2 ಕೊರಿಂಥದವರಿಗೆ 12:16 - ಕನ್ನಡ ಸಮಕಾಲಿಕ ಅನುವಾದ16 ಏನೇ ಇದ್ದರೂ, ನಾನು ನಿಮಗೆ ಭಾರವಾಗಿರಲಿಲ್ಲ; ನಾನು ಯುಕ್ತಿಯುಳ್ಳವನಾಗಿ ನಿಮ್ಮನ್ನು ಉಪಾಯದಿಂದ ಸುಲಿದುಕೊಂಡೆನೋ? ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201916 ಆದರೆ ಹೀಗಿರಲು, ನಾನು ನಿಮಗೆ ಭಾರವಾಗಲಿಲ್ಲ, ಆದರೆ ಉಪಾಯದಿಂದ ನಿಮ್ಮನ್ನು ಸಂಚುಹೂಡಿ ಹಿಡಿದೆನು ಎಂದು ಹೇಳಿರಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)16 ನಾನೇನೂ ನಿಮಗೆ ಹೊರೆಯಾಗಿರಲಿಲ್ಲ ಎಂಬುದನ್ನು ನೀವು ಒಪ್ಪಿಕೊಂಡರೂ ಯುಕ್ತಿಯಿಂದ ನಿಮ್ಮನ್ನು ನಾನು ದುರುಪಯೋಗಪಡಿಸಿಕೊಂಡೆ ಎಂದು ನಿಮ್ಮಲ್ಲಿ ಯಾರಾದರೂ ಹೇಳಬಹುದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)16 ಒಂದು ವೇಳೆ ನೀವು - ಅದಿರಲಿ, ತಾನು ನಮಗೆ ಭಾರವಾಗದೆ ಹೋದರೂ ಯುಕ್ತಿಯುಳ್ಳವನಾಗಿದ್ದು ನಮ್ಮನ್ನು ಉಪಾಯದಿಂದ ಸುಲುಕೊಂಡನೆಂದು ಹೇಳೀರಿ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್16 ನಾನು ನಿಮಗೆ ಭಾರವಾಗಿರಲಿಲ್ಲ ಎಂಬುದು ಸ್ಪಷ್ಟವಾಗಿದೆ. ಸುಳ್ಳು ಹೇಳಿ ಕುತಂತ್ರದಿಂದ ನಿಮ್ಮನ್ನು ಬಲೆಗೆ ಬೀಳಿಸುವವನಾಗಿದ್ದೇನೆಂದು ನೀವು ಯೋಚಿಸಿಕೊಂಡಿದ್ದೀರಿ. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್16 ಮಿಯಾ ತುಮ್ಕಾ ಎಕ್ ವಜ್ಜೆ ಹೊವ್ಕ್ ನಾ ತೆ ಖರೆ ಹಾಯ್, ಜಾಲ್ಯಾರ್ ಬಿ ಶಾನೆಪಾನಾನ್ ಮಿಯಾ ತುಮ್ಕಾ ಶಿರ್ಕುನ್ ಘಾಟ್ಲಾ ಮನುನ್ ಮನ್ಸಿಲಾ. ಅಧ್ಯಾಯವನ್ನು ನೋಡಿ |