2 ಪೂರ್ವಕಾಲ ವೃತ್ತಾಂತ 23:8 - ಕನ್ನಡ ಸಮಕಾಲಿಕ ಅನುವಾದ8 ಹೀಗೆಯೇ ಯಾಜಕನಾದ ಯೆಹೋಯಾದಾವನು ಆಜ್ಞಾಪಿಸಿದ ಪ್ರಕಾರ ಲೇವಿಯರೂ ಸಮಸ್ತ ಯೆಹೂದದವರೂ ಮಾಡಿದರು. ಪ್ರತಿ ಮನುಷ್ಯನು ಸಬ್ಬತ್ ದಿನದಲ್ಲಿ ಮನೆಗೆ ಹೋಗತಕ್ಕ ಮತ್ತು ಬರತಕ್ಕ ಸಿಪಾಯಿಗಳನ್ನು ಕೂಡಿಸಿಕೊಂಡನು. ಏಕೆಂದರೆ ಯಾಜಕನಾದ ಯೆಹೋಯಾದನು ಸೇವಾವಿಮುಕ್ತರಾದ ವರ್ಗದವರನ್ನು ಕಳುಹಿಸಿಬಿಡಲಿಲ್ಲ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20198 ಲೇವಿಯ ಎಲ್ಲಾ ಯೆಹೂದ್ಯರೂ ಯಾಜಕನಾದ ಯೆಹೋಯಾದನ ಆಜ್ಞೆಯಂತೆ ನಡೆದುಕೊಂಡರು. ಅವನು ಸಬ್ಬತ್ ದಿನದಲ್ಲಿ ಸೇವಾ ವಿಮುಕ್ತರಾದ ವರ್ಗಗಳವರನ್ನು ಕಳುಹಿಸಿಬಿಡಲಿಲ್ಲ; ಆದುದರಿಂದ ಪ್ರತಿಯೊಬ್ಬನು ಸಬ್ಬತ್ ದಿನ ಮನೆಗೆ ಹೋಗಬೇಕಾಗಿದ್ದ ಮತ್ತು ಬರಬೇಕಾಗಿದ್ದ ತನ್ನ ಕೈಕೆಳಗಿನವರನ್ನು ಸೇರಿಸಿಕೊಂಡನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)8 ಲೇವಿಯರೂ ಎಲ್ಲ ಯೆಹೂದ್ಯರೂ ಯಾಜಕ ಯೆಹೋಯಾದನ ಆಜ್ಞೆಯಂತೆ ನಡೆದುಕೊಂಡರು. ಅವನು ಸಬ್ಬತ್‍ದಿನದಲ್ಲಿ ಸೇವಾವಿಮುಕ್ತರಾದ ವರ್ಗದವರನ್ನು ಕಳುಹಿಸಿಬಿಡಲಿಲ್ಲ; ಆದುದರಿಂದ ಪ್ರತಿಯೊಬ್ಬನು ಸಬ್ಬತ್‍ದಿನ ಮನೆಗೆ ಹೋಗಬೇಕಾಗಿದ್ದ ಮತ್ತು ಬರಬೇಕಾಗಿದ್ದ ತನ್ನ ಕೈ ಕೆಳಗಿನವರನ್ನು ಕೂಡಿಸಿಕೊಂಡನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)8 ಲೇವಿಯರೂ ಎಲ್ಲಾ ಯೆಹೂದ್ಯರೂ ಯಾಜಕನಾದ ಯೆಹೋಯಾದನ ಆಜ್ಞೆಯಂತೆ ನಡೆದುಕೊಂಡರು. ಅವನು [ಸಬ್ಬತ್ ದಿವಸದಲ್ಲಿ ಸೇವಾ ವಿಮುಕ್ತರಾದ] ವರ್ಗಗಳವರನ್ನು ಕಳುಹಿಸಿಬಿಡಲಿಲ್ಲ; ಆದದರಿಂದ ಪ್ರತಿಯೊಬ್ಬನು ಸಬ್ಬತ್‍ದಿವಸ ಮನೆಗೆ ಹೋಗಬೇಕಾಗಿದ್ದ ಮತ್ತು ಬರಬೇಕಾಗಿದ್ದ ತನ್ನ ಕೈಕೆಳಗಿನವರನ್ನು ಕೂಡಿಸಿಕೊಂಡನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್8 ಯಾಜಕನಾದ ಯೆಹೋಯಾದನು ಆಜ್ಞಾಪಿಸಿದಂತೆ ಲೇವಿಯರೂ ಯೆಹೂದದ ಜನರೂ ಮಾಡಿದರು. ಆದ್ದರಿಂದ ಪ್ರತಿಯೊಬ್ಬ ಸೇನಾಧಿಪತಿಯು ತನ್ನ ಕೈ ಕೆಳಗೆ ಸಬ್ಬತ್‌ದಿನದಲ್ಲಿ ಕೆಲಸಮಾಡಲು ಹೋಗುತ್ತಿದ್ದವರನ್ನು ಮತ್ತು ಸಬ್ಬತ್ ದಿನದ ಕೆಲಸ ಮುಗಿಸಿಕೊಂಡು ಬರುತ್ತಿದ್ದವರನ್ನು ಕೂಡಿಸಿಕೊಂಡನು. ಅಧ್ಯಾಯವನ್ನು ನೋಡಿ |