2 ಪೂರ್ವಕಾಲ ವೃತ್ತಾಂತ 25:5 - ಕನ್ನಡ ಸಮಕಾಲಿಕ ಅನುವಾದ5 ಇದಲ್ಲದೆ ಅಮಚ್ಯನು ಯೆಹೂದದವರನ್ನು ಕೂಡಿಸಿಕೊಂಡು, ಯೆಹೂದ ಬೆನ್ಯಾಮೀನ್ಯರೆಲ್ಲರಲ್ಲಿ ತಮ್ಮ ಪಿತೃಗಳ ಮನೆಗಳ ಪ್ರಕಾರ ಅವರನ್ನು ಸಾವಿರ ಜನರ ಮೇಲೆ ಅಧಿಪತಿಗಳಾಗಿಯೂ, ನೂರು ಜನರ ಮೇಲೆ ಅಧಿಪತಿಗಳಾಗಿಯೂ ಮಾಡಿದನು. ಅವನು ಇಪ್ಪತ್ತು ವರ್ಷ ಮೊದಲುಗೊಂಡು ಹೆಚ್ಚಿನ ಪ್ರಾಯವುಳ್ಳವರನ್ನು ಲೆಕ್ಕಿಸಿ ಆಯ್ದುಕೊಂಡನು. ಯುದ್ಧಕ್ಕೆ ಹೋಗತಕ್ಕಂಥ, ಈಟಿಯನ್ನೂ, ಖೇಡ್ಯವನ್ನೂ ಹಿಡಿದುಕೊಂಡಿರುವಂಥ, ಮೂರು ಲಕ್ಷ ಮಂದಿಯನ್ನು ಕೂಡಿಸಿದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20195 ಆಮೇಲೆ ಅಮಚ್ಯನು ಯೆಹೂದ್ಯರನ್ನು ಒಟ್ಟಾಗಿ ಸೇರಿಸಿ ಸಹಸ್ರಾಧಿಪತಿ, ಶತಾಧಿಪತಿಗಳ ಕೈಕೆಳಗೆ ಯೆಹೂದ ಮತ್ತು ಬೆನ್ಯಾಮೀನ್ ಕುಲಗಳಲ್ಲಿ ಆಯಾ ಗೋತ್ರಗಳ ಪ್ರಕಾರ ಅವರನ್ನು ನಿಲ್ಲಿಸಿ, ಇಪ್ಪತ್ತು ವರ್ಷಕ್ಕೆ ಮೇಲ್ಪಟ್ಟವರನ್ನು ಲೆಕ್ಕ ಮಾಡಿಸಿದನು. ಅವರಲ್ಲಿ ಬರ್ಜಿ ಗುರಾಣಿಗಳನ್ನು ಹಿಡಿದುಕೊಂಡು ಯುದ್ಧಕ್ಕೆ ಹೊರಡತಕ್ಕ ಶೂರರು ಮೂರು ಲಕ್ಷ ಮಂದಿ ಸಿಕ್ಕಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)5 ಆಮೇಲೆ ಅಮಚ್ಯನು ಯೆಹೂದ್ಯರನ್ನು ಸಹಸ್ರಾಧಿಪತಿ ಹಾಗು ಶತಾಧಿಪತಿಗಳ ಕೈಕೆಳಗೆ ಒಟ್ಟುಗೂಡಿಸಿ, ಯೆಹೂದ ಮತ್ತು ಬೆನ್ಯಾಮೀನ್ ಕುಲಗಳ ಜನರನ್ನು ಆಯಾ ಗೋತ್ರಗಳ ಪ್ರಕಾರ ಅವರನ್ನು ನಿಲ್ಲಿಸಿ, ಇಪ್ಪತ್ತು ವರ್ಷದವರು ಮತ್ತು ಅದಕ್ಕೆ ಮೇಲ್ಪಟ್ಟ ವಯಸ್ಸುಳ್ಳವರನ್ನು ಲೆಕ್ಕಮಾಡಿಸಿದನು. ಅವರಲ್ಲಿ ಬರ್ಜಿ, ಗುರಾಣಿಗಳನ್ನು ಹಿಡಿದುಕೊಂಡು ಯುದ್ಧಕ್ಕೆ ಹೊರಡತಕ್ಕ ಶೂರರು ಮೂರು ಲಕ್ಷಮಂದಿ ಸಿಕ್ಕಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)5 ಆಮೇಲೆ ಅಮಚ್ಯನು ಯೆಹೂದ್ಯರನ್ನು ಕೂಡಿಸಿ ಸಹಸ್ರಾಧಿಪತಿ ಶತಾಧಿಪತಿಗಳ ಕೈಕೆಳಗೆ ಕೊಟ್ಟು ಯೆಹೂದ ಬೆನ್ಯಾಮೀನ್ ಕುಲಗಳಲ್ಲಿನ ಆಯಾ ಗೋತ್ರಗಳ ಪ್ರಕಾರ ಅವರನ್ನು ನಿಲ್ಲಿಸಿ ಇಪ್ಪತ್ತು ವರುಷದವರು ಮೊದಲುಗೊಂಡು ಹೆಚ್ಚಾದ ವಯಸ್ಸುಳ್ಳವರನ್ನು ಲೆಕ್ಕಮಾಡಲು ಅವರಲ್ಲಿ ಬರ್ಜಿ ಗುರಾಣಿಗಳನ್ನು ಹಿಡಿದುಕೊಂಡು ಯುದ್ಧಕ್ಕೆ ಹೊರಡತಕ್ಕ ಶೂರರು ಮೂರು ಲಕ್ಷ ಮಂದಿ ಸಿಕ್ಕಿದರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್5 ಅಮಚ್ಯನು ಯೆಹೂದ ಪ್ರಾಂತ್ಯದ ಜನರನ್ನು ಒಟ್ಟುಗೂಡಿಸಿ ಅವರನ್ನು ಕುಟುಂಬಗಳಿಗನುಸಾರವಾಗಿ ವಿಭಾಗ ಮಾಡಿದನು. ಈ ಗುಂಪುಗಳಿಗೆ ಸಹಸ್ರಾಧಿಪತಿಗಳನ್ನು ಮತ್ತು ಶತಾಧಿಪತಿಗಳನ್ನು ನೇಮಿಸಿದನು. ಇವರು ಯೆಹೂದ ಮತ್ತು ಬೆನ್ಯಾಮೀನ್ ಗೋತ್ರಗಳಲ್ಲಿ ಇಪ್ಪತ್ತು ವರ್ಷಕ್ಕಿಂತ ಮೇಲ್ಪಟ್ಟವರನ್ನು ಸೈನಿಕರನ್ನಾಗಿ ಆರಿಸಿದರು. ಒಟ್ಟು ಮೂರು ಲಕ್ಷ ಸೈನಿಕರು ಬರ್ಜಿ ಗುರಾಣಿಗಳೊಂದಿಗೆ ಯುದ್ಧ ಮಾಡಲು ನುರಿತರಾಗಿದ್ದರು. ಅಧ್ಯಾಯವನ್ನು ನೋಡಿ |
ಅವನು ಯೆಹೂದದವರಿಗೆ, “ದೇಶವು ನಮ್ಮ ಮುಂದೆ ಇರುವಾಗ ಈ ಪಟ್ಟಣಗಳನ್ನು ಕಟ್ಟಿ, ಅವುಗಳ ಸುತ್ತಲೂ ಗೋಡೆಗಳನ್ನೂ, ಗೋಪುರಗಳನ್ನೂ, ಬಾಗಿಲುಗಳನ್ನೂ, ಅಗುಳಿಗಳನ್ನೂ ಮಾಡೋಣ. ಏಕೆಂದರೆ ನಾವು ನಮ್ಮ ದೇವರಾದ ಯೆಹೋವ ದೇವರನ್ನು ಹುಡುಕಿದೆವು. ನಾವು ಅವರನ್ನು ಹುಡುಕಿದ್ದರಿಂದ ಅವರು ಎಲ್ಲಾ ಕಡೆಯಲ್ಲಿಯೂ ನಮಗೆ ವಿಶ್ರಾಂತಿಯನ್ನು ಕೊಟ್ಟಿದ್ದಾರೆ,” ಎಂದನು. ಹಾಗೆಯೇ ಅವರು ಸೈನ್ಯವನ್ನು ಕಟ್ಟಿ ವೃದ್ಧಿಹೊಂದಿದರು.