Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಪೂರ್ವಕಾಲ ವೃತ್ತಾಂತ 17:13 - ಕನ್ನಡ ಸಮಕಾಲಿಕ ಅನುವಾದ

13 ಇದಲ್ಲದೆ ಯೆಹೂದದ ಪಟ್ಟಣಗಳಲ್ಲಿ ದವಸ ಧಾನ್ಯಗಳ ದೊಡ್ಡ ಮಳಿಗೆಯನ್ನು ಕಟ್ಟಿದನು. ಪರಾಕ್ರಮಶಾಲಿಗಳಾದ ಯುದ್ಧವೀರರು ಯೆರೂಸಲೇಮಿನಲ್ಲಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಯೆಹೂದದ ಪಟ್ಟಣಗಳಲ್ಲಿ ದವಸಧಾನ್ಯಗಳ ದೊಡ್ಡ ಮಳಿಗೆಗಳಿದ್ದವು. ಯೆರೂಸಲೇಮಿನಲ್ಲಿ ಯುದ್ಧವೀರರಾದ ಭಟರೂ ಇದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ಜುದೇಯದ ಪಟ್ಟಣಗಳಲ್ಲಿ ದವಸಧಾನ್ಯಗಳ ದೊಡ್ಡ ಮಳಿಗೆಯಿತ್ತು. ಜೆರುಸಲೇಮಿನಲ್ಲಿ ರಣವೀರರಾದ ಯೋಧರು ಇದ್ದರು:

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ಯೆಹೂದದ ಪಟ್ಟಣಗಳಲ್ಲಿ ದೊಡ್ಡ ಪದಾರ್ಥಸಂಗ್ರಹವೂ ಯೆರೂಸಲೇವಿುನಲ್ಲಿ ರಣವೀರರಾದ ಭಟರೂ ಇದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ಅವುಗಳಲ್ಲಿ ಬೇಕಾದ ಸಾಮಾಗ್ರಿಗಳನ್ನು ಸಂಗ್ರಹಿಸಿಟ್ಟನು. ಜೆರುಸಲೇಮಿನಲ್ಲಿ ನುರಿತ ಸೈನ್ಯವನ್ನು ಇರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಪೂರ್ವಕಾಲ ವೃತ್ತಾಂತ 17:13
6 ತಿಳಿವುಗಳ ಹೋಲಿಕೆ  

ಯೆಹೋಷಾಫಾಟನು ಬರಬರುತ್ತಾ ಬಹಳ ಅಭಿವೃದ್ಧಿಯಾಗಿ ಯೆಹೂದದಲ್ಲಿ ಅರಮನೆಗಳನ್ನೂ, ಉಗ್ರಾಣದ ಪಟ್ಟಣಗಳನ್ನೂ ಕಟ್ಟಿಸಿದನು.


ತಮ್ಮ ಪಿತೃಗಳ ಮನೆಯ ಪ್ರಕಾರವಾಗಿರುವ ಅವರ ಲೆಕ್ಕವೇನೆಂದರೆ: ಯೆಹೂದದ 1,000 ಅಧಿಪತಿಗಳಲ್ಲಿ ಅದ್ನಾನು ಮುಖ್ಯಸ್ಥನಾಗಿದ್ದನು. ಅವನ ಸಂಗಡ ಪರಾಕ್ರಮಶಾಲಿಗಳು 3,00,000 ಮಂದಿ ಇದ್ದರು.


ಇವರೆಲ್ಲರು ಯೆದೀಯಯೇಲನ ಪುತ್ರರು. ಪ್ರತಿಯೊಬ್ಬರೂ ಪೂರ್ವಜರ ಕುಲದ ನಾಯಕರಾಗಿದ್ದರು. ಯುದ್ಧದ ಪರಾಕ್ರಮಶಾಲಿಗಳಾಗಿಯೂ ಯುದ್ಧಕ್ಕೆ ಹೊರಡತಕ್ಕವರು 17,200 ಮಂದಿಯಾಗಿದ್ದರು.


ಅವನು ಯೆಹೂದದವರಿಗೆ, “ದೇಶವು ನಮ್ಮ ಮುಂದೆ ಇರುವಾಗ ಈ ಪಟ್ಟಣಗಳನ್ನು ಕಟ್ಟಿ, ಅವುಗಳ ಸುತ್ತಲೂ ಗೋಡೆಗಳನ್ನೂ, ಗೋಪುರಗಳನ್ನೂ, ಬಾಗಿಲುಗಳನ್ನೂ, ಅಗುಳಿಗಳನ್ನೂ ಮಾಡೋಣ. ಏಕೆಂದರೆ ನಾವು ನಮ್ಮ ದೇವರಾದ ಯೆಹೋವ ದೇವರನ್ನು ಹುಡುಕಿದೆವು. ನಾವು ಅವರನ್ನು ಹುಡುಕಿದ್ದರಿಂದ ಅವರು ಎಲ್ಲಾ ಕಡೆಯಲ್ಲಿಯೂ ನಮಗೆ ವಿಶ್ರಾಂತಿಯನ್ನು ಕೊಟ್ಟಿದ್ದಾರೆ,” ಎಂದನು. ಹಾಗೆಯೇ ಅವರು ಸೈನ್ಯವನ್ನು ಕಟ್ಟಿ ವೃದ್ಧಿಹೊಂದಿದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು