Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಪೂರ್ವಕಾಲ ವೃತ್ತಾಂತ 20:22 - ಕನ್ನಡ ಸಮಕಾಲಿಕ ಅನುವಾದ

22 ಅವರು ಹಾಡುವುದಕ್ಕೂ, ಸ್ತುತಿಸುವುದಕ್ಕೂ ಆರಂಭಿಸಿದಾಗಲೇ ಯೆಹೋವ ದೇವರು ಯೆಹೂದದ ಮೇಲೆ ಬಂದ ಅಮ್ಮೋನ್, ಮೋವಾಬ್, ಸೇಯೀರ್ ಪರ್ವತಗಳ ಜನರನ್ನು ಸೋಲಿಸುವುದಕ್ಕೆ ಅವರಲ್ಲಿಯೇ ಹೊಂಚಿಕೊಳ್ಳುವವರನ್ನು ಇರಿಸಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ಅವರು ಉತ್ಸಾಹ ಧ್ವನಿಯಿಂದ ಕೀರ್ತಿಸುವುದಕ್ಕೆ ಪ್ರಾರಂಭಿಸಿದರು. ಆಗ ಯೆಹೋವನು ಯೆಹೂದ್ಯರಿಗೆ ವಿರುದ್ಧವಾಗಿ ಬಂದ ಅಮ್ಮೋನಿಯರನ್ನೂ, ಮೋವಾಬ್ಯರನ್ನೂ, ಸೇಯೀರ್ ಪರ್ವತದವರನ್ನೂ ನಾಶಮಾಡುವುದಕ್ಕಾಗಿ ಹೊಂಚು ಹಾಕುವವರನ್ನು ಬರಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

22 ಅವರು ಉತ್ಸಾಹಧ್ವನಿಯಿಂದ ಕೀರ್ತಿಸುವುದಕ್ಕೆ ಪ್ರಾರಂಭಿಸಿದರು. ಆಗ ಸರ್ವೇಶ್ವರ ಯೆಹೂದ್ಯರಿಗೆ ವಿರುದ್ಧ ಬಂದ ಅಮ್ಮೋನಿಯರನ್ನೂ ಮೋವಾಬ್ಯರನ್ನೂ ಸೇಯೀರ್‍ಪರ್ವತದವರನ್ನೂ ನಶಿಸುವುದಕ್ಕಾಗಿ ಅವರಲ್ಲಿ ಹೊಂಚುಹಾಕುವವರನ್ನು ಇರಿಸಿದ್ದರು. ಅಮ್ಮೋನಿಯರೂ ಮೋವಾಬ್ಯರೂ ಸೇಯೀರ್‍ಪರ್ವತದವರ ಮೇಲೆ ಬಿದ್ದು ಅವರನ್ನು ಪೂರ್ಣವಾಗಿ ಸಂಹರಿಸಿಬಿಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

22 ಅವರು ಉತ್ಸಾಹ ಧ್ವನಿಯಿಂದ ಕೀರ್ತಿಸುವದಕ್ಕೆ ಪ್ರಾರಂಭಿಸಲು ಯೆಹೋವನು ಯೆಹೂದ್ಯರಿಗೆ ವಿರೋಧವಾಗಿ ಬಂದ ಅಮ್ಮೋನಿಯರನ್ನೂ ಮೋವಾಬ್ಯರನ್ನೂ ಸೇಯೀರ್ ಪರ್ವತದವರನ್ನೂ ನಶಿಸುವದಕ್ಕೋಸ್ಕರ ಅವರಲ್ಲಿ ಹೊಂಚುಹಾಕುವವರನ್ನು ಇರಿಸಿದ್ದರಿಂದ ಅಮ್ಮೋನಿಯರೂ ಮೋವಾಬ್ಯರೂ ಸೇಯೀರ್ ಪರ್ವತದವರ ಮೇಲೆ ಬಿದ್ದು ಅವರನ್ನು ಪೂರ್ಣವಾಗಿ ಸಂಹರಿಸಿಬಿಟ್ಟರು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

22 ಅವರು ಹೀಗೆ ಸ್ತೋತ್ರ ಮಾಡುತ್ತಿರುವಾಗ ಅಮ್ಮೋನಿಯರ ಮೇಲೆಯೂ ಮೋವಾಬ್ಯರ ಮೇಲೆಯೂ ಸೇಯೀರ್ ಬೆಟ್ಟಪ್ರದೇಶದವರ ಮೇಲೆಯೂ ಇತರ ವೈರಿಗಳು ಹಠಾತ್ತನೆ ದಾಳಿ ಮಾಡುವಂತೆ ಯೆಹೋವನು ಮಾಡಿದನು. ಯೆಹೂದವನ್ನು ಆಕ್ರಮಣಮಾಡಲು ಬಂದಿದ್ದ ಅವರೆಲ್ಲರೂ ಸೋತುಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಪೂರ್ವಕಾಲ ವೃತ್ತಾಂತ 20:22
15 ತಿಳಿವುಗಳ ಹೋಲಿಕೆ  

ನನ್ನ ಎಲ್ಲಾ ಪರ್ವತಗಳಲ್ಲೂ ನಾನು ಅವನಿಗೆ ವಿರುದ್ಧವಾಗಿ ಖಡ್ಗವನ್ನು ಕರೆಯುವೆನೆಂದೂ ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ. ಪ್ರತಿಯೊಬ್ಬ ಮನುಷ್ಯನ ಖಡ್ಗವೂ ಅವನ ಸಹೋದರನಿಗೆ ವಿರೋಧವಾಗಿರುವುದು.


ಆಗ ಸೌಲನೂ, ಅವನ ಸಂಗಡ ಯುದ್ಧಕ್ಕಿದ್ದ ಜನರೆಲ್ಲರೂ ಕೂಡಿಕೊಂಡು ಯುದ್ಧಕ್ಕೆ ಬಂದಾಗ, ಫಿಲಿಷ್ಟಿಯರಲ್ಲಿ ಗಲಿಬಿಲಿಯುಂಟಾಗಿ ಒಬ್ಬನ ಖಡ್ಗವು ಒಬ್ಬನಿಗೆ ವಿರೋಧವಾಗಿ ಮತ್ತೊಬ್ಬನನ್ನು ಕೊಂದುಹಾಕುತ್ತಿದ್ದರು.


ಇದಲ್ಲದೆ ನಾನು ಈಜಿಪ್ಟಿನವನಿಗೆ ವಿರೋಧವಾಗಿ ಈಜಿಪ್ಟಿನವನನ್ನು ಎಬ್ಬಿಸುವೆನು. ಸಹೋದರನಿಗೆ ವಿರುದ್ಧವಾಗಿ ಸಹೋದರನೂ, ನೆರೆಯವನಿಗೆ ವಿರುದ್ಧವಾಗಿ ನೆರೆಯವನೂ, ಪಟ್ಟಣಕ್ಕೆ ವಿರೋಧವಾಗಿ ಪಟ್ಟಣವೂ, ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಹೊರಾಡುವವು.


ಆಗ ಎಲೀಷನು, “ಯೆಹೋವ ದೇವರೇ, ನೀವು ದಯಮಾಡಿ ಇವನು ಕಾಣುವ ಹಾಗೆ ಇವನ ಕಣ್ಣುಗಳನ್ನು ತೆರೆಯಿರಿ,” ಎಂದು ಪ್ರಾರ್ಥಿಸಿದನು. ಯೆಹೋವ ದೇವರು ಆ ಯುವ ಸೇವಕನ ಕಣ್ಣುಗಳನ್ನು ತೆರೆದಾಗ, ಎಲೀಷನ ಸುತ್ತಲೂ ಬೆಟ್ಟದಲ್ಲಿ ಬೆಂಕಿಯ ರಥಗಳೂ, ಕುದುರೆಗಳೂ ತುಂಬಿರುವುದನ್ನು ಅವನು ಕಂಡನು.


ಮುನ್ನೂರು ಜನರು ತುತೂರಿಗಳನ್ನು ಊದುವಾಗ, ಯೆಹೋವ ದೇವರು ಪಾಳೆಯದಲ್ಲಿ ಎಲ್ಲೆಲ್ಲಿಯೂ ಒಬ್ಬನ ಖಡ್ಗವನ್ನು ಒಬ್ಬನ ಮೇಲೆ ಬರಮಾಡಿದರು. ಪಾಳೆಯ ಚೆರೇರಿನಲ್ಲಿರುವ ಬೇತ್ ಷಿಟ್ಟದವರೆಗೂ, ಟಬ್ಬಾತಿನ ಬಳಿಯಲ್ಲಿರುವ ಆಬೇಲ್ ಮೆಹೋಲಾದ ಮೇರೆಯವರೆಗೂ ಓಡಿಹೋಯಿತು.


“ಈಗ, ಅಮ್ಮೋನ್ ಮೋವಾಬ್, ಸೇಯೀರ್ ಬೆಟ್ಟದ ಜನರು, ಇಸ್ರಾಯೇಲರು ಈಜಿಪ್ಟ್ ದೇಶದೊಳಗಿಂದ ಹೊರಟು ಬರುವಾಗ, ಅವರ ಕಡೆಗೆ ಹೋಗಲು ನೀವು ಇವರಿಗೆ ಅಪ್ಪಣೆ ಕೊಡದೆ ಇದ್ದುದರಿಂದ, ಇವರು ಅವರನ್ನು ಬಿಟ್ಟು ತೊಲಗಿ ಅವರನ್ನು ನಾಶಮಾಡದೆ ಹೋದರು.


ಆದರೆ ಯಾರೊಬ್ಬಾಮನು ಅಡಗಿಕೊಂಡವರನ್ನು ಸುತ್ತಲೂ ಅವರ ಹಿಂದೆ ಬರಮಾಡಿದನು. ಆದ್ದರಿಂದ ಇಸ್ರಾಯೇಲರು ಯೆಹೂದದವರ ಮುಂದೆಯೂ, ಅವರ ಹಿಂದೆಯೂ ಬಂದರು.


ಬೆನ್ಯಾಮೀನ್ಯರ ಗಿಬೆಯದಲ್ಲಿದ್ದ ಸೌಲನ ಕಾವಲಿನವರು ಕಂಡಾಗ, ಆ ಗುಂಪಿನವರು ಕರಗಿ ಹೋಗುತ್ತಾ, ಒಬ್ಬರನ್ನೊಬ್ಬರು ಸಂಹರಿಸುತ್ತಾ ಇದ್ದರು.


ಯೆಹೋರಾಮನ ದಿನಗಳಲ್ಲಿ ಯೆಹೂದದ ಕೈಕೆಳಗಿದ್ದ ಎದೋಮ್ಯರು ತಿರುಗಿಬಿದ್ದು, ತಮ್ಮ ಅರಸನನ್ನು ತಾವೇ ನೇಮಿಸಿಕೊಂಡರು.


ಏಳನೆಯ ಸಾರಿ ಯಾಜಕರು ತುತೂರಿಗಳನ್ನು ಊದುವಾಗ, ಯೆಹೋಶುವನು ಜನರಿಗೆ, “ಆರ್ಭಟಿಸಿರಿ! ಯೆಹೋವ ದೇವರು ನಿಮಗೆ ಈ ಪಟ್ಟಣವನ್ನು ಕೊಟ್ಟಿದ್ದಾರೆ.


“ಸ್ತುತಿ ಪಾತ್ರರಾಗಿರುವ ಯೆಹೋವ ದೇವರನ್ನು ನಾನು ಮೊರೆಯಿಟ್ಟದ್ದರಿಂದ, ಅವರು ನನ್ನ ಶತ್ರುಗಳಿಂದ ನನ್ನನ್ನು ಕಾಪಾಡಿದ್ದಾರೆ.


ತುತೂರಿ ಊದುವವರೂ, ಸಂಗೀತಗಾರರೂ ಯೆಹೋವ ದೇವರನ್ನು ಕೊಂಡಾಡುತ್ತಾ, ಹೊಗಳುತ್ತಾ ಧ್ವನಿ ಎತ್ತಿ ಸ್ತೋತ್ರ ಮಾಡುವಂತೆ ತುತೂರಿಗಳೂ, ತಾಳಗಳೂ ಮೊದಲಾದ ಗೀತ ವಾದ್ಯಗಳಿಂದ ಕೀರ್ತಿಸಿದರು: “ಯೆಹೋವ ದೇವರು ಒಳ್ಳೆಯವರು, ಅವರ ಕೃಪೆಯು ಯುಗಯುಗಕ್ಕೆ ಇರುವುದು,” ಎಂದು ಯೆಹೋವ ದೇವರನ್ನು ಹೊಗಳುತ್ತಿದ್ದ ಹಾಗೆ, ಯೆಹೋವ ದೇವರ ಆಲಯವು ಮೇಘದಿಂದ ತುಂಬಿತು.


ಆಗ ಯೆಹೂದ್ಯರು ಆರ್ಭಟಿಸಿದರು. ಯೆಹೂದ್ಯರು ಆರ್ಭಟಿಸಿದಾಗ, ದೇವರು ಅಬೀಯನ ಮತ್ತು ಯೆಹೂದದವರ ಮುಂದೆ ಯಾರೊಬ್ಬಾಮನನ್ನೂ, ಸಮಸ್ತ ಇಸ್ರಾಯೇಲರನ್ನೂ ಅಪಜಯಗೊಳಿಸಿದರು.


ಮರಣದ ಪಾಶಗಳು ನನ್ನನ್ನು ಸುತ್ತಿಕೊಂಡವು; ವಿನಾಶಪ್ರವಾಹಗಳು ನನ್ನ ಮೇಲೆ ಹರಿದವು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು