Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಪೂರ್ವಕಾಲ ವೃತ್ತಾಂತ 22:5 - ಕನ್ನಡ ಸಮಕಾಲಿಕ ಅನುವಾದ

5 ಅಹಜ್ಯನು ಇವರ ಯೋಚನೆಯ ಪ್ರಕಾರ ನಡೆದು, ಗಿಲ್ಯಾದಿನ ರಾಮೋತಿಗೆ ಅರಾಮಿನ ಅರಸನಾದ ಹಜಾಯೇಲನ ಮೇಲೆ ಯುದ್ಧಮಾಡಲು ಇಸ್ರಾಯೇಲಿನ ಅರಸನಾಗಿರುವ ಅಹಾಬನ ಮಗ ಯೋರಾಮನ ಸಂಗಡ ಹೋದನು. ಆದರೆ ಅರಾಮ್ಯರು ಯೋರಾಮನನ್ನು ಹೊಡೆದು ಗಾಯಗೊಳಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಅವರ ಪ್ರೇರಣೆಯಿಂದಲೇ ಅವನು ಇಸ್ರಾಯೇಲರ ಅರಸನೂ ಅಹಾಬನ ಮಗನೂ ಆದ ಯೋರಾಮನ ಜೊತೆಯಲ್ಲಿ ಅರಾಮ್ಯರ ಅರಸನಾದ ಹಜಾಯೇಲನಿಗೆ ವಿರುದ್ಧವಾಗಿ ಯುದ್ಧಮಾಡುವುದಕ್ಕೆ, ರಾಮೋತ್ ಗಿಲ್ಯಾದಿಗೆ ಹೋದನು. ಅರಾಮ್ಯರು ಯೋರಾಮನನ್ನು ಯುದ್ಧದಲ್ಲಿ ಗಾಯಪಡಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ಆ ಪ್ರೇರಣೆಯಿಂದಲೇ ಇಸ್ರಯೇಲರ ಅರಸನೂ ಅಹಾಬನ ಮಗನೂ ಆದ ಯೋರಾಮನ ಜೊತೆಯಲ್ಲಿ ಸಿರಿಯಾದ ಅರಸ ಹಜಾಯೇಲನಿಗೆ ವಿರುದ್ಧ ಯುದ್ಧಮಾಡುವುದಕ್ಕೆ ರಾಮೋತ್‍ಗಿಲ್ಯಾದಿಗೆ ಹೋದನು. ಸಿರಿಯಾದವರು ಯೋರಾಮನನ್ನು ಯುದ್ಧದಲ್ಲಿ ಗಾಯಪಡಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಅವರ ಪ್ರೇರಣೆಯಿಂದ ಇಸ್ರಾಯೇಲ್ಯರ ಅರಸನೂ ಅಹಾಬನ ಮಗನೂ ಆದ ಯೋರಾಮನ ಜೊತೆಯಲ್ಲಿ ಅರಾಮ್ಯರ ಅರಸನಾದ ಹಜಾಯೇಲನಿಗೆ ವಿರುದ್ಧವಾಗಿ ಯುದ್ಧಮಾಡುವದಕ್ಕೆ ರಾಮೋತ್‍ಗಿಲ್ಯಾದಿಗೆ ಹೋದನು. ಅರಾಮ್ಯರು ಯೋರಾಮನನ್ನು ಯುದ್ಧದಲ್ಲಿ ಗಾಯಪಡಿಸಲು ಅವನು ಆ ಗಾಯಗಳನ್ನು ಮಾಯಿಸಿಕೊಳ್ಳುವದಕ್ಕಾಗಿ ಇಜ್ರೇಲಿಗೆ ಬಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ಅಹಾಬನ ಕುಟುಂಬದವರ ಸಲಹೆಯ ಮೇರೆಗೆ ಅಹಜ್ಯನು ರಾಜನಾದ ಯೋರಾಮನ ಜೊತೆಯಲ್ಲಿ ಅರಾಮ್ಯರ ಅರಸನಾದ ಹಜಾಯೇಲನೊಂದಿಗೆ ಯುದ್ಧಮಾಡಲು ರಾಮೋತ್‌ಗಿಲ್ಯಾದ್ ಎಂಬ ಪಟ್ಟಣಕ್ಕೆ ಹೋದನು. ಯೋರಾಮನು ಇಸ್ರೇಲರ ಅರಸನಾದ ಅಹಾಬನ ಮಗನು. ಅರಾಮ್ಯರು ಯುದ್ಧದಲ್ಲಿ ಯೋರಾಮನನ್ನು ಗಾಯಗೊಳಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಪೂರ್ವಕಾಲ ವೃತ್ತಾಂತ 22:5
13 ತಿಳಿವುಗಳ ಹೋಲಿಕೆ  

ಏಕೆಂದರೆ ಒಮ್ರಿಯ ನಿಯಮಗಳನ್ನೂ ಕೈಕೊಳ್ಳುತ್ತೀರಿ. ಅಹಾಬ್ ಮನೆತನದ ದುರಾಚಾರಗಳನ್ನೂ ಅವರ ಸಂಪ್ರದಾಯಗಳನ್ನೂ ಅನುಸರಿಸುತ್ತಾ ಬಂದಿದ್ದೀರಿ. ಆದ್ದರಿಂದ ನೀವು ನಾಶವಾಗುವಂತೆ ಮಾಡುವೆನು. ನಿಮ್ಮ ಜನರನ್ನು ಅಪಹಾಸ್ಯಕ್ಕೆ ಗುರಿಮಾಡುವೆನು. ಆದ್ದರಿಂದ ನೀವು ನನ್ನ ಜನರ ನಿಂದೆಯನ್ನು ಹೊರುವಿರಿ.


“ಅವನ ಮಗ ಬೇಲ್ಯಚ್ಚರನೇ, ನೀನು ಇದನ್ನೆಲ್ಲಾ ತಿಳಿದುಕೊಂಡಿದ್ದರೂ ತಗ್ಗಿಸಿಕೊಳ್ಳದೆ


ದುಷ್ಟರ ಆಲೋಚನೆಯಂತೆ ನಡೆಯದೆ, ಪಾಪಿಗಳ ಮಾರ್ಗದಲ್ಲಿ ನಿಲ್ಲದೆ, ಅಪಹಾಸ್ಯಗಾರರ ಕೂಟದಲ್ಲಿ ಕೂತುಕೊಳ್ಳದೆ,


ಆಗ ಪ್ರವಾದಿ ಹನಾನೀಯ ಮಗ ಯೇಹುವು ಅವನನ್ನು ಎದುರುಗೊಂಡು, ಅರಸನಾದ ಯೆಹೋಷಾಫಾಟನಿಗೆ ಅವನು, “ದುಷ್ಟನಿಗೆ ಸಹಾಯ ಕೊಡುವವನಾಗಿ ಯೆಹೋವ ದೇವರನ್ನು ದ್ವೇಷಮಾಡುವವರನ್ನು ಪ್ರೀತಿಮಾಡಬಹುದೋ? ಆದಕಾರಣ ನಿನ್ನ ಮೇಲೆ ಯೆಹೋವ ದೇವರ ಸನ್ನಿಧಿಯಿಂದ ಕೋಪಾಗ್ನಿ ಇದೆ.


ಆದ್ದರಿಂದ ರಥಗಳ ಅಧಿಪತಿಗಳು ಯೆಹೋಷಾಫಾಟನನ್ನು ಕಂಡಾಗ, “ಇವನೇ ಇಸ್ರಾಯೇಲಿನ ಅರಸನು,” ಎಂದು ಹೇಳಿ ಅವನ ಸಂಗಡ ಯುದ್ಧಮಾಡುವುದಕ್ಕೆ ತಿರುಗಿಕೊಂಡರು. ಆದರೆ ಯೆಹೋಷಾಫಾಟನು ಕೂಗಿಕೊಂಡನು. ಆಗ ಯೆಹೋವ ದೇವರು ಅವನಿಗೆ ಸಹಾಯಮಾಡಿ, ಶತ್ರುಗಳನ್ನು ಅವನ ಕಡೆಯಿಂದ ತೊಲಗಿಸಿದರು.


ಇಸ್ರಾಯೇಲಿನ ಅರಸನಾದ ಅಹಾಬನು ಯೆಹೂದದ ಅರಸನಾದ ಯೆಹೋಷಾಫಾಟನಿಗೆ, “ನೀನು ಗಿಲ್ಯಾದಿನ ರಾಮೋತಿನ ಮೇಲೆ ಯುದ್ಧಮಾಡಲು ನನ್ನ ಸಂಗಡ ಬರುತ್ತೀಯಾ?” ಎಂದನು. ಅದಕ್ಕವನು, “ನಾನೂ ನೀನೂ, ನನ್ನ ಜನರೂ ನಿನ್ನ ಜನರೂ ಒಂದೇ ಅಲ್ಲವೇ? ನಾವು ಯುದ್ಧದಲ್ಲಿ ನಿನ್ನ ಸಂಗಡ ಇರುವೆವು,” ಎಂದನು.


ಹಜಾಯೇಲನು ದಮಸ್ಕದಲ್ಲಿರುವ ಸಕಲ ಉತ್ತಮವಾದವುಗಳಲ್ಲಿ ನಲವತ್ತು ಒಂಟೆಗಳು ಹೊರುವಷ್ಟು ಕಾಣಿಕೆಗಳನ್ನು ತೆಗೆದುಕೊಂಡು, ಎಲೀಷನನ್ನು ಎದುರುಗೊಳ್ಳಲು ಹೋಗಿ, ಅವನ ಮುಂದೆ ಬಂದು ನಿಂತು, “ಅರಾಮಿನ ಅರಸನಾಗಿರುವ ನಿನ್ನ ಮಗ ಬೆನ್ಹದದನು, ‘ಈ ವ್ಯಾಧಿಯಿಂದ ಬದುಕುವೆನೋ?’ ಎಂದು ಕೇಳಲು ನನ್ನನ್ನು ನಿನ್ನ ಬಳಿಗೆ ಕಳುಹಿಸಿದ್ದಾನೆ,” ಎಂದನು.


ಇಸ್ರಾಯೇಲಿನ ಅರಸನು ತನ್ನ ಸೇವಕರಿಗೆ, “ಗಿಲ್ಯಾದಿನ ರಾಮೋತ್ ನಮ್ಮದೆಂದು ನಿಮಗೆ ಗೊತ್ತುಂಟಲ್ಲಾ? ನಾವು ಅದನ್ನು ಅರಾಮಿನ ಅರಸನ ಕೈಯಿಂದ ತೆಗೆದುಕೊಳ್ಳದೆ ಸುಮ್ಮನೆ ಇದ್ದೇವೆ,” ಎಂದನು.


ಬೆನ್ ಗೆಬೆರ್ ಗಿಲ್ಯಾದಿನ ರಾಮೋತ್ ಎಂಬ ಊರಿಗೆ ಅಧಿಕಾರಿಯಾಗಿದ್ದನು. ಈ ಗಿಲ್ಯಾದಿನ ಪ್ರಾಂತದಲ್ಲಿ ಮನಸ್ಸೆಯ ಮಗ ಯಾಯೀರನ ಗ್ರಾಮಗಳಿಗೂ, ಬಾಷಾನಿನಲ್ಲಿ ಪೌಳಿ ಗೋಡೆಗಳಿಂದಲೂ, ಕಬ್ಬಿಣದ ಅಗುಳಿಗಳಿಂದಲೂ ಭದ್ರಮಾಡಲಾಗಿದ್ದ ಅರವತ್ತು ಪಟ್ಟಣಗಳಲ್ಲಿದ್ದ ಅರ್ಗೋಬ್ ಪ್ರದೇಶಕ್ಕೂ ಅಧಿಕಾರಿಯಾಗಿದ್ದನು.


ಆದ್ದರಿಂದ ಅವನು ಅರಾಮ್ಯ ದೇಶದ ಅರಸನಾದ ಹಜಾಯೇಲನ ಮೇಲೆ ಯುದ್ಧಮಾಡಿದಾಗ, ರಾಮೋತಿನಲ್ಲಿ ತನ್ನನ್ನು ಹೊಡೆದ ಗಾಯಗಳನ್ನು ಗುಣಪಡಿಸಿಕೊಳ್ಳುವುದಕ್ಕೆ ಇಜ್ರೆಯೇಲ್ ಪಟ್ಟಣಕ್ಕೆ ತಿರುಗಿಹೋದನು. ಆಗ ಅಹಾಬನ ಮಗ ಯೋರಾಮನು ಇಜ್ರೆಯೇಲಿನಲ್ಲಿ ಅಸ್ವಸ್ಥನಾಗಿದ್ದುದರಿಂದ ಯೆಹೂದದ ಅರಸನಾಗಿರುವ ಯೆಹೋರಾಮನ ಮಗ ಅಜರ್ಯನು ಅವನನ್ನು ನೋಡಲು ಹೋದನು.


ಯೆಹೂದದ ಅರಸನಾದ ಯೆಹೋಷಾಫಾಟನ ಹದಿನೆಂಟನೆಯ ವರ್ಷದಲ್ಲಿ, ಅಹಾಬನ ಮಗ ಯೋರಾಮನು ಸಮಾರ್ಯದಲ್ಲಿ ಇಸ್ರಾಯೇಲಿನ ಮೇಲೆ ಆಳಲು ಆರಂಭಿಸಿ, ಹನ್ನೆರಡು ವರ್ಷ ಆಳಿದನು.


ಪ್ರವಾದಿಯಾದ ಎಲೀಷನು ಪ್ರವಾದಿಗಳ ಮಂಡಳಿಯಲ್ಲಿ ಒಬ್ಬನನ್ನು ಕರೆದು ಅವನಿಗೆ, “ನಡುವನ್ನು ಕಟ್ಟಿಕೊಂಡು ಈ ಎಣ್ಣೆಯ ಪಾತ್ರೆಯನ್ನು ನಿನ್ನ ಕೈಯಲ್ಲಿ ತೆಗೆದುಕೊಂಡು ಗಿಲ್ಯಾದಿನ ರಾಮೋತಿಗೆ ಹೋಗು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು