2 ಕೊರಿಂಥದವರಿಗೆ 4:8 - ಕನ್ನಡ ಸಮಕಾಲಿಕ ಅನುವಾದ8 ಸರ್ವವಿಧದಲ್ಲಿಯೂ ನಮಗೆ ಇಕ್ಕಟ್ಟು ಇದ್ದರೂ ನಾವು ಜಜ್ಜಿಹೋಗಲಿಲ್ಲ, ನಾವು ಚಂಚಲರಾಗಿದ್ದರೂ ನಿರಾಶರಾಗಲಿಲ್ಲ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20198 ಎಲ್ಲಾದರಲ್ಲಿಯೂ ನಮಗೆ ಇಕ್ಕಟ್ಟು ಇದ್ದರೂ ನಾವು ಸಂಕಟಪಡುವವರಲ್ಲ. ನಾವು ಗೊಂದಲಕ್ಕೀಡಾಗಿದ್ದರೂ ಹತಾಶರಾಗುವವರಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)8 ನಾವು ಇಕ್ಕಟ್ಟುಬಿಕ್ಕಟ್ಟುಗಳಿಗೆ ಒಳಗಾಗಿದ್ದರೂ ನಜ್ಜುಗುಜ್ಜಾಗಲಿಲ್ಲ; ಸಂಶಯ ಸಂದೇಹಗಳಿಗೊಳಗಾದರೂ ನಿರಾಶೆಗೊಳ್ಳಲಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)8 ಸರ್ವವಿಧದಲ್ಲಿಯೂ ನಮಗೆ ಇಕ್ಕಟ್ಟು ಇದ್ದರೂ ನಾವು ಅತಿ ಸಂಕಟ ಪಡುವವರಲ್ಲ; ನಾವು ದಿಕ್ಕು ಕಾಣದವರಾಗಿದ್ದರೂ ಕೇವಲ ದೆಸೆಗೆಟ್ಟವರಲ್ಲ; ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್8 ನಮ್ಮ ಸುತ್ತಮುತ್ತಲೆಲ್ಲಾ ಇಕ್ಕಟ್ಟುಗಳಿವೆ, ಆದರೆ ಸೋತುಹೋಗಿಲ್ಲ. ಅನೇಕಸಲ, ಏನು ಮಾಡಬೇಕೋ ನಮಗೆ ತಿಳಿಯದು, ಆದರೂ ನಾವು ಧೈರ್ಯಗೆಡುವುದಿಲ್ಲ. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್8 ಹರ್ ಎಕ್ ರಿತಿನ್ ಅಮಿ ಕಸ್ಟ್ ಖಾತಾವ್, ಜಾಲ್ಯಾರ್ಬಿ ಅಮಿ ಕಂಗಾಲ್ ಹೊಯ್ನಾವ್. ವಾಟ್ ಗಾವಿನಸ್ತಾನಾ ಕಾಳ್ಕಾತ್ ಶಿರಕ್ತಾವ್, ಜಾಲ್ಯಾರ್ ಬಿ ಅಮಿ ಭಿಂಯ್ನಾವ್. ಅಧ್ಯಾಯವನ್ನು ನೋಡಿ |
ಆಗ ಸಮುಯೇಲನು ಸೌಲನಿಗೆ, “ನೀನು ನನ್ನನ್ನು ಇಲ್ಲಿ ಬರಮಾಡಿ ವಿಶ್ರಾಂತಿ ಕೆಡಿಸಿದೆ,” ಎಂದನು. ಅದಕ್ಕೆ ಸೌಲನು, “ನಾನು ಬಹಳ ಇಕ್ಕಟ್ಟಿನಲ್ಲಿದ್ದೇನೆ. ಏಕೆಂದರೆ ಫಿಲಿಷ್ಟಿಯರು ನನಗೆ ವಿರೋಧವಾಗಿ ಯುದ್ಧಮಾಡುತ್ತಾರೆ. ಆದರೆ ದೇವರು ನನ್ನನ್ನು ಬಿಟ್ಟುಹೋದರು. ಅವರು ಪ್ರವಾದಿಗಳ ಮುಖಾಂತರವಾದರೂ, ಸ್ವಪ್ನದ ಮುಖಾಂತರವಾದರೂ ನನಗೆ ಉತ್ತರ ಕೊಡಲಿಲ್ಲ. ಆದ್ದರಿಂದ ನಾನು ಮಾಡಬೇಕಾದದ್ದನ್ನು ನೀನು ತಿಳಿಸುವ ಹಾಗೆ ನಿನ್ನನ್ನು ಕರೆಸಿದೆನು,” ಎಂದನು.