2 ಅರಸುಗಳು 6:5 - ಕನ್ನಡ ಸಮಕಾಲಿಕ ಅನುವಾದ5 ಆದರೆ ಒಬ್ಬನು ಮರವನ್ನು ಬೀಳಿಸುವಾಗ ಕೊಡಲಿಯು ನೀರಿನೊಳಕ್ಕೆ ಬಿತ್ತು. ಆಗ ಅವನು, “ಅಯ್ಯೋ! ಯಜಮಾನನೇ, ನಾನು ಅದನ್ನು ಸಾಲವಾಗಿ ತೆಗೆದುಕೊಂಡದ್ದು,” ಎಂದು ಕೂಗಿ ಹೇಳಿದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20195 ಒಬ್ಬನ ಕೊಡಲಿಯು ಕೈಜಾರಿ ನೀರೊಳಗೆ ಬಿದ್ದಿತು. ಆಗ ಅವನು, “ಅಯ್ಯೋ, ಸ್ವಾಮಿ ನಾನು ಅದನ್ನು ಸಾಲವಾಗಿ ತಂದಿದ್ದೆನು” ಎಂದು ಕೂಗಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)5 ಆದುದರಿಂದ ಅವನು, “ಅಯ್ಯೋ! ಗುರುವೇ, ನಾನು ಅದನ್ನು ಸಾಲವಾಗಿ ತಂದಿದ್ದೆ,” ಎಂದು ಸಂತಾಪಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)5 ಒಬ್ಬನ ಕೊಡಲಿಯು ಕಾವು ತಪ್ಪಿ ನೀರೊಳಗೆ ಬಿದ್ದಿತು. ಆದದರಿಂದ ಅವನು - ಅಯ್ಯೋ, ಸ್ವಾಮೀ, ನಾನು ಅದನ್ನು ಎರವಾಗಿ ತಂದಿದ್ದೆನು ಎಂದು ಕೂಗಿದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್5 ಆದರೆ ಒಬ್ಬನು ಮರವೊಂದನ್ನು ಕಡಿದುರುಳಿಸಿದಾಗ, ಕಬ್ಬಿಣದ ಕೊಡಲಿಯು ಕಾವಿನಿಂದ ಕಳಚಿಕೊಂಡು ನೀರಿನೊಳಕ್ಕೆ ಬಿದ್ದುಬಿಟ್ಟಿತು. ಆ ಮನುಷ್ಯನು, “ಅಯ್ಯೋ, ಒಡೆಯನೇ! ನಾನು ಆ ಕೊಡಲಿಯನ್ನು ಎರವಲಾಗಿ ತಂದಿದ್ದೇನಲ್ಲಾ” ಎಂದು ಕೂಗಿಕೊಂಡನು. ಅಧ್ಯಾಯವನ್ನು ನೋಡಿ |