Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಥೆಸಲೋನಿಕದವರಿಗೆ 1:11 - ಕನ್ನಡ ಸಮಕಾಲಿಕ ಅನುವಾದ

11 ನಮ್ಮ ದೇವರು ನೀಡಿರುವ ಕರೆಯುವಿಕೆಗೆ ನಿಮ್ಮನ್ನು ಯೋಗ್ಯರೆಂದು ಎಣಿಸಿ, ಒಳಿತನ್ನು ಮಾಡಲು ನಿಮ್ಮ ಎಲ್ಲಾ ಇಷ್ಟಾರ್ಥವನ್ನೂ ವಿಶ್ವಾಸದಿಂದ ಆಗಿರುವ ನಿಮ್ಮ ಎಲ್ಲಾ ಕಾರ್ಯಗಳನ್ನೂ ದೇವರು ತಮ್ಮ ಶಕ್ತಿಯಿಂದ ಪರಿಪೂರ್ಣಗೊಳಿಸುವಂತೆ ನಾವು ಯಾವಾಗಲೂ ನಿಮಗೋಸ್ಕರ ಪ್ರಾರ್ಥನೆ ಮಾಡುತ್ತೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಆದುದರಿಂದ ನಿಮಗೋಸ್ಕರ ಯಾವಾಗಲೂ ಪ್ರಾರ್ಥನೆಮಾಡಿ, ನಮ್ಮ ದೇವರು ನಿಮ್ಮನ್ನು ಕರೆದದ್ದಕ್ಕೆ ತಾನೇ ನಿಮ್ಮನ್ನು ಯೋಗ್ಯರೆಂದು ಎಣಿಸಬೇಕೆಂತಲೂ, ಸತ್ಕ್ರಿಯೆಗಳಿಗಾಗಿರುವ ನಿಮ್ಮ ಸಕಲ ಆಸೆಗಳನ್ನೂ, ನಂಬಿಕೆಯ ಫಲವಾದ ನಿಮ್ಮ ಕೆಲಸವನ್ನೂ ಶಕ್ತಿಪೂರ್ವಕವಾಗಿ ಈಡೇರಿಸಬೇಕೆಂತಲೂ ಬೇಡಿಕೊಳ್ಳುತ್ತೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 ಇದಕ್ಕಾಗಿ ನಿಮಗೋಸ್ಕರ ನಾವು ಸದಾ ಪ್ರಾರ್ಥಿಸುತ್ತೇವೆ. ದೇವರೇ ನೀಡಿರುವ ಕರೆಗೆ ನೀವು ಯೋಗ್ಯರಾಗಿ ಬಾಳುವಂತಾಗಲಿ; ದೇವರ ಮಹಿಮಾಶಕ್ತಿಯಿಂದ ನಿಮ್ಮ ಶುಭಾಕಾಂಕ್ಷೆಗಳು ಮತ್ತು ವಿಶ್ವಾಸಪ್ರೇರಿತ ಕಾರ್ಯಗಳು ಪೂರ್ಣವಾಗಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಆ ದಿನವನ್ನು ನಾವು ಎದುರುನೋಡುತ್ತಾ ನಿಮಗೋಸ್ಕರ ಯಾವಾಗಲೂ ಪ್ರಾರ್ಥನೆಮಾಡಿ - ನಮ್ಮ ದೇವರು ನಿಮ್ಮನ್ನು ಕರೆದದ್ದಕ್ಕೆ ತಾನೇ ನಿಮ್ಮನ್ನು ಯೋಗ್ಯರೆಂದು ಎಣಿಸಬೇಕೆಂತಲೂ ಸತ್ಕ್ರಿಯೆಗಳಲ್ಲಿ ಸಂತೋಷಿಸುವ ನಿಮ್ಮ ಸಕಲ ಆಲೋಚನೆಯನ್ನೂ ನಂಬಿಕೆಯ ಫಲವಾದ ನಿಮ್ಮ ಕೆಲಸವನ್ನೂ ಶಕ್ತಿಪೂರ್ವಕವಾಗಿ ಸಿದ್ಧಿಗೆ ತರಬೇಕೆಂತಲೂ ಬೇಡಿಕೊಳ್ಳುತ್ತೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ಆದಕಾರಣವೇ ಯಾವಾಗಲೂ ನಿಮಗಾಗಿ ಪ್ರಾರ್ಥಿಸುತ್ತೇವೆ. ಯಾವ ಒಳ್ಳೆಯ ಮಾರ್ಗದಲ್ಲಿ ನೀವು ಜೀವಿಸಬೇಕೆಂದು ದೇವರು ನಿಮ್ಮನ್ನು ಕರೆದನೋ, ಆ ಮಾರ್ಗದಲ್ಲೇ ನೀವು ಜೀವಿಸಲಿಕ್ಕಾಗುವಂತೆ ಪ್ರಾರ್ಥಿಸುತ್ತೇವೆ. ನಿಮ್ಮಲ್ಲಿರುವ ಒಳ್ಳೆಯ ತನವು ಒಳ್ಳೆಯದನ್ನು ಮಾಡುವಂತೆ ನಿಮ್ಮನ್ನು ಪ್ರೇರೇಪಿಸುತ್ತದೆ. ನಿಮ್ಮಲ್ಲಿರುವ ನಂಬಿಕೆಯು ನಿಮ್ಮಿಂದ ಕಾರ್ಯ ಸಾಧಿಸುತ್ತದೆ. ಈ ಕಾರ್ಯಗಳನ್ನು ನೀವು ಹೆಚ್ಚುಹೆಚ್ಚಾಗಿ ಮಾಡಲು ದೇವರು ತನ್ನ ಶಕ್ತಿಯಿಂದ ನಿಮಗೆ ಸಹಾಯ ಮಾಡಲೆಂದು ಬೇಡಿಕೊಳ್ಳುತ್ತೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

11 ತೆಚೆಸಾಟ್ನಿ, ಅಮಿ ಕನ್ನಾಬಿ ತುಮ್ಚ್ಯಾಸಾಟ್ನಿ ಮಾಗ್ನಿ ಕರುನ್ಗೆತುಚ್ ರ್‍ಹಾತಾಂವ್. ಖಚ್ಚ್ಯಾ ಬರ್‍ಯಾ ವಾಟೆನ್ ತುಮಿ ಚಲುಚೆ ಮನುನ್ ದೆವಾನ್ ತುಮ್ಕಾ ಬಲ್ವುಲ್ಯಾನಾಯ್ ತಸೆ ತುಮಿ ಜಿವನ್ ಕರುಕ್ ಹೊಂವ್ದಿ ಮನುನ್ ಅಮಿ ಮಾಗ್ತಾಂವ್. ಅಪ್ನಾಚ್ಯಾ ತಾಕ್ತಿನ್ ತೊ ತುಮ್ಚಿ ಸಗ್ಳೆ ಬರ್ಯಾಪಾನಾಚಿ ಉದ್ದೆಸಾ ಪುರಾ ಕರುಂದಿತ್, ಅನಿ ತುಮ್ಚೆ ವಿಶ್ವಾಸಾಚೆ ಕಾಮ್ ಪುರಾ ಕರುಂದಿತ್ ಮನುನ್ ಮಾಗ್ತಾಂವ್.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಥೆಸಲೋನಿಕದವರಿಗೆ 1:11
41 ತಿಳಿವುಗಳ ಹೋಲಿಕೆ  

ಏಕೆಂದರೆ, ತಮ್ಮ ಸದುದ್ದೇಶವನ್ನು ನೆರವೇರಿಸುವಂತೆ ನಿಮ್ಮಲ್ಲಿ ಬಯಕೆಯನ್ನೂ ಕಾರ್ಯಸಾಧನೆಯನ್ನೂ ನಿರ್ಮಿಸುವವರು ದೇವರೇ.


ನಿಮ್ಮ ವಿಶ್ವಾಸ ಪ್ರಕಟಿಸುವ ಕ್ರಿಯೆಯನ್ನೂ ಪ್ರೀತಿ ಪ್ರೇರಿತ ಪ್ರಯಾಸವನ್ನೂ ನಮಗೆ ಕರ್ತ ಆಗಿರುವ ಯೇಸು ಕ್ರಿಸ್ತರಲ್ಲಿರುವ ನಿರೀಕ್ಷೆಯ ಸ್ಮರಣೆಯನ್ನೂ ನಾವು ನಮ್ಮ ತಂದೆಯಾದ ದೇವರ ಮುಂದೆ ಎಡಬಿಡದೆ ಜ್ಞಾಪಿಸಿಕೊಳ್ಳುತ್ತೇವೆ.


ನೀವು ಯಾವ ದೇವರ ರಾಜ್ಯಕ್ಕಾಗಿ ಕಷ್ಟವನ್ನು ಅನುಭವಿಸುತ್ತಿರುವಿರೋ, ಆ ರಾಜ್ಯಕ್ಕಾಗಿ ನೀವು ಯೋಗ್ಯರೆಂದು ಎಣಿಕೆಯಾಗಲು ಇದು ದೇವರ ನೀತಿಯುಳ್ಳ ನ್ಯಾಯತೀರ್ಪಿಗೆ ಸ್ಪಷ್ಟವಾದ ನಿದರ್ಶನವಾಗಿದೆ.


ನಮ್ಮಲ್ಲಿ ನಂಬಿಕೆಯನ್ನು ಹುಟ್ಟಿಸುವವರೂ ಅದನ್ನು ಪರಿಪೂರ್ಣಗೊಳಿಸುವವರೂ ಆಗಿರುವ ಯೇಸುವಿನ ಮೇಲೆ ದೃಷ್ಟಿಯಿಟ್ಟು, ನಮ್ಮ ಮುಂದೆ ಇಟ್ಟಿರುವ ಓಟವನ್ನು ಸಹನೆಯಿಂದ ಓಡೋಣ. ಯೇಸು ತಮ್ಮ ಮುಂದೆ ಇಟ್ಟಿದ್ದ ಸಂತೋಷಕ್ಕಾಗಿ ಶಿಲುಬೆಯನ್ನು ಸಹಿಸಿಕೊಂಡು ಅವಮಾನವನ್ನು ಅಲಕ್ಷ್ಯಮಾಡಿ, ಈಗ ದೇವರ ಸಿಂಹಾಸನದ ಬಲಗಡೆಯಲ್ಲಿ ಆಸೀನರಾಗಿದ್ದಾರೆ.


ನಾವು ನಿಮಗೆ ತಿಳಿಸಿದ ಸುವಾರ್ತೆಯ ಮೂಲಕವಾಗಿ, ನೀವು ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ಮಹಿಮೆಯನ್ನು ಸಂಪಾದಿಸಿಕೊಳ್ಳಬೇಕೆಂದು ದೇವರು ನಿಮ್ಮನ್ನು ಈ ಆಯ್ಕೆಗಾಗಿ ಕರೆದರು.


ದೇವರು ತಮ್ಮ ಚಿತ್ತದ ಸಂತೋಷಕ್ಕನುಸಾರವಾಗಿ ಕ್ರಿಸ್ತ ಯೇಸುವಿನ ಮೂಲಕ ನಮ್ಮನ್ನು ತಮಗೋಸ್ಕರ ತಮ್ಮ ಪುತ್ರರಾಗಿ ಸ್ವೀಕಾರ ಮಾಡುವಂತೆ ಮೊದಲೇ ನೇಮಿಸಿದರು.


ಆದರೆ ದೇವರು ಯಾರನ್ನು ಮುಂದಾಗಿ ನೇಮಿಸಿದರೋ, ಅವರನ್ನು ಕರೆದರು; ಯಾರನ್ನು ಕರೆದರೋ, ಅವರನ್ನು ನೀತಿವಂತರೆಂದು ನಿರ್ಣಯಿಸಿದರು; ಯಾರನ್ನು ನೀತಿವಂತರೆಂದು ನಿರ್ಣಯಿಸಿದರೋ ಅವರನ್ನು ಮಹಿಮೆಪಡಿಸಿದರು.


“ಚಿಕ್ಕ ಹಿಂಡೇ, ಭಯಪಡಬೇಡ, ಏಕೆಂದರೆ ನಿಮ್ಮ ತಂದೆಯು ತಮ್ಮ ರಾಜ್ಯವನ್ನು ನಿಮಗೆ ಕೊಡುವುದಕ್ಕೆ ಮೆಚ್ಚಿದ್ದಾರೆ.


ಒಳ್ಳೆಯ ಕೆಲಸಗಳನ್ನು ನಿಮ್ಮಲ್ಲಿ ಪ್ರಾರಂಭಿಸಿದ ದೇವರು ಅದನ್ನು ಕ್ರಿಸ್ತ ಯೇಸುವಿನ ಪುನರಾಗಮನ ದಿನದವರೆಗೆ ಪೂರೈಸುವರು ಎಂಬುದೇ ನನ್ನ ದೃಢ ವಿಶ್ವಾಸವಾಗಿದೆ.


ಯೆಹೋವ ದೇವರು ನನ್ನ ನ್ಯಾಯವನ್ನು ಸಿದ್ಧಿಗೆ ತರುತ್ತಾರೆ; ಯೆಹೋವ ದೇವರೇ, ನಿಮ್ಮ ಪ್ರೀತಿಯು ಎಂದೆಂದಿಗೂ ಇರುವುದು; ನಿಮ್ಮ ಕೈಕೆಲಸಗಳನ್ನು ನೆರವೇರಿಸಿರಿ.


ನಿಮ್ಮ ಮೆಚ್ಚುಗೆಯಿಂದ ಚೀಯೋನಿಗೆ ಸಮೃದ್ಧಿಯನ್ನು ನೀಡಿರಿ, ಯೆರೂಸಲೇಮಿನ ಗೋಡೆಗಳನ್ನು ಕಟ್ಟಿರಿ.


ಅವರನ್ನು ನಮ್ಮ ದೇವರಿಗೋಸ್ಕರ ರಾಜ್ಯವನ್ನಾಗಿಯೂ ಯಾಜಕರನ್ನಾಗಿಯೂ ಮಾಡಿದಿರಿ, ಅವರು ಭೂಮಿಯ ಮೇಲೆ ಆಳುವರು!” ಎಂದು ಹೇಳಿದರು.


ಆದರೂ ತಮ್ಮ ವಸ್ತ್ರಗಳನ್ನು ಮೈಲಿಗೆ ಮಾಡಿಕೊಳ್ಳದಿರುವ ಕೆಲವು ಜನರು ಸಾರ್ದಿಸಿ ಪಟ್ಟಣದಲ್ಲಿ ಇದ್ದಾರೆ, ಅವರು ಯೋಗ್ಯರಾಗಿರುವುದರಿಂದ ಬಿಳಿವಸ್ತ್ರಗಳನ್ನು ಧರಿಸಿಕೊಂಡು ನನ್ನ ಜೊತೆಯಲ್ಲಿ ನಡೆಯುವರು.


ಕ್ರಿಸ್ತ ಯೇಸುವಿನ ಮೂಲಕ ನಿಮ್ಮನ್ನು ತಮ್ಮ ನಿತ್ಯ ಪ್ರಭಾವಕ್ಕೆ ಕರೆದ ಕೃಪಾಪೂರ್ಣ ಆಗಿರುವ ದೇವರು ನೀವು ಸ್ವಲ್ಪಕಾಲ ಬಾಧೆಪಟ್ಟ ಮೇಲೆ ತಾವೇ ನಿಮ್ಮನ್ನು ಪರಿಪೂರ್ಣಮಾಡಿ, ಸ್ಥಿರಪಡಿಸಿ, ಬಲಪಡಿಸಿ ನೆಲೆಗೊಳಿಸುವರು.


ಆದ್ದರಿಂದ ಪರಿಶುದ್ಧರಾದ ಪ್ರಿಯರೇ, ಪರಲೋಕದ ಕರೆಯುವಿಕೆಯಲ್ಲಿ ಪಾಲುಗಾರರೇ, ನಾವು ಅರಿಕೆಮಾಡುವ ಅಪೊಸ್ತಲರೂ ಮಹಾಯಾಜಕರೂ ಆಗಿರುವ ಯೇಸುವನ್ನೇ ಆಲೋಚಿಸಿರಿ.


ಹೀಗೆ ನಾನು ಕ್ರಿಸ್ತ ಯೇಸುವಿನಲ್ಲಿ ದೇವರ ಸ್ವರ್ಗೀಯ ಕರೆಯ ಬಹುಮಾನದ ಗುರಿಯೆಡೆಗೆ ಮುಂದೆ ಸಾಗುತ್ತಾ ಇದ್ದೇನೆ.


ನನ್ನ ಪ್ರಾರ್ಥನೆಗಳಲ್ಲಿ ನಿಮಗಾಗಿ ವಿಜ್ಞಾಪಿಸಿ, ನಿಮ್ಮ ನಿಮಿತ್ತವಾಗಿ ಎಡಬಿಡದೆ ಸ್ತೋತ್ರ ಮಾಡುತ್ತೇನೆ.


ದೇವರು ಕ್ರಿಸ್ತನಲ್ಲಿ ಉದ್ದೇಶಮಾಡಿಕೊಂಡ ತಮ್ಮ ಚಿತ್ತದ ರಹಸ್ಯವನ್ನು ಸಂತೋಷದಿಂದ ನಮಗೆ ಪ್ರಕಟಿಸಿದರು,


ದೇವಪುತ್ರನ ಸುವಾರ್ತೆಯನ್ನು ಸಾರುವುದರಿಂದ ದೇವರನ್ನೇ ನನ್ನ ಆತ್ಮದಲ್ಲಿ ಸೇವೆ ಮಾಡುವವನಾಗಿದ್ದೇನೆ. ಇದಕ್ಕೆ ದೇವರೇ ನನ್ನ ಸಾಕ್ಷಿ.


ಭೂಮಿಯು ಮೊದಲು ಸಸಿಯನ್ನು ಆಮೇಲೆ ಹೊಡೆಯನ್ನು ಅನಂತರ ತೆನೆಯ ತುಂಬಾ ಕಾಳನ್ನು ತನ್ನಷ್ಟಕ್ಕೆ ತಾನೇ ಬೆಳೆಸುತ್ತದೆ.


“ಪರಾಕ್ರಮದ ಬೆಟ್ಟವೇ, ನೀನ್ಯಾರು? ಜೆರುಬ್ಬಾಬೆಲನ ಮುಂದೆ ಬಯಲಾಗುವೆ. ಅವನು ಕಲಶದ ಕಲ್ಲನ್ನು ಸ್ಥಾಪಿಸಿ, ‘ದೇವರು ಇದನ್ನು ಆಶೀರ್ವದಿಸಲಿ! ದೇವರು ಇದನ್ನು ಆಶೀರ್ವದಿಸಲಿ!’ ಎಂದು ಘೋಷಿಸುವನು.”


ನಾವು ಯೆಹೋವ ದೇವರನ್ನು ತಿಳಿದುಕೊಳ್ಳಲು, ಅವರನ್ನು ಹಿಂಬಾಲಿಸಿದರೆ ತಿಳಿದುಕೊಳ್ಳುವೆವು. ಅವರ ಆಗಮನವು ಅರುಣೋದಯದಂತೆ ನಿಶ್ಚಯ. ಅವರು ಮಳೆಯಂತೆಯೂ ಮುಂಗಾರಿನಂತೆಯೂ, ಭೂಮಿಯನ್ನು ತಂಪು ಮಾಡುವ ಹಿಂಗಾರಿನಂತೆಯೂ ಬಳಿಗೆ ಬರುವರು.


ನಾನು ಪ್ರಸವಕ್ಕೆ ತಂದಮೇಲೆ ಹೆರಿಗೆಯಾಗದಂತೆ ತಡೆಯುವೆನೋ?” ಎಂದು ಯೆಹೋವ ದೇವರು ಹೇಳುತ್ತಾನೆ. “ನಾನು ಪ್ರಸವಕ್ಕೆ ತಂದಮೇಲೆ, ಪ್ರಸವವಾಗದೆ ಇರಲು ಗರ್ಭ ಮುಚ್ಚಿಬಿಡುವೆನೇ?” ಎಂದು ನಿನ್ನ ದೇವರು ಕೇಳುತ್ತಾನೆ.


ಆ ದಿನದಲ್ಲಿ ಜನರು, “ಇಗೋ, ಇವರೇ ನಮ್ಮ ದೇವರು, ನಾವು ಇವರನ್ನೇ ನಂಬಿದ್ದೇವೆ. ಇವರೇ ನಮ್ಮನ್ನು ರಕ್ಷಿಸುವರು. ಇವರೇ ಯೆಹೋವ ದೇವರು, ನಾವು ಇವರನ್ನೇ ನಂಬಿದ್ದೇವೆ, ನಾವು ಇವರ ರಕ್ಷಣೆಯಲ್ಲಿ ಹರ್ಷಿಸಿ ಸಂತೋಷಪಡುವೆವು,” ಎಂದು ಹೇಳುವರು.


ನೀತಿವಂತರ ಮಾರ್ಗವು ಮುಂಜಾನೆಯ ಸೂರ್ಯನ ಬೆಳಕಿನಂತೆ ಇದ್ದು, ದಿನದ ಪೂರ್ಣ ಬೆಳಕಿನವರೆಗೂ ಪ್ರಕಾಶಿಸಿ ಹೊಳೆಯುತ್ತಾ ಇರುವುದು.


ನಮ್ಮ ದೇವರು ರಕ್ಷಣೆಯ ದೇವರಾಗಿದ್ದಾರೆ. ಸಾರ್ವಭೌಮ ಯೆಹೋವ ದೇವರು ಮರಣದಿಂದ ಬಿಡುಗಡೆ ಮಾಡುತ್ತಾರೆ.


ಏಕೆಂದರೆ, ಈ ದೇವರು ಯುಗಯುಗಾಂತರಗಳಿಗೂ ನಮ್ಮ ದೇವರಾಗಿದ್ದಾರೆ; ಅವರು ಅಂತ್ಯದವರೆಗೂ ನಮ್ಮ ಮಾರ್ಗದರ್ಶಿಯಾಗಿರುವರು.


ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ದಿನದಲ್ಲಿ ನೀವು ನಿರ್ದೋಷಿಗಳಾಗಿರುವಂತೆ ಅವರು ಕೊನೆಯತನಕವೂ ನಿಮ್ಮನ್ನು ಬಲಪಡಿಸಿ ಕಾಯುವರು.


ಒಂದು ವೇಳೆ ಹಾಗೆ ಇದ್ದರೆ, ನಿಶ್ಚಯವಾಗಿ ನಾವು ಆರಾಧಿಸುವ ನಮ್ಮ ದೇವರು ಉರಿಯುವ ಬೆಂಕಿಯ ಕುಲುಮೆಯೊಳಗಿಂದ ನಮ್ಮನ್ನು ತಪ್ಪಿಸಲು ಸಮರ್ಥರಾಗಿದ್ದಾರೆ. ಅರಸನೇ, ನಿನ್ನ ಕೈಯಿಂದಲೂ ನಮ್ಮನ್ನು ತಪ್ಪಿಸುವರು.


ದುಷ್ಟನು ತನ್ನ ದುರ್ಮಾರ್ಗವನ್ನೂ, ಅನೀತಿವಂತನು ತನ್ನ ಆಲೋಚನೆಗಳನ್ನೂ ತೊರೆದುಬಿಟ್ಟು, ಯೆಹೋವ ದೇವರ ಕಡೆಗೆ ಹಿಂದಿರುಗಲಿ. ಅವರು ಅವರ ಮೇಲೆ ಕರುಣೆ ಇಡುವರು. ನಮ್ಮ ದೇವರ ಬಳಿಗೂ ಹಿಂದಿರುಗಲಿ. ಏಕೆಂದರೆ ಅವರು ಹೇರಳವಾಗಿ ಕ್ಷಮಿಸುವರು.


ದೇವರು ಕೊಡುವ ವರಗಳನ್ನು, ಕರೆಗಳನ್ನು ಅವರು ಎಂದಿಗೂ ಹಿಂತೆಗೆದುಕೊಳ್ಳುವವರಲ್ಲ.


ನನ್ನ ಪ್ರಿಯರೇ, ನೀವು ಒಳ್ಳೆಯತನದಿಂದ ಪೂರ್ಣವಾದವರೂ ಸಕಲ ತಿಳುವಳಿಕೆಯಿಂದ ತುಂಬಿದವರೂ ಆಗಿದ್ದು, ಒಬ್ಬರಿಗೊಬ್ಬರು ಬುದ್ಧಿ ಹೇಳುವುದಕ್ಕೆ ಶಕ್ತರಾಗಿದ್ದೀರೆಂದು ನಿಮ್ಮ ಬಗ್ಗೆ ನನಗೆ ಭರವಸೆ ಇದೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು