Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಪೂರ್ವಕಾಲ ವೃತ್ತಾಂತ 1:12 - ಕನ್ನಡ ಸಮಕಾಲಿಕ ಅನುವಾದ

12 ಜ್ಞಾನ ಮತ್ತು ತಿಳುವಳಿಕೆಯನ್ನು ನಿನಗೆ ಕೊಡುತ್ತೇನೆ. ಇದಲ್ಲದೆ ನಿನಗಿಂತ ಮುಂಚೆ ಇದ್ದ ಅರಸರಲ್ಲಿ ಯಾರಿಗೂ ಇಲ್ಲದಂಥ ಮತ್ತು ನಿನ್ನ ತರುವಾಯ ಯಾರಿಗೂ ಇರದಂಥ ಐಶ್ವರ್ಯವನ್ನೂ, ಆಸ್ತಿಯನ್ನೂ, ಘನವನ್ನೂ ಕೊಡುತ್ತೇನೆ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಇದಲ್ಲದೆ ನಿನಗಿಂತ ಮೊದಲು ಇದ್ದ ಅರಸುಗಳಲ್ಲಿ ಯಾರಿಗೂ ಇಲ್ಲದಂಥ, ನಿನ್ನ ತರುವಾಯ ಯಾರಿಗೂ ಇರದಂಥ ಘನ, ಧನ, ಐಶ್ವರ್ಯಗಳನ್ನೂ ಅನುಗ್ರಹಿಸುವೆನು” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ಇದಲ್ಲದೆ, ನಾನು ನಿನಗೆ ಘನಧನೈಶ್ವರ್ಯಗಳನ್ನೂ ಅನುಗ್ರಹಿಸುತ್ತೇನೆ. ಇಂಥ ಘನಧನೈಶ್ವರ್ಯಗಳು ನಿನಗಿಂತ ಮೊದಲಿದ್ದ ಅರಸರಲ್ಲಿ ಯಾರಿಗೂ ಇರಲಿಲ್ಲ, ನಿನ್ನ ಅನಂತರದವರಿಗೂ ಇರುವುದಿಲ್ಲ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಇದಲ್ಲದೆ ನಾನು ನಿನಗೆ ಘನಧನೈಶ್ವರ್ಯಗಳನ್ನೂ ಅನುಗ್ರಹಿಸುತ್ತೇನೆ. ಇಂಥ ಘನಧನೈಶ್ವರ್ಯಗಳು ನಿನಗಿಂತ ಮೊದಲಿದ್ದ ಅರಸರಲ್ಲಿ ಯಾರಿಗೂ ಇರಲಿಲ್ಲ, ನಿನ್ನ ಅನಂತರದವರಿಗೂ ಇರುವದಿಲ್ಲ ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ನಾನು ನಿನಗೆ ಜ್ಞಾನವಿವೇಕಗಳನ್ನು ಕೊಡುವೆನು. ಅದರ ಜೊತೆಯಲ್ಲಿ ನಿನಗೆ ಐಶ್ವರ್ಯವನ್ನೂ ಘನತೆಯನ್ನೂ ದಯಪಾಲಿಸುವೆನು. ನಿನಗಿಂತ ಮುಂಚೆ ಇದ್ದ ಯಾವ ಅರಸನಿಗೂ ಇಂಥಾ ಐಶ್ವರ್ಯಗಳಾಗಲಿ ಘನತೆಯಾಗಲಿ ಇರಲಿಲ್ಲ. ಮತ್ತು ಇನ್ನು ಮುಂದೆಯೂ ಯಾವ ರಾಜನಿಗೂ ಇಂಥಾ ಘನತೆ ಮತ್ತು ಐಶ್ವರ್ಯಗಳಿರುವುದಿಲ್ಲ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಪೂರ್ವಕಾಲ ವೃತ್ತಾಂತ 1:12
10 ತಿಳಿವುಗಳ ಹೋಲಿಕೆ  

ನಿಮ್ಮಲ್ಲಿ ಯಾರಿಗಾದರೂ ಜ್ಞಾನ ಕಡಿಮೆಯಾಗಿದ್ದರೆ, ಅವರು ದೇವರನ್ನು ಕೇಳಿಕೊಳ್ಳಲಿ, ಅದು ಅವರಿಗೆ ದೊರಕುವುದು. ದೇವರು ತಪ್ಪು ಕಂಡುಹಿಡಿಯದೆ ಎಲ್ಲರಿಗೂ ಉದಾರಮನಸ್ಸಿನಿಂದ ಕೊಡುವರು.


ಹೀಗೆಯೇ ಅರಸನಾದ ಸೊಲೊಮೋನನು ಐಶ್ವರ್ಯದಲ್ಲಿಯೂ, ಜ್ಞಾನದಲ್ಲಿಯೂ ಭೂಲೋಕದ ಸಮಸ್ತ ಅರಸರಿಗಿಂತ ಮಿಗಿಲಾಗಿದ್ದನು.


ನೀವು ಮೊದಲು ದೇವರ ರಾಜ್ಯವನ್ನೂ ಅದರ ನೀತಿಯನ್ನೂ ಹುಡುಕಿರಿ. ಆಗ ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು.


ನಮ್ಮಲ್ಲಿ ಕಾರ್ಯಸಾಧಿಸುವ ತಮ್ಮ ಶಕ್ತಿಯ ಪ್ರಕಾರ ನಾವು ಬೇಡುವುದಕ್ಕಿಂತಲೂ ಯೋಚಿಸುವುದಕ್ಕಿಂತಲೂ ಅತ್ಯಧಿಕವಾಗಿಯೇ ಎಲ್ಲವನ್ನೂ ಮಾಡಲು ಶಕ್ತರಾದ ದೇವರಿಗೆ


ಇದಲ್ಲದೆ ಯೆಹೋವ ದೇವರು ಸಮಸ್ತ ಇಸ್ರಾಯೇಲಿನ ಸಮ್ಮುಖದಲ್ಲಿ ಸೊಲೊಮೋನನನ್ನು ಅಧಿಕವಾಗಿ ಹೆಚ್ಚಿಸಿ, ಇಸ್ರಾಯೇಲಿನಲ್ಲಿ ಅವನಿಗಿಂತ ಮುಂಚೆ ಇದ್ದ ಯಾವ ಅರಸನಿಗಾದರೂ ಇಲ್ಲದಂಥ ರಾಜ್ಯದ ವೈಭವವನ್ನು ಅವನಿಗೆ ಕೊಟ್ಟರು.


ಹೀಗೆ ಯೆರೂಸಲೇಮಿನಲ್ಲಿ ನನಗಿಂತ ಮುಂಚೆ ಇದ್ದ ಎಲ್ಲರಿಗಿಂತಲೂ ನಾನು ಹೆಚ್ಚು ಅಭಿವೃದ್ಧಿಹೊಂದಿ, ಶ್ರೀಮಂತನಾದೆನು. ಇದೆಲ್ಲದರಲ್ಲಿ ನನ್ನ ಜ್ಞಾನವು ನನ್ನಲ್ಲಿ ನೆಲೆಯಾಗಿತ್ತು.


ಐಶ್ವರ್ಯವೂ, ಘನವೂ ನಿಮ್ಮ ಬಳಿಯಿಂದ ಬರುತ್ತವೆ. ನೀವು ಸಮಸ್ತವನ್ನು ಆಳಿಕೆಮಾಡುವವರು. ಶಕ್ತಿಯೂ, ಪರಾಕ್ರಮವೂ ನಿಮ್ಮ ಕೈಯಲ್ಲಿ ಇವೆ. ಎಲ್ಲರಿಗೂ ಉನ್ನತಿಯನ್ನೂ, ಬಲವನ್ನೂ ಕೊಡುವುದು ನಿಮ್ಮ ಕೈಯಲ್ಲಿ ಇದೆ.


ಇಸ್ರಾಯೇಲಿನ ಅರಸನಾದ ಸೊಲೊಮೋನನು ಇಂತಹ ಮದುವೆಗಳಿಂದ ಪಾಪ ಮಾಡಿದನಲ್ಲವೇ? ಅನೇಕ ಜನಾಂಗಗಳಲ್ಲಿ ಅವನಿಗೆ ಸಮಾನನಾದ ಅರಸನು ಇರಲಿಲ್ಲ, ಅವನು ತನ್ನ ದೇವರಿಗೆ ವಿಶೇಷಪ್ರಿಯನಾಗಿದ್ದನು, ಆದ್ದರಿಂದಲೇ ದೇವರು ಅವನನ್ನು ಎಲ್ಲ ಇಸ್ರಾಯೇಲರ ಮೇಲೆ ಅರಸನನ್ನಾಗಿ ನೇಮಿಸಿದರು. ಆದರೂ ವಿದೇಶಿ ಸ್ತ್ರೀಯರು ಅವನನ್ನು ಕೂಡ ಪಾಪಮಾಡುವ ಹಾಗೆ ಮಾಡಿದರು.


ಮನುಷ್ಯನಿಗೆ ದೇವರು ಆಸ್ತಿಪಾಸ್ತಿಗಳನ್ನು ದಯಪಾಲಿಸಿ, ಅವುಗಳನ್ನು ಅನುಭವಿಸುವುದಕ್ಕೆ ಸಾಮರ್ಥ್ಯ ಕೊಟ್ಟಿದ್ದರೆ, ಅವನು ತನ್ನ ಪಾಲನ್ನು ತೆಗೆದುಕೊಂಡು, ತನ್ನ ಪ್ರಯಾಸದಲ್ಲಿ ಆನಂದಿಸುವುದೂ ದೇವರ ದಾನದಿಂದಲೇ.


ದೇವರು ಸೊಲೊಮೋನನ ಹೃದಯದಲ್ಲಿ ಕೊಟ್ಟಿದ್ದ ಜ್ಞಾನವನ್ನು ಕೇಳುವುದಕ್ಕಾಗಿ ಭೂಲೋಕದಲ್ಲಿರುವ ಸಮಸ್ತರೂ ಅವನ ದರ್ಶನವನ್ನು ಬಯಸಿದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು