2 ಪೂರ್ವಕಾಲ ವೃತ್ತಾಂತ 15:9 - ಕನ್ನಡ ಸಮಕಾಲಿಕ ಅನುವಾದ9 ತರುವಾಯ ಆಸನು ಎಲ್ಲಾ ಯೆಹೂದ ಹಾಗೂ ಬೆನ್ಯಾಮೀನ್ ಕುಲಗಳವರನ್ನು ಬರಮಾಡಿದನು. ಯೆಹೂದ ದೇಶದಲ್ಲಿ ನೆಲೆಸಿದ್ದ ಎಫ್ರಾಯೀಮ್, ಮನಸ್ಸೆ ಹಾಗೂ ಸಿಮೆಯೋನ್ ಕುಲಗಳವರನ್ನು ಸಹ ಕರೆಸಿಕೊಂಡನು. ಅವನ ದೇವರಾದ ಯೆಹೋವ ದೇವರು ಅವನ ಸಂಗಡ ಇದ್ದಾರೆಂದು ಇವರು ಕಂಡಾಗ, ಇಸ್ರಾಯೇಲಿನೊಳಗಿಂದ ಅನೇಕರು ಅವನ ಕಡೆಗೆ ಬಂದಿದ್ದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20199 ಆ ಮೇಲೆ ಆಸನು ಎಲ್ಲಾ ಯೆಹೂದ ಬೆನ್ಯಾಮೀನ ಕುಲಗಳವರನ್ನೂ ತನ್ನ ದೇವರಾದ ಯೆಹೋವನು ತನ್ನ ಸಂಗಡ ಇರುವುದನ್ನು ನೋಡಿ ಇಸ್ರಾಯೇಲರೊಡನೆ ತನ್ನೊಡನೆ ಗುಂಪುಗುಂಪಾಗಿ ಕೂಡಿಕೊಂಡು ಯೆಹೂದ ದೇಶದಲ್ಲಿ ನೆಲಸಿದ್ದ ಎಫ್ರಾಯೀಮ್, ಮನಸ್ಸೆ ಹಾಗೂ ಸಿಮೆಯೋನ್ ಕುಲಗಳವರನ್ನೂ ಕರೆಸಿಕೊಂಡನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)9 ಆಮೇಲೆ ಆಸನು ಎಲ್ಲಾ ಯೆಹೂದ ಹಾಗೂ ಬೆನ್ಯಾಮೀನ್ ಕುಲಗಳವರನ್ನು ಬರಮಾಡಿದನು. ದೇವರಾದ ಸರ್ವೇಶ್ವರ ತನ್ನೊಂದಿಗೆ ಇರುವುದನ್ನು ನೋಡಿ, ತನ್ನ ಬಳಿಗೆ ಗುಂಪುಗುಂಪಾಗಿ ಕೂಡಿಬಂದು, ಜುದೇಯ ನಾಡಿನಲ್ಲಿ ನೆಲಸಿದ್ದ ಎಫ್ರಯಿಮ್, ಮನಸ್ಸೆ ಹಾಗೂ ಸಿಮೆಯೋನ್ ಕುಲಗಳವರನ್ನು ಸಹ ಕರೆಸಿಕೊಂಡನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)9 ಆಮೇಲೆ ಆಸನು ಎಲ್ಲಾ ಯೆಹೂದ ಬೆನ್ಯಾಮೀನ್ ಕುಲಗಳವರನ್ನೂ ತನ್ನ ದೇವರಾದ ಯೆಹೋವನು ತನ್ನ ಸಂಗಡ ಇರುವದನ್ನು ನೋಡಿ ತನ್ನೊಡನೆ ಗುಂಪುಗುಂಪಾಗಿ ಕೂಡಿಕೊಂಡು ಯೆಹೂದದೇಶದಲ್ಲಿ ಇಳಕೊಂಡಿದ್ದ ಎಫ್ರಾಯೀಮ್ ಮನಸ್ಸೆ ಸಿಮೆಯೋನ್ ಕುಲಗಳವರನ್ನೂ ಕರಿಸಿಕೊಂಡನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್9 ಆಮೇಲೆ ಆಸನು ಯೆಹೂದ ಮತ್ತು ಬೆನ್ಯಾಮೀನ್ ಪ್ರಾಂತ್ಯದ ಜನರನ್ನೆಲ್ಲಾ ಒಟ್ಟಾಗಿ ಸೇರಿಸಿದನು. ಅದೇ ಪ್ರಕಾರ ಅವನು ಇಸ್ರೇಲನ್ನು ಬಿಟ್ಟು ಯೆಹೂದದಲ್ಲಿ ನೆಲೆಸಲು ಬಂದಿದ್ದ ಎಫ್ರಾಯೀಮ್, ಮನಸ್ಸೆ ಮತ್ತು ಸಿಮೆಯೋನ್ ಪ್ರಾಂತ್ಯಗಳವರನ್ನೂ ಒಟ್ಟಾಗಿ ಸೇರಿಸಿದನು. ದೇವರಾದ ಯೆಹೋವನು ಆಸನ ಕೂಡ ಇರುವದನ್ನು ನೋಡಿ ಅವನೊಂದಿಗೆ ಸೇರಲು ಅನೇಕ ಜನರು ಬಂದಿದ್ದರು. ಅಧ್ಯಾಯವನ್ನು ನೋಡಿ |
ದಾವೀದನು ಸೌಲನ ಮೇಲೆ ಯುದ್ಧಮಾಡಲು ಫಿಲಿಷ್ಟಿಯರ ಸಂಗಡ ಬರುತ್ತಿರುವಾಗ, ಮನಸ್ಸೆಯವರಲ್ಲಿ ಕೆಲವರು ದಾವೀದನ ಕಡೆಗೆ ಸೇರಿದರು. ಆದರೆ ಇವರು ಅವರಿಗೆ ಸಹಾಯ ಕೊಡದೆ ಇದ್ದರು. ಏಕೆಂದರೆ ಫಿಲಿಷ್ಟಿಯರ ಅಧಿಪತಿಗಳು ಯೋಚನೆ ಮಾಡಿದ ತರುವಾಯ, “ಅವನು ನಮಗೆ ಮೋಸಮಾಡಿ, ತನ್ನ ಯಜಮಾನನಾದ ಸೌಲನ ಕಡೆಗೆ ಸೇರಿದರೆ, ನಮ್ಮ ತಲೆಗಳು ಬಿದ್ದು ಹೋಗುವುವು,” ಎಂದು ಹೇಳಿ ಅವನನ್ನು ಕಳುಹಿಸಿಬಿಟ್ಟರು.