Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಪೂರ್ವಕಾಲ ವೃತ್ತಾಂತ 17:2 - ಕನ್ನಡ ಸಮಕಾಲಿಕ ಅನುವಾದ

2 ಇದಲ್ಲದೆ ಅವನು ಯೆಹೂದದಲ್ಲಿ ಸಮಸ್ತ ಕೋಟೆಯುಳ್ಳ ಪಟ್ಟಣಗಳಲ್ಲಿ ಸೈನ್ಯವನ್ನು ಇಟ್ಟು, ಯೆಹೂದದಲ್ಲಿಟ್ಟ ಹಾಗೆ ತನ್ನ ತಂದೆಯಾದ ಆಸನು ತೆಗೆದುಕೊಂಡ ಎಫ್ರಾಯೀಮನ ಪಟ್ಟಣಗಳಲ್ಲಿ ಸೈನ್ಯಗಳನ್ನು ಇಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಅವನು ಯೆಹೂದದ ಕೋಟೆಕೊತ್ತಲುಗಳುಳ್ಳ ಎಲ್ಲಾ ಪಟ್ಟಣಗಳಲ್ಲೂ ಸೈನ್ಯವನ್ನಿರಿಸಿದನು. ಯೆಹೂದ ದೇಶದಲ್ಲಿಯೂ ತನ್ನ ತಂದೆಯಾದ ಆಸನು ವಶಪಡಿಸಿಕೊಂಡಿದ್ದ ಎಫ್ರಾಯೀಮ್ ರ ಪಟ್ಟಣಗಳಲ್ಲಿಯೂ ಅಧಿಕಾರಿಗಳನ್ನು ನೇಮಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ಜುದೇಯದ ಕೋಟೆಕೊತ್ತಲುಗಳುಳ್ಳ ಎಲ್ಲ ಪಟ್ಟಣಗಳಲ್ಲೂ ಸೈನ್ಯವನ್ನಿರಿಸಿದನು. ಜುದೇಯ ನಾಡಿನಲ್ಲೂ ಹಾಗೂ ತನ್ನ ತಂದೆ ಆಸನು ಕಿತ್ತುಕೊಂಡಿದ್ದ ಎಫ್ರಯಿಮರ ಪಟ್ಟಣಗಳಲ್ಲೂ ಅಧಿಕಾರಿಗಳನ್ನು ನೇಮಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಇವನು ಯೆಹೂದದ ಕೋಟೆಕೊತ್ತಲಗಳುಳ್ಳ ಎಲ್ಲಾ ಪಟ್ಟಣಗಳಲ್ಲಿಯೂ ಸೈನ್ಯವನ್ನಿರಿಸಿ ಯೆಹೂದ ದೇಶದಲ್ಲಿಯೂ ತನ್ನ ತಂದೆಯಾದ ಆಸನು ಕಿತ್ತುಕೊಂಡಿದ್ದ ಎಫ್ರಾಯೀಮ್ಯರ ಪಟ್ಟಣದಲ್ಲಿಯೂ ಅಧಿಕಾರಿಗಳನ್ನು ನೇವಿುಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಯೆಹೂದದ ಎಲ್ಲಾ ಕೋಟೆಗಳುಳ್ಳ ಪಟ್ಟಣಗಳಲ್ಲಿಯೂ ತನ್ನ ತಂದೆಯು ವಶಪಡಿಸಿಕೊಂಡಿದ್ದ ಎಫ್ರಾಯೀಮ್ ಪ್ರಾಂತ್ಯದ ಪಟ್ಟಣಗಳಲ್ಲಿಯೂ ಸೈನ್ಯವನ್ನಿಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಪೂರ್ವಕಾಲ ವೃತ್ತಾಂತ 17:2
6 ತಿಳಿವುಗಳ ಹೋಲಿಕೆ  

ಆಸನು ಆ ಮಾತುಗಳನ್ನೂ, ಪ್ರವಾದಿಯಾದ ಓದೇದನ ಮಗ ಅಜರ್ಯನ ಪ್ರವಾದನಾ ಮಾತುಗಳನ್ನೂ ಕೇಳಿದಾಗ, ಅವನು ಬಲಗೊಂಡು ಯೆಹೂದ ಬೆನ್ಯಾಮೀನಿನ ಸಮಸ್ತ ದೇಶದೊಳಗಿಂದಲೂ, ಎಫ್ರಾಯೀಮನ ಬೆಟ್ಟದಲ್ಲಿ ತಾನು ಹಿಡಿದ ಪಟ್ಟಣಗಳೊಳಗಿಂದಲೂ ಅಸಹ್ಯ ವಿಗ್ರಹಗಳನ್ನು ತೆಗೆದುಹಾಕಿ, ಯೆಹೋವ ದೇವರ ದ್ವಾರಾಂಗಳದ ಮುಂದೆ ಇದ್ದ ಯೆಹೋವ ದೇವರ ಬಲಿಪೀಠವನ್ನು ನೂತನಪಡಿಸಿದನು.


ರೆಹಬ್ಬಾಮನು ಯೆರೂಸಲೇಮಿನಲ್ಲಿ ವಾಸಮಾಡಿ, ಯೆಹೂದದಲ್ಲಿ ಕೋಟೆಯುಳ್ಳ ಪಟ್ಟಣಗಳನ್ನು ಕಟ್ಟಿಸಿದನು.


ಯೆಹೋಷಾಫಾಟನು ಬಾಳ್ ದೇವರುಗಳನ್ನು ಅನುಸರಿಸದೆ, ತನ್ನ ತಂದೆ ದಾವೀದನ ಮೊದಲಿನ ಮಾರ್ಗದಲ್ಲಿ ನಡೆದದ್ದರಿಂದ, ಯೆಹೋವ ದೇವರು ಅವನ ಸಂಗಡ ಇದ್ದರು.


ಅರಸನಿಂದ ಸಮಸ್ತ ಯೆಹೂದದಲ್ಲಿರುವ ಕೋಟೆಯುಳ್ಳ ಪಟ್ಟಣಗಳಲ್ಲಿ ಇದ್ದವರ ಹೊರತಾಗಿ, ಇವರು ಅರಸನ ಬಳಿಯಲ್ಲಿ ಸೇವೆಮಾಡುತ್ತಿದ್ದರು.


ಅಬೀಯನು ಯಾರೊಬ್ಬಾಮನನ್ನು ಹಿಂದಟ್ಟಿ ಅವನಿಂದ ಬೇತೇಲ್, ಯೆಷಾನಾ, ಎಫ್ರೋನ್ ಎಂಬ ಪಟ್ಟಣಗಳನ್ನೂ, ಅವುಗಳ ಗ್ರಾಮಗಳನ್ನೂ ವಶಪಡಿಸಿಕೊಂಡನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು