Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಅರಸುಗಳು 8:10 - ಕನ್ನಡ ಸಮಕಾಲಿಕ ಅನುವಾದ

10 ಅದಕ್ಕೆ ಎಲೀಷನು, “ನೀನು ಹೋಗಿ ಅವನಿಗೆ, ನಿಜವಾಗಿಯೂ ಸ್ವಸ್ಥನಾಗುವೆ, ಎಂದು ಹೇಳು. ಆದರೆ ಅವನು ಸಾಯುವನೆಂದು ಯೆಹೋವ ದೇವರು ನನಗೆ ತೋರಿಸಿದ್ದಾರೆ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಆಗ ದೇವರ ಮನುಷ್ಯನಾದ ಎಲೀಷನು ಅವನಿಗೆ, “ಹೇಗೂ ನಿನಗೆ ವಾಸಿಯಾಗುವುದು” ಎಂಬುದಾಗಿ ಬೆನ್ಹದದನಿಗೆ ಹೇಳು; ಆದರೂ, ಅವನು ಸತ್ತೇ ಹೋಗುವನೆಂದು ಯೆಹೋವನು ನನಗೆ ತಿಳಿಸಿದ್ದಾನೆ ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 ಆಗ ದೈವಪುರುಷನಾದ ಎಲೀಷನು, “ಖಂಡಿತವಾಗಿ ಗುಣವಾಗುವುದು ಎಂಬುದಾಗಿ ಬೆನ್ಹದದನಿಗೆ ಹೇಳು; ಆದರೂ ಅವನು ಸತ್ತುಹೋಗುವುದು ನಿಶ್ಚಯವೆಂದು ಸರ್ವೇಶ್ವರ ನನಗೆ ತಿಳಿಸಿದ್ದಾರೆ,”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ಆಗ ದೇವರ ಮನುಷ್ಯನಾದ ಎಲೀಷನು ಅವನಿಗೆ - ಹೇಗೂ ನಿನಗೆ ವಾಸಿಯಾಗುವದು ಎಂಬದಾಗಿ ಬೆನ್ಹದದನಿಗೆ ಹೇಳು; ಆದರೂ ಅವನು ಸತ್ತೇ ಹೋಗುವನೆಂದು ಯೆಹೋವನು ನನಗೆ ತಿಳಿಸಿದ್ದಾನೆ ಎಂದು ಹೇಳಿ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಆಗ ಎಲೀಷನು ಹಜಾಯೇಲನಿಗೆ, “‘ವಾಸಿಯಾಗುವುದು’ ಎಂದು ಬೆನ್ಹದದನಿಗೆ ಹೇಳು. ಆದರೆ, ‘ಅವನು ಸಾಯುವುದು ಖಂಡಿತ’ ಎಂದು ಯೆಹೋವನು ನನಗೆ ತಿಳಿಸಿದ್ದಾನೆ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಅರಸುಗಳು 8:10
16 ತಿಳಿವುಗಳ ಹೋಲಿಕೆ  

ಆಮೇಲೆ ದೂತನು ಸ್ಪಟಿಕದಂತೆ ಹೊಳೆಯುವ ಜೀವಜಲದ ನದಿಯನ್ನು ನನಗೆ ತೋರಿಸಿದನು. ಅದು ದೇವರ ಮತ್ತು ಕುರಿಮರಿಯಾದವರ ಸಿಂಹಾಸನದಿಂದ ಹೊರಟು,


ಆಗ ಯೆಹೋವ ದೇವರು ನನಗೆ ನಾಲ್ಕು ಕಮ್ಮಾರರನ್ನು ತೋರಿಸಿದರು.


ಸಾರ್ವಭೌಮ ಯೆಹೋವ ದೇವರು ನನಗೆ ಮಾಗಿದ ಹಣ್ಣುಗಳುಳ್ಳ ಬುಟ್ಟಿ ತೋರಿಸಿದರು.


ಆತನು ನನಗೆ ಹೀಗೆ ತೋರಿಸಿದನು. ಯೆಹೋವ ದೇವರು ನೂಲುಮಟ್ಟದ ನೆಟ್ಟಗಿರುವ ಗೋಡೆಯ ಮೇಲೆ ನಿಂತಿದ್ದರು. ಆತನ ಕೈಯಲ್ಲಿ ನೂಲುಗುಂಡು ಇತ್ತು.


ಸಾರ್ವಭೌಮ ಯೆಹೋವ ದೇವರು ನನಗೆ ಹೀಗೆ ತೋರಿಸಿದರು: ಸಾರ್ವಭೌಮ ಯೆಹೋವ ದೇವರು ಬೆಂಕಿಯಿಂದ ನ್ಯಾಯತೀರ್ಪು ಮಾಡುವುದಕ್ಕೆ ಕರೆದರು. ಅದು ದೊಡ್ಡ ಅಗಾಧವನ್ನು ನುಂಗಿತು ಮತ್ತು ವಿಭಾಗವನ್ನು ತಿಂದುಬಿಟ್ಟಿತು.


ಸಾರ್ವಭೌಮ ಯೆಹೋವ ದೇವರು ನನಗೆ ಹೀಗೆ ತೋರಿಸಿದರು: ಹಿಂಗಾರು ಮಳೆ ಬಿದ್ದು, ಪೈರು ಸೊಂಪಾಗುವುದಕ್ಕೆ ಆರಂಭವಾದಾಗ, ಅಂದರೆ ರಾಜಾದಾಯದ ಹುಲ್ಲನ್ನು ಕೊಯ್ದ ಮೇಲೆ, ಬೆಳೆಯು ವೃದ್ಧಿಯಾಗುತ್ತಿದ್ದಾಗ, ಇಗೋ ಯೆಹೋವ ದೇವರು, ಮಿಡತೆಗಳನ್ನು ಉಂಟುಮಾಡಿದರು.


ನಿಶ್ಚಯವಾಗಿ ತನ್ನ ಸೇವಕರಾದ ಪ್ರವಾದಿಗಳಿಗೆ ತನ್ನ ಯೋಜನೆಗಳನ್ನು ತಿಳಿಸದೆ, ಸಾರ್ವಭೌಮ ಯೆಹೋವ ದೇವರು ಏನನ್ನೂ ಮಾಡುವುದಿಲ್ಲ.


ಸಾಲಕ್ಕೆ ಬಡ್ಡಿ ತೆಗೆದುಕೊಂಡು, ಲಾಭ ಪಡೆಯುವವನು ಆಗಿದ್ದರೆ, ಅವನು ಬದುಕುವನೋ? ಅವನು ಬದುಕುವುದಿಲ್ಲ, ಅವನು ಈ ಅಸಹ್ಯಗಳನ್ನೆಲ್ಲಾ ಮಾಡಿದ್ದರಿಂದ ಅವನು ಸಾಯುವುದು ನಿಶ್ಚಯ; ತನ್ನ ಮರಣಕ್ಕೆ ತಾನೇ ಕಾರಣ.


ಆಮೇಲೆ ಯೆಹೋವ ದೇವರು ನನಗೆ ತೋರಿಸಿದ ಎಲ್ಲಾ ಸಂಗತಿಗಳನ್ನು ಸೆರೆಯಲ್ಲಿರುವವರಿಗೆ ಹೇಳಿದೆನು.


ಆದರೆ ನೀನು ಶರಣಾಗತಿಯನ್ನು ನಿರಾಕರಿಸಿದರೆ, ಯೆಹೋವ ದೇವರು ನನಗೆ ತೋರಿಸಿದ ಮಾತು ಇದೇ:


ಅರಸನಿಗೆ, “ಯೆಹೋವ ದೇವರ ವಾಕ್ಯವನ್ನು ವಿಚಾರಿಸಲು ಇಸ್ರಾಯೇಲಿನಲ್ಲಿ ದೇವರಿಲ್ಲವೆಂಬ ಹಾಗೆ ನೀನು ಎಕ್ರೋನಿನ ದೇವರಾದ ಬಾಳ್ ಜೆಬೂಬನ್ನು ವಿಚಾರಿಸಲು ದೂತರನ್ನು ಕಳುಹಿಸಿದ ಕಾರಣ, ‘ನೀನು ಏರಿದ ಮಂಚದಿಂದ ಇಳಿಯದೆ ನಿಶ್ಚಯವಾಗಿ ಸಾಯುವೆ,’ ಎಂದು ಯೆಹೋವ ದೇವರು ಹೇಳುತ್ತಾರೆ,” ಎಂದನು.


ಇದರ ನಿಮಿತ್ತ ನೀನು ಏರಿದ ಮಂಚದಿಂದ ಇಳಿಯದೆ, ನಿಶ್ಚಯವಾಗಿ ಸಾಯುವೆ,’ ಎಂದು ಯೆಹೋವ ದೇವರು ಹೇಳುತ್ತಾರೆ ಎಂದು ಹೇಳು,” ಎಂದರು. ಆಗ ಎಲೀಯನು ಹೊರಟುಹೋಗಿ ಅದರಂತೆ ಹೇಳಿದನು.


ಅವನು ಅರಸನ ಬಳಿಗೆ ಬಂದಾಗ ಅರಸನು ಅವನಿಗೆ, “ಮೀಕಾಯೆಹುವೇ, ನಾವು ಗಿಲ್ಯಾದಿನ ರಾಮೋತ್ ವಿರುದ್ಧವಾಗಿ ಯುದ್ಧಕ್ಕೆ ಹೋಗಬಹುದೋ ಅಥವಾ ಬೇಡವೋ?” ಎಂದನು. ಆಗ ಅವನು, “ಹೋಗಿ ಜಯ ಹೊಂದಿರಿ. ಯೆಹೋವ ದೇವರು ಅದನ್ನು ಅರಸನ ಕೈಯಲ್ಲಿ ಒಪ್ಪಿಸಿಕೊಡುವರು,” ಎಂದನು.


ಫರೋಹನು ಯೋಸೇಫನಿಗೆ, “ದೇವರು ನಿನಗೆ ಇವುಗಳನ್ನೆಲ್ಲಾ ತೋರಿಸಿದ ಮೇಲೆ, ನಿನ್ನ ಹಾಗೆ ವಿವೇಕಿಯೂ ಬುದ್ಧಿವಂತನೂ ಯಾರೂ ಇಲ್ಲ.


ಆದರೆ ಒಳ್ಳೆಯದರ, ಕೆಟ್ಟದ್ದರ ತಿಳುವಳಿಕೆಯ ಮರದ ಹಣ್ಣನ್ನು ನೀನು ತಿನ್ನಬಾರದು. ಏಕೆಂದರೆ, ನೀನು ಅದನ್ನು ತಿಂದ ದಿನವೇ ಸಾಯುವಿ,” ಎಂದು ಹೇಳಿದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು