2 ಕೊರಿಂಥದವರಿಗೆ 9:2 - ಕನ್ನಡ ಸಮಕಾಲಿಕ ಅನುವಾದ2 ಅಖಾಯದಲ್ಲಿರುವ ನೀವು ಕಳೆದ ಒಂದು ವರ್ಷದಿಂದ ಉದಾರವಾಗಿ ದಾನ ಮಾಡಲು ಸಿದ್ಧರಾಗಿದ್ದೀರಿ ಎಂಬ ವಿಷಯವನ್ನು ಮಕೆದೋನ್ಯದವರ ಮುಂದೆ ನಿಮ್ಮನ್ನು ಹೊಗಳಿದ್ದೇನೆ. ನಿಮ್ಮ ಆಸಕ್ತಿಯನ್ನು ಕೇಳಿ ಮಕೆದೋನ್ಯದವರಲ್ಲಿ ಎಷ್ಟೋ ಮಂದಿ ಕಾರ್ಯರೂಪಕ್ಕೆ ಉತ್ತೇಜನಗೊಂಡಿರುತ್ತಾರೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20192 ನಿಮ್ಮ ಮನಸ್ಸಿನ ಬಯಕೆ ಏನೆಂಬುದು ನನಗೆ ಗೊತ್ತುಂಟು. ಕಳೆದ ವರ್ಷದಿಂದಲೂ ಅಖಾಯದವರು ಸಹಾಯಮಾಡುವುದಕ್ಕೆ ಸಿದ್ಧರಾಗಿದ್ದರೆಂದು ಮಕೆದೋನ್ಯದವರ ಮುಂದೆ ನಿಮ್ಮನ್ನು ಹೊಗಳುತ್ತಾ ಇದ್ದೇನೆ. ಮತ್ತು ನಿಮ್ಮ ಆಸಕ್ತಿಯು ಅವರಲ್ಲಿ ಬಹುಜನರನ್ನು ಪ್ರೇರೇಪಿಸಿತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)2 ನೆರವು ನೀಡಲು ಸಿದ್ಧರಿದ್ದೀರೆಂದು ನನಗೆ ಚೆನ್ನಾಗಿ ಗೊತ್ತಿದೆ. “ಅಖಾಯದ ಸಹೋದರರು ಕಳೆದ ವರ್ಷದಿಂದಲೂ ನೆರವು ನೀಡಲು ಏರ್ಪಾಡುಮಾಡುತ್ತಿರುವರು,” ಎಂದು ಮಕೆದೋನಿಯರ ಮುಂದೆ ನಾನು ನಿಮ್ಮನ್ನು ಹೊಗಳಿದ್ದೇನೆ. ನಿಮ್ಮ ಉತ್ಸಾಹ ಅವರಲ್ಲಿ ಅನೇಕರನ್ನು ಹುರಿದುಂಬಿಸಿದೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)2 ನಿಮ್ಮ ಮನಸ್ಸು ಸಿದ್ಧವಾಗಿದೆ ಎಂಬದು ನನಗೆ ಗೊತ್ತುಂಟು. ಒಂದು ವರುಷದ ಹಿಂದೆ ಅಖಾಯದವರು ಸಹಾಯಮಾಡುವದಕ್ಕೆ ಸಿದ್ಧವಾಗಿದ್ದರೆಂದು ಮಕೆದೋನ್ಯದವರ ಮುಂದೆ ನಿಮ್ಮನ್ನು ಹೊಗಳುತ್ತಾ ಇದ್ದೇನೆ. ಮತ್ತು ನಿಮ್ಮ ಆಸಕ್ತಿಯು ಅವರಲ್ಲಿ ಬಹುಜನರನ್ನು ಪ್ರೇರೇಪಿಸಿತು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್2 ಸಹಾಯ ಮಾಡಬೇಕೆಂಬ ಬಯಕೆಯು ನಿಮಗಿದೆಯೆಂದು ನನಗೆ ಗೊತ್ತಿದೆ. ಮಕೆದೋನಿಯದಲ್ಲಿ ಜನರಿಗೆ ನಿಮ್ಮ ಈ ವಿಷಯದಲ್ಲಿ ಹೆಮ್ಮೆಯಿಂದ ಹೇಳುತ್ತಲೇ ಇದ್ದೇನೆ. ಅಖಾಯದಲ್ಲಿರುವ ನೀವು ಕಳೆದ ವರ್ಷದಿಂದಲೂ ಕೊಡಲು ಸಿದ್ಧರಾಗಿದ್ದೀರೆಂದು ಅವರಿಗೆ ಹೇಳಿದೆನು. ನಿಮ್ಮಲ್ಲಿರುವ ಕೊಡಬೇಕೆಂಬ ಬಯಕೆಯು ಇಲ್ಲಿರುವ ಅನೇಕ ಜನರಲ್ಲಿ ಕೊಡಬೇಕೆಂಬ ಬಯಕೆಯನ್ನು ಉಂಟುಮಾಡಿದೆ. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್2 ಹ್ಯಾ ಕಾಮಾತ್ ಮಜತ್ ಕರುಕ್ ತುಮ್ಚ್ಯಾ ಭುತ್ತುರ್ ಹೊತ್ತಿ ಇಮೆಂದ್ ಮಾಕಾ ಗೊತ್ತ್ ಹಾಯ್. ಹ್ಯಾ ವಿಶಯಾತ್ ಮೆಸಿದೊನಿಯಾಚ್ಯಾ ಲೊಕಾಂಚ್ಯಾಕ್ಡೆ ತುಮ್ಚೆ ಮೊಟೆಪಾನ್ ಮಿಯಾ ಯೆವ್ನ್ ಗೆಲ್ಲ್ಯಾ ವರ್ಸಾಕ್ನಾ, ಅಖಾಯಿಯಾಚಿ ಭಾವ್ ಭೆನಿಯಾ ಮಜತ್ ಕರುಕ್ ತಯಾರ್ ಹಾತ್ ಮನುನ್ ಮಿಯಾ ಸಾಂಗಿತ್ ಹಾಂವ್. ಹ್ಯಾ ತುಮ್ಚ್ಯಾ ಇಮೆಂದಿ ವೈನಾ ತೆಂಚ್ಯಾತ್ಲ್ಯಾ ಲೈ ಜಾನಾಕ್ನಿ ಇಮೆಂದ್ ಗಾವ್ಲಾ. ಅಧ್ಯಾಯವನ್ನು ನೋಡಿ |