2 ಕೊರಿಂಥದವರಿಗೆ 13:7 - ಕನ್ನಡ ಸಮಕಾಲಿಕ ಅನುವಾದ7 ನೀವು ಕೆಟ್ಟದ್ದೇನೂ ಮಾಡಬಾರದೆಂದು ನಾವು ದೇವರನ್ನು ಪ್ರಾರ್ಥಿಸುತ್ತೇವೆ. ಇದರಲ್ಲಿ ನಾವೇ ಉತ್ತೀರ್ಣರಾದವರು ಎಂದು ಕಂಡುಬರಬೇಕೆಂಬುದು ನಮ್ಮ ಉದ್ದೇಶವಲ್ಲ. ನಾವು ಸೋತವರಾಗಿ ಕಂಡುಬಂದರೂ ನೀವು ಒಳ್ಳೆಯದನ್ನೇ ಮಾಡಬೇಕೆಂಬುದು ನಮ್ಮ ಪ್ರಾರ್ಥನೆಯಾಗಿದೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20197 ನೀವು ಕೆಟ್ಟದ್ದೇನೂ ಮಾಡಬಾರದೆಂದು ನಾವು ದೇವರನ್ನು ಪ್ರಾರ್ಥಿಸುತ್ತೇವೆ. ಇದರಲ್ಲಿ ನಾವೇ ಆ ಪರೀಕ್ಷೆಗೆ ಒಳ್ಳಗಾದವರೆಂದು ತೋರಿ ಬರಬೇಕೆಂಬುದು ನಮ್ಮ ಉದ್ದೇಶವಲ್ಲ. ನಾವು ಆ ಪರೀಕ್ಷೆಗೆ ಒಳ್ಳಗಾದವರೆನಿಸಿಕೊಂಡರೂ ನೀವು ಒಳ್ಳೆಯದನ್ನು ಮಾಡುವವರಾಗಬೇಕೆಂಬುದೇ ನಮ್ಮ ಉದ್ದೇಶ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)7 ನೀವು ಯಾವ ಕೇಡನ್ನೂ ಮಾಡಬಾರದೆಂದು ದೇವರಲ್ಲಿ ನಾವು ಪ್ರಾರ್ಥಿಸುತ್ತೇವೆ. ಇದರಲ್ಲಿ ನಾವು ಮಾತ್ರ ಯೋಗ್ಯರೆಂದು ತೋರಿಸಿಕೊಳ್ಳುವ ಉದ್ದೇಶ ನಮಗಿಲ್ಲ. ನಾವು ಅಯೋಗ್ಯರೆನಿಸಿಕೊಂಡಿದ್ದರೂ ನೀವು ಒಳಿತನ್ನೇ ಮಾಡಬೇಕೆಂಬುದು ನಮ್ಮ ಉದ್ದೇಶ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)7 ನೀವು ಕೆಟ್ಟದ್ದೇನೂ ಮಾಡಬಾರದೆಂದು ನಾವು ದೇವರನ್ನು ಪ್ರಾರ್ಥಿಸುತ್ತೇವೆ; ಇದರಲ್ಲಿ ನಾವೇ ಯೋಗ್ಯರಾಗಿ ತೋರಿಬರಬೇಕೆಂಬದು ನಮ್ಮ ಉದ್ದೇಶವಲ್ಲ; ನಾವು ಅಯೋಗ್ಯರೆನಿಸಿಕೊಂಡರೂ ನೀವು ಒಳ್ಳೇದನ್ನು ಮಾಡುವವರಾಗಬೇಕೆಂಬದೇ ನಮ್ಮ ಉದ್ದೇಶ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್7 ನೀವು ಯಾವ ತಪ್ಪನ್ನೂ ಮಾಡದಿರಲಿ ಎಂಬುದಾಗಿ ನಾವು ದೇವರಲ್ಲಿ ಪ್ರಾರ್ಥಿಸುತ್ತೇವೆ. ನಮ್ಮನ್ನು ಅಯೋಗ್ಯರೆಂದು ಜನರು ಭಾವಿಸಿಕೊಂಡರೂ ನೀವು ಒಳ್ಳೆಯದನ್ನು ಮಾಡುವುದೇ ಮುಖ್ಯ. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್7 ತುಮಿ ಕಾಯ್ಬಿ ವಾಯ್ಟ್ ಕರಿನಸ್ಲ್ಯಾರ್ ಫಿರೆ ಮನುನ್ ಮಿಯಾ ದೆವಾಕ್ಡೆ ಮಾಗ್ತಾ. ಹೆಚ್ಯಾ ವೈನಾ ಅಮಿ ದಾಕ್ವುನ್ ದಿಲ್ಲಿ ವಾಟ್ ಯೆವ್ಡಿಚ್ ಸಮಾ ಮನುನ್ ದಾಕ್ವುಚೆ ಮನ್ತಲೊ ಮಾಜೊ ಉದ್ದೆಸ್ ನ್ಹಯ್, ಅಮಿ ಅದಿಕಾರಾಕ್ ಯೊಗ್ಯ್ ಮನ್ತಲೊ ತಿರ್ಮಾನ್ ಹೊಲ್ಯಾರ್ ಬಿ ಮೊಟೆ ನ್ಹಯ್, ಖರೆ ಕನ್ನಾಬಿ ಬರೆ ಕರುಚೆ ಮನ್ತಲಿಚ್ ಅಮ್ಚಿ ಗುರಿ. ಅಧ್ಯಾಯವನ್ನು ನೋಡಿ |