Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಪೂರ್ವಕಾಲ ವೃತ್ತಾಂತ 22:11 - ಕನ್ನಡ ಸಮಕಾಲಿಕ ಅನುವಾದ

11 ಆದರೆ ಅರಸನಾದ ಯೆಹೋರಾಮನ ಮಗಳಾದ ಯೆಹೋಷಬತಳು, ಹತರಾಗುವುದಕ್ಕಿದ್ದ ಅರಸನ ಮಕ್ಕಳ ಮಧ್ಯದಿಂದ ಅಹಜ್ಯನ ಮಗನಾದ ಯೋವಾಷನನ್ನು ಕದ್ದುಕೊಂಡು ಹೋಗಿ ಅವನನ್ನೂ ಅವನ ದಾದಿಯನ್ನೂ ಮಲಗುವ ಕೋಣೆಯಲ್ಲಿ ಬಚ್ಚಿಟ್ಟಳು. ಹೀಗೆಯೇ ಅರಸನಾದ ಯೆಹೋರಾಮನ ಪುತ್ರಿಯರಾಗಿರುವ ಯಾಜಕನಾದ ಯೆಹೋಯಾದಾವನ ಹೆಂಡತಿಯಾಗಿರುವ ಅಹಜ್ಯನ ಸಹೋದರಿಯಾದ ಯೆಹೋಷಬತಳು, ಅತಲ್ಯಳು ಅವನನ್ನು ಕೊಲ್ಲದ ಹಾಗೆ ಬಚ್ಚಿಟ್ಟಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಆದರೆ ರಾಜಪುತ್ರಿಯಾದ ಯೆಹೋಷಬತ್ ಎಂಬಾಕೆಯು, ಹತರಾಗುತ್ತಿದ್ದ ರಾಜಪುತ್ರರ ಮಧ್ಯದಿಂದ ಅಹಜ್ಯನ ಮಗನಾದ ಯೆಹೋವಾಷನನ್ನು, ಯಾರಿಗೂ ತಿಳಿಯದಂತೆ ಅವನ ದಾದಿಯೊಡನೆ ತೆಗೆದುಕೊಂಡು ಹೋಗಿ ಮಲಗುವ ಕೋಣೆಯಲ್ಲಿ ಅಡಗಿಸಿಟ್ಟಳು. ಅರಸನಾದ ಯೆಹೋರಾಮನ ಮಗಳೂ, ಅಹಜ್ಯನ ಸಹೋದರಿಯೂ, ಯಾಜಕನಾದ ಯೆಹೋಯಾದನ ಹೆಂಡತಿಯೂ, ಆಗಿದ್ದ ಯೆಹೋಷಬತಳು ಹೀಗೆ ಅವನನ್ನು ಅತಲ್ಯಳಿಂದ ಹತನಾಗದಂತೆ ರಕ್ಷಿಸಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 ಆದರೆ ರಾಜಪುತ್ರಿಯಾದ ಯೆಹೋಷಬತ್ ಎಂಬಾಕೆ, ಹತರಾಗುವುದಕ್ಕಿದ್ದ ರಾಜಪುತ್ರರ ಮಧ್ಯೆಯಿಂದ ಅಹಜ್ಯನ ಮಗ ಯೆಹೋವಾಷನನ್ನು, ಯಾರಿಗೂ ತಿಳಿಯದಂತೆ ಅವನ ದಾದಿಯೊಡನೆ ತೆಗೆದುಕೊಂಡು ಹೋಗಿ ಮಲಗುವ ಕೋಣೆಯಲ್ಲಿ ಅಡಗಿಸಿಟ್ಟಳು. ಅರಸ ಯೆಹೋರಾಮನ ಮಗಳೂ ಅಹಜ್ಯನ ಸಹೋದರಿಯೂ ಯಾಜಕ ಯೆಹೋಯಾದನ ಹೆಂಡತಿಯೂ ಆಗಿದ್ದ ಯೆಹೋಷಬತಳು ಹೀಗೆ ಅವನನ್ನು ಅತಲ್ಯಳಿಂದ ಹತನಾಗದಂತೆ ರಕ್ಷಿಸಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಆದರೆ ರಾಜಪುತ್ರಿಯಾದ ಯೆಹೋಷಬತ್ ಎಂಬಾಕೆಯು ಹತರಾಗುವದಕ್ಕಿದ್ದ ರಾಜಪುತ್ರರ ಮಧ್ಯದಿಂದ ಅಹಜ್ಯನ ಮಗನಾದ ಯೆಹೋವಾಷನನ್ನು ಯಾರಿಗೂ ತಿಳಿಯದಂತೆ ಅವನ ದಾದಿಯೊಡನೆ ತೆಗೆದುಕೊಂಡು ಹೋಗಿ ಮಲಗುವ ಕೋಣೆಯಲ್ಲಿ ಅಡಗಿಸಿಟ್ಟಳು. ಅರಸನಾದ ಯೆಹೋರಾಮನ ಮಗಳೂ ಅಹಜ್ಯನ ಸಹೋದರಿಯೂ ಯಾಜಕನಾದ ಯೆಹೋಯಾದನ ಹೆಂಡತಿಯೂ ಆಗಿದ್ದ ಯೆಹೋಷಬತಳು ಹೀಗೆ ಅವನನ್ನು ಅತಲ್ಯಳಿಂದ ಹತನಾಗದಂತೆ ರಕ್ಷಿಸಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ಆದರೆ ಅರಸನಾದ ಯೋರಾಮನ ಮಗಳಾದ ಯೆಹೋಷಬತಳು ಅಹಜ್ಯನ ಮಗನಾದ ಯೆಹೋವಾಷನನ್ನು ಅಡಗಿಸಿಟ್ಟಳು. ಆಕೆಯು ಅವನನ್ನೂ ಅವನ ದಾದಿಯನ್ನೂ ಒಳಗಿನ ಕೋಣೆಯಲ್ಲಿ ಅಡಗಿಸಿಟ್ಟಳು. ಆಕೆಯು ಯಾಜಕನಾದ ಯೆಹೋಯಾದನ ಹೆಂಡತಿಯಾಗಿದ್ದಳು. ಆಕೆಯು ಸಹ ಅಹಜ್ಯನ ಸೋದರಿ. ಯೆಹೋವಾಷನು ಅತಲ್ಯಳಿಗೆ ಸಿಗದೆಹೋದುದರಿಂದ ಬದುಕಿಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಪೂರ್ವಕಾಲ ವೃತ್ತಾಂತ 22:11
14 ತಿಳಿವುಗಳ ಹೋಲಿಕೆ  

ನಿಮ್ಮ ಶಕ್ತಿಯೂ ಚಿತ್ತವೂ ಮುಂಚಿತವಾಗಿಯೇ ಏನಾಗಬೇಕೆಂದು ನಿರ್ಣಯಿಸಿದ್ದನ್ನೇ ಅವರು ಮಾಡಿದರು.


ಯೆಹೋವ ದೇವರು ಹೀಗೆನ್ನುತ್ತಾರೆ: “ರಸ ದೊರೆಯಬಹುದಾದ ದ್ರಾಕ್ಷಿ ಗೊಂಚಲನ್ನು ಒಬ್ಬನು ನೋಡಿ, ‘ಹಾಳು ಮಾಡಬೇಡ, ಅದರಲ್ಲಿ ಪ್ರಯೋಜನವಿದೆ,’ ಎನ್ನುವಂತೆ ನಾನು ನನ್ನ ಸೇವಕರನ್ನು ಲಕ್ಷ್ಯಕ್ಕೆ ತಂದು ಇವರನ್ನೆಲ್ಲಾ ಹಾಳುಮಾಡಬಾರದು ಎಂದುಕೊಳ್ಳುವೆನು.


ಯೆಹೋವ ದೇವರಿಗೆ ವಿರೋಧವಾಗಿ ಯಾವ ಜ್ಞಾನವೂ, ವಿವೇಕವೂ, ಯೋಜನೆಯೂ ಇಲ್ಲ.


ಮನುಷ್ಯರ ವಿರುದ್ಧ ನಿಮ್ಮ ಕೋಪವು ನಿಮಗೆ ಘನವನ್ನು ತರುವುದು. ಉಳಿದಿರುವವರು ಕೋಪಕ್ಕೆ ತುತ್ತಾಗುವುದಿಲ್ಲ.


ಯೆಹೋವ ದೇವರು ಜನಾಂಗಗಳ ಆಲೋಚನೆಯನ್ನು ವ್ಯರ್ಥ ಮಾಡುವರು; ಜನರ ದುರುದ್ದೇಶಗಳನ್ನು ನಿಷ್ಪಲ ಮಾಡುತ್ತಾರೆ.


ಏಳನೆಯ ವರ್ಷದಲ್ಲಿ ಯೆಹೋಯಾದಾವನು ತನ್ನನ್ನು ಬಲಪಡಿಸಿಕೊಂಡು ಶತಾಧಿಪತಿಗಳಾಗಿರುವ ಯೆರೋಹಾಮನ ಮಗ ಅಜರ್ಯನನ್ನೂ, ಯೆಹೋಹಾನಾನನ ಮಗ ಇಷ್ಮಾಯೇಲನನ್ನೂ, ಓಬೇದನ ಮಗ ಅಜರ್ಯನನ್ನೂ, ಅದಾಯನ ಮಗ ಮಾಸೇಯನನ್ನೂ, ಜಿಕ್ರಿಯ ಮಗ ಎಲಿಷಾಫಾಟನನ್ನೂ ಕರೆದುಕೊಂಡು, ಅವರ ಸಂಗಡ ಒಡಂಬಡಿಕೆಯನ್ನು ಮಾಡಿದನು.


ಆದರೆ ಯೆಹೋವ ದೇವರು ದಾವೀದನಿಗೆ, “ನಿನ್ನ ಮತ್ತು ನಿನ್ನ ಸಂತಾನದವರ ದೀಪವನ್ನು ಎಂದೂ ನಂದಿಸುವುದಿಲ್ಲ,” ಎಂದು ಪ್ರಮಾಣ ಮಾಡಿದ ಕಾರಣ, ದೇವರು ದಾವೀದನ ಮನೆತನದವರನ್ನು ನಾಶಮಾಡುವುದಕ್ಕೆ ಇಷ್ಟಪಡಲಿಲ್ಲ.


ಆದರೆ ಅರಸನಾದ ಯೆಹೋರಾಮನ ಮಗಳೂ ಅಹಜ್ಯನ ಸಹೋದರಿಯೂ ಆದ ಯೆಹೋಷೆಬಳು ಹತರಾಗುವುದಕ್ಕಿದ್ದ ಅರಸನ ಮಕ್ಕಳ ಮಧ್ಯದಿಂದ ಅಹಜ್ಯನ ಮಗನಾದ ಯೋವಾಷನನ್ನು ಕದ್ದುಕೊಂಡು ಹೋಗಿ ಅವನು ಹತನಾಗದ ಹಾಗೆ ಅವನನ್ನೂ ಅವನ ದಾದಿಯನ್ನೂ ಅತಲ್ಯಳಿಗೆ ಕಾಣದ ಹಾಗೆ ಮಲಗುವ ಕೋಣೆಯಲ್ಲಿ ಬಚ್ಚಿಟ್ಟಳು.


ಅವನ ತರುವಾಯ ಅವನ ಮಗನನ್ನು ನೇಮಿಸುವುದಕ್ಕೂ, ಯೆರೂಸಲೇಮನ್ನು ಸ್ಥಿರಪಡಿಸುವುದಕ್ಕೂ, ತನ್ನ ದೇವರಾದ ಯೆಹೋವ ದೇವರು ದಾವೀದನ ನಿಮಿತ್ತ ಯೆರೂಸಲೇಮಿನಲ್ಲಿ ಅವನಿಗೆ ದೀಪವನ್ನು ಉಳಿಸಿದರು.


ಅವನೇ ನನ್ನ ಹೆಸರಿಗಾಗಿ ದೇವಾಲಯನ್ನು ಕಟ್ಟುವನು. ನಾನು ಅವನ ರಾಜಸಿಂಹಾಸನವನ್ನು ಸದಾಕಾಲಕ್ಕೂ ಸ್ಥಿರಮಾಡುವೆನು.


ನೈಲ್ ನದಿಯಲ್ಲಿ ಕಪ್ಪೆಗಳು ತುಂಬಿಹೋಗುವುವು. ಅವು ನಿನ್ನ ಅರಮನೆಯಲ್ಲಿಯೂ ನೀನು ಮಲಗುವ ಕೊಠಡಿಯಲ್ಲಿಯೂ ನಿನ್ನ ಹಾಸಿಗೆಯ ಮೇಲೂ ನಿನ್ನ ಸೇವಕರ ಮನೆಗಳಲ್ಲಿಯೂ ನಿನ್ನ ಜನರ ಮೇಲೆಯೂ ನಿನ್ನ ಒಲೆಗಳಲ್ಲಿಯೂ ನಿನ್ನ ಹಿಟ್ಟು ನಾದುವ ಹರಿವಾಣಗಳಲ್ಲಿಯೂ ಕಾಣಿಸಿಕೊಳ್ಳುವುವು.


ಅಹಜ್ಯನ ತಾಯಿಯಾದ ಅತಲ್ಯಳು ತನ್ನ ಮಗನು ಸತ್ತು ಹೋದದ್ದನ್ನು ಕಂಡಾಗ, ಅವಳು ಎದ್ದು ಯೆಹೂದನ ಮನೆಯ ರಾಜಸಂತಾನದವರನ್ನೆಲ್ಲಾ ನಾಶಮಾಡಲು ಆರಂಭಿಸಿದಳು.


ಹೀಗೆಯೇ ಇವನು ಅವರ ಸಂಗಡ ಆರು ವರ್ಷ ದೇವರ ಆಲಯದಲ್ಲಿ ಗುಪ್ತವಾಗಿದ್ದನು. ಈ ಆರು ವರ್ಷ ಅತಲ್ಯಳು ದೇಶವನ್ನು ಆಳುತ್ತಾ ಇದ್ದಳು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು