Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ತಿಮೊಥೆಯನಿಗೆ 4:7 - ಕನ್ನಡ ಸಮಕಾಲಿಕ ಅನುವಾದ

7 ನಾನು ಒಳ್ಳೆಯ ಹೋರಾಟವನ್ನು ಮಾಡಿದ್ದೇನೆ. ನಾನು ಓಟವನ್ನು ಮುಗಿಸಿದ್ದೇನೆ. ನಾನು ವಿಶ್ವಾಸವನ್ನು ಕಾಪಾಡಿಕೊಂಡಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಶ್ರೇಷ್ಠ ಹೋರಾಟವನ್ನು ಮಾಡಿದ್ದೇನೆ, ನನ್ನ ಓಟವನ್ನು ಓಡಿಮುಗಿಸಿದ್ದೇನೆ, ಕ್ರಿಸ್ತ ನಂಬಿಕೆಯನ್ನು ಕಾಪಾಡಿಕೊಂಡಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

7 ಬಾಳಿನ ಸ್ಪರ್ಧೆಯಲ್ಲಿ ಭಾಗವಹಿಸಿದ್ದೇನೆ. ನನ್ನ ಓಟವನ್ನು ಮುಗಿಸಿದ್ದೇನೆ. ವಿಶ್ವಾಸವನ್ನು ಕಾಪಾಡಿಕೊಂಡಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ಶ್ರೇಷ್ಠ ಹೋರಾಟವನ್ನು ಮಾಡಿದ್ದೇನೆ, ನನ್ನ ಓಟವನ್ನು ಕಡೆಗಾಣಿಸಿದ್ದೇನೆ, ಕ್ರಿಸ್ತನಂಬಿಕೆಯನ್ನು ಕಾಪಾಡಿಕೊಂಡಿದ್ದೇನೆ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ಶ್ರೇಷ್ಠ ಹೋರಾಟವನ್ನು ಮಾಡಿದ್ದೇನೆ. ಪಂದ್ಯದಲ್ಲಿ ನನ್ನ ಓಟವನ್ನು ಮುಗಿಸಿದ್ದೇನೆ; ನನ್ನ ನಂಬಿಕೆಯನ್ನು ಕಾಪಾಡಿಕೊಂಡಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

7 ಮಿಯಾ ಮಾಜ್ಯಾ ಶರ್ತಿತ್ ಬರೆ ಕರುನ್ ಪಳಾಲಾ, ಮಾಜೆ ಪಳಾಪ್ ಮಿಯಾ ಪಳುನ್ ಸಾರ್ಲಾ ಅನಿ ಮಾಜೊ ವಿಶ್ವಾಸ್ ಮಿಯಾ ಖಡ್ತರ್‍ಪಾನಾನ್ ಸಂಬಾಳುನ್ ಥವ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ತಿಮೊಥೆಯನಿಗೆ 4:7
22 ತಿಳಿವುಗಳ ಹೋಲಿಕೆ  

ವಿಶ್ವಾಸದ ಒಳ್ಳೆಯ ಹೋರಾಟವನ್ನು ಮಾಡು. ನಿತ್ಯಜೀವವನ್ನು ಹಿಡಿದುಕೋ; ಅದಕ್ಕಾಗಿಯೇ ದೇವರು ನಿನ್ನನ್ನು ಕರೆದಿದ್ದಾರೆ. ನೀನು ಅನೇಕ ಸಾಕ್ಷಿಗಳ ಮುಂದೆ ಒಳ್ಳೆಯ ಅರಿಕೆಯನ್ನು ಮಾಡಿದ್ದೀಯಲ್ಲಾ?


ಆದರೂ ನನ್ನ ಪ್ರಾಣ ನನಗೆ ಅಮೂಲ್ಯವೆಂದು ನಾನು ಎಣಿಸುವುದಿಲ್ಲ. ಕರ್ತ ಯೇಸು ನನಗೆ ಕೊಟ್ಟ, ದೇವರ ಕೃಪೆಯ ಸುವಾರ್ತೆಗೆ ಸಾಕ್ಷಿ ಕೊಡುವ ಸೇವೆಯ ಓಟವನ್ನು ಓಡಿ ಮುಗಿಸುವುದೇ ನನ್ನ ಬಾಳಿನ ಒಂದೇ ಗುರಿಯಾಗಿದೆ.


ಯೇಸು ಅವರಿಗೆ, “ನನ್ನನ್ನು ಕಳುಹಿಸಿದ ತಂದೆಯ ಚಿತ್ತವನ್ನು ಮಾಡಿ ಅವರ ಕೆಲಸವನ್ನು ಪೂರೈಸುವುದೇ ನನ್ನ ಆಹಾರ.


ಅದಕ್ಕೆ ಯೇಸು, “ಅದಕ್ಕಿಂತಲೂ ದೇವರ ವಾಕ್ಯವನ್ನು ಕೇಳಿ, ಅದನ್ನು ಅನುಸರಿಸುವವರು ಹೆಚ್ಚು ಭಾಗ್ಯವಂತರು,” ಎಂದರು.


ನಾನು ನಿನ್ನ ಕ್ರಿಯೆಗಳನ್ನು ಬಲ್ಲೆನು. ನಿನ್ನ ಶಕ್ತಿಯು ಸ್ವಲ್ಪವೇ ಆಗಿದ್ದರೂ ನೀನು ನನ್ನ ಹೆಸರನ್ನು ನಿರಾಕರಿಸದೆ, ನನ್ನ ವಾಕ್ಯವನ್ನು ಕಾಪಾಡಿಕೊಂಡಿದ್ದರಿಂದ, ನಿನ್ನೆದುರಿನಲ್ಲಿ ಒಂದು ದ್ವಾರವನ್ನು ತೆರೆದಿಟ್ಟಿದ್ದೇನೆ, ಅದನ್ನು ಯಾರೂ ಮುಚ್ಚಲಾರರು.


ನೀನು ನನ್ನ ವಾಕ್ಯವನ್ನು ಸಹನೆಯಿಂದ ಕಾಪಾಡಿಕೊಂಡಿದ್ದರಿಂದ, ಭೂನಿವಾಸಿಗಳನ್ನು ಪರೀಕ್ಷಿಸಲು ಇಡೀ ಲೋಕದಲ್ಲೆಲ್ಲಾ ಬರಲಿರುವ ಶೋಧನೆಯ ಸಮಯದಲ್ಲಿ ನಾನು ಸಹ ನಿನ್ನನ್ನು ಸುರಕ್ಷಿತವಾಗಿಡುವೆನು.


ಆದರೆ ಬೀಜ ಬಿದ್ದ ಒಳ್ಳೆಯ ಭೂಮಿಯವರು ಯಾರೆಂದರೆ ಯಥಾರ್ಥವಾದ ಒಳ್ಳೆಯ ಹೃದಯದಿಂದ, ವಾಕ್ಯವನ್ನು ಕೇಳಿ ಅದನ್ನು ಕೈಕೊಂಡು, ತಾಳ್ಮೆಯಿಂದ ಫಲಿಸುವವರೇ,” ಎಂದು ಹೇಳಿದರು.


ತಿಮೊಥೆಯನೇ, ನಿನ್ನ ವಶಕ್ಕೆ ಕೊಟ್ಟಿರುವುದನ್ನು ಕಾಪಾಡು. ದೇವಭಕ್ತಿಗೆ ಅನುಗುಣವಾಗದ ಹರಟೆ ಮಾತುಗಳಿಗೂ ಜ್ಞಾನದಿಂದ ವಿಚಾರಪಡಿಸುವ ಸುಳ್ಳು ತರ್ಕಗಳಿಗೂ ಒಳಪಡದಿರು.


ನಿನಗೆ ಒಪ್ಪಿಸಲಾಗಿರುವ ಆ ಒಳ್ಳೆಯದನ್ನು ನಮ್ಮಲ್ಲಿ ವಾಸವಾಗಿರುವ ಪವಿತ್ರಾತ್ಮ ದೇವರ ಮೂಲಕ ನೀನು ಕಾಪಾಡು.


ಮಗನಾದ ತಿಮೊಥೆಯನೇ, ನಿನ್ನ ವಿಷಯವಾಗಿ ಮೊದಲು ಉಂಟಾದ ಪ್ರವಾದನೆಗಳ ಪ್ರಕಾರವೇ ನೀನು ಅವುಗಳಿಂದ ಒಳ್ಳೆಯ ಯುದ್ಧವನ್ನು ನಡಿಸಬೇಕೆಂದು ಈ ಆಜ್ಞೆಯನ್ನು ನಿನಗೆ ಒಪ್ಪಿಸುತ್ತೇನೆ.


“ಲೋಕದೊಳಗಿಂದ ನೀವು ನನಗೆ ಕೊಟ್ಟ ಈ ನನ್ನ ಶಿಷ್ಯರಿಗೆ ನಾನು ನಿಮ್ಮ ಹೆಸರನ್ನು ಪ್ರಕಟಪಡಿಸಿದ್ದೇನೆ. ಇವರು ನಿಮ್ಮವರಾಗಿದ್ದರು. ನೀವು ಇವರನ್ನು ನನಗೆ ಕೊಟ್ಟಿದ್ದೀರಿ. ಇವರು ನಿಮ್ಮ ವಾಕ್ಯವನ್ನು ಕೈಗೊಂಡಿದ್ದಾರೆ.


ಸತ್ಯವನ್ನೂ ಜ್ಞಾನವನ್ನೂ ಶಿಕ್ಷಣವನ್ನೂ ವಿವೇಕವನ್ನೂ ಕೊಂಡುಕೋ; ಆದರೆ ಅವುಗಳನ್ನು ಮಾರಬೇಡ.


ಯೋಹಾನನು ತನ್ನ ಸೇವೆಯನ್ನು ಪೂರೈಸುತ್ತಿರುವಾಗ, ‘ನನ್ನನ್ನು ಯಾರೆಂದು ನೀವು ನೆನೆಸುತ್ತೀರಿ? ನೀವು ಎದುರು ನೋಡುತ್ತಿರುವ ಅವರು ನಾನಲ್ಲ, ಇಗೋ, ಅವರು ನನ್ನ ನಂತರ ಬರುತ್ತಾರೆ. ಅವರ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ,’ ಎಂದನು.


ನಾನು ನನಗೆ ದೊರೆತ ಪ್ರಕಟನೆಗೆ ಅನುಸಾರವಾಗಿ ಅಲ್ಲಿಗೆ ಹೋದೆನು. ಅಲ್ಲಿ ಇರುವ ಸಭೆಗೆ ಹೋಗಿ ಯೆಹೂದ್ಯರಲ್ಲದ ಜನರಿಗೆ ನಾನು ಸಾರುವ ಸುವಾರ್ತೆಯ ಬಗ್ಗೆ ವಿವರಿಸಿದೆನು. ಅಲ್ಲಿರುವ ಗಣ್ಯನಾಯಕರಿಗೆ ವೈಯಕ್ತಿಕವಾಗಿ ಅದರ ಬಗ್ಗೆ ವರದಿಮಾಡಿದೆನು. ಏಕೆಂದರೆ ನಾನು ಮಾಡಿದ ಸೇವೆ ಮತ್ತು ಮುಂದೆ ಮಾಡಲಿರುವ ಸೇವೆಯು ನಿಷ್ಫಲವಾಗಬಾರದೆಂಬ ಕಾರಣಕ್ಕಾಗಿ ಹೀಗೆ ಮಾಡಿದೆ.


ನೀವು ನನ್ನಲ್ಲಿ ಕಂಡು, ಈಗ ನನ್ನಲ್ಲಿರುವುದೆಂದು ಕೇಳುತ್ತಿರುವ ಅದೇ ಹೋರಾಟದ ಅನುಭವವೇ ನಿಮಗೂ ಇದೆ.


ನೀನಾದರೋ ನನ್ನ ಎಲ್ಲಾ ಬೋಧನೆ, ನನ್ನ ನಡತೆ, ನನ್ನ ಉದ್ದೇಶ, ನಂಬಿಕೆ, ದೀರ್ಘಶಾಂತಿ, ಪ್ರೀತಿ, ಸೈರಣೆ,


ಆಗ ಅವರಲ್ಲಿ ಪ್ರತಿಯೊಬ್ಬನಿಗೆ ಬಿಳೀ ನಿಲುವಂಗಿಯು ಕೊಡಲಾಗಿತ್ತು. ಇನ್ನು ಸ್ವಲ್ಪಕಾಲ ಅವರಂತೆಯೇ ವಧಿಸಲಾಗಬೇಕಾಗಿರುವ ಅವರ ಜೊತೆ ಸೇವಕರ ಮತ್ತು ಸಹೋದರರ ಸಂಖ್ಯೆ ಪೂರ್ಣಗೊಳ್ಳುವ ತನಕ ಕಾದಿರಬೇಕೆಂದು ಅವರಿಗೆ ಹೇಳಲಾಯಿತು.


ಆದರೆ ಐವತ್ತು ವರ್ಷದವರಾದ ನಂತರ ಸೇವೆಯನ್ನು ಬಿಟ್ಟು ನಿವೃತ್ತರಾಗಬೇಕು ಮತ್ತು ತದನಂತರ ಕೆಲಸಮಾಡಬಾರದು.


ಮೊದಲು ಯುದ್ಧವನ್ನು ಅರಿಯದೆ ಇದ್ದ ಇಸ್ರಾಯೇಲಿನ ಸಂತತಿಗಳವರು ಅದನ್ನು ಕೂಡ ಕಲಿತುಕೊಳ್ಳುವುದಕ್ಕೂ ಯೆಹೋವ ದೇವರು ಉಳಿಸಿದ ಜನಾಂಗಗಳು ಯಾವುವೆಂದರೆ:


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು