2 ಪೂರ್ವಕಾಲ ವೃತ್ತಾಂತ 19:7 - ಕನ್ನಡ ಸಮಕಾಲಿಕ ಅನುವಾದ7 ಆದಕಾರಣ ಯೆಹೋವ ದೇವರ ಭಯವು ನಿಮ್ಮ ಮೇಲೆ ಇರಲಿ. ನೀವು ಜಾಗ್ರತೆಯಾಗಿದ್ದು ನಡೆಯಿರಿ. ಏಕೆಂದರೆ ನಮ್ಮ ದೇವರಾದ ಯೆಹೋವ ದೇವರ ಬಳಿಯಲ್ಲಿ ಅನ್ಯಾಯವಾದರೂ, ಮುಖದಾಕ್ಷಿಣ್ಯವಾದರೂ, ಲಂಚ ತೆಗೆದುಕೊಳ್ಳುವುದಾದರೂ ಇಲ್ಲ,” ಎಂದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20197 ಹೀಗಿರುವಲ್ಲಿ, ನಿಮಗೆ ಯೆಹೋವನ ಭಯವಿರಲಿ. ನಿಮ್ಮ ದೇವರಾದ ಯೆಹೋವನಲ್ಲಿ ಅನ್ಯಾಯವೂ, ಮುಖದಾಕ್ಷಿಣ್ಯವೂ ಇಲ್ಲದಿರುವುದರಿಂದ ಜಾಗರೂಕತೆಯಿಂದ ಕಾರ್ಯನಿರ್ವಹಿಸಿರಿ” ಎಂದು ಎಚ್ಚರಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)7 ಹೀಗಿರುವಲ್ಲಿ, ನಿಮಗೆ ಅವರ ಭಯಭಕ್ತಿಯಿರಲಿ. ನಿಮ್ಮ ದೇವರಾದ ಸರ್ವೇಶ್ವರನಲ್ಲಿ ಅನ್ಯಾಯ, ಮುಖದಾಕ್ಷಿಣ್ಯ ಹಾಗು ಲಂಚಕೋರತನ ಇಲ್ಲ. ಆದುದರಿಂದ ಜಾಗರೂಕತೆಯಿಂದ ಕೆಲಸಮಾಡಿ,” ಎಂದು ಎಚ್ಚರಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)7 ಹೀಗಿರುವಲ್ಲಿ ನಿಮಗೆ ಯೆಹೋವನ ಭಯವು ಇರಲಿ. ನಿಮ್ಮ ದೇವರಾದ ಯೆಹೋವನಲ್ಲಿ ಅನ್ಯಾಯವೂ ಮುಖದಾಕ್ಷಿಣ್ಯವೂ ಲಂಚತಿನ್ನುವದೂ ಇಲ್ಲವಾದದರಿಂದ ಜಾಗರೂಕತೆಯಿಂದ ಕೆಲಸಮಾಡಿರಿ ಎಂದು ಎಚ್ಚರಿಸಿದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್7 ನಿಮ್ಮಲ್ಲಿ ಪ್ರತಿಯೊಬ್ಬರೂ ಯೆಹೋವನಿಗೆ ಭಯಪಡುವವರಾಗಿರಬೇಕು. ಆತನು ನ್ಯಾಯವಂತನಾಗಿದ್ದಾನೆ. ಆತನಿಗೆ ಎಲ್ಲಾ ಜನರು ಸಮಾನರೇ. ಆತನು ಲಂಚ ಸ್ವೀಕರಿಸಿ ನ್ಯಾಯವನ್ನು ಬದಲಾಯಿಸುವದಿಲ್ಲ” ಎಂದು ಹೇಳಿದನು. ಅಧ್ಯಾಯವನ್ನು ನೋಡಿ |