2 ತಿಮೊಥೆಯನಿಗೆ 2:12 - ಕನ್ನಡ ಸಮಕಾಲಿಕ ಅನುವಾದ12 ನಾವು ಸಹಿಸಿಕೊಳ್ಳುವವರಾಗಿದ್ದರೆ ಕ್ರಿಸ್ತ ಯೇಸುವಿನ ಜೊತೆಯಲ್ಲಿ ನಾವು ಸಹ ಆಳುವೆವು. ಅವರನ್ನು ನಿರಾಕರಿಸಿದರೆ ಅವರು ಸಹ ನಮ್ಮನ್ನು ನಿರಾಕರಿಸುವರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201912 ಸಹಿಸಿಕೊಳ್ಳುವವರಾಗಿದ್ದರೆ ಆತನೊಡನೆ ಆಳುವೆವು. ನಾವು ಯೇಸುವಿನವರಲ್ಲವೆಂದು ಹೇಳಿದರೆ ಆತನು ನಮ್ಮನ್ನು ತನ್ನವರಲ್ಲವೆಂದು ಹೇಳುವನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)12 ನಾವು ಆತನೊಡನೆ ಸತ್ತಿದ್ದರೆ, ಆತನೊಡನೆ ಜೀವಿಸುತ್ತೇವೆ; ಸೈರಣೆಯುಳ್ಳವರು ನಾವಾದರೆ, ಆತನೊಡನೆ ರಾಜ್ಯವಾಳುತ್ತೇವೆ; ನಾವಾತನನು ನಿರಾಕರಿಸಿದರೆ, ನಮ್ಮನ್ನಾತನು ನಿರಾಕರಿಸುತ್ತಾನೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)12 ಸಹಿಸಿಕೊಳ್ಳುವವರಾಗಿದ್ದರೆ ಆತನೊಡನೆ ಆಳುವೆವು; ನಾವು ಯೇಸುವಿನವರಲ್ಲವೆಂದು ಹೇಳಿದರೆ ಆತನು ನಮ್ಮನ್ನು ತನ್ನವರಲ್ಲವೆಂದು ಹೇಳುವನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್12 ನಾವು ಸಂಕಟವನ್ನು ಸ್ವೀಕರಿಸಿಕೊಂಡರೆ, ಆತನೊಡನೆ ಆಳುವೆವು. ನಾವು ಆತನನ್ನು ಸ್ವೀಕರಿಸಿಕೊಳ್ಳದಿದ್ದರೆ, ಆತನೂ ನಮ್ಮನ್ನು ಸ್ವೀಕರಿಸಿಕೊಳ್ಳುವುದಿಲ್ಲ. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್12 ಆಕ್ರಿಕ್ ಪತರ್ ಕಸ್ಟ್ ಸೊಸುನ್ ಘೆತಲೆ ಹೊಲ್ಯಾರ್ ಅಮಿ ತೆಚ್ಯಾ ವಾಂಗ್ಡಾ ರಾಜ್ವಟ್ ಚಾಲ್ವುತಾಂವ್, ಅಮಿ ತೆಕಾ ತಿರಸ್ಕಾರ್ ಕರ್ಲ್ಯಾರ್, ತೊಬಿ ಅಮ್ಕಾ ತಿರಸ್ಕಾರ್ ಕರ್‍ತಾ. ಅಧ್ಯಾಯವನ್ನು ನೋಡಿ |
ತರುವಾಯ ಸಿಂಹಾಸನಗಳನ್ನು ಕಂಡೆನು. ಅವುಗಳ ಮೇಲೆ ಕುಳಿತಿದ್ದವರಿಗೆ ನ್ಯಾಯತೀರಿಸುವ ಅಧಿಕಾರವು ಕೊಡಲಾಯಿತು. ಇದಲ್ಲದೆ ಯೇಸುವಿನ ಸಾಕ್ಷಿಯ ನಿಮಿತ್ತವಾಗಿಯೂ ದೇವರ ವಾಕ್ಯದ ನಿಮಿತ್ತವಾಗಿಯೂ ಶಿರಚ್ಛೇದನ ಗೊಂಡವರ ಆತ್ಮಗಳನ್ನೂ ಮೃಗವನ್ನೂ ಅದರ ವಿಗ್ರಹವನ್ನೂ ಆರಾಧಿಸದೆ ತಮ್ಮ ಹಣೆಯ ಮೇಲೆ ಇಲ್ಲವೆ ಕೈಯ ಮೇಲೆ ಅದರ ಗುರುತುಹಾಕಿಸಿಕೊಳ್ಳದವರನ್ನೂ ನೋಡಿದೆನು. ಅವರು ಪುನಃ ಜೀವಿತರಾಗಿ ಎದ್ದು ಯೇಸುಕ್ರಿಸ್ತರೊಂದಿಗೆ ಸಾವಿರ ವರ್ಷ ಆಳಿದರು.