Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಥೆಸಲೋನಿಕದವರಿಗೆ 3:13 - ಕನ್ನಡ ಸಮಕಾಲಿಕ ಅನುವಾದ

13 ಪ್ರಿಯರೇ, ನೀವಾದರೋ ಒಳ್ಳೆಯದನ್ನು ಮಾಡುವುದರಲ್ಲಿ ಬೇಸರಗೊಳ್ಳಬೇಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಸಹೋದರರೇ, ನೀವಾದರೋ ಒಳ್ಳೆಯದನ್ನು ಮಾಡುವುದರಲ್ಲಿ ಬೇಸರಗೊಳ್ಳಬೇಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ನೀವಾದರೋ ಸಹೋದರರೇ, ಸತ್ಕಾರ್ಯದ ಸಾಧನೆ ಸಾಕಾಯಿತೆಂದು ಹೇಳಿದಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ಸಹೋದರರೇ, ನೀವಾದರೋ ಒಳ್ಳೇದನ್ನು ಮಾಡುವದರಲ್ಲಿ ಬೇಸರಗೊಳ್ಳಬೇಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ಸಹೋದರ ಸಹೋದರಿಯರೇ, ಒಳ್ಳೆಯದನ್ನು ಮಾಡುವುದರಲ್ಲಿ ಎಂದಿಗೂ ಬೇಸರಗೊಳ್ಳಬೇಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

13 ಖರೆ ತುಮಿ ಮಾಜ್ಯಾ ಭಾವಾ-ಭೆನಿಯಾನು, ಬರಿ ಕಾಮಾ ಕರ್‍ತಲ್ಯಾತ್ ಕನ್ನಾಬಿ ಹಾರುನ್ ಜಾವ್‍ನಕಾಶಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಥೆಸಲೋನಿಕದವರಿಗೆ 3:13
17 ತಿಳಿವುಗಳ ಹೋಲಿಕೆ  

ನೀವು ಮನಗುಂದಿದವರಾಗಿ ಬೇಸರಗೊಳ್ಳದಂತೆ ಪಾಪಿಗಳಿಂದ ಎಷ್ಟೋ ವಿರೋಧವನ್ನು ಸಹಿಸಿಕೊಂಡ ಯೇಸುವನ್ನು ಕುರಿತು ನೀವು ಯೋಚಿಸಿರಿ.


ದೇವರ ಕರುಣೆಯ ನಿಮಿತ್ತ ನಾವು ಈ ಸೇವೆಯನ್ನು ಹೊಂದಿರುವುದರಿಂದ ನಾವು ಧೈರ್ಯಗೆಡುವವರಲ್ಲ.


ಆದ್ದರಿಂದ ನಾವು ಅಧೈರ್ಯಪಡುವುದಿಲ್ಲ. ನಮ್ಮ ಹೊರಗಿನ ಮನುಷ್ಯ ಕ್ಷಯಿಸುತ್ತಿದ್ದರೂ ನಮ್ಮ ಆಂತರ್ಯ ಮನುಷ್ಯ ಅನುದಿನವೂ ನೂತನವಾಗುತ್ತಿದೆ.


ನೀನು ತಾಳ್ಮೆಯಿಂದ ನನ್ನ ಹೆಸರಿನ ನಿಮಿತ್ತ ಬಾಧೆಯನ್ನು ಸಹಿಸಿಕೊಂಡು ಬೇಸರಗೊಳ್ಳಲಿಲ್ಲ.


ಒಬ್ಬ ತಂದೆ ಮಕ್ಕಳಾಗಿರುವ ನಿಮಗೆ ಎಚ್ಚರಿಸಲಾದ ಮಾತನ್ನು ನೀವು ಮರೆತಿದ್ದೀರಿ. ಅದು, “ನನ್ನ ಮಗನೇ, ಕರ್ತದೇವರ ಶಿಕ್ಷೆಯನ್ನು ಹಗುರವಾಗಿ ಎಣಿಸಬೇಡ. ಅವರು ನಿನ್ನನ್ನು ಗದರಿಸುವಾಗ ಬೇಸರಗೊಳ್ಳಬೇಡ.


ಪ್ರಿಯರೇ, ನೀವು ಹೇಗೆ ನಡೆದುಕೊಂಡು ದೇವರನ್ನು ಮೆಚ್ಚಿಸಬೇಕೆಂದು ನಮ್ಮಿಂದ ಕೇಳಿದಂತೆಯೇ ಜೀವಿಸುತಿರುವಿರಿ. ಇದರಲ್ಲಿ ನೀವು ಹೆಚ್ಚೆಚ್ಚಾಗಿ ಮಾಡಬೇಕೆಂದು ನಾವು ಕಡೆಯದಾಗಿ ನಮಗೆ ಕರ್ತ ಆಗಿರುವ ಯೇಸುವಿನಲ್ಲಿ ನಿಮ್ಮನ್ನು ಪ್ರಬೋಧಿಸುತ್ತೇವೆ ಮತ್ತು ಉತ್ತೇಜಿಸುತ್ತೇವೆ.


ನಿರಾಶರಾಗದೆ ಯಾವಾಗಲೂ ಪ್ರಾರ್ಥಿಸಬೇಕೆಂದು ಯೇಸು ತಮ್ಮ ಶಿಷ್ಯರಿಗೆ ಒಂದು ಸಾಮ್ಯವನ್ನು ಹೇಳಿದರು.


ಆ ದಿವಸದಲ್ಲಿ ಯೆರೂಸಲೇಮಿಗೆ ಹೀಗೆಂದು ಹೇಳುವರು, “ಚೀಯೋನೇ, ನೀನು ಭಯಪಡಬೇಡ; ನಿನ್ನ ಕೈಗಳು ಬಲಹೀನವಾಗದಿರಲಿ.


ಇದೊಂದು ನನ್ನ ಭರವಸೆಯಾಗಿರುವುದು: ನಾನಂತೂ ಯೆಹೋವ ದೇವರ ಒಳಿತನ್ನು ಜೀವಿತರ ದೇಶದಲ್ಲಿ ಕಾಣುವೆನು.


ನಿಮ್ಮ ಪ್ರೀತಿಯು ಹೆಚ್ಚುತ್ತಾ ಜ್ಞಾನದಲ್ಲಿಯೂ ಒಳನೋಟದಲ್ಲಿಯೂ ಬಹು ಹೆಚ್ಚಾಗಿ ಸಮೃದ್ಧಿಯಾಗಲಿ.


ಯಾರು ಮಹಿಮೆ, ಮಾನ, ಅಮರತ್ವ ಸತ್ಕ್ರಿಯೆಗಳನ್ನು ಸಹನೆಯಿಂದ ಮಾಡುತ್ತಾರೋ ಅವರಿಗೆ ದೇವರು ನಿತ್ಯಜೀವವನ್ನು ಕೊಡುವರು.


ಇದಲ್ಲದೆ ನೀವು, ‘ಎಂಥಾ ಭಾರ,’ ಎಂದು ಹೇಳಿ, ನೀವು ಅದನ್ನು ತಿರಸ್ಕಾರದಿಂದ ಊದಿಬಿಟ್ಟಿರಿ,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ. “ಗಾಯವಾದದ್ದನ್ನೂ, ಕುಂಟಾದ ರೋಗವುಳ್ಳ ಪಶುವನ್ನೂ ನನಗೆ ಬಲಿಯಾಗಿ ಅರ್ಪಿಸುತ್ತೀರಿ. ನಾನು ಇದನ್ನು ನಿಮ್ಮ ಕೈಯಿಂದ ಅಂಗೀಕರಿಸಬಹುದೋ?” ಎಂದು ಯೆಹೋವ ದೇವರು ಹೇಳುತ್ತಾರೆ.


ಇದಲ್ಲದೆ ಅಧಿಕಾರಿಗಳು ಮಾತನಾಡಿ, “ಯಾವನಾದರೂ ಯುದ್ಧಕ್ಕೆ ಭಯಪಟ್ಟು ಅಂಜಿಕೊಂಡರೆ, ಅಂಥವನು ಮನೆಗೆ ಹೋಗಲಿ. ಅವನನ್ನು ನೋಡಿ ಬೇರೆಯವರೂ ಹೆದರಿಕೊಳ್ಳುವ ಅವಕಾಶವಿದೆ,” ಎಂದು ಹೇಳಬೇಕು.


ಸಮಸ್ತವೂ ಅವರಿಗೆ ಅಧೀನವಾದ ಮೇಲೆ, ಮಗನೂ ಸಹ ಸಮಸ್ತವನ್ನೂ ತನಗೆ ಅಧೀನಮಾಡಿಕೊಟ್ಟ ದೇವರಿಗೆ ತಾವೇ ಅಧೀನರಾಗುವರು. ಹೀಗೆ ದೇವರು ಸಮಸ್ತರಲ್ಲಿಯೂ ಸಮಸ್ತವೂ ಆಗಿದ್ದಾರೆ.


ಆದರೂ ಅಂಥವರನ್ನು ವೈರಿಯೆಂದು ಎಣಿಸದೆ, ಜೊತೆ ವಿಶ್ವಾಸಿಯೆಂದು ಭಾವಿಸಿ ಬುದ್ಧಿಹೇಳಿರಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು