗ ಹಿಜ್ಕೀಯನೂ, ಹದ್ಲೈಯನ ಮಗ ಅಮಾಸನೂ ಯುದ್ಧದಿಂದ ಬಂದವರಿಗೆ ವಿರೋಧವಾಗಿ ಎದ್ದು


ನನ್ನ ಮೇಲೆ ನಿಮ್ಮ ಬೇಸರವು ಆವರಿಸಿದೆ. ನಿಮ್ಮ ದಂಡನೆಗಳು ನನ್ನನ್ನು ಬಾಧಿಸಿರುತ್ತವೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು