Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಪೂರ್ವಕಾಲ ವೃತ್ತಾಂತ 16:14 - ಕನ್ನಡ ಸಮಕಾಲಿಕ ಅನುವಾದ

14 ಅವನು ತನಗೋಸ್ಕರ ದಾವೀದನ ಪಟ್ಟಣದಲ್ಲಿ ಅಗಿಸಿದ ಅವನ ಸ್ವಂತ ಸಮಾಧಿಯಲ್ಲಿ ಅವನನ್ನು ಹೂಳಿಟ್ಟರು. ಅವರು ತೈಲಗಾರರ ವಿದ್ಯೆಯಿಂದ ಸಿದ್ಧಮಾಡಿದ ಸುಗಂಧಗಳಿಂದಲೂ, ನಾನಾ ವಿಧವಾದ ಪದಾರ್ಥಗಳಿಂದಲೂ ತುಂಬಿದ ಶವ ಪೆಟ್ಟಿಗೆಯಲ್ಲಿ ಅವನನ್ನು ಇಟ್ಟರು. ಅವನ ಗೌರವಕ್ಕಾಗಿ ಮಹಾ ಅಗ್ನಿಕುಂಡವನ್ನೇರ್ಪಡಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ಅವನ ಶರೀರವನ್ನು ವೈದ್ಯರ ಆಲೋಚನೆ ಮೇರೆಗೆ ಮಿಶ್ರಣ ಮಾಡಲ್ಪಟ್ಟ ತರತರಹದ ಸುಗಂಧದ್ರವ್ಯಗಳಿಂದ ತುಂಬಿರುವ ಹಾಸಿಗೆಯ ಮೇಲಿಟ್ಟು, ಅವನು ತನಗೋಸ್ಕರ ದಾವೀದನಗರದಲ್ಲಿ ತೆಗೆಸಿದ್ದ ಸಮಾಧಿಯಲ್ಲಿ ಇಟ್ಟರು. ಹೇರಳವಾಗಿ ಅವನಿಗೋಸ್ಕರ ಬಹಳಷ್ಟು ಧೂಪ ಹಾಕಿ ಸಂತಾಪ ಸೂಚಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 ಅವನ ಶವವನ್ನು ಬುಕ್ಕಿಟ್ಟುಗಾರನ ಕಸಬಿನ ಮೇರೆಗೆ ಮಿಶ್ರಣ ಮಾಡಲ್ಪಟ್ಟ ತರತರದ ಸುಗಂಧದ್ರವ್ಯಗಳಿಂದ ತುಂಬಿರುವ ಹಾಸಿಗೆಯ ಮೇಲಿಟ್ಟು, ಅವನು ತನಗಾಗಿ ದಾವೀದನಗರದಲ್ಲಿ ತೋಡಿಸಿದ್ದ ಸಮಾಧಿಯಲ್ಲಿ ಅದನ್ನು ಇಟ್ಟರು. ಹೇರಳವಾಗಿ ಧೂಪಹಾಕಿ ಸಂತಾಪ ಸೂಚಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ಪಿತೃಗಳ ಬಳಿಗೆ ಸೇರಲು ಅವನ ಶವವನ್ನು ಬುಕ್ಕಿಟ್ಟುಗಾರರ ಕಸಬಿನ ಮೇರೆಗೆ ವಿುಶ್ರಮಾಡಲ್ಪಟ್ಟ ತರತರದ ಸುಗಂಧದ್ರವ್ಯಗಳಿಂದ ತುಂಬಿರುವ ಹಾಸಿಗೆಯ ಮೇಲಿಟ್ಟು ಅವನು ತನಗೋಸ್ಕರ ದಾವೀದನಗರದಲ್ಲಿ ತೋಡಿಸಿದ್ದ ಸಮಾಧಿಯಲ್ಲಿ ಅದನ್ನು ಇಟ್ಟರು. ಅವನಿಗೋಸ್ಕರ ಬಹುಧೂಪವನ್ನು ಸುಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ಅವನು ತನಗಾಗಿ ದಾವೀದನಗರದಲ್ಲಿ ಮಾಡಿಸಿದ್ದ ಸಮಾಧಿಯಲ್ಲಿಯೇ ಅವನಿಗೆ ಸಮಾಧಿಮಾಡಿದರು. ನಾನಾತರದ ಪರಿಮಳದ್ರವ್ಯಗಳಿಂದ ತುಂಬಿದ್ದ ಹಾಸಿಗೆಯ ಮೇಲೆ ಮಲಗಿಸಿದ್ದರು. ಆಮೇಲೆ ಅವನ ಗೌರವಾರ್ಥವಾಗಿ ಒಂದು ದೊಡ್ಡ ಬೆಂಕಿಕೊಂಡವನ್ನು ಮಾಡಿ ಪರಿಮಳಧೂಪವನ್ನು ಸುಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಪೂರ್ವಕಾಲ ವೃತ್ತಾಂತ 16:14
14 ತಿಳಿವುಗಳ ಹೋಲಿಕೆ  

ಎರಡು ವರ್ಷವಾದ ತರುವಾಯ, ಅವನ ರೋಗದಿಂದ ಅವನ ಕರುಳುಗಳು ಹೊರಕ್ಕೆ ಬಂದವು. ಹೀಗೆ ಅವನು ಕಡುಬೇನೆಯಿಂದ ಸತ್ತನು. ಅವನ ಜನರು ಅವನ ಪಿತೃಗಳಿಗೆ ಗೌರವಕ್ಕೋಸ್ಕರ ಅಗ್ನಿಕುಂಡ ಹಚ್ಚಲಿಲ್ಲ.


ಯೋಸೇಫನು ತನ್ನ ತಂದೆ ಇಸ್ರಾಯೇಲನಿಗೆ ಸುಗಂಧದ್ರವ್ಯವನ್ನು ಹಾಕಬೇಕೆಂದು ತನ್ನ ದಾಸರಾದ ವೈದ್ಯರಿಗೆ ಅಪ್ಪಣೆಕೊಟ್ಟನು.


ನೀನು ಶಾಂತಿಯುತವಾಗಿ ಸಾಯುವೆ. ನಿನಗಿಂತ ಮೊದಲು ಆಳಿದ ನಿನ್ನ ಪಿತೃಗಳಾದ ಅರಸರನ್ನು ಗೌರವಿಸಲು ಬೆಂಕಿಯನ್ನು ಹೊತ್ತಿಸಿದ ಪ್ರಕಾರ ನಿನಗೂ ಹಾಕುವರು. “ಅಯ್ಯೋ, ಒಡೆಯನೇ,” ಎಂದು ಹೇಳಿ ನಿನಗೋಸ್ಕರ ಗೋಳಾಡುವರು. ನಾನೇ ಈ ವಾಗ್ದಾನವನ್ನು ಮಾಡಿದ್ದೇನೆಂದು ಯೆಹೋವ ದೇವರು ಹೇಳುತ್ತಾರೆ.’ ”


ಸಬ್ಬತ್ ದಿನ ಕಳೆದ ಮೇಲೆ ಮಗ್ದಲದ ಮರಿಯಳೂ ಯಾಕೋಬನ ತಾಯಿ ಮರಿಯಳೂ ಸಲೋಮೆಯೂ ಯೇಸುವಿನ ದೇಹಕ್ಕೆ ಹಚ್ಚುವುದಕ್ಕಾಗಿ ಸುಗಂಧದ್ರವ್ಯಗಳನ್ನು ಕೊಂಡುಕೊಂಡು ಬಂದರು.


ನಿನಗೆ ಇಲ್ಲಿ ಏನು ಕೆಲಸ? ಇಲ್ಲಿ ನಿನಗೆ ಯಾರಿದ್ದಾರೆ? ನೀನು ಉನ್ನತದಲ್ಲಿ ನಿನಗೆ ಸಮಾಧಿಯನ್ನು ತೋಡಿಸಿದೆ, ಬಂಡೆಯಲ್ಲಿ ನಿನಗೆ ನಿವಾಸವನ್ನು ಕೆತ್ತಿಸುವವನ ಹಾಗೆ, ನಿನಗೆ ಇಲ್ಲಿ ಸಮಾಧಿಯನ್ನು ತೋಡಿಸಿದಿ ಅಲ್ಲವೇ?


ಸತ್ತ ನೊಣಗಳು ಸುಗಂಧ ತೈಲವನ್ನು ದುರ್ವಾಸನೆಗೆ ಒಳಪಡಿಸುತ್ತದೆ. ಹಾಗೆಯೇ ಸ್ವಲ್ಪ ಮೂಢತನವು ಜ್ಞಾನ ಮಾನಗಳನ್ನು ಕೆಡಿಸಿಬಿಡುತ್ತದೆ.


ಆದ್ದರಿಂದ ಅವನ ಸೇವಕರು ಆ ರಥದೊಳಗಿಂದ ಅವನನ್ನು ತೆಗೆದುಕೊಂಡು, ಅವನಿಗಿದ್ದ ಎರಡನೆಯ ರಥದಲ್ಲಿ ಅವನನ್ನು ಇರಿಸಿ ಯೆರೂಸಲೇಮಿಗೆ ತಂದರು. ಅವನು ಅಲ್ಲಿ ಮರಣ ಹೊಂದಲು, ಅವನ ಶವವನ್ನು ಅವನ ಪಿತೃಗಳ ಸ್ಮಶಾನದಲ್ಲಿ ಸಮಾಧಿಮಾಡಿದರು. ಸಮಸ್ತ ಯೆಹೂದ ಮತ್ತು ಯೆರೂಸಲೇಮಿನವರು ಯೋಷೀಯನಿಗೋಸ್ಕರ ದುಃಖಪಟ್ಟರು.


‘ನನಗೆ ನನ್ನ ತಂದೆ, “ನಾನು ಸಾಯುತ್ತೇನೆ, ನಾನು ಕಾನಾನ್ ದೇಶದಲ್ಲಿ ನನಗೋಸ್ಕರ ಅಗೆದ ನನ್ನ ಸಮಾಧಿಯಲ್ಲಿಯೇ ನನ್ನನ್ನು ಸಮಾಧಿಮಾಡಬೇಕು,” ಎಂದು ನನ್ನಿಂದ ಪ್ರಮಾಣ ಮಾಡಿಸಿದ್ದಾನೆ.’ ಹೀಗಿರುವುದರಿಂದ ನಾನು ಹೋಗಿ ನನ್ನ ತಂದೆಯನ್ನು ಹೂಳಿ, ತಿರುಗಿ ಬರುವ ಹಾಗೆ ಅಪ್ಪಣೆಯಾಗಬೇಕು,” ಎಂದನು.


ಅವರಲ್ಲಿರುವ ಸಮಸ್ತ ಪರಾಕ್ರಮಶಾಲಿಗಳು ಎದ್ದು, ರಾತ್ರಿಯೆಲ್ಲಾ ನಡೆದುಹೋಗಿ, ಬೇತ್ ಷೆಯಾನಿನ ಗೋಡೆಗೆ ಜಡಿದಿದ್ದ ಸೌಲನ ಶವವನ್ನೂ, ಅವನ ಪುತ್ರರ ಶವಗಳನ್ನೂ ತೆಗೆದುಕೊಂಡು ಯಾಬೇಷಿಗೆ ಬಂದು, ಅವುಗಳನ್ನು ಅಲ್ಲಿ ದಹಿಸಿದರು.


ಆಸನು ಮೃತನಾಗಿ ತನ್ನ ಪಿತೃಗಳ ಬಳಿ ಸೇರಿದನು. ತನ್ನ ಆಳಿಕೆಯ ನಾಲ್ವತ್ತೊಂದನೆಯ ವರ್ಷದಲ್ಲಿ ಮರಣಹೊಂದಿದನು.


ಅವರು ಅಸಾಯೇಲನನ್ನು ಎತ್ತಿಕೊಂಡು ಬೇತ್ಲೆಹೇಮಿನಲ್ಲಿರುವ ಅವನ ತಂದೆಯ ಸಮಾಧಿಯಲ್ಲಿ ಹೂಳಿಟ್ಟರು. ಯೋವಾಬನೂ, ಅವನ ಜನರೂ ರಾತ್ರಿಯೆಲ್ಲಾ ನಡೆದು ಉದಯವಾದಾಗ ಹೆಬ್ರೋನಿಗೆ ಬಂದರು.


ಹಿಜ್ಕೀಯನು ತನ್ನ ಪಿತೃಗಳ ಬಳಿಗೆ ಸೇರಿದನು. ಅವರು ದಾವೀದನ ಮಕ್ಕಳ ಸಮಾಧಿಗಳಲ್ಲಿರುವ ಶ್ರೇಷ್ಠವಾದುದರಲ್ಲಿ ಅವನನ್ನು ಹೂಳಿಟ್ಟರು. ಅವನ ಮರಣದಲ್ಲಿ ಸಮಸ್ತ ಯೆಹೂದದವರೂ, ಯೆರೂಸಲೇಮಿನ ನಿವಾಸಿಗಳೂ ಅವನನ್ನು ಘನಪಡಿಸಿದರು. ಅವನ ಮಗ ಮನಸ್ಸೆಯು ಅವನಿಗೆ ಬದಲಾಗಿ ಅರಸನಾದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು