Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಪೂರ್ವಕಾಲ ವೃತ್ತಾಂತ 13:22 - ಕನ್ನಡ ಸಮಕಾಲಿಕ ಅನುವಾದ

22 ಅಬೀಯನ ಮಿಕ್ಕಾದ ಕ್ರಿಯೆಗಳೂ, ಅವನ ನಡೆನುಡಿಗಳ ಮಾತುಗಳೂ ಪ್ರವಾದಿಯಾದ ಇದ್ದೋವನ ವರ್ತಮಾನಗಳಲ್ಲಿ ಬರೆದಿರುತ್ತವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ಅಬೀಯನ ಉಳಿದ‍ ಚರಿತ್ರೆಯೂ ಅವನ ನಡೆನುಡಿಗಳೂ ಪ್ರವಾದಿಯಾದ ಇದ್ದೋವಿನ ಚರಿತ್ರೆ ಪುಸ್ತಕದಲ್ಲಿ ಬರೆದಿರುತ್ತವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

22 ಅಬೀಯನ ಉಳಿದ ಚರಿತ್ರೆ ಹಾಗೂ ನಡೆನುಡಿಗಳು ಪ್ರವಾದಿ ಇದ್ದೋವಿನ ವ್ಯಾಖ್ಯಾನದಲ್ಲಿ ಲಿಖಿತವಾಗಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

22 ಅಬೀಯನ ಉಳಿದ ಚರಿತ್ರೆಯೂ ಅವನ ನಡೆನುಡಿಗಳೂ ಪ್ರವಾದಿಯಾದ ಇದ್ದೋವಿನ ವ್ಯಾಖ್ಯಾನದಲ್ಲಿ ಬರೆದಿರುತ್ತವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

22 ಅಬೀಯನು ಮಾಡಿದ ಎಲ್ಲಾ ಕಾರ್ಯಗಳ ಕುರಿತು ಪ್ರವಾದಿ ಇದ್ದೋ ಬರೆದ ಪುಸ್ತಕದಲ್ಲಿ ದಾಖಲಾಗಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಪೂರ್ವಕಾಲ ವೃತ್ತಾಂತ 13:22
4 ತಿಳಿವುಗಳ ಹೋಲಿಕೆ  

ಸೊಲೊಮೋನನ ಉಳಿದ ಕ್ರಿಯೆಗಳು, ಮೊದಲನೆಯವುಗಳೂ, ಕಡೆಯವುಗಳೂ ಪ್ರವಾದಿಯಾದ ನಾತಾನನ ಪುಸ್ತಕದಲ್ಲಿಯೂ, ಶೀಲೋವಿನವನಾದ ಅಹೀಯನ ಪ್ರವಾದನೆಯಲ್ಲಿಯೂ, ದರ್ಶಿಯಾದ ಇದ್ದೋವನು ನೆಬಾಟನ ಮಗನಾದ ಯಾರೊಬ್ಬಾಮನಿಗೆ ವಿರೋಧವಾಗಿ ಹೇಳಿದ ದರ್ಶನಗಳಲ್ಲಿಯೂ ಬರೆದಿರುತ್ತವೆ.


ರೆಹಬ್ಬಾಮನು ಅರಸನಾಗಿದ್ದಾಗ ತನ್ನ ಆಳ್ವಿಕೆಯ ಮೊದಲಿನಿಂದ ಕಡೆಯವರೆಗೆ ಮಾಡಿದ ಕಾರ್ಯಗಳು ಪ್ರವಾದಿಯಾದ ಶೆಮಾಯನ ಪುಸ್ತಕದಲ್ಲಿಯೂ, ವಂಶಾವಳಿಗಳನ್ನು ಕುರಿತು ಬರೆದ ದರ್ಶಿಯಾದ ಇದ್ದೋವನ ಪುಸ್ತಕದಲ್ಲಿಯೂ ಬರೆದಿರುತ್ತವೆ. ಇದಲ್ಲದೆ ರೆಹಬ್ಬಾಮನಿಗೂ, ಯಾರೊಬ್ಬಾಮನಿಗೂ ಯಾವಾಗಲೂ ಯುದ್ಧಗಳಾಗುತ್ತಿದ್ದವು.


ಆದರೆ ಅವನ ಪುತ್ರನನ್ನು ಕುರಿತೂ, ಅವನ ವಿರುದ್ಧ ನುಡಿದ ಪ್ರವಾದನೆಯ ಕುರಿತೂ, ದೇವರ ಆಲಯ ದುರಸ್ತು ಮಾಡುವುದನ್ನು ಕುರಿತೂ, ಅರಸರ ಚರಿತ್ರೆಯ ಪುಸ್ತಕದಲ್ಲಿ ಬರೆದಿರುತ್ತವೆ. ಅವನ ಮಗ ಅಮಚ್ಯನು ಅವನಿಗೆ ಬದಲಾಗಿ ಅರಸನಾದನು.


ಅಬೀಯನು ಪ್ರಬಲನಾದನು. ಅವನಿಗೆ ಹದಿನಾಲ್ಕು ಮಂದಿ ಹೆಂಡತಿಯರೂ, ಇಪ್ಪತ್ತೆರಡು ಮಂದಿ ಪುತ್ರರೂ, ಹದಿನಾರು ಮಂದಿ ಪುತ್ರಿಯರೂ ಇದ್ದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು