2 ಅರಸುಗಳು 5:26 - ಕನ್ನಡ ಸಮಕಾಲಿಕ ಅನುವಾದ26 ಆದರೆ ಎಲೀಷನು ಅವನಿಗೆ, “ಆ ಮನುಷ್ಯನು ನಿನ್ನನ್ನು ಎದುರುಗೊಳ್ಳಲು ತನ್ನ ರಥದಿಂದ ಇಳಿದು ನಿನ್ನ ಬಳಿಗೆ ಬಂದಾಗ, ನನ್ನ ಹೃದಯವು ನಿನ್ನ ಸಂಗಡ ಹೋಗಲಿಲ್ಲವೋ? ಹಣವನ್ನೂ, ವಸ್ತ್ರಗಳನ್ನೂ, ದ್ರವ್ಯವನ್ನೂ, ಹಿಪ್ಪೆಯ ತೋಪುಗಳನ್ನೂ, ದ್ರಾಕ್ಷಿಯ ತೋಟಗಳನ್ನೂ, ಕುರಿದನಗಳನ್ನೂ, ದಾಸದಾಸಿಯರನ್ನೂ ಪಡೆದುಕೊಳ್ಳುವುದಕ್ಕೆ ಇದು ಸಮಯವೋ? ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201926 ಆಗ ಎಲೀಷನು ಗೇಹಜಿಗೆ, “ಒಬ್ಬನು ರಥದಿಂದ ಇಳಿದು ಬಂದು, ನಿನ್ನನ್ನು ಎದುರುಗೊಂಡದ್ದು ನನ್ನ ಜ್ಞಾನದೃಷ್ಟಿಗೆ ಕಾಣಲಿಲ್ಲವೆಂದು ತಿಳಿದಿರುವೆಯಾ? ದ್ರವ್ಯ, ಬಟ್ಟೆಗಳು, ಎಣ್ಣೇ ಮರದ ತೋಪುಗಳು, ದ್ರಾಕ್ಷಿತೋಟಗಳು, ಕುರಿದನಗಳು, ದಾಸದಾಸಿಯರು, ಜನರೂ ಇವುಗಳನ್ನು ಸಂಪಾದಿಸುವುದಕ್ಕೆ ಇದು ಸಮಯವೋ? ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)26 ಆಗ ಎಲೀಷನು, “ಒಬ್ಬನು ರಥದಿಂದಿಳಿದು ಬಂದು ನಿನ್ನನ್ನು ಎದುರುಗೊಂಡದ್ದು ನನ್ನ ಜ್ಞಾನದೃಷ್ಟಿಗೆ ಕಾಣಿಸಲಿಲ್ಲವೆಂದು ನೆನಸುತ್ತೀಯೋ? ದ್ರವ್ಯ, ಬಟ್ಟೆಗಳು, ಎಣ್ಣೇಮರದ ತೋಪುಗಳು, ದ್ರಾಕ್ಷೀತೋಟಗಳು, ಕುರಿದನಗಳು, ಗಂಡಾಳು, ಹೆಣ್ಣಾಳುಗಳು, ಇವನ್ನು ಸಂಪಾದಿಸುವುದಕ್ಕೆ ಇದು ಸಮಯವೇ? ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)26 ಆಗ ಎಲೀಷನು ಅವನಿಗೆ - ಒಬ್ಬನು ರಥದಿಂದಿಳಿದು ಬಂದು ನಿನ್ನನ್ನು ಎದುರುಗೊಂಡದು ನನ್ನ ಜ್ಞಾನ ದೃಷ್ಟಿಗೆ ಕಾಣಿಸಲಿಲ್ಲವೆಂದು ನೆನಸುತ್ತೀಯೋ? ದ್ರವ್ಯ, ಬಟ್ಟೆಗಳು, ಎಣ್ಣೇ ಮರದ ತೋಪುಗಳು, ದ್ರಾಕ್ಷೇತೋಟಗಳು, ಕುರಿದನಗಳು, ದಾಸದಾಸೀ ಜನವು ಇವುಗಳನ್ನು ಸಂಪಾದಿಸುವದಕ್ಕೆ ಇದು ಸಮಯವೋ? ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್26 ಎಲೀಷನು ಗೇಹಜಿಗೆ, “ಅದು ನಿಜವಲ್ಲ! ನಾಮಾನನು ನಿನ್ನನ್ನು ಸಂಧಿಸಲು ತನ್ನ ರಥದಿಂದ ಹಿಂದಕ್ಕೆ ತಿರುಗಿದಾಗ ನನ್ನ ಹೃದಯವು ನಿನ್ನ ಹತ್ತಿರದಲ್ಲಿಯೇ ಇತ್ತು. ಹಣವನ್ನು, ಬಟ್ಟೆಗಳನ್ನು, ಆಲೀವನ್ನು, ದ್ರಾಕ್ಷಿಯನ್ನು, ಕುರಿಗಳನ್ನು, ಹಸುಗಳನ್ನು ಅಥವಾ ಸೇವಕಸೇವಕಿಯರನ್ನು ತೆಗೆದುಕೊಳ್ಳುವ ಕಾಲ ಇದಲ್ಲ. ಅಧ್ಯಾಯವನ್ನು ನೋಡಿ |