2 ತಿಮೊಥೆಯನಿಗೆ 4:18 - ಕನ್ನಡ ಸಮಕಾಲಿಕ ಅನುವಾದ18 ನನ್ನನ್ನು ಪ್ರತಿಯೊಂದು ದುಷ್ಟದಾಳಿಯಿಂದ ಕರ್ತ ಯೇಸು ತಪ್ಪಿಸಿ, ತಮ್ಮ ಪರಲೋಕ ರಾಜ್ಯಕ್ಕೆ ನನ್ನನ್ನು ಸುರಕ್ಷಿತವಾಗಿ ತರುವರು. ಯುಗಯುಗಾಂತರಗಳಲ್ಲಿಯೂ ಅವರಿಗೆ ಮಹಿಮೆ. ಆಮೆನ್. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201918 ಪ್ರತಿಯೊಂದು ದುಷ್ಕೃತ್ಯದಿಂದ ಕರ್ತನು ನನ್ನನ್ನು ಕಾಪಾಡಿ ತನ್ನೊಂದಿಗೆ ಪರಲೋಕ ರಾಜ್ಯಕ್ಕೆ ಸೇರಿಸುವನು. ಯುಗಯುಗಾಂತರಗಳಲ್ಲಿಯೂ ಆತನಿಗೆ ಸ್ತೋತ್ರ. ಆಮೆನ್. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)18 ಪ್ರಭು ನನ್ನನ್ನು ಸಕಲ ಕೇಡುಗಳಿಂದ ರಕ್ಷಿಸಿ, ತಮ್ಮ ಸ್ವರ್ಗಸಾಮ್ರಾಜ್ಯಕ್ಕೆ ನನ್ನನ್ನು ಸುರಕ್ಷಿತವಾಗಿ ಸೇರಿಸುವರು. ಯುಗಯುಗಾಂತರಕ್ಕೂ ಅವರಿಗೆ ಮಹಿಮೆ ಸಲ್ಲಲಿ, ಆಮೆನ್. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)18 ನಾನು ಯಾವ ದುಷ್ಕೃತ್ಯವನ್ನೂ ಮಾಡದಂತೆ ಕರ್ತನು ನನ್ನನ್ನು ಕಾಪಾಡಿ ತನ್ನ ಬಳಿಗೆ ಪರಲೋಕರಾಜ್ಯಕ್ಕೆ ಸೇರಿಸುವನು. ಯುಗಯುಗಾಂತರಗಳಲ್ಲಿಯೂ ಆತನಿಗೆ ಸ್ತೋತ್ರ. ಆಮೆನ್. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್18 ಯಾರಾದರೂ ನನಗೆ ತೊಂದರೆ ಮಾಡಲು ಪ್ರಯತ್ನಿಸಿದರೆ, ಪ್ರಭುವು ನನ್ನನ್ನು ರಕ್ಷಿಸುವನು. ಪ್ರಭುವು ನನ್ನನ್ನು ಸುರಕ್ಷಿತವಾಗಿ ತನ್ನ ಪರಲೋಕರಾಜ್ಯಕ್ಕೆ ಸೇರಿಸುವನು. ಯುಗಯುಗಾಂತರಗಳಲ್ಲಿಯೂ ಪ್ರಭುವಿಗೆ ಮಹಿಮೆಯಾಗಲಿ. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್18 ಅನಿಬಿ ಸಗ್ಳ್ಯಾ ವಾಯ್ಟಾನಿತ್ನಾ ಧನಿ ಮಾಕಾ ಹುರ್‍ವುತಾ ಅನಿ ಅಪ್ನಾಚ್ಯಾ ಸರ್ಗಾಚ್ಯಾ ರಾಜಾತ್ ಶಾಬಿತ್ ನ್ಹೆವ್ನ್ ಪಾವ್ಸುತಾ. ತೆಕಾ ಸದಾ ಸರ್ವತಾಕ್ ಮಹಿಮಾ ಹೊಂವ್ದಿತ್. ಆಮೆನ್. ಅಧ್ಯಾಯವನ್ನು ನೋಡಿ |
ನಾಬಾಲನು ಸತ್ತನೆಂದು ದಾವೀದನು ಕೇಳಿದಾಗ, “ನನ್ನ ನಿಂದೆಯ ವ್ಯಾಜ್ಯವನ್ನು ನಾಬಾಲನಿಂದ ವಿಚಾರಿಸಿ, ತನ್ನ ಸೇವಕನನ್ನು ಕೇಡು ಮಾಡಗೊಡದ ಹಾಗೆ ತಡೆದ ಯೆಹೋವ ದೇವರು ಸ್ತುತಿಹೊಂದಲಿ. ಏಕೆಂದರೆ ಯೆಹೋವ ದೇವರು ನಾಬಾಲನ ಕೆಟ್ಟತನವನ್ನು ಅವನ ತಲೆಯ ಮೇಲೆ ಬರಮಾಡಿದರು,” ಎಂದನು. ದಾವೀದನು ಅಬೀಗೈಲಳನ್ನು ತನಗೆ ಹೆಂಡತಿಯಾಗಿ ತೆಗೆದುಕೊಳ್ಳುವುದಕ್ಕಾಗಿ ಅವಳ ಸಂಗಡ ಮಾತನಾಡಲು ಸೇವಕರನ್ನು ಕಳುಹಿಸಿದನು.