Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ತಿಮೊಥೆಯನಿಗೆ 1:12 - ಕನ್ನಡ ಸಮಕಾಲಿಕ ಅನುವಾದ

12 ಇದಕ್ಕಾಗಿಯೇ ನಾನು ಈ ಶ್ರಮೆಗಳನ್ನು ಅನುಭವಿಸುತ್ತಿದ್ದೇನೆ. ಆದರೆ ನಾನು ನಾಚಿಕೆಪಡುವುದಿಲ್ಲ. ಏಕೆಂದರೆ ನಾನು ನಂಬಿರುವ ಕ್ರಿಸ್ತ ಯೇಸುವನ್ನು ಬಲ್ಲೆನು. ನಾನು ಕ್ರಿಸ್ತ ಯೇಸುವಿಗೆ ಒಪ್ಪಿಸಿದ್ದನ್ನು ಅವರು ಆ ದಿನಕ್ಕಾಗಿ ಕಾಪಾಡುವುದಕ್ಕೆ ಶಕ್ತರಾಗಿದ್ದಾರೆಂಬ ದೃಢವಿಶ್ವಾಸ ನನಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಅದರ ನಿಮಿತ್ತದಿಂದಲೇ ಈ ಕಷ್ಟಗಳನ್ನು ಅನುಭವಿಸುತ್ತಾ ಇದ್ದೇನೆ. ಆದರೂ ನಾನು ನಾಚಿಕೆಪಡುವುದಿಲ್ಲ. ನಾನು ನಂಬಿರುವಾತನನ್ನು ಬಲ್ಲೆನು. ಆತನು ನನಗೆ ಒಪ್ಪಿಸಿಕೊಟ್ಟಿರುವುದನ್ನು ಆತನು ಆ ದಿನದವರೆಗೆ ಕಾಪಾಡುವುದಕ್ಕೆ ಶಕ್ತನಾಗಿದ್ದಾನೆಂದು ದೃಢವಾಗಿ ನಂಬಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ಇದಕ್ಕಾಗಿಯೇ ಇಷ್ಟೆಲ್ಲಾ ಕಷ್ಟಕಾರ್ಪಣ್ಯಗಳನ್ನು ನಾಚಿಕೆಪಡದೆ ಅನುಭವಿಸುತ್ತಿದ್ದೇನೆ. ನಾನು ಯಾರಲ್ಲಿ ವಿಶ್ವಾಸವನ್ನಿಟ್ಟಿದ್ದೇನೆ ಎಂದು ಚೆನ್ನಾಗಿ ಬಲ್ಲೆ. ನನ್ನ ವಶಕ್ಕೆ ಒಪ್ಪಿಸಿರುವುದನ್ನು ಆ ದಿನದವರೆಗೂ ಕಾಪಾಡುವುದಕ್ಕೆ ಅವರು ಶಕ್ತರು. ಆದ್ದರಿಂದ ನಾನು ಪೂರ್ಣ ಭರವಸೆಯಿಂದ ಇದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಇದರ ನಿವಿುತ್ತದಿಂದಲೇ ಈ ಶ್ರಮೆಗಳನ್ನು ಅನುಭವಿಸುತ್ತಾ ಇದ್ದೇನೆ; ಆದರೂ ನಾನು ನಾಚಿಕೆಪಡುವದಿಲ್ಲ; ನಾನು ನಂಬಿರುವಾತನನ್ನು ಬಲ್ಲೆನು. ಆತನು ನನ್ನ ವಶದಲ್ಲಿಟ್ಟಿರುವದನ್ನು ಆತನು ಆ ದಿನಕ್ಕಾಗಿ ಕಾಪಾಡುವದಕ್ಕೆ ಶಕ್ತನಾಗಿದ್ದಾನೆಂದು ದೃಢವಾಗಿ ನಂಬಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ಸುವಾರ್ತೆಯನ್ನು ತಿಳಿಸಿದ್ದರಿಂದಲೇ ನಾನೀಗ ಸಂಕಟವನ್ನು ಅನುಭವಿಸುತ್ತಿದ್ದೇನೆ. ಆದರೆ ನಾನು ನಾಚಿಕೆಪಡುವುದಿಲ್ಲ. ನಾನು ನಂಬಿರುವಾತನನ್ನು ಬಲ್ಲೆನು. ಆತನು ನನ್ನ ವಶಕ್ಕೆ ಒಪ್ಪಿಸಿರುವುದನ್ನು ಆ ದಿನವು ಬರುವತನಕ ಸಂರಕ್ಷಿಸಲು ಆತನು ಸಮರ್ಥನೆಂಬುದನ್ನು ಖಚಿತವಾಗಿ ಬಲ್ಲೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

12 ಹ್ಯಾ ಬರ್‍ಯಾ ಖಬ್ರೆಸಾಟ್ನಿ ಮಿಯಾ ಹ್ಯೊ ಕಸ್ಟ್ ಸೊಸುಕ್ ಲಾಗ್ಲಾ. ಖರೆ ಮಾಕಾ ಅನಿಬಿ ಬರೊಸೊ ಹಾಯ್, ಕಶ್ಯಾಕ್ ಮಟ್ಲ್ಯಾರ್ ಮಿಯಾ ಕೊನಾಚ್ಯಾ ವರ್‍ತಿ ಬರೊಸೊ ಥವ್ಲಾ; ತೊ ಮಾಕಾ ಗೊತ್ತ್ ಹಾಯ್ ಅನಿ ಜೆ ಕಾಮ್ ಮಿಯಾ ಕರುನ್ ಸಾರ್ತಲೆ ಮನುನ್ ಹಾಯ್; ತ್ಯಾ ದಿಸಾ ಪತರ್ ಮಾಜಿ ರಾಕನ್ ಕರ್‍ತಲೊ ಬಳ್ ತೆಕಾ ಹಾಯ್ ಮನುನ್ ಮಾಕಾ ಗೊತ್ತ್ ಹಾಯ್.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ತಿಮೊಥೆಯನಿಗೆ 1:12
58 ತಿಳಿವುಗಳ ಹೋಲಿಕೆ  

ಹೀಗಿರುವುದರಿಂದ ನಮ್ಮ ಕರ್ತ ಯೇಸುವಿನ ಸಾಕ್ಷಿಯ ವಿಷಯವಾಗಿಯೂ ಅವರ ಸೆರೆಯವನಾದ ನನ್ನ ವಿಷಯವಾಗಿಯೂ ನೀನು ನಾಚಿಕೆಪಡಬೇಡ. ಅದರ ಬದಲಾಗಿ, ದೇವರ ಶಕ್ತಿಗೆ ಅನುಸಾರವಾಗಿ, ಸುವಾರ್ತೆಗೋಸ್ಕರ ನನ್ನೊಂದಿಗೆ ಶ್ರಮೆಯನ್ನು ಅನುಭವಿಸು.


ಎಡವಿಬೀಳದಂತೆ ನಿಮ್ಮನ್ನು ಕಾಪಾಡುವುದಕ್ಕೂ ತಮ್ಮ ಪ್ರಭಾವದ ಸಮಕ್ಷಮದಲ್ಲಿ ನಿಮ್ಮನ್ನು ಅತ್ಯಂತ ಹರ್ಷದೊಡನೆ ನಿರ್ದೋಷಿಗಳನ್ನಾಗಿ ನಿಲ್ಲಿಸುವುದಕ್ಕೂ ಶಕ್ತರಾಗಿರುವ


ಹೀಗಿರಲಾಗಿ ದೇವರ ಚಿತ್ತಾನುಸಾರ ಬಾಧೆಪಡುವವರು ತಮ್ಮ ಆತ್ಮಗಳನ್ನು ನಂಬಿಗಸ್ತ ಆಗಿರುವ ಸೃಷ್ಟಿಕರ್ತ ದೇವರಿಗೆ ಒಪ್ಪಿಸಿ, ಒಳ್ಳೆಯದನ್ನು ಮಾಡಲಿ.


ಈಗ ನನಗೋಸ್ಕರ ನೀತಿಯ ಕಿರೀಟವು ಇಡಲಾಗಿದೆ. ಅದನ್ನು ನೀತಿಯುಳ್ಳ ನ್ಯಾಯಾಧಿಪತಿಯಾದ ಕರ್ತದೇವರು ಆ ದಿನದಲ್ಲಿ ನನಗೆ ಕೊಡುವರು. ನನಗೆ ಮಾತ್ರವಲ್ಲದೆ ಅವರ ಪುನರಾಗಮನಕ್ಕಾಗಿ ಆಸಕ್ತಿಯಿಂದ ಕಾದಿರುವವರೆಲ್ಲರಿಗೂ ಕೊಡುವರು.


ಇದಲ್ಲದೆ ಯೇಸು ತಮ್ಮ ಮೂಲಕ ದೇವರ ಕಡೆ ಬರುವವರನ್ನು ಪರಿಪೂರ್ಣವಾಗಿ ರಕ್ಷಿಸುವುದಕ್ಕೆ ಶಕ್ತರಾಗಿದ್ದಾರೆ. ಏಕೆಂದರೆ ಅವರಿಗೋಸ್ಕರ ಯೇಸು ವಿಜ್ಞಾಪನೆ ಮಾಡುವುದಕ್ಕಾಗಿ ಯಾವಾಗಲೂ ಬದುಕುವವರಾಗಿದ್ದಾರೆ.


ತಿಮೊಥೆಯನೇ, ನಿನ್ನ ವಶಕ್ಕೆ ಕೊಟ್ಟಿರುವುದನ್ನು ಕಾಪಾಡು. ದೇವಭಕ್ತಿಗೆ ಅನುಗುಣವಾಗದ ಹರಟೆ ಮಾತುಗಳಿಗೂ ಜ್ಞಾನದಿಂದ ವಿಚಾರಪಡಿಸುವ ಸುಳ್ಳು ತರ್ಕಗಳಿಗೂ ಒಳಪಡದಿರು.


ಯೆಹೋವ ದೇವರು ಒಳ್ಳೆಯವರು. ಇಕ್ಕಟ್ಟಿನ ದಿವಸದಲ್ಲಿ ಆಶ್ರಯದಾತರಾಗಿದ್ದಾರೆ. ತಮ್ಮಲ್ಲಿ ನಂಬಿಕೆ ಇಡುವವರನ್ನು ಅವರು ಪರಿಪಾಲಿಸುತ್ತಾರೆ.


ನಾನು ಸುವಾರ್ತೆಯ ವಿಷಯದಲ್ಲಿ ನಾಚಿಕೊಳ್ಳುವವನಲ್ಲ. ಏಕೆಂದರೆ ಅದು ಮೊದಲು ಯೆಹೂದ್ಯರಿಗೆ ಆಮೇಲೆ ಯೆಹೂದ್ಯರಲ್ಲದವರಿಗೆ, ಹೀಗೆ ನಂಬುವವರೆಲ್ಲರಿಗೂ ರಕ್ಷಣೆಯನ್ನು ಉಂಟುಮಾಡುವ ದೇವರ ಶಕ್ತಿಯಾಗಿದೆ.


“ಆ ದಿನದ ಮತ್ತು ಆ ಗಳಿಗೆಯ ವಿಷಯವಾಗಿ ತಂದೆಗೆ ಹೊರತು ಯಾವ ಮನುಷ್ಯನಿಗಾಗಲಿ, ಪರಲೋಕದಲ್ಲಿರುವ ದೂತರಿಗಾಗಲಿ, ಮನುಷ್ಯಪುತ್ರನಾದ ನನಗೂ ತಿಳಿಯದು.


ಅಂತ್ಯಕಾಲದಲ್ಲಿ ಪ್ರಕಟವಾಗುವುದಕ್ಕೆ ಸಿದ್ಧವಾಗಿರುವ ರಕ್ಷಣೆಗೆ ದೇವರು ನಿಮ್ಮ ನಂಬಿಕೆಯ ಮುಖಾಂತರ ನಿಮ್ಮನ್ನು ತಮ್ಮ ಶಕ್ತಿಯಿಂದ ಕಾಯುತ್ತಾರೆ.


ನನ್ನ ದೇವರೇ, ನಾನು ನಿಮ್ಮಲ್ಲಿ ಭರವಸೆಯಿಟ್ಟಿದ್ದೇನೆ; ನಾನು ನಾಚಿಕೆಪಡದಂತೆ ಮಾಡಿರಿ; ನನ್ನ ಶತ್ರುಗಳು ನನ್ನ ಮೇಲೆ ಜಯೋತ್ಸಾಹ ಮಾಡದಿರಲಿ.


ಅವನು ಆ ದಿನದಲ್ಲಿ ಕರ್ತ ಯೇಸುವಿನಿಂದ ಕರುಣೆಯನ್ನು ಕಂಡುಕೊಳ್ಳುವಂತೆ ಕರ್ತ ಯೇಸುವೇ ಅವನಿಗೆ ಅನುಗ್ರಹ ಮಾಡಲಿ. ಎಫೆಸದಲ್ಲಿ ಅವನು ನನಗೆ ಎಷ್ಟು ಸಹಾಯಮಾಡಿದನೆಂಬುದು ನಿನಗೆ ಚೆನ್ನಾಗಿ ಗೊತ್ತಿದೆ.


ಹೀಗೆ ಕ್ರಿಸ್ತ ಯೇಸು ಎಲ್ಲವನ್ನೂ ತಮಗೆ ಅಧೀನ ಮಾಡಿಕೊಳ್ಳುವ ತಮ್ಮ ಶಕ್ತಿಯ ಪ್ರಕಾರ, ಮಹಿಮೆಯುಳ್ಳ ತಮ್ಮ ದೇಹಕ್ಕೆ ಸಮವಾಗಿ ಸಾರೂಪ್ಯವಾಗುವಂತೆ ದೀನಾವಸ್ಥೆಯುಳ್ಳ ನಮ್ಮ ದೇಹವನ್ನು ರೂಪಾಂತರಪಡಿಸುವರು.


ನಿಮ್ಮ ಹೆಸರನ್ನು ತಿಳಿದವರು ನಿಮ್ಮಲ್ಲಿ ಭರವಸೆ ಇಡುವರು, ಏಕೆಂದರೆ ಯೆಹೋವ ದೇವರೇ, ನಿಮ್ಮನ್ನು ಹುಡುಕುವವರನ್ನು ನೀವು ಎಂದಿಗೂ ತೊರೆದುಬಿಡುವುದಿಲ್ಲ.


ನಿಜವಾಗಿಯೂ ದೇವರೇ ನನಗೆ ರಕ್ಷಣೆಯು, ನಾನು ಭರವಸವಿಡುವೆನು ಮತ್ತು ಭಯಪಡೆನು. ಕರ್ತರಾದ ಯೆಹೋವ ದೇವರೇ ನನ್ನ ಬಲವೂ ನನ್ನ ಕೀರ್ತನೆಯೂ, ಅವರೇ ನನಗೆ ರಕ್ಷಣೆಯೂ ಆಗಿದ್ದಾರೆ.”


ಈ ಸುವಾರ್ತೆಗಾಗಿ ನಾನು ಕಷ್ಟವನ್ನು ಅನುಭವಿಸಿ ದುಷ್ಕರ್ಮಿಯಂತೆ ಬೇಡಿಗಳಿಂದ ಬಂಧಿತನಾಗಿದ್ದೇನೆ. ಆದರೆ ದೇವರ ವಾಕ್ಯಕ್ಕೆ ಬಂಧನವಿಲ್ಲ.


ಕ್ರಿಸ್ತನನ್ನೂ ಅವರ ಪುನರುತ್ಥಾನದ ಶಕ್ತಿಯನ್ನೂ ನಾನು ಅರಿತುಕೊಂಡು, ಕ್ರಿಸ್ತನ ಶ್ರಮೆಯಲ್ಲಿ ಪಾಲುಗೊಳ್ಳುವ ಅನ್ಯೋನ್ಯತೆಯನ್ನೂ ಅವರ ಮರಣದಲ್ಲಿ ಅವರ ಹಾಗೆ ಆಗುವುದನ್ನೂ ತಿಳಿಯುವುದೇ ನನ್ನ ಅಪೇಕ್ಷೆ.


ಇದಲ್ಲದೆ, ನನ್ನ ಕರ್ತದೇವರು ಆಗಿರುವ ಕ್ರಿಸ್ತ ಯೇಸುವನ್ನು ಅರಿತುಕೊಳ್ಳುವುದೇ ಅತಿ ಶ್ರೇಷ್ಠವಾದುದ್ದೆಂದು, ನಾನು ಎಲ್ಲವನ್ನೂ ನಷ್ಟವೆಂದು ಎಣಿಸುತ್ತೇನೆ. ಕ್ರಿಸ್ತನನ್ನೇ ಲಾಭವನ್ನಾಗಿಸಿಕೊಳ್ಳಲು ನಾನು ಎಲ್ಲವನ್ನೂ ಕಸವೆಂದೇ ಪರಿಗಣಿಸುತ್ತೇನೆ.


ಕ್ರಿಸ್ತ ಯೇಸುವಿನ ದಿನವು ಇದನ್ನು ಬಹಿರಂಗಕ್ಕೆ ತರುವಾಗ, ಅವನವನ ಕೆಲಸವು ಏನಾಗಿರುವುದೆಂಬುದು ವ್ಯಕ್ತವಾಗುವುದು. ಏಕೆಂದರೆ ಅದು ಬೆಂಕಿಯಿಂದ ಪ್ರಕಟವಾಗುವುದು. ಪ್ರತಿಯೊಬ್ಬನ ಕೆಲಸದ ಯೋಗ್ಯತೆಯನ್ನು ಬೆಂಕಿಯೇ ಪರೀಕ್ಷಿಸುವುದು.


ನೀವು ಇವರನ್ನು ಲೋಕದಿಂದ ತೆಗೆಯಬೇಕೆಂದು ಬೇಡಿಕೊಳ್ಳದೆ ಇವರನ್ನು ಕೆಡುಕನಿಂದ ಕಾಪಾಡಬೇಕೆಂದು ನಾನು ಬೇಡಿಕೊಳ್ಳುತ್ತೇನೆ.


ಈತನ ಹೆಸರಿನಲ್ಲಿಯೇ ಯೆಹೂದ್ಯರಲ್ಲದವರು ನಿರೀಕ್ಷೆ ಇಡುವರು.”


“ಹೆದರಬೇಡ, ಏಕೆಂದರೆ ನಿನಗೆ ನಾಚಿಕೆಯಾಗುವುದಿಲ್ಲ. ಗಾಬರಿಪಡಬೇಡ, ನಿನ್ನ ಯೌವನದ ಲಜ್ಜೆಯನ್ನು ಮರೆತುಬಿಡುವೆ. ನಿನ್ನ ವೈಧವ್ಯದಲ್ಲಿ ನಿನಗಾದ ನಿಂದೆಯನ್ನು ಎಂದಿಗೂ ನಿನ್ನ ಜ್ಞಾಪಕಕ್ಕೆ ತರುವುದಿಲ್ಲ.


ನಿಮ್ಮ ಕೈಗೆ ನನ್ನ ಆತ್ಮವನ್ನು ಒಪ್ಪಿಸಿದ್ದೇನೆ; ನಂಬಿಗಸ್ತದ ದೇವರಾದ ನನ್ನ ಯೆಹೋವ ದೇವರೇ, ನೀವು ನನ್ನನ್ನು ವಿಮೋಚಿಸಿದ್ದೀರಿ.


ಪವಿತ್ರ ವೇದದಲ್ಲಿ ಹೀಗೆ ಬರೆಯಲಾಗಿದೆ: “ಇಗೋ, ನಾನು ಚೀಯೋನಿನಲ್ಲಿ ಜನರು ಎಡವಿ ಬೀಳುವಂತೆ ಮಾಡುವ ಕಲ್ಲನ್ನೂ ಮುಗ್ಗರಿಸುವ ಬಂಡೆಯನ್ನೂ ಇಡುತ್ತೇನೆ. ಆತನ ಮೇಲೆ ನಂಬಿಕೆಯಿಡುವವನು ಆಶಾಭಂಗಪಡುವದೇ ಇಲ್ಲ.”


ನೀವು ಕ್ರಿಸ್ತ ಯೇಸುವನ್ನು ಹಿಂಬಾಲಿಸುವವರಾಗಿ ಬಾಧೆಪಟ್ಟರೆ ನಾಚಿಕೆಪಡಬೇಡಿರಿ. ಆ ಹೆಸರನ್ನು ಹೊಂದಿದ್ದಕ್ಕಾಗಿ ದೇವರನ್ನು ಘನಪಡಿಸಲಿ.


ನಮ್ಮಲ್ಲಿ ನಂಬಿಕೆಯನ್ನು ಹುಟ್ಟಿಸುವವರೂ ಅದನ್ನು ಪರಿಪೂರ್ಣಗೊಳಿಸುವವರೂ ಆಗಿರುವ ಯೇಸುವಿನ ಮೇಲೆ ದೃಷ್ಟಿಯಿಟ್ಟು, ನಮ್ಮ ಮುಂದೆ ಇಟ್ಟಿರುವ ಓಟವನ್ನು ಸಹನೆಯಿಂದ ಓಡೋಣ. ಯೇಸು ತಮ್ಮ ಮುಂದೆ ಇಟ್ಟಿದ್ದ ಸಂತೋಷಕ್ಕಾಗಿ ಶಿಲುಬೆಯನ್ನು ಸಹಿಸಿಕೊಂಡು ಅವಮಾನವನ್ನು ಅಲಕ್ಷ್ಯಮಾಡಿ, ಈಗ ದೇವರ ಸಿಂಹಾಸನದ ಬಲಗಡೆಯಲ್ಲಿ ಆಸೀನರಾಗಿದ್ದಾರೆ.


ಆದ್ದರಿಂದ ಯೇಸು ತಾವೇ ಶೋಧನೆಗೊಳಗಾಗಿ ಬಾಧೆಯನ್ನು ಅನುಭವಿಸಿರುವುದರಿಂದ, ಶೋಧನೆಗೆ ಒಳಗಾಗುವವರಿಗೆ ಸಹಾಯ ಮಾಡುವುದಕ್ಕೆ ಶಕ್ತರಾಗಿದ್ದಾರೆ.


ಯೆಹೂದ್ಯರಲ್ಲದವರಿಗೆ ರಕ್ಷಣೆಯಾಗುವಂತೆ ಮಾತನಾಡುವ ನಮಗೆ ಅವರು ಅಡ್ಡಿ ಮಾಡುತ್ತಾರೆ. ಹೀಗೆ ತಮ್ಮ ಪಾಪಗಳನ್ನು ಯಾವಾಗಲೂ ಹೆಚ್ಚೆಚ್ಚಾಗಿ ಕೂಡಿಸಿಕೊಳ್ಳುತ್ತಾ ಹೋಗುತ್ತಾರೆ. ಕೊನೆಗೆ ಕೋಪಾಗ್ನಿಯೂ ಅವರ ಮೇಲೆ ಬರಲಿದೆ.


ಹೇಗೆಂದರೆ, ನಾನು ಯಾವ ವಿಷಯದಲ್ಲೂ ನಾಚಿಕೆಪಡದೆ ಎಂದಿನಂತೆ ಈಗಲೂ ಪೂರ್ಣ ಧೈರ್ಯದಿಂದಿರುವಂತೆಯೇ ಬದುಕಿದರೂ ಸತ್ತರೂ ನನ್ನ ದೇಹದ ಮೂಲಕ ಕ್ರಿಸ್ತನಿಗೆ ಮಹಿಮೆಯುಂಟಾಗಬೇಕೆಂಬುದೇ ನನ್ನ ಬಯಕೆಯೂ ನಿರೀಕ್ಷೆಯೂ ಆಗಿದೆ.


ಆಗ ಪೌಲನು, “ನೀವೇಕೆ ಅತ್ತು ನನ್ನ ಹೃದಯ ಒಡೆಯುತ್ತೀರಿ? ಬಂಧಿತನಾಗಲಷ್ಟೇ ಅಲ್ಲ, ನಮ್ಮ ಕರ್ತ ಯೇಸುವಿನ ಹೆಸರಿನ ನಿಮಿತ್ತ ಯೆರೂಸಲೇಮಿನಲ್ಲಿ ನಾನು ಸಾಯಲಿಕ್ಕೂ ಸಿದ್ಧನಾಗಿದ್ದೇನೆ,” ಎಂದನು.


ಆದರೆ ಯೆಹೂದ್ಯರು, ಆರಾಧಕರಾಗಿದ್ದ ಮಾನ್ಯರಾದ ಸ್ತ್ರೀಯರನ್ನೂ ನಗರದ ಗಣ್ಯ ನಾಯಕರನ್ನೂ ಪ್ರೇರೇಪಿಸಿ, ಪೌಲ, ಬಾರ್ನಬರ ಮೇಲೆ ಹಿಂಸೆಯನ್ನು ಎಬ್ಬಿಸಿ ತಮ್ಮ ಪ್ರದೇಶದಿಂದ ಹೊರಗೋಡಿಸಿದರು.


ಆಗ ಪೌಲ, ಬಾರ್ನಬರು ಧೈರ್ಯದಿಂದ ಅವರಿಗೆ ಉತ್ತರಕೊಟ್ಟರು: “ದೇವರ ವಾಕ್ಯವನ್ನು ನಾವು ಮೊದಲು ನಿಮಗೆ ಹೇಳುವುದು ಅವಶ್ಯವಾಗಿತ್ತು. ಆದರೆ ನೀವು ಅದನ್ನು ತಳ್ಳಿಬಿಟ್ಟಿದ್ದರಿಂದಲೂ ನಿತ್ಯಜೀವಕ್ಕೆ ನೀವು ಅಯೋಗ್ಯರೆಂದು ತೀರ್ಮಾನಿಸಿಕೊಂಡಿದ್ದೀರಿ. ಆದುದರಿಂದ ಇಗೋ, ನಾವೀಗ ಯೆಹೂದ್ಯರಲ್ಲದ ಜನರ ಬಳಿಗೆ ಹೋಗುತ್ತೇವೆ.


ನನ್ನ ಹೆಸರಿನ ನಿಮಿತ್ತವಾಗಿ ಅವನು ಎಷ್ಟು ಕಷ್ಟಪಡಬೇಕೆಂಬುದನ್ನು ನಾನು ಅವನಿಗೆ ತೋರಿಸುವೆನು,” ಎಂದು ಹೇಳಿದರು.


ನ್ಯಾಯಸಭೆಯವರು ಕಲ್ಲೆಸೆಯುತ್ತಿದ್ದಾಗ, ಸ್ತೆಫನನು, “ಕರ್ತ ಯೇಸುವೇ, ನನ್ನ ಆತ್ಮವನ್ನು ಸ್ವೀಕರಿಸಿರಿ,” ಎಂದು ಪ್ರಾರ್ಥಿಸಿದನು.


ನನ್ನನ್ನು ಕಳುಹಿಸಿದ ತಂದೆ ಸೆಳೆಯದ ಹೊರತು, ಯಾರೂ ನನ್ನ ಬಳಿಗೆ ಬರಲಾರರು. ನಾನು ಅವರನ್ನು ಕಡೆಯ ದಿನದಲ್ಲಿ ಎಬ್ಬಿಸುವೆನು.


ಯೇಸು ಮಹಾಧ್ವನಿಯಿಂದ, “ತಂದೆಯೇ, ನನ್ನ ಆತ್ಮವನ್ನು ನಿನ್ನ ಕೈಗಳಲ್ಲಿ ಒಪ್ಪಿಸುತ್ತೇನೆ,” ಎಂದು ಗಟ್ಟಿಯಾಗಿ ಕೂಗಿ ಪ್ರಾಣಬಿಟ್ಟರು.


ಸಾರ್ವಭೌಮ ಯೆಹೋವ ದೇವರು, ನನಗೆ ಸಹಾಯ ಮಾಡುವನು. ಆದಕಾರಣ ನಾನು ಅವಮಾನ ಪಡುವುದಿಲ್ಲ. ಆದ್ದರಿಂದ ನನ್ನ ಮುಖವನ್ನು ಕಗ್ಗಲ್ಲಿನಂತೆ ಮಾಡಿಕೊಂಡಿದ್ದೇನೆ. ನಾನು ನಾಚಿಕೆಪಡಲಾರೆನೆಂದು ನನಗೆ ಗೊತ್ತು.


ನಾನು ನಿಮಗೆ ಮೊರೆಯಿಟ್ಟಾಗ, ನನ್ನ ಶತ್ರುಗಳು ಹಿಂದಿರುಗುವರು. ಇದರಿಂದ ದೇವರು ನನಗಿದ್ದಾರೆ ಎಂಬುದನ್ನು ತಿಳಿದುಕೊಳ್ಳುವೆನು.


ಆದರೆ ಪ್ರಿಯರೇ, ಆ ದಿನವು ಕಳ್ಳನಂತೆ ನಿಮ್ಮನ್ನು ಆಶ್ಚರ್ಯಪಡಿಸುವುದಕ್ಕೆ ನೀವು ಕತ್ತಲೆಯಲ್ಲಿರುವವರಲ್ಲ.


ಆದರೆ ನ್ಯಾಯತೀರ್ಪಿನ ದಿನ, ಆ ಪಟ್ಟಣಕ್ಕಿಂತಲೂ ಸೊದೋಮಿನ ಗತಿ ಹೆಚ್ಚು ತಾಳಬಹುದಾಗಿರುವುದು ಎಂದು ನಾನು ನಿಮಗೆ ಹೇಳುತ್ತೇನೆ.


ಆ ದಿನದಲ್ಲಿ, ‘ಕರ್ತದೇವರೇ, ಕರ್ತದೇವರೇ, ನಿಮ್ಮ ಹೆಸರಿನಲ್ಲಿ ನಾವು ಪ್ರವಾದಿಸಲಿಲ್ಲವೇ? ನಿಮ್ಮ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸಲಿಲ್ಲವೇ? ನಿಮ್ಮ ಹೆಸರಿನಲ್ಲಿ ಅನೇಕ ಮಹತ್ಕಾರ್ಯಗಳನ್ನು ಮಾಡಲಿಲ್ಲವೇ?’ ಎಂದು ಅನೇಕರು ನನಗೆ ಹೇಳುವರು.


ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ದಿನದಲ್ಲಿ ನೀವು ನಿರ್ದೋಷಿಗಳಾಗಿರುವಂತೆ ಅವರು ಕೊನೆಯತನಕವೂ ನಿಮ್ಮನ್ನು ಬಲಪಡಿಸಿ ಕಾಯುವರು.


ನಿನಗೆ ಒಪ್ಪಿಸಲಾಗಿರುವ ಆ ಒಳ್ಳೆಯದನ್ನು ನಮ್ಮಲ್ಲಿ ವಾಸವಾಗಿರುವ ಪವಿತ್ರಾತ್ಮ ದೇವರ ಮೂಲಕ ನೀನು ಕಾಪಾಡು.


ಒನೇಸಿಫೊರನ ಮನೆಯವರಿಗೆ ಕರ್ತ ಯೇಸು ಕರುಣೆಯನ್ನು ದಯಪಾಲಿಸಲಿ. ಏಕೆಂದರೆ ಅವನು ಅನೇಕಾವರ್ತಿ ನನ್ನನ್ನು ಉತ್ತೇಜನ ಪಡಿಸಿದನು. ನನ್ನ ಬೇಡಿಗಳಿಗೆ ನಾಚಿಕೆ ಪಡಲಿಲ್ಲ.


ಇದು ನಂಬತಕ್ಕ ಮಾತಾಗಿದೆ. ದೇವರನ್ನು ನಂಬಿದವರು ಸತ್ಕ್ರಿಯೆಗಳನ್ನು ಮಾಡುವುದರಲ್ಲಿ ಜಾಗರೂಕರಾಗಿರುವಂತೆ ನೀನು ಇವುಗಳ ವಿಷಯವಾಗಿ ಪ್ರಾಮುಖ್ಯತೆಯನ್ನು ಕೊಡಬೇಕೆಂದು ಅಪೇಕ್ಷಿಸುತ್ತೇನೆ. ಇವು ಮನುಷ್ಯರಿಗೆ ಹಿತಕರವೂ ಪ್ರಯೋಜನಕರವೂ ಆಗಿವೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು