Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಪೂರ್ವಕಾಲ ವೃತ್ತಾಂತ 15:14 - ಕನ್ನಡ ಸಮಕಾಲಿಕ ಅನುವಾದ

14 ಮಹಾಶಬ್ದದಿಂದಲೂ, ಆರ್ಭಟದಿಂದಲೂ, ತುತೂರಿಗಳ ಶಬ್ದದಿಂದಲೂ, ಕೊಂಬುಗಳ ಶಬ್ದದಿಂದಲೂ ಯೆಹೋವ ದೇವರ ಮುಂದೆ ಆಣೆ ಇಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ತುತ್ತೂರಿ ಕೊಂಬುಗಳನ್ನೂ ಊದಿಸಿ ದೊಡ್ಡ ಅರ್ಭಟದೊಡನೆ ಯೆಹೋವನಿಗೆ ಪ್ರಮಾಣಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 ತುತ್ತೂರಿ ಕೊಂಬುಗಳನ್ನು ಊದಿಸಿ, ದೊಡ್ಡ ಘೋಷಣೆಗಳೊಡನೆ, ವಾಗ್ದಾನ ಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ತುತೂರಿಕೊಂಬುಗಳನ್ನೂದಿಸಿ ದೊಡ್ಡ ಆರ್ಭಟದೊಡನೆ ಯೆಹೋವನಿಗೆ ಪ್ರಮಾಣಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ಆಮೇಲೆ ಆಸನೂ ಅವನ ಜನರೂ ದೇವರಿಗೆ ಪ್ರಮಾಣಮಾಡಿ ಸಂತೋಷದಿಂದ ಹರ್ಷಧ್ವನಿ ಮಾಡಿದರು. ಅಲ್ಲದೆ ತುತ್ತೂರಿಗಳನ್ನೂ ಕೊಂಬುಗಳನ್ನೂ ಊದಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಪೂರ್ವಕಾಲ ವೃತ್ತಾಂತ 15:14
9 ತಿಳಿವುಗಳ ಹೋಲಿಕೆ  

ತಮ್ಮ ಸಹೋದರರಾದ ತಮ್ಮ ಶ್ರೇಷ್ಠರ ಸಂಗಡ ಕೂಡಿಕೊಂಡು ದೇವರ ಸೇವಕ ಮೋಶೆಯ ಕೈಯಿಂದ ಕೊಟ್ಟ ದೇವರ ನಿಯಮದಂತೆ ನಡೆಯುತ್ತೇವೆಂದೂ, ನಮ್ಮ ಕರ್ತ ಆಗಿರುವ ಯೆಹೋವ ದೇವರ ಆಜ್ಞೆಗಳನ್ನೂ, ಅವರ ನ್ಯಾಯಗಳನ್ನೂ, ಅವರ ಕಟ್ಟಳೆಗಳನ್ನೂ, ಎಲ್ಲವನ್ನೂ ಕೈಗೊಂಡು ಮಾಡುತ್ತೇವೆಂದೂ ಆಣೆ ಇಟ್ಟು ಹೀಗೆ ಪ್ರಮಾಣ ಮಾಡಿದರು;


ನಾನು ನನ್ನ ಬಟ್ಟೆಯನ್ನು ಝಾಡಿಸಿ, “ಈ ಮಾತಿನ ಪ್ರಕಾರ ಮಾಡದೆ ಇರುವ ಪ್ರತಿಯೊಬ್ಬನನ್ನು ದೇವರು ಅವನ ಮನೆಯಿಂದಲೂ, ಅವನ ಆಸ್ತಿಪಾಸ್ತಿಯಿಂದಲೂ ಝಾಡಿಸಲಿ. ಅವನು ಇದೇ ಪ್ರಕಾರ ಝಾಡಿಸಿ, ಬರಿದಾಗಲಿ,” ಎಂದೆನು. ಅದಕ್ಕೆ ಸಭೆಯವರೆಲ್ಲರೂ, “ಆಮೆನ್” ಎಂದು ಹೇಳಿ ಯೆಹೋವ ದೇವರನ್ನು ಸ್ತುತಿಸಿದರು. ಜನರು ತಾವು ಕೊಟ್ಟ ಮಾತಿನ ಪ್ರಕಾರ ನಡೆದುಕೊಂಡರು.


ಯಾವನಾದರೂ ಇಸ್ರಾಯೇಲಿನ ದೇವರಾದ ಯೆಹೋವ ದೇವರನ್ನು ಹುಡುಕದೆ ಹೋದರೆ; ಹಿರಿಯನಾದರೂ, ಕಿರಿಯನಾದರೂ, ಪುರುಷನಾದರೂ, ಸ್ತ್ರೀಯಾದರೂ ಸಾಯಬೇಕೆಂದು ಒಡಂಬಡಿಕೆ ಮಾಡಿಕೊಂಡರು.


ಯೆಹೂದದವರೆಲ್ಲರು ಪ್ರಮಾಣಕ್ಕೆ ಸಂತೋಷಪಟ್ಟರು. ಏಕೆಂದರೆ ಅವರು ತಮ್ಮ ಪೂರ್ಣಹೃದಯದಿಂದ ಆಣೆ ಇಟ್ಟು, ತಮ್ಮ ಪೂರ್ಣ ಇಷ್ಟಪೂರ್ವಕವಾಗಿ ದೇವರನ್ನು ಹುಡುಕಿದರು; ದೇವರು ಅವರಿಗೆ ಸಿಕ್ಕಿದರು. ಯೆಹೋವ ದೇವರು ಅವರಿಗೆ ಸುತ್ತಲೂ ವಿಶ್ರಾಂತಿಕೊಟ್ಟರು.


ತುತೂರಿಗಳಿಂದಲೂ, ಹೌದು, ಟಗರಿನ ಕೊಂಬಿನಿಂದಲೂ ಯೆಹೋವ ರಾಜರ ಮುಂದೆ ಆನಂದಘೋಷ ಮಾಡಿರಿ.


ಮೋಶೆಯು ಬಂದು ಯೆಹೋವ ದೇವರ ಎಲ್ಲಾ ಮಾತುಗಳನ್ನೂ ಎಲ್ಲಾ ನ್ಯಾಯವಿಧಿಗಳನ್ನು ಜನರಿಗೆ ತಿಳಿಸಿದನು. ಆಗ ಜನರೆಲ್ಲಾ ಒಂದೇ ಸ್ವರದಿಂದ, “ಯೆಹೋವ ದೇವರು ಹೇಳಿದ ಎಲ್ಲಾ ಮಾತುಗಳ ಪ್ರಕಾರ ಮಾಡುತ್ತೇವೆ,” ಎಂದು ಉತ್ತರಕೊಟ್ಟರು.


ಒಡಂಬಡಿಕೆಯ ಗ್ರಂಥವನ್ನು ತೆಗೆದುಕೊಂಡು ಜನರ ಸಭೆಯಲ್ಲಿ ಓದಿದನು. ಆಗ ಅವರು, “ಯೆಹೋವ ದೇವರ ಆಜ್ಞೆಗಳನ್ನೆಲ್ಲಾ ನಾವು ಅನುಸರಿಸಿ ಅವುಗಳಿಗೆ ವಿಧೇಯರಾಗುವೆವು,” ಎಂದರು.


ಜನರು ಯೆಹೋಶುವನಿಗೆ, “ನಾವು ನಮ್ಮ ದೇವರಾದ ಯೆಹೋವ ದೇವರಿಗೆ ಸೇವೆಸಲ್ಲಿಸಿ, ಅವರ ಮಾತಿಗೆ ವಿಧೇಯರಾಗುವೆವು,” ಎಂದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು