Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ತಿಮೊಥೆಯನಿಗೆ 3:10 - ಕನ್ನಡ ಸಮಕಾಲಿಕ ಅನುವಾದ

10 ನೀನಾದರೋ ನನ್ನ ಎಲ್ಲಾ ಬೋಧನೆ, ನನ್ನ ನಡತೆ, ನನ್ನ ಉದ್ದೇಶ, ನಂಬಿಕೆ, ದೀರ್ಘಶಾಂತಿ, ಪ್ರೀತಿ, ಸೈರಣೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ನೀನಾದರೋ ನನ್ನನ್ನು ಅನುಸರಿಸುವವನಾಗಿದ್ದು, ನನ್ನ ಬೋಧನೆ, ನಡತೆ, ಉದ್ದೇಶ, ನಂಬಿಕೆ, ದೀರ್ಘಶಾಂತಿ, ಪ್ರೀತಿ, ಸೈರಣೆ ಇವುಗಳನ್ನೂ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 ನೀನಾದರೋ ನನ್ನ ಬೋಧನೆ, ನಡತೆ ಹಾಗೂ ಧ್ಯೇಯಗಳನ್ನು ಅರಿತಿರುವೆ. ನನ್ನ ವಿಶ್ವಾಸ, ಸಹಿಷ್ಣುತೆ ಮತ್ತು ಸೈರಣೆ ನಿನಗೆ ತಿಳಿದಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ನೀನಾದರೋ ನನ್ನನ್ನು ಅನುಸರಿಸುವವನಾಗಿದ್ದು ನನ್ನ ಬೋಧನೆ ನಡತೆ ಉದ್ದೇಶ ನಂಬಿಕೆ ದೀರ್ಘಶಾಂತಿ ಪ್ರೀತಿ ಸೈರಣೆ ಇವುಗಳನ್ನೂ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಆದರೆ ನನ್ನನ್ನು ಕುರಿತು ನಿನಗೆ ಎಲ್ಲವೂ ತಿಳಿದಿದೆ. ನನ್ನ ಬೋಧನೆ, ನಡತೆ, ಉದ್ದೇಶ, ನಂಬಿಕೆ, ತಾಳ್ಮೆ, ಪ್ರೀತಿ, ಸೈರಣೆ ನಿನಗೆ ತಿಳಿದಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

10 ಖರೆ ತಿಯಾ ಮಾಜ್ಯಾ ಶಿಕಾಪಾ ಸರ್ಕೆ ಚಲ್ಲೆ, ಮಾಜೆ ಶಿಕಾಪ್, ಮಾಜೊ ಜಿವನ್, ಮಾಜೊ ಜಿವನಾಚೊ ಉದ್ದೆಸ್; ಮಾಜೊ ವಿಶ್ವಾಸ್ ತಿಯಾ ಬಗಟ್ಲೆ, ಮಿಯಾ ಸಂಬಾಳುನ್ ಘೆವ್ನ್ ಜಾತಲೆ, ಮಾಜೊ ಪ್ರೆಮ್, ಮಾಜೊ ಧೈರ್, ಮಾಜೊ ತರಾಸ್ ಸೊಸುನ್ ಘೆವ್ನ್ ಜಾತಲೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ತಿಮೊಥೆಯನಿಗೆ 3:10
27 ತಿಳಿವುಗಳ ಹೋಲಿಕೆ  

ದೇವರ ಮನುಷ್ಯನೇ, ನೀನಾದರೋ ಇವುಗಳಿಂದ ಓಡಿಹೋಗು. ನೀತಿ, ಭಕ್ತಿ, ನಂಬಿಕೆ, ಪ್ರೀತಿ, ತಾಳ್ಮೆ, ಸಾತ್ವಿಕತ್ವ ಇವುಗಳನ್ನು ಹಿಂಬಾಲಿಸು.


ಎಲ್ಲಾ ವಿಷಯಗಳಲ್ಲಿ ನಿನ್ನನ್ನು ಸತ್ಕಾರ್ಯ ಮಾಡುವುದರಲ್ಲಿ ಆದರ್ಶವಾಗಿ ತೋರಿಸು. ಬೋಧನೆಯಲ್ಲಿ ಪ್ರಾಮಾಣಿಕತೆಯನ್ನೂ ಗಂಭೀರತೆಯನ್ನೂ


ಈ ವಿಷಯಗಳನ್ನು ಸಹೋದರರಿಗೆ ತಿಳಿಸುವವನಾದರೆ ನೀನು ಅನುಸರಿಸುತ್ತಿರುವ ನಂಬಿಕೆಯ ಮತ್ತು ಸುಬೋಧನೆಯ ವಾಕ್ಯಗಳಲ್ಲಿ ಪೋಷಣೆ ಹೊಂದುವವನಾಗಿ ಕ್ರಿಸ್ತ ಯೇಸುವಿನ ಒಳ್ಳೆಯ ಸೇವಕನಾಗಿರುವೆ.


ಆದರೆ ತಿಮೊಥೆಯನ ಗುಣಸ್ವಭಾವವನ್ನು ನೀವು ಬಲ್ಲಿರಿ. ಮಗನು ತಂದೆಗೆ ಹೇಗೋ ಹಾಗೆಯೇ ಅವನು ಸುವಾರ್ತೆಯಲ್ಲಿ ನನ್ನೊಂದಿಗೆ ಶ್ರಮಿಸಿದ್ದಾನೆ.


ವಿಚಿತ್ರವಾದ ವಿವಿಧ ಬೋಧನೆಗಳ ಸೆಳೆತಕ್ಕೆ ಸಿಲುಕದಿರಿ. ಏಕೆಂದರೆ ಕೃಪೆಯ ಮೂಲಕ ಹೃದಯವನ್ನು ಬಲಪಡಿಸಿಕೊಳ್ಳುವುದು ಒಳ್ಳೆಯದು. ಭೋಜನ ಪದಾರ್ಥಗಳಲ್ಲಿ ಮಗ್ನರಾದವರು, ಅವುಗಳಿಂದ ಏನೂ ಪ್ರಯೋಜನ ಹೊಂದಲಿಲ್ಲ.


ಅವನು ಅಲ್ಲಿಗೆ ಬಂದು ದೇವರ ಕೃಪೆಯನ್ನು ಕಂಡು ಹರ್ಷಭರಿತನಾಗಿ, ಅವರೆಲ್ಲರೂ ಕರ್ತನಿಗೆ ಹೃದಯಪೂರ್ವಕವಾಗಿ ಭಯಭಕ್ತಿ ಉಳ್ಳವರಾಗಿರಬೇಕೆಂದು ಅವರನ್ನು ಪ್ರೋತ್ಸಾಹಿಸಿದನು.


ಇವೆಲ್ಲವುಗಳು ಹೀಗೆ ಲಯವಾಗಿ ಹೋಗುವುದರಿಂದ ನೀವು ಎಷ್ಟೋ ಪರಿಶುದ್ಧವಾದ ನಡವಳಿಕೆಯೂ ಭಕ್ತಿಯೂ ಉಳ್ಳವರಾಗಿರಬೇಕು.


ಏಕೆಂದರೆ ಜನರು ಸ್ವಸ್ಥಬೋಧನೆಯನ್ನು ಸಹಿಸಲಾರದ ಕಾಲವು ಬರುತ್ತದೆ. ಆದರೆ ಅವರು ತಮ್ಮ ಕಿವಿಗಳು ಕೇಳಲು ಆಶೆಪಡುವ ಅನೇಕ ಉಪದೇಶಕರನ್ನು ಕೂಡಿಟ್ಟುಕೊಳ್ಳುವರು.


ಯೌವನದ ಆಶೆಗಳನ್ನು ಬಿಟ್ಟು ಓಡಿಹೋಗು. ಶುದ್ಧ ಹೃದಯವುಳ್ಳವರಾಗಿ ಕರ್ತ ಯೇಸುವನ್ನು ಬೇಡಿಕೊಳ್ಳುವವರ ಸಂಗಡ ನೀತಿ, ವಿಶ್ವಾಸ, ಪ್ರೀತಿ, ಸಮಾಧಾನ ಇವುಗಳನ್ನು ಬೆನ್ನಟ್ಟು.


ಏಕೆಂದರೆ ನಮ್ಮ ಸುವಾರ್ತೆಯು ನಿಮಗೆ ಬರೀ ಮಾತಾಗಿ ಬಾರದೆ, ಶಕ್ತಿಯಲ್ಲಿಯೂ ಪವಿತ್ರಾತ್ಮ ದೇವರ ಸನ್ನಿಧಿಯಲ್ಲಿಯೂ ಬಹು ನಿಶ್ಚಯದಲ್ಲಿಯೂ ಬಂತೆಂಬುದನ್ನು ತಿಳಿದಿದ್ದೇವೆ. ನಾವು ನಿಮ್ಮಲ್ಲಿದ್ದುಕೊಂಡು ನಿಮಗೋಸ್ಕರ ಮಾಡಿದ ಜೀವನ ಎಂಥದ್ದೆಂದು ನೀವೇ ಬಲ್ಲಿರಿ.


ನಾನು ಇದನ್ನು ಯೋಚಿಸಿದಾಗ, ಚಂಚಲಹೃದಯವನ್ನು ತಾಳಿದೆನೋ? ಅಥವಾ, ಒಮ್ಮೆ ಅದು “ಹೌದು, ಹೌದು” ಅದೇ ಕ್ಷಣದಲ್ಲಿ ಅದು “ಅಲ್ಲ, ಅಲ್ಲ” ಎಂದು ನಾನು ಲೋಕ ರೀತಿಯಾಗಿ ಯೋಜನೆಯನ್ನು ತಯಾರಿಸಿದ್ದೇನೋ?


ಪ್ರಿಯರೇ, ನೀವು ಕಲಿತುಕೊಂಡ ಬೋಧನೆಗೆ ವಿರೋಧವಾಗಿರುವ ಭೇದಗಳನ್ನೂ ಅಭ್ಯಂತರಗಳನ್ನೂ ಮಾಡುವವರ ಬಗ್ಗೆ ಎಚ್ಚರಿಕೆಯಿಂದಿರಿ. ಅಂಥವರಿಂದ ದೂರವಾಗಿರಿ ಎಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ.


“ನಾನು ಬಾಲಕನಾಗಿದ್ದಾಗಿನಿಂದ, ನನ್ನ ಪಟ್ಟಣದಲ್ಲಿಯೂ ಅನಂತರ ಯೆರೂಸಲೇಮಿನಲ್ಲಿಯೂ ನಾನು ಜೀವನ ಮಾಡಿದ ರೀತಿಯನ್ನು ಯೆಹೂದ್ಯರೆಲ್ಲರೂ ಬಲ್ಲವರಾಗಿದ್ದಾರೆ.


ಅವರು ಬಂದ ಮೇಲೆ, ಪೌಲನು ಅವರಿಗೆ ಹೀಗೆಂದನು: “ನಾನು ಏಷ್ಯಾ ಪ್ರಾಂತಕ್ಕೆ ಬಂದ ಪ್ರಥಮ ದಿನದಿಂದ ನಿಮ್ಮೊಂದಿಗಿದ್ದು ಪೂರ್ತಿ ಸಮಯ ಹೇಗೆ ಕಳೆದನೆಂಬುದನ್ನು ನೀವು ಅರಿತಿದ್ದೀರಿ.


ಅವರೆಲ್ಲರು ಅಪೊಸ್ತಲರ ಬೋಧನೆಯಲ್ಲಿ, ಅನ್ಯೋನ್ಯತೆಯಲ್ಲಿ, ರೊಟ್ಟಿ ಮುರಿಯುವುದರಲ್ಲಿ, ಪ್ರಾರ್ಥನೆ ಮಾಡುವುದರಲ್ಲಿ ತಮ್ಮನ್ನು ಸಮರ್ಪಿಸಿಕೊಂಡು,


ಆದ್ದರಿಂದ ನಾನು ಸಹ ಮೊದಲಿನಿಂದ ಎಲ್ಲವನ್ನೂ ಸೂಕ್ಷ್ಮವಾಗಿ ಪರಿಶೋಧಿಸಿ, ಅವುಗಳನ್ನು ಕ್ರಮವಾಗಿ ನಿಮಗೆ ಬರೆಯುವುದು ಒಳ್ಳೆಯದೆಂದು ನನಗೆ ತೋಚಿತು.


ನಾನು ಮಕೆದೋನ್ಯಕ್ಕೆ ಹೋದಾಗ ನೀನು ಎಫೆಸದಲ್ಲಿ ಇದ್ದುಕೊಂಡು ಸುಳ್ಳು ಬೋಧನೆಯನ್ನು ಉಪದೇಶಿಸಬಾರದೆಂತಲೂ


ಆಗ, ನಾವು ಚಿಕ್ಕಮಕ್ಕಳಂತೆ ಇರುವುದಿಲ್ಲ: ಮನುಷ್ಯರ ವಿವಿಧ ಬೋಧನೆಗಳಿಂದ ಗಾಳಿಯಿಂದ ತೂರಾಡಿಕೊಳ್ಳುವಂತಾಗುವುದಿಲ್ಲ. ಮನುಷ್ಯರ ಕುಯುಕ್ತಿಗೆ, ತಂತ್ರಕ್ಕೆ, ಒಳಸಂಚಿಗೆ ಒಳಗಾಗುವುದಿಲ್ಲ. ಅವರ ಪ್ರತಿಯೊಂದು ಬೋಧನೆಯ ಗಾಳಿಯಿಂದಲೂ ತೂರಾಡಿಕೊಂಡು ಅತ್ತಿತ್ತ ಅಲೆದಾಡುವ ಚಿಕ್ಕಮಕ್ಕಳಂತೆ ಇರಬಾರದು.


ದಾನಿಯೇಲನು ಅರಸನ ಭೋಜನದ ಪಾಲಿನಿಂದಲಾದರೂ, ಅವನು ಕುಡಿಯುವ ದ್ರಾಕ್ಷಾರಸದಿಂದಾದರೂ ತನ್ನನ್ನು ಅಶುದ್ಧಪಡಿಸಿಕೊಳ್ಳುವುದಿಲ್ಲವೆಂದು ತನ್ನ ಹೃದಯದಲ್ಲಿ ನಿಶ್ಚಯಿಸಿಕೊಂಡನು. ಆದ್ದರಿಂದ ತಾನು ಅಶುದ್ಧನಾಗದ ಹಾಗೆ ಕಂಚುಕಿಯರ ಯಜಮಾನನನ್ನು ಬೇಡಿಕೊಂಡನು.


ಅವನ ಹಾಗೆ ನಿಮ್ಮ ಯೋಗಕ್ಷೇಮವನ್ನು ಕುರಿತು ಯಥಾರ್ಥವಾಗಿ ಚಿಂತಿಸುವವರು, ನನ್ನ ಬಳಿ ಬೇರೆ ಯಾರೂ ಇಲ್ಲ.


ವಾಕ್ಯವನ್ನು ಸಾರು; ಅನುಕೂಲವಾದ ಕಾಲದಲ್ಲಿಯೂ ಅನುಕೂಲವಿಲ್ಲದ ಕಾಲದಲ್ಲಿಯೂ ಸಿದ್ಧವಾಗಿರು. ಎಲ್ಲಾ ತಾಳ್ಮೆಯಿಂದ ಉಪದೇಶಿಸಿ ಖಂಡಿಸು, ಗದರಿಸು, ಪ್ರೋತ್ಸಾಹಿಸು.


ನಾನು ಒಳ್ಳೆಯ ಹೋರಾಟವನ್ನು ಮಾಡಿದ್ದೇನೆ. ನಾನು ಓಟವನ್ನು ಮುಗಿಸಿದ್ದೇನೆ. ನಾನು ವಿಶ್ವಾಸವನ್ನು ಕಾಪಾಡಿಕೊಂಡಿದ್ದೇನೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು