Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಕೊರಿಂಥದವರಿಗೆ 1:14 - ಕನ್ನಡ ಸಮಕಾಲಿಕ ಅನುವಾದ

14 ಈಗ ನೀವು ನಮ್ಮನ್ನು ಸ್ವಲ್ಪಮಟ್ಟಿಗೆ ಅರಿತುಕೊಂಡಿದ್ದೀರಿ. ಆದರೆ ಕರ್ತ ಆಗಿರುವ ಯೇಸುವಿನ ಪುನರಾಗಮನ ದಿನದಲ್ಲಿ ನಾವು ನಿಮ್ಮ ಬಗ್ಗೆ ಹೆಮ್ಮೆ ಪಡುವಂತೆ, ನಮ್ಮ ಬಗ್ಗೆ ಹೆಮ್ಮೆ ಪಡಲು ನೀವು ಸಂಪೂರ್ಣವಾಗಿ ನಮ್ಮನ್ನು ಅರಿತುಕೊಳ್ಳುವಿರೆಂಬ ನಿರೀಕ್ಷೆ ನಮಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ನೀವು ನಮ್ಮನ್ನು ಸ್ವಲ್ಪಮಟ್ಟಿಗೆ ಅರ್ಥಮಾಡಿಕೊಂಡಿದ್ದೀರಿ ಕಡೆ ವರೆಗೂ ಒಪ್ಪಿಕೊಳ್ಳುವಿರಿ ಎಂಬುದಾಗಿಯೂ, ನಮ್ಮ ಕರ್ತನಾದ ಯೇಸುವಿನ ಪ್ರತ್ಯಕ್ಷತೆಯ ದಿನದಲ್ಲಿ ನೀವು ನಮ್ಮ ಅಭಿಮಾನಕ್ಕೆ ಕಾರಣವಾದಂತೆ ನಾವು ನಿಮ್ಮ ಅಭಿಮಾನಕ್ಕೆ ಕಾರಣರಾಗಿರುವೆವು ಎಂದು ನೀವು ಒಪ್ಪಿಕೊಳ್ಳುತ್ತೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ನಾವು ನಿಮಗೆ ಉಲ್ಲಾಸಕಾರಣವಾಗಿದ್ದೇವೆಂಬದನ್ನು ನೀವು ಸ್ವಲ್ಪ ಮಟ್ಟಿಗೆ ಒಪ್ಪಿಕೊಂಡಂತೆಯೇ ಕಡೇ ತನಕ ಒಪ್ಪಿಕೊಳ್ಳುವಿರೆಂದು ನಿರೀಕ್ಷಿಸುತ್ತೇನೆ. ಹಾಗೆಯೇ ನೀವೂ ನಮ್ಮ ಕರ್ತನಾದ ಯೇಸುವಿನ ಪ್ರತ್ಯಕ್ಷತೆಯಲ್ಲಿ ನಮಗೆ ಉಲ್ಲಾಸಕಾರಣವಾಗುವಿರಿ ಎಂದು ನಿರೀಕ್ಷಿಸುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

14 ತುಮ್ಕಾ ಅಜುನ್‌ಬಿ ಅಮ್ಚ್ಯಾ ವಿಶಯಾತ್ ಹೊತ್ತಿ ಸಮ್ಜನ್ ಕಮಿಚ್, ಜಾಲ್ಯಾರ್ಬಿ ಅಮ್ಚ್ಯಾ ವಿಶಯಾತ್ ಪುರಾ ಸಮ್ಜುನ್ ಲಗ್ಗುನಾ ಗಾವ್ತಾ. ಅನಿ ಧನಿ ಜೆಜು ಪ್ರತ್ಯಕ್ಷ್ ಹೊತಲ್ಯಾ ದಿಸಿ ಕಸೊ ತುಮಿ ಮಾಜೊ ಅಭಿಮಾನ್ ಹೊವ್ನ್ ಹಾಸಿ, ತಸೆಚ್ ಮಿಯಾಬಿ ತುಮ್ಚೊ ಅಭಿಮಾನ್ ಹೊವ್ನ್ ರ್‍ಹಾತಾ ಮನ್ತಲೊ ಬರೊಸೊ ಮಾಕಾ ಹಾಯ್.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಕೊರಿಂಥದವರಿಗೆ 1:14
16 ತಿಳಿವುಗಳ ಹೋಲಿಕೆ  

ನೀವು ಜೀವವಾಕ್ಯವನ್ನು ಹಿಡಿದವರಾಗಿದ್ದರೆ, ಹೀಗೆ ನಾನು ಓಡಿದ ಓಟವೂ ಪ್ರಯಾಸವೂ ವ್ಯರ್ಥವಾಗಲಿಲ್ಲವೆಂದು ತಿಳಿದು ಕ್ರಿಸ್ತನ ಪುನರಾಗಮನ ದಿನದಲ್ಲಿ ಅಭಿಮಾನ ಪಡುವೆನು.


ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ದಿನದಲ್ಲಿ ನೀವು ನಿರ್ದೋಷಿಗಳಾಗಿರುವಂತೆ ಅವರು ಕೊನೆಯತನಕವೂ ನಿಮ್ಮನ್ನು ಬಲಪಡಿಸಿ ಕಾಯುವರು.


ನಮಗೆ ಕರ್ತ ಆಗಿರುವ ಯೇಸುವು ತಮ್ಮ ಎಲ್ಲಾ ಪರಿಶುದ್ಧರೊಂದಿಗೆ ಬರುವಾಗ, ನೀವು ತಂದೆ ದೇವರ ಮುಂದೆ ಪರಿಶುದ್ಧರೂ ನಿರ್ದೋಷಿಗಳೂ ಆಗಿರುವಂತೆ ನಿಮ್ಮ ಹೃದಯಗಳನ್ನು ಬಲಪಡಿಸಲಿ!


ಹೀಗಿರಲಾಗಿ, ನನಗೆ ಆಪ್ತರೂ ನಾನು ಹಂಬಲಿಸುವವರೂ ಆದ ನನ್ನ ಪ್ರಿಯರೇ, ನನ್ನ ಆನಂದವೂ ಕಿರೀಟವೂ ಆಗಿರುವ ಸ್ನೇಹಿತರೇ, ಈಗಲೂ ಕರ್ತ ದೇವರಲ್ಲಿ ದೃಢವಾಗಿ ನಿಲ್ಲಿರಿ!


ಆಗ, ಅತ್ಯುತ್ತಮ ಕಾರ್ಯಗಳನ್ನು ನೀವು ವಿವೇಚಿಸಿಕೊಳ್ಳುವಿರಿ. ಕ್ರಿಸ್ತನ ಪುನರಾಗಮನ ದಿನದವರೆಗೆ ನೀವು ಪರಿಶುದ್ಧರಾಗಿಯೂ ನಿರ್ದೋಷಿಗಳಾಗಿಯೂ ಇರಬೇಕೆಂತಲೂ


ಸಮಾಧಾನದ ದೇವರು ತಾವಾಗಿಯೇ ನಿಮ್ಮನ್ನು ಪರಿಪೂರ್ಣವಾಗಿ ಪವಿತ್ರ ಮಾಡಲಿ. ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ಪುನರಾಗಮನದಲ್ಲಿ ನಿಮ್ಮ ಆತ್ಮ, ಪ್ರಾಣ, ಶರೀರಗಳು ದೋಷವಿಲ್ಲದೆ ಸಂಪೂರ್ಣವಾಗಿ ಸುರಕ್ಷಿತವಾಗಿರಲಿ.


ಒಳ್ಳೆಯ ಕೆಲಸಗಳನ್ನು ನಿಮ್ಮಲ್ಲಿ ಪ್ರಾರಂಭಿಸಿದ ದೇವರು ಅದನ್ನು ಕ್ರಿಸ್ತ ಯೇಸುವಿನ ಪುನರಾಗಮನ ದಿನದವರೆಗೆ ಪೂರೈಸುವರು ಎಂಬುದೇ ನನ್ನ ದೃಢ ವಿಶ್ವಾಸವಾಗಿದೆ.


ಮತ್ತೊಮ್ಮೆ ನಮ್ಮನ್ನು ನಾವೇ ಹೊಗಳಿಕೊಳ್ಳುತ್ತೇವೆಂದು ನೀವು ಭಾವಿಸಬೇಡಿ. ನಮ್ಮನ್ನು ಕುರಿತು ನೀವು ಹೆಮ್ಮೆ ಪಡುವಂತೆ ಒಂದು ಅವಕಾಶವನ್ನು ನಾವು ನಿಮಗೆ ಒದಗಿಸುತ್ತೇವೆ ಅಷ್ಟೇ. ಹೀಗೆ ಮನುಷ್ಯರ ಹೃದಯವನ್ನಲ್ಲಾ, ಹೊರತೋರಿಕೆಯನ್ನು ಕಂಡು ಹೆಮ್ಮೆ ಪಡುವವರಿಗೆ ನೀವು ಉತ್ತರ ಕೊಡುವಿರಿ.


ನಿಮ್ಮಲ್ಲಿ ಯಾರಾದರೂ ನನ್ನನ್ನು ದುಃಖಪಡಿಸಿದರೆ, ಅವನು ನನ್ನನ್ನು ಮಾತ್ರವೇ ದುಃಖ ಪಡಿಸದೆ, ಒಂದು ವಿಧದಲ್ಲಿ ನಿಮ್ಮೆಲ್ಲರನ್ನೂ ದುಃಖಪಡಿಸಿದ್ದಾನೆ. ಅವನ ಮೇಲೆ ಬಹಳ ಕಠಿಣನಾಗಿರಲು ನನಗೆ ಇಷ್ಟವಿಲ್ಲ.


ಪ್ರಿಯರೇ, ನೀವು ಈ ಮರ್ಮದ ಬಗ್ಗೆ ಅಜ್ಞಾನಿಗಳಾಗಿರಬೇಕೆಂದು ನಾನು ಬಯಸುವುದಿಲ್ಲ. ಅದೇನೆಂದರೆ, ಯೆಹೂದ್ಯರಲ್ಲದವರು ಪೂರ್ಣಸಂಖ್ಯೆಯಲ್ಲಿ ದೇವರ ಬಳಿಗೆ ಬರುವವರೆಗೆ ಮಾತ್ರ ಇಸ್ರಾಯೇಲರು ತಮ್ಮ ಹೃದಯದ ಕಾಠಿಣ್ಯಕ್ಕೆ ತಾತ್ಕಾಲಿಕವಾಗಿ ಒಳಗಾಗಿರುವರು.


ಸಹೋದರರೇ ನಮ್ಮ ಕರ್ತ ಆಗಿರುವ ಕ್ರಿಸ್ತ ಯೇಸುವಿನಲ್ಲಿ ನನಗೆ ನಿಮ್ಮ ಬಗ್ಗೆ ನಿಶ್ಚಯವಾಗಿರುವ ಹೆಮ್ಮೆಯಿಂದ ನಾನು ದಿನದಿನವು ಸಾಯುತ್ತಲಿದ್ದೇನೆ.


ಹೇಗೆಂದರೆ, ಮೊದಲನೆಯದು: ನೀವು ಸಭೆಯಾಗಿ ಕೂಡಿಬರುವಾಗ ನಿಮ್ಮೊಳಗೆ ಭೇದಗಳಿವೆ ಎಂದು ಕೇಳುತ್ತೇನೆ. ಇದನ್ನು ಸ್ವಲ್ಪಮಟ್ಟಿಗೆ ನಂಬುತ್ತೇನೆ.


ಹೀಗೆ ನಾನು ಪುನಃ ನಿಮ್ಮ ಬಳಿಗೆ ಬರುವುದರಿಂದ ಕ್ರಿಸ್ತ ಯೇಸುವಿನಲ್ಲಿರುವ ನಿಮ್ಮ ಸಂತೋಷವು ನನ್ನ ನಿಮಿತ್ತವಾಗಿ ಅತ್ಯಧಿಕವಾಗಿರುವುದು.


ಅಖಾಯದಲ್ಲಿರುವ ನೀವು ಕಳೆದ ಒಂದು ವರ್ಷದಿಂದ ಉದಾರವಾಗಿ ದಾನ ಮಾಡಲು ಸಿದ್ಧರಾಗಿದ್ದೀರಿ ಎಂಬ ವಿಷಯವನ್ನು ಮಕೆದೋನ್ಯದವರ ಮುಂದೆ ನಿಮ್ಮನ್ನು ಹೊಗಳಿದ್ದೇನೆ. ನಿಮ್ಮ ಆಸಕ್ತಿಯನ್ನು ಕೇಳಿ ಮಕೆದೋನ್ಯದವರಲ್ಲಿ ಎಷ್ಟೋ ಮಂದಿ ಕಾರ್ಯರೂಪಕ್ಕೆ ಉತ್ತೇಜನಗೊಂಡಿರುತ್ತಾರೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು