Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ತಿಮೊಥೆಯನಿಗೆ 4:11 - ಕನ್ನಡ ಸಮಕಾಲಿಕ ಅನುವಾದ

11 ಲೂಕನು ಮಾತ್ರ ನನ್ನ ಜೊತೆಯಲ್ಲಿದ್ದಾನೆ. ಮಾರ್ಕನನ್ನು ನಿನ್ನ ಸಂಗಡ ಕರೆದುಕೊಂಡು ಬಾ. ಅವನು ನನ್ನ ಸೇವೆಗಾಗಿ ನನಗೆ ಉಪಯುಕ್ತನಾಗಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಲೂಕನು ಮಾತ್ರ ನನ್ನ ಜೊತೆಯಲ್ಲಿದ್ದಾನೆ. ಮಾರ್ಕನನ್ನು ನಿನ್ನ ಸಂಗಡ ಕರೆದುಕೊಂಡು ಬಾ, ಅವನು ನನಗೆ ಸೇವೆಯಲ್ಲಿ ಉಪಯುಕ್ತನಾಗಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 ಲೂಕನು ಮಾತ್ರ ನನ್ನ ಜೊತೆಯಿದ್ದಾನೆ, ನೀನು ಬರುವಾಗ ಮಾರ್ಕನನ್ನು ನಿನ್ನ ಸಂಗಡ ಕರೆದುಕೊಂಡು ಬಾ. ಅವನ ಸೇವೆ ನನಗೆ ಅಗತ್ಯವಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಮಾರ್ಕನನ್ನು ಸಂಗಡ ಕರಕೊಂಡು ಬಾ, ಅವನು ನನಗೆ ಸೇವೆಗಾಗಿ ಉಪಯುಕ್ತನಾಗಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ಲೂಕನೊಬ್ಬನು ಮಾತ್ರ ನನ್ನ ಜೊತೆಯಲ್ಲಿದ್ದಾನೆ. ನೀನು ಬರುವಾಗ ಮಾರ್ಕನನ್ನೂ ನಿನ್ನ ಜೊತೆಯಲ್ಲಿ ಕರೆದುಕೊಂಡು ಬಾ. ಅವನು ನನ್ನ ಸೇವೆಗೆ ಸಹಾಯ ಮಾಡಬಲ್ಲನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

11 ಖರೆ ಲುಕ್ ಮಾಜ್ಯಾ ವಾಂಗ್ಡಾಚ್ ಹಾಯ್. ತಿಯಾ ಯೆತಾನಾ, ಮಾರ್ಕಾಕ್‍ಬಿ ತುಜ್ಯಾ ವಾಂಗ್ಡಾ ಬಲ್ವುನ್ ಘೆವ್ನ್ ಯೆ, ತೊ ಮಾಜ್ಯಾ ಸೆವೆಚ್ಯಾ ಕಾಮಾತ್ ಮಾಕಾ ಉಪಯೊಗಾಕ್ ಪಡ್ತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ತಿಮೊಥೆಯನಿಗೆ 4:11
15 ತಿಳಿವುಗಳ ಹೋಲಿಕೆ  

ಅವನು ಇದನ್ನು ಗ್ರಹಿಸಿ, ಮಾರ್ಕನೆನಿಸಿಕೊಳ್ಳುವ ಯೋಹಾನನ ತಾಯಿ ಮರಿಯಳ ಮನೆಗೆ ಹೋದನು. ಅಲ್ಲಿ ಅನೇಕರು ಒಟ್ಟಾಗಿ ಕೂಡಿಬಂದು ಪ್ರಾರ್ಥನೆ ಮಾಡುತ್ತಿದ್ದರು.


ನನ್ನ ಜೊತೆಕೆಲಸದವರಾದ ಮಾರ್ಕ, ಅರಿಸ್ತಾರ್ಕ, ದೇಮ ಹಾಗೂ ಲೂಕ ನಿನ್ನನ್ನು ವಂದಿಸುತ್ತಾರೆ.


ಬಾರ್ನಬ ಮತ್ತು ಸೌಲನು ತಮ್ಮ ಸೇವಾಕಾರ್ಯವನ್ನು ಮುಗಿಸಿ, ಮಾರ್ಕ ಎಂದು ಕರೆಯಲಾಗುತ್ತಿದ್ದ ಯೋಹಾನನನ್ನು ತಮ್ಮೊಂದಿಗೆ ಕರೆದುಕೊಂಡು ಯೆರೂಸಲೇಮಿನಿಂದ ಹೊರಟು ಹೋದರು.


ಏಷ್ಯ ಸೀಮೆಯಲ್ಲಿ ಫುಗೇಲನೂ ಹರ್ಮೊಗೇನನೂ ಒಳಗೊಂಡು ಎಲ್ಲರೂ ನನ್ನನ್ನು ಬಿಟ್ಟು ಹೋದರೆಂಬುದನ್ನು ನೀನು ಬಲ್ಲೆ.


ಪ್ರಿಯ ವೈದ್ಯನಾದ ಲೂಕನು ಮತ್ತು ದೇಮನು ನಿಮಗೆ ವಂದನೆ ಹೇಳುತ್ತಾರೆ.


ನನ್ನ ಜೊತೆ ಸೆರೆಯಾಳಾದ ಅರಿಸ್ತಾರ್ಕ, ಬಾರ್ನಬನ ಸಹೋದರಿಯ ಮಗನಾದ ಮಾರ್ಕನು ನಿಮಗೆ ವಂದನೆ ಹೇಳುತ್ತಾರೆ. ಮಾರ್ಕನ ವಿಷಯದಲ್ಲಿ ನೀವು ಮಾರ್ಗದರ್ಶನ ಹೊಂದಿದ್ದೀರಲ್ಲಾ, ಅವನು ನಿಮ್ಮ ಬಳಿಗೆ ಬಂದರೆ ಅವನನ್ನು ಸೇರಿಸಿಕೊಳ್ಳಿರಿ.


ಇದರಿಂದ ಅವರಲ್ಲಿ ತೀವ್ರ ಭಿನ್ನಾಭಿಪ್ರಾಯ ಉಂಟಾಗಿ ಅವರು ಒಬ್ಬರಿಂದೊಬ್ಬರು ಪ್ರತ್ಯೇಕವಾಗಿ ಹೋಗಬೇಕಾಯಿತು. ಬಾರ್ನಬನು ಮಾರ್ಕನನ್ನು ಕರೆದುಕೊಂಡು ಸೈಪ್ರಸ್ ದ್ವೀಪಕ್ಕೆ ಪ್ರಯಾಣಮಾಡಿದನು,


ನಿಮ್ಮೊಂದಿಗೆ ಆರಿಸಿಕೊಂಡಂಥ ಬಾಬಿಲೋನಿನಲ್ಲಿರುವ ಸಭೆಯು ನಿಮಗೆ ವಂದನೆ ಹೇಳುತ್ತದೆ. ನನ್ನ ಮಗನಾದ ಮಾರ್ಕನು ಸಹ ವಂದನೆ ಹೇಳುತ್ತಾನೆ.


ಪೌಲನಿಗೆ ಈ ದರ್ಶನವಾದಾಗ ಆ ಜನರಿಗೆ ಸುವಾರ್ತೆ ಸಾರಲು ದೇವರು ನಮ್ಮನ್ನು ಕರೆಯುತ್ತಿದ್ದಾರೆಂದು ತಿಳಿದುಕೊಂಡು ಕೂಡಲೇ ಮಕೆದೋನ್ಯಕ್ಕೆ ಹೊರಡಲು ಸಿದ್ಧರಾದೆವು.


ಆಗ ಕಡೆಯವರು ಮೊದಲನೆಯವರಾಗುವರು, ಮೊದಲನೆಯವರು ಕಡೆಯವರಾಗುವರು,” ಎಂದು ಹೇಳಿದರು.


“ಹೀಗೆ ಕಡೆಯವರು ಮೊದಲನೆಯವರಾಗುವರು, ಮೊದಲನೆಯವರು ಕಡೆಯವರಾಗುವರು,” ಎಂದು ಹೇಳಿದರು.


ಆದರೆ ಮೊದಲನೆಯವರಾದ ಅನೇಕರು ಕಡೆಯವರಾಗುವರು, ಕಡೆಯವರಾದವರು ಮೊದಲನೆಯವರಾಗುವರು.


“ನಾನು ಅವರ ಹಿಂಜಾರುವಿಕೆಯನ್ನು ಸ್ವಸ್ಥ ಮಾಡುವೆನು. ನಾನು ಅವರನ್ನು ಮನಃಪೂರ್ವಕವಾಗಿ ಪ್ರೀತಿಸುವೆನು. ಏಕೆಂದರೆ ನನ್ನ ಕೋಪವು ಅವರ ಕಡೆಯಿಂದ ತಿರುಗಿಕೊಂಡಿದೆ.


ಬಾರ್ನಬನು ಮಾರ್ಕ ಎಂಬ ಹೆಸರಿನ ಯೋಹಾನನನ್ನು ತಮ್ಮ ಜೊತೆಯಲ್ಲಿ ಕರೆದುಕೊಂಡು ಹೋಗಬೇಕೆಂದು ಬಯಸಿದನು,


ಒಬ್ಬನು ತನ್ನನ್ನು ಸಾಮಾನ್ಯ ಘನಹೀನತೆಯಿಂದ ಶುದ್ಧಮಾಡಿಕೊಂಡರೆ, ಅವನು ವಿಶೇಷ ಉದ್ದೇಶಕ್ಕಾಗಿ ಶುದ್ಧೀಕರಗೊಂಡವನೂ ಯಜಮಾನನಿಗೆ ಉಪಯುಕ್ತನೂ ಸಕಲ ಸತ್ಕಾರ್ಯಕ್ಕೆ ಸಿದ್ಧನೂ ಆಗಿರುವ ಗೌರವದ ಪಾತ್ರೆಯಾಗಿರುವನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು