Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಪೂರ್ವಕಾಲ ವೃತ್ತಾಂತ 2:6 - ಕನ್ನಡ ಸಮಕಾಲಿಕ ಅನುವಾದ

6 ಆದರೆ ಅವರಿಗೋಸ್ಕರ ಆಲಯವನ್ನು ಕಟ್ಟಿಸಲು ಸಮರ್ಥನಾದವನು ಯಾರು? ಆಕಾಶವೂ ಉನ್ನತೋನ್ನತ ಆಕಾಶವೂ ಅವರಿಗೆ ಸಾಲದು. ಅವರ ಸನ್ನಿಧಿಯಲ್ಲಿ ಯಜ್ಞವನ್ನು ಅರ್ಪಿಸುವುದಕ್ಕೆ ಒಂದು ಆಲಯವನ್ನು ಕಟ್ಟಬಹುದೇ ಹೊರತು ಅವರಿಗೆ ಆಲಯವನ್ನು ಕಟ್ಟಿಸಲು ನಾನು ಎಷ್ಟರವನು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ಆದರೆ ಆತನಿಗೋಸ್ಕರ ಆಲಯವನ್ನು ಕಟ್ಟುವುದಕ್ಕೆ ಶಕ್ತರಾರು! ಉನ್ನತೋನ್ನತವಾದ ಆಕಾಶವೂ ಆತನ ವಾಸಕ್ಕೆ ಸಾಲದಿರುವಾಗ ಆತನಿಗಾಗಿ ಆಲಯ ಕಟ್ಟಲು ಸಾಧ್ಯವಿಲ್ಲ. ಆತನ ಸನ್ನಿಧಿಯಲ್ಲಿ ಯಜ್ಞವನ್ನು ಅರ್ಪಿಸುವುದಕ್ಕೆ ಒಂದು ಆಲಯವನ್ನು ಕಟ್ಟಬಹುದೇ ಹೊರತು ಆತನಿಗೆ ಮನೆಯನ್ನು ಕಟ್ಟಿಸಲು ನಾನು ಎಷ್ಟರವನು!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

6 ಅವರಿಗೆ ಆಲಯವನ್ನು ಕಟ್ಟುವುದಕ್ಕೆ ಯಾರೂ ಶಕ್ತರಲ್ಲ; ಆಕಾಶವೂ ಉನ್ನತೋನ್ನತವಾದ ಆಕಾಶವೂ ಅವರ ವಾಸಕ್ಕೆ ಸಾಲದಿರುವಲ್ಲಿ ಅವರಿಗಾಗಿ ಆಲಯವನ್ನು ಕಟ್ಟುವುದಕ್ಕೆ ಯಾರು ತಾನೆ ಶಕ್ತರು? ನಾನು ಅವರ ಸನ್ನಿಧಿಯಲ್ಲಿ ಧೂಪಾರತಿ ಎತ್ತುವ ಒಂದು ಸ್ಥಳವನ್ನು ಕಟ್ಟಿಸಬಲ್ಲೆನೇ ಹೊರತು, ಅವರ ವಾಸಕ್ಕಾಗಿ ಆಲಯವನ್ನು ಕಟ್ಟಿಸುವುದಕ್ಕೆ ನಾನು ಎಷ್ಟು ಮಾತ್ರಕ್ಕೂ ಶಕ್ತನಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ಆತನಿಗೋಸ್ಕರ ಆಲಯವನ್ನು ಕಟ್ಟುವದಕ್ಕೆ ಶಕ್ತರಾರು! ಆಕಾಶವೂ ಉನ್ನತೋನ್ನತವಾದ ಆಕಾಶವೂ ಆತನ ವಾಸಕ್ಕೆ ಸಾಲದಿರುವಲ್ಲಿ ಆತನಿಗೋಸ್ಕರ ಆಲಯವನ್ನು ಕಟ್ಟುವದಕ್ಕೆ ಶಕ್ತರಾರು! ನಾನು ಆತನ ಸನ್ನಿಧಿಯಲ್ಲಿ ಧೂಪಹಾಕುವ ಉದ್ದೇಶದಿಂದ ಹೊರತು ಆತನ ವಾಸಕ್ಕಾಗಿ ಆಲಯವನ್ನು ಕಟ್ಟಿಸುವದಕ್ಕೆ ಎಷ್ಟರವನು!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ಯಾವನೂ ದೇವರಿಗೆ ಆಲಯವನ್ನು ಕಟ್ಟಲು ಸಾಧ್ಯವಿಲ್ಲ. ಯಾಕೆಂದರೆ, ಆಕಾಶವೂ ಉನ್ನತೋನ್ನತವಾದ ಆಕಾಶವೂ ಆತನ ವಾಸಕ್ಕೆ ಸಾಲುವುದಿಲ್ಲ. ಆದ್ದರಿಂದ ನಾನು ಆತನಿಗೆ ಆಲಯವನ್ನು ಕಟ್ಟಲಾರೆ. ನಾನು ಆತನಿಗೆ ಆಲಯವನ್ನು ಕಟ್ಟುತ್ತಿರುವುದು ಧೂಪಹಾಕಿ ಆತನನ್ನು ಘನಪಡಿಸುವದಕ್ಕಾಗಿಯಷ್ಟೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಪೂರ್ವಕಾಲ ವೃತ್ತಾಂತ 2:6
19 ತಿಳಿವುಗಳ ಹೋಲಿಕೆ  

ಯೆಹೋವ ದೇವರು ಹೇಳುವುದೇನೆಂದರೆ: “ಆಕಾಶವೇ ನನ್ನ ಸಿಂಹಾಸನ, ಭೂಮಿಯೇ ನನ್ನ ಪಾದ ಪೀಠ, ನೀವು ನನಗೋಸ್ಕರ ಕಟ್ಟುವ ಮನೆ ಎಲ್ಲಿ? ನನ್ನ ವಿಶ್ರಾಂತಿಯ ಸ್ಥಳವು ಎಲ್ಲಿ?


“ಆದರೆ ದೇವರು ನಿಜವಾಗಿ ಭೂಮಿಯ ಮೇಲೆ ಮನುಷ್ಯರ ಸಂಗಡ ವಾಸವಾಗಿರುವರೋ? ಇಗೋ, ಆಕಾಶವೂ, ಉನ್ನತೋನ್ನತ ಆಕಾಶವೂ ನಿಮಗೆ ಸಾಲದು. ಹಾಗಾದರೆ, ನಾನು ಕಟ್ಟಿಸಿದ ಈ ಆಲಯವು ನಿಮಗೆ ಸಾಲುವುದು ಹೇಗೆ?


“ಆದರೆ ದೇವರು ನಿಜವಾಗಿ ಭೂಮಿಯ ಮೇಲೆ ವಾಸವಾಗಿರುವರೋ? ಇಗೋ, ಆಕಾಶವೂ ಉನ್ನತೋನ್ನತ ಆಕಾಶವೂ ನಿಮಗೆ ಸಾಲದು. ಹಾಗಾದರೆ, ನಾನು ಕಟ್ಟಿಸಿದ ಈ ಆಲಯವು ನಿಮಗೆ ಸಾಲುವುದು ಹೇಗೆ?


ನಾನು ಈ ಜನರನ್ನು ಪರಿಪಾಲಿಸುವುದಕ್ಕೆ ಜ್ಞಾನವನ್ನೂ, ತಿಳುವಳಿಕೆಯನ್ನೂ ಕೊಡಿರಿ. ಏಕೆಂದರೆ ಈ ನಿಮ್ಮ ಮಹಾಜನರ ನ್ಯಾಯತೀರಿಸುವುದಕ್ಕೆ ಸಾಮರ್ಥ್ಯವುಳ್ಳವರು ಯಾರು?” ಎಂದನು.


“ಆದರೆ ನಾವು ಈ ಪ್ರಕಾರ ಇಷ್ಟಪೂರ್ತಿಯಾಗಿ ಅರ್ಪಿಸುವುದಕ್ಕೆ ಶಕ್ತಿಯನ್ನು ಹೊಂದಲು ನಾನೆಷ್ಟರವನು? ನನ್ನ ಜನರು ಎಷ್ಟರವರು? ಏಕೆಂದರೆ ಸಮಸ್ತವೂ ನಿಮ್ಮಿಂದಲೇ.


ಅನಂತರ ಅರಸನಾದ ದಾವೀದನು ಒಳಗೆ ಪ್ರವೇಶಿಸಿ, ಯೆಹೋವ ದೇವರ ಸನ್ನಿಧಿಯಲ್ಲಿ ಕುಳಿತುಕೊಂಡು, “ಸಾರ್ವಭೌಮ ಯೆಹೋವ ದೇವರೇ, ನನ್ನಂಥವನಿಗೆ ನೀವು ಈ ಪದವಿಯನ್ನು ಅನುಗ್ರಹಿಸಿ, ಇಷ್ಟು ಮುಂದಕ್ಕೆ ತರಲು ನಾನೆಷ್ಟರವನು? ನನ್ನ ಕುಟುಂಬ ಎಷ್ಟರದು?


ಆಗ ಮೋಶೆಯು ದೇವರಿಗೆ, “ಫರೋಹನ ಬಳಿಗೆ ಹೋಗಿ, ಇಸ್ರಾಯೇಲರನ್ನು ಈಜಿಪ್ಟಿನೊಳಗಿಂದ ಹೊರಗೆ ತರುವುದಕ್ಕೆ ನಾನು ಎಷ್ಟರವನು?” ಎಂದನು.


ನಾನು ಕರ್ತನ ಜನರೆಲ್ಲರಲ್ಲಿಯೂ ಅತ್ಯಲ್ಪನಾಗಿದ್ದೇನೆ. ಹಾಗಿದ್ದರೂ, ನನಗೆ ಈ ಕೃಪೆ ಕೊಡಲಾಯಿತು: ಏಕೆಂದರೆ, ನಾನು ಕ್ರಿಸ್ತನ ಅಪರಿಮಿತವಾದ ಐಶ್ವರ್ಯವನ್ನು ಯೆಹೂದ್ಯರಲ್ಲದವರಿಗೆ ಸಾರುವಂತೆಯೂ


ಕೆಲವರಿಗೆ ನಾವು ಮರಣದ ವಾಸನೆಯಾಗಿದ್ದೇವೆ. ಇತರರಿಗೆ ಜೀವವನ್ನು ಹುಟ್ಟಿಸುವ ವಾಸನೆಯಾಗಿರುತ್ತೇವೆ. ಇಂಥ ಸೇವೆಗೆ ಸಮರ್ಥರು ಯಾರು?


ನಿಮಗಿರುವ ಪರಿಶುದ್ಧವಾದವುಗಳನ್ನೂ ಹರಕೆಮಾಡಿದ್ದನ್ನೂ ಯೆಹೋವ ದೇವರು ಆಯ್ದುಕೊಳ್ಳುವ ಸ್ಥಳಕ್ಕೆ ತೆಗೆದುಕೊಂಡು ಬರಬೇಕು.


ಯೆಹೋವ ದೇವರು ನಿಮ್ಮ ಗೋತ್ರಗಳ ಒಂದರಲ್ಲಿ ಆಯ್ದುಕೊಳ್ಳುವ ಸ್ಥಳದಲ್ಲೇ ನೀವು ನಿಮ್ಮ ದಹನಬಲಿಗಳನ್ನು ಅರ್ಪಿಸಬೇಕು. ಅಲ್ಲೇ ನಾನು ನಿನಗೆ ಆಜ್ಞಾಪಿಸುವುದನ್ನೆಲ್ಲಾ ಮಾಡಬೇಕು.


ನಾನು ನಿಮಗೆ ಆಜ್ಞಾಪಿಸಿದ ಎಲ್ಲಾ ಕಾಣಿಕೆಗಳನ್ನು ಅಂದರೆ, ದಹನಬಲಿಗಳನ್ನು, ಅರ್ಪಣೆಗಳನ್ನು, ಬೆಳೆಯ ದಶಮಾಂಶಗಳನ್ನು, ಯೆಹೋವ ದೇವರಿಗಾಗಿ ವಿಶೇಷ ಉಡುಗೊರೆಗಳನ್ನು, ಹರಕೆಮಾಡಿದ ವಿಶೇಷ ಕಾಣಿಕೆಗಳನ್ನು, ನಿಮ್ಮ ದೇವರಾದ ಯೆಹೋವ ದೇವರು ತಮ್ಮ ನಾಮಸ್ಥಾಪನೆಗಾಗಿ ಆರಿಸಿಕೊಳ್ಳುವ ಸ್ಥಳಕ್ಕೇ ತರಬೇಕು.


ನನ್ನ ಕಣ್ಣಿಗೆ ಬೀಳದಂತೆ ಯಾವನಾದರೂ ಗುಪ್ತಸ್ಥಳಗಳಲ್ಲಿ ಮರೆಮಾಚಿಕೊಳ್ಳಲು ಸಾಧ್ಯವೇ? ಎಂದು ಯೆಹೋವ ದೇವರು ಹೇಳುತ್ತಾರೆ. “ನಾನು ಭೂಮ್ಯಾಕಾಶಗಳಲ್ಲಿ ವ್ಯಾಪಿಸಿರುವವನಲ್ಲವೇ?” ಎಂದು ಯೆಹೋವ ದೇವರು ಹೇಳುತ್ತಾರೆ.


ರತ್ನಗಳಲ್ಲಿ ಕೆತ್ತನೆಯನ್ನೂ ಮರದಲ್ಲಿ ಕೆತ್ತನೆಯನ್ನೂ ಸಕಲ ವಿಧವಾದ ಕೌಶಲ್ಯದ ಕೆಲಸವನ್ನು ಬಲ್ಲವನಾಗಿರುವನು.


ಅರಸನಾದ ಸೊಲೊಮೋನನು ಹೂರಾಮನನ್ನು ಟೈರಿನಿಂದ ಕರೆಕಳುಹಿಸಿದನು.


ಇವನು ನಫ್ತಾಲಿಯ ಗೋತ್ರದವಳಾದ ಒಬ್ಬ ವಿಧವೆಯ ಮಗನು, ಅವನ ತಂದೆ ಟೈರ್ ಪಟ್ಟಣದ ಕಂಚುಗಾರನಾಗಿದ್ದನು. ಹೂರಾಮನು ಜ್ಞಾನದಿಂದಲೂ ಗ್ರಹಿಕೆಯಿಂದಲೂ ತಿಳುವಳಿಕೆಯಿಂದಲೂ ಎಲ್ಲಾ ತರಹದ ಕಂಚಿನ ಕೆಲಸವನ್ನು ಮಾಡುವ ಅನುಭವಶಾಲಿಯಾಗಿದ್ದನು. ಅವನು ಅರಸನಾದ ಸೊಲೊಮೋನನ ಬಳಿಗೆ ಬಂದು, ಅವನ ಕೆಲಸವನ್ನೆಲ್ಲಾ ಮಾಡಿದನು.


ಇದಲ್ಲದೆ ನಿನ್ನ ಬಳಿಯಲ್ಲಿ ಕೆಲಸದವರೂ, ಕಲ್ಲು ಕೆಲಸದವರೂ, ಕಲ್ಲುಕುಟಿಗರೂ, ಬಡಗಿಯವರೂ, ಸಮಸ್ತ ವಿವಿಧ ಕೆಲಸದ ಪ್ರವೀಣರೂ ಅನೇಕ ಮಂದಿ ಇದ್ದಾರೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು