Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಪೂರ್ವಕಾಲ ವೃತ್ತಾಂತ 11:13 - ಕನ್ನಡ ಸಮಕಾಲಿಕ ಅನುವಾದ

13 ಸಮಸ್ತ ಇಸ್ರಾಯೇಲಿನಲ್ಲಿದ್ದ ಯಾಜಕರೂ, ಲೇವಿಯರೂ ತಮ್ಮ ಸಮಸ್ತ ಪ್ರಾಂತಗಳಿಂದ ಅವನ ಬಳಿಗೆ ಪುನಃ ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಎಲ್ಲಾ ಇಸ್ರಾಯೇಲ್ ಪ್ರಾಂತ್ಯಗಳಲ್ಲಿದ್ದ ಯಾಜಕರೂ ಮತ್ತು ಲೇವಿಯರೂ ಅವನೊಡನೆ ಬಂದು ಸೇರಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ಯೆಹೂದ, ಬೆನ್ಯಾಮೀನ್ ಕುಲಗಳವರು ಅವನ ಸ್ವಾಧೀನದಲ್ಲಿದ್ದುದಲ್ಲದೆ ಬೇರೆ ಎಲ್ಲ ಇಸ್ರಯೇಲ್ ಪ್ರಾಂತ್ಯಗಳಲ್ಲಿದ್ದ ಯಾಜಕರು ಹಾಗೂ ಲೇವಿಯರು ಅವನೊಡನೆ ಸೇರಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ಯೆಹೂದ ಬೆನ್ಯಾಮೀನ್ ಕುಲಗಳವರು ಅವನ ಸ್ವಾಧೀನದಲ್ಲಿದ್ದದ್ದಲ್ಲದೆ ಬೇರೆ ಎಲ್ಲಾ ಇಸ್ರಾಯೇಲ್ ಪ್ರಾಂತಗಳಲ್ಲಿದ್ದ ಯಾಜಕರೂ ಲೇವಿಯರೂ ಅವನೊಡನೆ ಕೂಡಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ಇಸ್ರೇಲ್ ಪ್ರಾಂತ್ಯದಲ್ಲಿದ್ದ ಯಾಜಕರೂ ಲೇವಿಯರೂ ರೆಹಬ್ಬಾಮನನ್ನು ಸೇರಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಪೂರ್ವಕಾಲ ವೃತ್ತಾಂತ 11:13
11 ತಿಳಿವುಗಳ ಹೋಲಿಕೆ  

ಪ್ರತಿ ಪಟ್ಟಣದಲ್ಲಿ ಖೇಡ್ಯಗಳನ್ನೂ, ಈಟಿಗಳನ್ನೂ ಇಟ್ಟು ಯೆಹೂದ ಬೆನ್ಯಾಮೀನವರು ಅವನ ಕಡೆ ಇದ್ದುದರಿಂದ, ಅವುಗಳನ್ನು ಭದ್ರಪಡಿಸಿದನು.


ಲೇವಿಯರು ತಮ್ಮ ಹುಲ್ಲುಗಾವಲು ಮತ್ತು ಆಸ್ತಿಯನ್ನು ತ್ಯಜಿಸಿ ಯೆಹೂದ ಮತ್ತು ಯೆರೂಸಲೇಮಿಗೆ ಬಂದರು, ಏಕೆಂದರೆ ಯಾರೊಬ್ಬಾಮನೂ ಅವನ ಮಕ್ಕಳು ಯೆಹೋವ ದೇವರಿಗೆ ಯಾಜಕ ಸೇವೆ ಮಾಡದ ಹಾಗೆ ತಿರಸ್ಕರಿಸಿದನು.


ಇವರು ಯೆಹೂದವನ್ನು ಸಂಚರಿಸಿ ಯೆಹೂದದ ಸಮಸ್ತ ಪಟ್ಟಣಗಳಿಂದ ಲೇವಿಯರನ್ನೂ, ಇಸ್ರಾಯೇಲಿನ ಕುಟುಂಬದಲ್ಲಿ ಮುಖ್ಯಸ್ಥರನ್ನೂ ಕೂಡಿಸಿಕೊಂಡು, ಯೆರೂಸಲೇಮಿಗೆ ಬಂದರು.


ನೀವು ಭೂಮಿಯ ಮೇಲೆ ಜೀವಿಸುವವರೆಗೆ ಲೇವಿಯರನ್ನು ಬಿಟ್ಟು ಬಿಡದ ಹಾಗೆ ನೋಡಿಕೊಳ್ಳಿರಿ.


ನೀವು ಸ್ವಾಧೀನಪಡಿಸುವ ನಾಡು ಅಶುದ್ಧವಾಗಿದ್ದರೆ, ಯೆಹೋವ ದೇವರ ಗುಡಾರವಿರುವ ಯೆಹೋವ ದೇವರ ನಾಡಿಗೆ ನೀವು ಬಂದು, ನಮ್ಮ ಮಧ್ಯದಲ್ಲಿ ಸೊತ್ತನ್ನು ತೆಗೆದುಕೊಳ್ಳಿರಿ. ಯೆಹೋವ ದೇವರ ಬಲಿಪೀಠದ ಹೊರತಾಗಿ ನಿಮಗೋಸ್ಕರ ಒಂದು ಬಲಿಪೀಠವನ್ನು ಕಟ್ಟಿಕೊಳ್ಳುವುದರಿಂದ ನೀವು ಯೆಹೋವ ದೇವರಿಗೆ ವಿರೋಧವಾಗಿ ತಿರುಗಿ ಬೀಳಬೇಡಿರಿ. ನಮಗೆ ವಿರೋಧವಾಗಿಯೂ ತಿರುಗಿ ಬೀಳಬೇಡಿರಿ.


ಆದರೆ ಯೆಹೂದದ ಪಟ್ಟಣಗಳಲ್ಲಿ ವಾಸವಾಗಿರುವ ಇಸ್ರಾಯೇಲರ ಮೇಲೆ ರೆಹಬ್ಬಾಮನು ಆಳಿದನು.


ಆಗ ಇಸ್ರಾಯೇಲಿನ ಅರಸನಾದ ಬಾಷನು ಯೆಹೂದಕ್ಕೆ ವಿರೋಧವಾಗಿ ಬಂದು ಯೆಹೂದದ ಅರಸನಾದ ಆಸನ ಬಳಿಗೆ ಒಳಗಾಗಲೀ, ಹೊರಗಾಗಲೀ ಯಾರೂ ಹೋಗದ ಹಾಗೆ ಸುತ್ತಲೂ ರಾಮ ಎಂಬ ಕೋಟೆಯನ್ನು ಕಟ್ಟಿಸಿದನು.


ಬಾಳ್ ಶಾಲಿಷಾ ಊರಿನಿಂದ ಒಬ್ಬನು ದೇವರ ಮನುಷ್ಯನಿಗೆ ಪ್ರಥಮ ಫಲವಾದ ಜವೆಗೋಧಿಯ ಇಪ್ಪತ್ತು ರೊಟ್ಟಿಗಳನ್ನೂ ಒಂದು ಚೀಲ ತುಂಬಿದ ತೆನೆಗಳನ್ನೂ ತೆಗೆದುಕೊಂಡು ಬಂದನು. ಆಗ ಎಲೀಷನು, “ಜನರಿಗೆ ಕೊಡು ಅವರು ತಿನ್ನಲಿ,” ಎಂದನು.


ಆಸನ ಆಳ್ವಿಕೆಯ ಮೂವತ್ತಾರನೆಯ ವರ್ಷದಲ್ಲಿ ಇಸ್ರಾಯೇಲಿನ ಅರಸನಾದ ಬಾಷನು ಯೆಹೂದಕ್ಕೆ ವಿರೋಧವಾಗಿ ಬಂದು, ಯೆಹೂದದ ಅರಸನಾದ ಆಸನ ಬಳಿಗೆ ಒಳಗಾಗಲೀ, ಹೊರಗಾಗಲೀ ಯಾರೂ ಹೋಗದ ಹಾಗೆ ಸುತ್ತಲೂ ರಾಮ ಪಟ್ಟಣದ ಸುತ್ತಲೂ ಕೋಟೆಯನ್ನು ಕಟ್ಟಿಸಿದನು.


ಆಗ ಅವರು ಇಸ್ರಾಯೇಲಿನ ದೇವರಾದ ಯೆಹೋವ ದೇವರ ಪಸ್ಕವನ್ನು ಆಚರಿಸಲು ಯೆರೂಸಲೇಮಿನಲ್ಲಿ ಯೆಹೋವ ದೇವರ ಆಲಯಕ್ಕೆ ಬರುವಂತೆ ಹಿಜ್ಕೀಯನು ಸಮಸ್ತ ಇಸ್ರಾಯೇಲಿಗೂ ಯೆಹೂದಕ್ಕೂ ಹೇಳಿ ಕಳುಹಿಸಿ ಎಫ್ರಾಯೀಮ್ಯರಿಗೂ ಮನಸ್ಸೆಯವರಿಗೂ ಪತ್ರಗಳನ್ನು ಬರೆದನು.


‘ಯೆಹೋವ ದೇವರ ಹೊರೆ,’ ಎಂದು ಹೇಳಬೇಡಿ. ಹೇಳಿದರೆ ಯೆಹೋವ ದೇವರು ಇಂತೆನ್ನುತ್ತಾನೆ: ‘ನಾನು ನಿಮಗೆ, ಯೆಹೋವ ದೇವರು ಹೊರೆ,’ ಎಂಬ ಮಾತನ್ನು ಎತ್ತಲೇಕೂಡದೆಂದು ಹೇಳಿ ಕಳುಹಿಸಿದರೂ, ನೀವು ಎತ್ತಿದ್ದೀರಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು